ಬೆಂಗಳೂರು, ಫೆ.14 www.bengaluruwire.com : ದೇಶದ ವೈಮಾಂತರಿಕ್ಷ ಕೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ನಿರ್ಮಿಸಿದ ಉತ್ತಮ್ ರಾಡಾರ್, ತಪಸ್ ಮತ್ತು ಆರ್ಚರ್-ಎನ್ ಜಿ ಯುಎವಿಗಳು ಪ್ರಮುಖ ಪಾತ್ರವಹಿಸಲಿದೆ.
ಈ ಬಾರಿಯ ಏರ್ ಶೋನಲ್ಲಿ ಡಿಆರ್ ಡಿಒ ಪೆವಿಲಿಯನ್ ನಲ್ಲಿ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ 321 ರಕ್ಷಣಾ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಡಿಆರ್ ಡಿಒನಲ್ಲಿ 52 ಪ್ರಯೋಗಾಲಯ ದೇಶಾದ್ಯಂತ ಇದೆ. ಆ ಪೈಕಿ 32 ಪ್ರಯೋಗಾಲಯದ ಉತ್ಪನ್ನಗಳ ಪ್ರದರ್ಶನಕ್ಕಿಡಲಾಗಿದೆ. ಎರಡು ಎಂಜಿನ್ಡ್ ಡೆಕ್ ಬೇಸ್ಡ್ ಫೈಟರ್ ಏರ್ ಕ್ರಾಫ್ಟ್, ಏರೊ ಎಂಜಿನ್ಸ್, ಅಡ್ವಾನ್ಸ್ ಮೀಡಿಯಮ್ ಏರ್ ಕ್ರಾಫ್ಟ್ (ಆಮ್ಕಾ), ಉತ್ತಮ್ ರಾಡಾರ್, ತಪಸ್, ರುಸ್ತುಮ್ ಎಂಬ ಮಾನವ ರಹಿತ ವಿಮಾನ (UAV)ಗಳು ಹಾಗೂ ಏಕ ಎಂಜಿನ್ ಟ್ವಿನ್ ಬೂಮ್ ಎಂಬ ಆರ್ಚರ್-ಎನ್ ಜಿ ಯುಎವಿ ಡಿಆರ್ ಡಿಒ ಮಳಿಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಉತ್ತಮ್ ರೆಡಾರ್ ವಿಶೇಷತೆ :
ಉತ್ತಮ್ ರೆಡಾರ್ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಅವುಗಳಿಗೆ ಸಮನಾಗಿದೆ. ಬೇರೆ ರಾಡಾರ್ ನಲ್ಲಿ ಟ್ರಾನ್ಸ್ ಮೀಟರ್ ಹಾಳಾದರೆ ಕೆಲಸ ಮಾಡುತ್ತಿರಲಿಲ್ಲ. ಆದರೆ ಇದರಲ್ಲಿ ಹಲವು ಆಂಟೆನಾ ಎಲಿಮೆಂಟ್ಸ್ ಬಳಸಿದೆ. ಇದರಲ್ಲಿ ಒಂದು ಹಾಳಾದರೆ ಬೇರೆ ಎಲಿಮೆಂಟ್ಸ್ ನಿಂದ ಕೆಲಸ ಮಾಡುತ್ತೆ. ಆಕ್ಟೀವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೆ ರೆಡಾರ್ ಬಳಸಿದ್ದು ಭೂಮಿ ಮೇಲೆ, ಆಕಾಶದ ಮೇಲೆ, ನೀರಿನ ಮೇಲಿನ ಹಡಗು ಇವುಗಳನ್ನು ರೆಡಾರ್ ಬೀಮ್ ಹರಿಸಿ ಶತ್ರುಗಳ ನೆಲೆ, ವಸ್ತುಗಳನ್ನು ಟ್ರಾಕ್ ಮಾಡಬಹುದು. ಈ ರಾಡಾರ್ ಗಳನ್ನು ಯುದ್ಧ ವಿಮಾನದ ಕಾಕ್ ಪಿಟ್ ಮುಂಭಾಗ ಅಳವಡಿಸಲಾಗುತ್ತದೆ.
ಏಕ ಕಾಲಕ್ಕೆ ತೇಜಸ್ ಪೈಲಟ್ ನಾಲ್ಕು ಕ್ಷಿಪಣಿಯನ್ನು ಏಕ ಕಾಲಕ್ಕೆ ಉಡಾಯಿಸುವ ಸಾಮರ್ಥ್ಯವನ್ನು ಈ ಉತ್ತಮ್ ರೆಡಾರ್ ಮಾಡಲಿದೆ.
ತೇಜಸ್ ಯುದ್ಧ ವಿಮಾನಕ್ಕೆ ಬಳಸುವ ನಿಟ್ಟಿನಲ್ಲಿ ಎಚ್ ಎಎಲ್ ಗೆ ತಂತ್ರಙ್ಞನ ಸದ್ಯದಲ್ಲೇ ಹಸ್ತಾಂತರಿಸಲಾಗುತ್ತೆ. ಆನಂತರ ಎಚ್ ಎಎಲ್ ಮುಂದಿನ ವರ್ಷದಿಂದ ಉತ್ಪಾದನೆ ಪ್ರಾರಂಭಿಸಲಿದೆ. ಈ ರೆಡಾರ್ ಅನ್ನು ಡಿಆರ್ ಡಿಒ ಎಲೆಕ್ಟ್ರಾನಿಕ್ಸ್ ಅಂಡ್ ರೆಡಾರ್ ಅಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್ ಅಡಿಯಲ್ಲಿ ಏರ್ ಬಾರ್ನ್ ರೆಡಾರ್ ಅಂಡ್ ಸ್ಪೇಸ್ ಬೋರ್ಡ್ ರೆಡಾರ್ ವಿಭಾಗದವರು 6 ವರ್ಷ ದಿಂದ ಪ್ರಯತ್ನದಿಂದ ಅಭಿವೃದ್ಧಿಪಡಿಸಿದ್ದಾರೆ. ಯುದ್ಧ ವಿಮಾನಕ್ಕೆ ಬಳಸುವ ನಿಟ್ಟಿನಲ್ಲಿ ಇದೇ ಮೊದಲ ರೆಡಾರ್ ಆಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಡಾ.ಬಿ.ಕೆ.ದಾಸ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಮಹಾ ನಿರ್ದೇಶಕ, “ಡಿಆರ್ ಡಿಒ ರಕ್ಷಣಾ ಇಲಾಖೆಯ ಏರ್ ಶೋನಲ್ಲಿ ಸಂಸ್ಥೆಯ ಎಲ್ಲಾ ಕಾರ್ಯನಿರ್ವಹಿಸುವ ರಕ್ಷಣಾ ಉತ್ಪನ್ನಗಳ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉತ್ತಮ್ ರೆಡಾರ್ ದೇಶದ ಯುದ್ದ ವಿಮಾನ, ಹೆಲಿಕಾಪ್ಟರ್ ಗಳಿಗಾಗಿ ಅಭಿವೃದ್ಧಿಪಡಿಸಿದ್ದು ಅಂತರರಾಷ್ಟ್ರೀಯ ದರ್ಜೆಯದ್ದಾಗಿದೆ. ಏರ್ ಬಾರ್ನ್ ವ್ಯವಸ್ಥೆ ಕಲ್ಪಿಸುವಲ್ಲಿ ಡಿಆರ್ ಡಿಒ ಸ್ವಾವಲಂಬನೆ ಸಾಧಿಸಿದೆ. ಎರಡು ಹಾಗೂ ಎರಡೂವರೆ ವರ್ಷದಲ್ಲಿ ಉತ್ತಮ್ ರಾಡಾರ್ ಸಿದ್ಧವಾಗಲಿದೆ” ಎಂದು ವಿವರಿಸಿದರು.
ಆರ್ಚರ್ ಯುಎವಿ ಕ್ಷಿಪಣಿ ವಾಹಕ ಯುಎವಿ :
ತಪಸ್ ಯುಎವಿಗಿಂತ ಆರ್ಚರ್-ಎನ್ ಜಿ ಯುಎವಿ ಸುಧಾರಿತ ವರ್ಗದ್ದಾಗಿದೆ. ಜೂನ್ ನಲ್ಲಿ ಇದರ ಪ್ರಾಯೋಗಿಕ ಹಾರಾಟ ನಡೆಸಲಿದೆ. ಐಸ್ಟಾರ್ ಮಿಶನ್ ಅಂದರೆ ವಿಚಕ್ಷಣೆ, ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಈ ಯುಎವಿ 300 ಕೆಜಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. 30 ಸಾವಿರ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಇದಕ್ಕಿದ್ದು, 24 ಗಂಟೆಗಳ ಕಾಲ ಹಾರಾಟ ನಡೆಸಲಿದೆ.
ಆರ್ಚರ್-ಎನ್ ಜಿ ಯುಎವಿ ಜಂಟಿ ಯೋಜನಾ ನಿರ್ದೇಶಕ ವಿವೇಕ್ ಪಟ್ವೇ ಹೇಳುವ ಪ್ರಕಾರ ಆರ್ಚರ್ ಎನ್ ಜಿ ಯುಎವಿ ಮಧ್ಯಮ ಎತ್ತರ ಹಾರಾಟ ಹಾಗೂ ದೀರ್ಘಾವಧಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಈ ಜೂನ್ ನಲ್ಲಿ ಇದರ ಪ್ರಾಯೋಗಿಕ ಹಾರಾಟ ನಡೆಸಲಿದೆ.
70 ಸಾವಿರ ಅಡಿ ಎತ್ತರದ ತನಕ ಹಾರಾಡುವ ತಪಸ್ :
ಡಿಆರ್ ಡಿಒ ಹಿರಿಯ ಅಧಿಕಾರಿ ಡಾ.ಶೈಲೇಂದ್ರ ವಸಂತ್, ಡಿಆರ್ ಡಿಒ ತಪಸ್ ಯುಎವಿಗಾಗಿ 180 ಎಚ್ ಪಿ ಎಂಜಿನ್ ಅನ್ನು 70 ಸಾವಿರ ಅಡಿ ಎತ್ತರದಿಂದ ಯುಎವಿ ಹಾರಾಟ ನಡೆಸಲು ಅನುವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಲಹಂಕ ವಾಯುನೆಲೆಯಲ್ಲಿ ವೈಮಾಂತರಿಕ್ಷ ಹಾಗೂ ಏರ್ ಬಾರ್ನ್ ವ್ಯವಸ್ಥೆ ಕುರಿತ ಮಳಿಗೆಯನ್ನು ತೆರೆದಿದೆ. ರುಸ್ತುಮ್
ಎಡಿಇ ಅಭಿವೃದ್ಧಿಪಡಿಸಿದ ಯುಎವಿಯನ್ನು ಪ್ರದರ್ಶನಕ್ಕಿಡಲಾಗಿದೆ.
“ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ 321 ರಕ್ಷಣಾ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ” ಎಂದು ಡಿಆರ್ ಡಿಒ ಏರ್ ಬಾರ್ನ್ ಸಿಸ್ಟಮ್ ನಿರ್ದೇಶಕಿ ಡಾ.ಕೆ.ರಾಜಲಕ್ಷ್ಮಿ ಹೇಳಿದರು.
ತೇಜಸ್ ಗೆ ಬಲ ತುಂಬುವ ಡಿಆರ್ ಡಿಒ :
ಡಿಆರ್ ಡಿಒ ಅಭಿವೃದ್ಧಿಪಡಿಸಿದ ರಾಡಾರ್ ಸಿಸ್ಟಮ್, ಡಾಟಾ ಸಿಸ್ಟಮ್, ಸಮರ ಸಾಮರ್ಥ್ಯ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳನ್ನು ಸುಧಾರಿತ ತೇಜಸ್ ಯುದ್ಧ ವಿಮಾನಗಳಿಗೆ ಅಳವಡಿಸಲಾಗುತ್ತಿದೆ. ಕೆಲವು ಪ್ರಯೋಗ ಹಂತದಲ್ಲಿದೆ. ಕೆಲವು ಪ್ರಯೋಗಗಳು ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ಹಲವು ವರ್ಷಗಳಿಂದ ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಕಾವೇರಿ ಎಂಜಿನ್ ಸುಧಾರಿತ ಮಾದರಿಯನ್ನು ಡಿಆರ್ ಡಿಒ ಹಾಲ್ ನಲ್ಲಿ ಪ್ರದರ್ಶನಕ್ಕಿಡಲಾಗಿದೆ.