“ಬೆಂಗಳೂರು ವೈರ್” ನಲ್ಲಿ ತನ್ನ ಮೂರನೇ ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ನಮ್ಮ ಮಾಧ್ಯಮ ಸಂಸ್ಥೆಯ ಸುದ್ದಿಗಳು, ರಾಜ್ಯದಲ್ಲಿನ ಪ್ರಮುಖ ಮಾಧ್ಯಮಗಳಿಗೆ ಪ್ರೇರಣೆಯಾಗಿದೆ ಎಂಬುದು ನಮಗೂ ಹೆಮ್ಮೆ. ತನ್ನ 3ನೇ ವರ್ಷದ ಅವಧಿಯಲ್ಲಿ ತನಿಖಾ ವರದಿಗಳು, ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಪ್ರಕಟಿಸಿದೆ. ಇವುಗಳ ಕೆಲವು ಸ್ಯಾಂಪಲ್ ಗಳ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು ವೈರ್ ತನಿಖಾ ವರದಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಇಲಾಖೆಯಲ್ಲಿ ಬೋಗಸ್ ಎ ಖಾತಾಗಳನ್ನು ಮಾಡಲಾಗುತ್ತಿದೆ ಎಂಬ ಬಗ್ಗೆ ಪಾಲಿಕೆ ಪರಿಶೀಲನಾ ಸಮಿತಿಯಿಂದ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರು ವೈರ್ ನಡೆಸಿದ ತನಿಖೆಯಲ್ಲಿ ಡೂಪ್ಲಿಕೇಟ್ ಖಾತೆಗಳಿಗೆ ಸ್ವರ್ಗದಂತಿರುವ ಬೊಮ್ಮನಹಳ್ಳಿ ವಲಯದ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಅಧಿಕಾರಿ – ಸಿಬ್ಬಂದಿ ಸೇರಿಕೊಂಡು ಎರಡು ಅಕ್ರಮ ಎ ಖಾತೆ ಮಾಡಿರುವುದನ್ನು ದಾಖಲೆ ಸಹಿತ ಪತ್ತೆ ಹಚ್ಚಿತ್ತು. ಈ ಕುರಿತಂತೆ 2023ನೇ ಇಸವಿ ನವೆಂಬರ್ 3ನೇ ತಾರೀಖಿನಂದು ಸುಧೀರ್ಘ ವರದಿ ಪ್ರಕಟಿಸಿತ್ತು.
BW INVESTIGATION | ಬೋಗಸ್ ಖಾತೆ- ಬಂಡಲ್ ಭ್ರಷ್ಟರು ಭಾಗ-1 | ಬಿಬಿಎಂಪಿ ಯಲಚೇನಹಳ್ಳಿ ಎಆರ್ ಒ ಕಚೇರಿ : ಬ್ರೋಕರ್ – ಡೂಪ್ಲಿಕೇಟ್ ಖಾತಾ ಫ್ಯಾಕ್ಟರಿ : ಬೆಂಗಳೂರು ವೈರ್ ತನಿಖೆಯಲ್ಲಿ ಬಯಲಾಯ್ತು ನಕಲಿ ಖಾತೆಗಳು
ಈ ವರದಿಯ ಕುರಿತಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಸುದ್ದಿ ಪ್ರಕಟಿಸಿದ ನ.3ರ ಅದೇ ದಿನ ರಾತ್ರಿ ಈ ಸುದ್ದಿಯ ಗಹನತೆ ಬಗ್ಗೆ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾದರು. ಇದು ಬೆಂಗಳೂರು ವೈರ್ ಇಂಪ್ಯಾಕ್ಟ್. ನ.3ರಂದೇ ರಾತ್ರಿ ಎಲ್ಲಾ ವಲಯದ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಬೆಂಗಳೂರು ವೈರ್ ನ.3ರಂದು ಪ್ರಕಟಿಸಿದ್ದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ರವಾನಿಸಿದ್ದಾರೆ. ಅಲ್ಲದೆ ಇದರ ಹಿಂದೆಯೇ ತುರ್ತಾಗಿ ನ.4ರ ದಿನಾಂಕ ನಮೂದಿಸಿ, ಕೈಬರಹದಲ್ಲೆ ಪತ್ರ ಬರೆದು ನ.4ರ ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿನ ಎ ಮತ್ತು ಬಿ ಸ್ವತ್ತಿನ ಟ್ಯಾಕ್ಸ್ ರಿಜಿಸ್ಟರ್ ಅನ್ನು ಆಯಾ ವಲಯ ಕಚೇರಿಗೆ ತಪ್ಪದೇ ಹಸ್ತಾಂತರಿಸುವಂತೆ ಇದೇ ಮೇಲ್ಕಂಡ ಅಧಿಕಾರಿಗಳಿಗೆ ಖಡಕ್ ಆದೇಶ ಹೊರಡಿಸಿದ್ದರು. ಇದು ಬೆಂಗಳೂರು ವೈರ್ ವರದಿ ಪರಿಣಾಮವಾಗಿದೆ.
BW INVESTIGATION BIG IMPACT | ಯಲಚೇನಹಳ್ಳಿ ಎಆರ್ ಒ ಕಚೇರಿ ಖಾತಾ ಅಕ್ರಮ : ಬೆಂಗಳೂರು ವೈರ್ ತನಿಖಾ ವರದಿ ಫಲಶ್ರುತಿ : ಇಡೀ ಬೆಂಗಳೂರಿನ ಪ್ರಾಪರ್ಟಿ ರಿಜಿಸ್ಟರ್ ವಲಯ ಕಚೇರಿಗಳಿಗೆ ರವಾನೆ
ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಕಲಿ ಎ ಖಾತೆ ಮಾಡುವ ಭ್ರಷ್ಟ ಅಧಿಕಾರಿಗಳ ಕಾರ್ಯಕ್ಕೆ ಫುಲ್ ಸ್ಟಾಪ್ ಬೀಳುವಂತೆ ಇಡೀ ನಗರದಲ್ಲಿನ ಪಾಲಿಕೆ ಎ ಮತ್ತು ಬಿ ರಿಜಿಸ್ಟರ್ ಸ್ಕ್ಯಾನಿಂಗ್ ಹಾಗೂ ಡಿಜಿಟಲೈಷನ್ ಕಾರ್ಯ ಚುರುಕಾಗಿ ನಡೆಯುವಂತಾಯಿತು.
ಬೆಂಗಳೂರು ವೈರ್ ವರದಿ ಪರಿಣಾಮವಾದ ಸುದ್ದಿಗಳು :
- ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಬಂದವರು ನಿಗದಿತ ಕಾಲಾವಧಿ ಪೂರೈಸಿ ಮುಂದುವರೆದಿದ್ದವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಹಾಗೂ 11 ವರ್ಷಕ್ಕೂ ಹೆಚ್ಚು ಕಾಲದಿಂದ ನಿಯಮಬಾಹಿರವಾಗಿ ಮುಂದುವರೆದಿದ್ದ ಸೌಮ್ಯ ಎಂಬ ಲೆಕ್ಕಾಧೀಕ್ಷಕರ ಪ್ರಕರಣದಲ್ಲೂ ಅವರನ್ನು ಪ್ರಸ್ತುತ ಅವಧಿ ಬಳಿಕ ಅವರನ್ನು ಮುಂದುವರೆಸದಂತೆ ಚೀಫ್ ಕಮೀಷನರ್ ಕ್ರಮವಾಗಿ ಪಾಲಿಕೆ ಆಡಳಿತ ವಿಭಾಗದ ಸಹಾಯಕ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ. 2003ರ ಅ.19ರಂದು ಬೆಂಗಳೂರು ವೈರ್ ಪಾಲಿಕೆಯಲ್ಲಿ ಅನ್ಯಇಲಾಖೆಗಳಿಂದ ನಿಯೋಜನೆ ಬಂದಿರುವವರು ನಿಯಮಬಾಹಿರವಾಗಿ ಹಲವು ವರ್ಷಗಳಿಂದ ಇಲ್ಲೇ ಖಾಯಂ ಠಿಕಾಣಿ ಹೂಡಿದ್ದಾರೆ ಎಂದು ಮಹದೇವಪುರ ವಲಯದಲ್ಲಿ ಲೆಕ್ಕಾಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿ.ಸೌಮ್ಯ ಎಂಬುವರು ಕಳೆದ 11 ವರ್ಷಗಳಿಂದ ನಿಯಮ ಉಲ್ಲಂಘಿಸಿ ಕೆಲಸ ಮಾಡುತ್ತಿರುವ ಪ್ರಕರಣವನ್ನು ಉಲ್ಲೇಖಿಸಿ ದಾಖಲೆ ಸಹಿತ ವರದಿ ಮಾಡಿತ್ತು.
BW IMPACT | BBMP DEPUTATION RULES | ನಿಯೋಜನಾ ಅವಧಿ ಪೂರ್ಣಗೊಂಡ ಅಧಿಕಾರಿ- ನೌಕರರು ಮಾತೃ ಇಲಾಖೆಗೆ ವಾಪಸ್ : ಲೆಕ್ಕಾಧೀಕ್ಷಕಿ ಸೌಮ್ಯರಿಗೂ ಗೇಟ್ ಪಾಸ್ : ಇದು ಬೆಂಗಳೂರು ವೈರ್ ವರದಿ ಪರಿಣಾಮ
- ಬಿಬಿಎಂಪಿಯಲ್ಲಿ ಎಂಜಿನಿಯರಿಂಗ್ ವಿಭಾಗ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಗುತ್ತಿಗೆ ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನವಾಗಿಲ್ಲ ಎಂದು “ಬೆಂಗಳೂರು ವೈರ್” ವರದಿಯಿಂದ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆ ಮೂಲಕ ಎಂಜಿನಿಯರಿಂಗ್ ವಿಭಾಗದ 128 ಎಂಜಿನಿಯರ್ ಗಳಿಗೆ ಮೇ ತಿಂಗಳ ಸಂಬಳ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ 22 ಎಂಜಿನಿಯರ್ ಗಳಿಗೆ ಆಗಸ್ಟ್ ತನಕ ವೇತನ ಪಾವತಿಯಾಗಿದೆ. ಇದು “ಬೆಂಗಳೂರು ವೈರ್” ವರದಿ ಪರಿಣಾಮ. ಈ ಬಗ್ಗೆ ಆಗಸ್ಟ್ 13ರಂದು “BW Special | BBMP No Salary | ಬಿಬಿಎಂಪಿ 150 ಕಾಂಟ್ರಾಕ್ಟ್ ಎಂಜಿನಿಯರ್ ಗಳಿಗೂ ತಪ್ಪದ ಗೋಳು : ಮೇ ನಿಂದ ಸಂಬಳವಿಲ್ಲ” ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡು ಪಾಲಿಕೆ 150 ಎಂಜಿನಿಯರ್ ಗಳಿಗೆ ವಿವಿಧ ಹಂತಗಳಲ್ಲಿ ಬಾಕಿ ವೇತನ ಪಾವತಿಸಿದೆ.
BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : 150 ಗುತ್ತಿಗೆ ಎಂಜಿನಿಯರ್ ಗಳ ಮೇ ತಿಂಗಳ ವೇತನ ಪಾವತಿಸಿದ ಬಿಬಿಎಂಪಿ
- ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯದ ಉಲ್ಲಾಳು ಕೆರೆಯಲ್ಲಿ ಮೀನುಗಳ ಮಾರಣಹೋಮ ಕುರಿತಂತೆ ಆ.28ರಂದು ಬೆಂಗಳೂರು ವೈರ್ ಸುದ್ದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡಿರುವ ಪಾಲಿಕೆ ಕೆರೆ ವಿಭಾಗದ ಎಂಜಿನಿಯರ್ ಗಳು, ಬೆಂಗಳೂರು ಜಲಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬುಧವಾರ ಕೆರೆಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದರು. ಜೊತೆಗೆ ಕೆರೆಯ ದುಸ್ಥಿತಿಗೆ ಕಾರಣವಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. “ಬಿಬಿಎಂಪಿಯ ಉಲ್ಲಾಳ ಕೆರೆಯಲ್ಲಿ ಮೀನುಗಳ ಮಾರಣಹೋಮ…!! ಹೇಳೋರಿಲ್ಲ ಕೇಳೋರಿಲ್ಲ!! ಅಧಿಕಾರಿಗಳೇನು ಮಾಡ್ತಿದ್ದಾರೆ!!?” ಶೀರ್ಷಿಕೆಯಡಿ ಮೊದಲಿಗೆ 2023ರ ಆಗಸ್ಟ್ 28ರಂದು ಸುದ್ದಿ ಪ್ರಸಾರ ಮಾಡಿತ್ತು. ಆ ಬಳಿಕ ಇತರ ರಾಜ್ಯ ಮಟ್ಟದ ಇಂಗ್ಲೀಷ್ ಮತ್ತು ಕನ್ನಡ ದಿನಪತ್ರಿಕೆಗಳು ಬೆಂಗಳೂರು ವೈರ್ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಸುದ್ದಿಯನ್ನು ಅನುಸರಿಸಿ ಉಲ್ಲಾಳ ಕೆರೆಯಲ್ಲಿ ಮೀನುಗಳ ಸತ್ತು ಹೋಗಿರುವ ಬಗ್ಗೆ ವರದಿ ಪ್ರಕಟಿಸಿದ್ದವು.
BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : ಉಲ್ಲಾಳು ಕೆರೆಯಲ್ಲಿ ಬಿಬಿಎಂಪಿ- ಕೆಎಸ್ ಪಿಸಿಬಿ ಅಧಿಕಾರಿಗಳ ಜಂಟಿ ಪರಿಶೀಲನೆ ; ನೀರಿನ ಗುಣಮಟ್ಟ ಸುಧಾರಣೆಗೆ ಕ್ರಮ
- ಶೇಷಾದ್ರಿಪುರಂ ಹಾಗೂ ರೇಸ್ ಕೋರ್ಸ್ ಕಡೆಯಿಂದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಸಂಪರ್ಕಿಸುವ ರಸ್ತೆಯ ಮಧ್ಯದ ಅವೈಜ್ಞಾನಿಕ ಜಂಕ್ಷನ್ ನಲ್ಲಿನ ದೋಷಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸರಿಪಡಿಸುವ ಕಾಮಗಾರಿ ಕೈಗೊಂಡಿದೆ. ಇದು ‘ಬೆಂಗಳೂರು ವೈರ್’ ವರದಿ ಪರಿಣಾಮವಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಶಿವಾನಂದ ಉಕ್ಕಿನ ಸೇತುವೆ ಬೆಂಗಳೂರಿನ ನರ್ವ್ ಸೆಂಟರ್ ಗಳಲ್ಲಿ ಒಂದು. ಇಂತಹ ಉಕ್ಕಿನ ಸೇತುವೆಯ ಜಂಕ್ಷನ್ ಸೂಕ್ತ ರೀತಿ ನಿರ್ಮಿಸದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಈ ಕುರಿತಂತೆ ‘ಬೆಂಗಳೂರು ವೈರ್’ ನಲ್ಲಿ ಸವಿಸ್ತಾರವಾಗಿ ಆ ಅವೈಜ್ಞಾನಿಕ ಜಂಕ್ಷನ್ ನಿಂದ ಸೃಷ್ಟಿಯಾಗುವ ಸಮಸ್ಯೆಗಳ ಬಗ್ಗೆ 2023ರ ಜನವರಿ 23ರಂದು #ShivanandSteelBridge Reality Check | ಶಿವಾನಂದ ಸರ್ಕಲ್ ಉಕ್ಕಿನ ಸೇತುವೆಯ ಅವೈಜ್ಞಾನಿಕ ಜಂಕ್ಷನ್ : ಇಲ್ಲಿ ಹುಷಾರಾಗಿ ವಾಹನ ಚಾಲನೆ ಮಾಡಿ…! ಎಂಬ ತಲೆ ಬರಹದ ಸುದ್ದಿಯನ್ನು ಪ್ರಕಟಿಸಿ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ಈ ಭಾಗದಲ್ಲಿ ಕಾಮಗಾರಿ ಆರಂಭಿಸಿ ಜಂಕ್ಷನ್ ನಲ್ಲಿ ವಿನ್ಯಾಸ ದೋಷವನ್ನು ಸರಿಪಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದು, ಸದ್ಯ ಕಾಮಗಾರಿ ಮುಗಿದು ವಾಹನ ಸವಾರರು ನಿರಾಂತಕವಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
BW IMPACT | #Shivananda Steel flyover | ಶಿವಾನಂದ ಸರ್ಕಲ್ ಫ್ಲೈಓವರ್ ಜಂಕ್ಷನ್ ದೋಷ ನಿವಾರಣೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು ವೈರ್ ಎಕ್ಸ್ ಕ್ಲೂಸಿವ್ ಸುದ್ದಿಗಳು :
1) BW EXCLUSIVE | BMP Building Bye-laws 2003 Analysis | ಬೆಂಗಳೂರು : ಕಟ್ಟಡ ನಿರ್ಮಾಣಕ್ಕೆ ಜಾರಿಯಲ್ಲಿರೋದು 21 ವರ್ಷ ಹಳೆಯ 2003ರ ಬಿಲ್ಡಿಂಗ್ ಬೈಲಾ!!! ಸಿಸಿ, ಒಸಿ ಆಟಕ್ಕುಂಟು ಲೆಕ್ಕಕ್ಕಿಲ್ಲ – ನಗರದ ಆಸ್ತಿ ಮಾಲೀಕರಿಗೆ ಆಗುವ ತೊಂದರೆಗಳೇನು?
2) BW EXCLUSIVE | ಬಿಬಿಎಂಪಿಯಲ್ಲಿ 11 ವರ್ಷಕ್ಕೂ ಹೆಚ್ಚು ಕಾಲಾವಧಿಯಿಂದ ನಿಯಮಬಾಹಿರ ಠಿಕಾಣಿ : ಈ ಲೆಕ್ಕಾಧೀಕ್ಷಕ ಅಧಿಕಾರಿಗೆ ಯಾಕೆ ನಗರಾಭಿವೃದ್ಧಿ ಇಲಾಖೆ ಶ್ರೀರಕ್ಷೆ? ; ಇಲ್ಲಿದೆ ದಾಖಲೆ ಸಹಿತ ವರದಿ
3) BW EXCLUSIVE | BIG NEWS | ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ – 200 ಕೋಟಿ ರೂ. ಹಗರಣ!!? ; ಕಳಪೆ ಬಟ್ಟೆ ಪೂರೈಕೆಗೆ ಕಾರ್ಟೆಲ್ ದುಷ್ಟಕೂಟ ಸೃಷ್ಟಿ
4) BW EXCLUSIVE REPORT | ಬಿಬಿಎಂಪಿಯಲ್ಲಿ ಸೂಕ್ತ ಲೆಕ್ಕಪತ್ರ ಪದ್ಧತಿ ಜಾರಿಯಲ್ಲಿಲ್ಲ : 2019-20ರ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ 1,169 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ!!
5) BW EXCLUSIVE REPORT | “ಟ್ರಾನ್ಸ್ ಫಾರ್ಮ”ರ್ ಇಲ್ಲದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ !!! – 18.50 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಡಿಎ
6) BW EXCLUSIVE | Bangalore Floods Condition Analysis | ಬೆಂಗಳೂರು ಈ ಮಳೆಗಾಲಕ್ಕೆ ಎಷ್ಟರ ಮಟ್ಟಿಗೆ ಸಿದ್ಧಗೊಂಡಿದೆ? ಯಾವ ವಲಯದಲ್ಲಿ ಸಮಸ್ಯೆಯಾಗಬಹುದು? ಇಲ್ಲಿದೆ ಕರಾರುವಕ್ ವಿಶ್ಲೇಷಣೆ
7) BW EXCLUSIVE INTERVIEW | Karnataka Assembly Election 2023 |‘ಈ ಬಾರಿಯ ಚುನಾವಣೆಯಲ್ಲಿ M3 ಹೊಸ ವಿದ್ಯುನ್ಮಾನ ಯಂತ್ರಗಳ ಬಳಕೆ’ : ಸಿಇಒ ಮನೋಜ್ ಕುಮಾರ್ ಮೀನಾ
8) BW EXCLUSIVE | #Lithium | ಜಮ್ಮು ಮತ್ತು ಕಾಶ್ಮೀರದಲ್ಲಿ ಲೀಥಿಯಂ ಖನಿಜ ನಿಕ್ಷೇಪ ಕಂಡು ಬಂದಿದ್ದು ಈಗಲ್ಲ 1997ರಲ್ಲಿ!! : ಜಿಎಸ್ಐ ನೀಡಿದ್ದ ಆ ವರದಿಯಲ್ಲೇನಿತ್ತು?
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.