ಬೆಂಗಳೂರು, ಮಾ.25 www.bengaluruwire.com : ರಾಜ್ಯದ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಟಿ.ನರಸೀಪುರ ಕ್ಷೇತ್ರದಿಂದ ಹೆಚ್.ಸಿ. ಮಹದೇವಪ್ಪ, ದೇವನಹಳ್ಳಿ ಕ್ಷೇತ್ರದಿಂದ ಕೆ.ಹೆಚ್.ಮುನಿಯಪ್ಪ ಅಖಾಡಕ್ಕೆ ಇಳಿಯಲಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ ಪುತ್ರ ದರ್ಶನ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ 2018ರಲ್ಲಿ ಗೆದ್ದು ಬಂದು ಹಿಂದಿನ ಕಾಂಗ್ರೆಸ್- ಜೆಡಿಎಸ್ ಹಾಗೂ ಆನಂತರ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್ ಮಾ.14ರಂದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದರು. ಹಿಂದಿನ ಮುಳಬಾಗಿಲು ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಅವರಿಗೆ ಇದೀಗ ಕೆಪಿಸಿಸಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಬೆಂಗಳೂರಿನ ಎಸ್ ಸಿ ಮೀಸಲಿರುವ ಮಹದೇವಪುರ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಅವಕಾಶ ಮಾಡಿಕೊಟ್ಟಿದೆ.
ಇನ್ನು ಪ್ರಮುಖ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ನೋಡಿದಾಗ, ಕಂಪ್ಲಿ -ಜೆಎನ್ ಗಣೇಶ್, ಬಳ್ಳಾರಿ ಎಸ್.ಟಿ. ಮೀಸಲು ಕ್ಷೇತ್ರ -ಬಿ. ನಾಗೇಂದ್ರ, ಸಂಡೂರು -ಈ ತುಕಾರಾಂ, ರಾಮನಗರ -ಇಕ್ಬಾಲ್ ಹುಸೇನ್, ರಾಜಾಜಿನಗರ –ಪುಟ್ಟಣ್ಣ, ಗುಂಡ್ಲುಪೇಟೆ -ಹೆಚ್.ಎಂ. ಗಣೇಶ್ ಪ್ರಸಾದ್, ಬೀದರ್ ದಕ್ಷಿಣ -ಅಶೋಕ್ ಖೇಣಿ, ಕುಣಿಗಲ್ -ಡಾ. ರಂಗನಾಥ, ಶಿರಾ -ಟಿ.ಬಿ. ಜಯಚಂದ್ರ, ಪಾವಗಡ -ಹೆಚ್.ವಿ. ವೆಂಕಟೇಶ್, ಗೋವಿಂದರಾಜನಗರ –ಪ್ರಿಯಾಕೃಷ್ಣ, ಯಮಕನಮರಡಿ -ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ -ಲಕ್ಷ್ಮಿ ಹೆಬ್ಬಾಳ್ಕರ್, ರಾಮದುರ್ಗ -ಅಶೋಕ ಪಟ್ಟಣ, ಹುನಗುಂದ -ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ -ಅಪ್ಪಾಜಿ ನಾಡಗೌಡ, ಬಸವನ ಬಾಗೇವಾಡಿ -ಶಿವಾನಂದ ಪಾಟೀಲ್, ಬಬಲೇಶ್ವರ -ಎಂ.ಬಿ. ಪಾಟೀಲ್, ಇಂಡಿ -ಯಶವಂತರಾಯ ಗೌಡ ಪಾಟೀಲ್, ಹುಮ್ನಾಬಾದ್ -ರಾಜಶೇಖರ ಪಾಟೀಲ್, ಬೀದರ್ -ರಹಿಮ್ ಖಾನ್, ಬಾಲ್ಕಿ -ಈಶ್ವರ ಖಂಡ್ರೆ, ರಾಯಚೂರು ಗ್ರಾಮೀಣ -ಬಸವನ ಗೌಡ, ಮಸ್ಕಿ -ಬಸವನಗೌಡ ತುರವಿಹಾಳ, ಕುಷ್ಟಗಿ -ಅಮರೇಗೌಡ ಬಯ್ಯಾಪುರ, ಕನಕಗಿರಿ -ಶಿವರಾಜ್ ತಂಗಡಗಿ, ಚಾಮರಾಜಪೇಟೆ -ಜಮೀರ್ ಅಹ್ಮದ್, ಕೊರಟಗೆರೆ -ಜಿ. ಪರಮೇಶ್ವರ್, ರಾಜರಾಜೇಶ್ವರಿ ನಗರ -ಹೆಚ್. ಕುಸುಮಾ, ಶಾಂತಿನಗರ -ಎನ್.ಎ. ಹ್ಯಾರಿಸ್, ಜಯನಗರ -ಸೌಮ್ಯಾ ರೆಡ್ಡಿ, ವಿಜಯನಗರ- ಎಂ.ಕೃಷ್ಣಪ್ಪ, ಸರ್ವಜ್ಞನಗರ- ಕೆ.ಜೆ.ಜಾರ್ಜ್, ಬಸವನಗುಡಿ- ಯು.ಬಿ.ವೆಂಕಟೇಶ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ 124 ಮಂದಿಯ ಪಟ್ಟಿಯಲ್ಲಿ 94ನೇ ಕ್ರಮಾಂಕದಲ್ಲಿ ಕೊಂಚ ದೋಷವಿದ್ದು, ಆ ಕ್ರಮಾಂಕದಲ್ಲಿ 174 ನಂಬರ್ ಮಹದೇವಪುರ ವಿಧಾನಸಭಾ ಕ್ಷೇತ್ರ (ಎಸ್ ಸಿ ಮೀಸಲು), ಐಎನ್ ಸಿ ಅಭ್ಯರ್ಥಿ ಎಚ್.ನಾಗೇಶ್(ಶಾಸಕ) ಎಂದು ತಿದ್ದುಪಡಿ ಮಾಡಿಕೊಂಡು ಓದಬೇಕಿದೆ.
ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ :