ಹಕ್ಕಿಗಳ ಲೋಕದಲ್ಲಿ ವಿಹರಿಸುವವರಿಗೇ ಗೊತ್ತು ಅವುಗಳ ಹಾರಾಟ, ಜೀವನಕ್ರಮವನ್ನು ಆಸ್ವಾದಿಸುವ ಮಜಾ. ಒಂದು ಕ್ಷಣಕ್ಕೆ ಕಂಡರೂ ಕಾಣದಂತೆ ತನ್ನ ಅಮಿತ ಸೌಂದರ್ಯವನ್ನು ತೋರಿಸಿ ಆಕಾಶದಲ್ಲಿ ತೇಲುತ್ತಾ, ಮರಗಿಡಗಳ ಟೊಂಗೆಗಳ ಮೇಲೆ ಕೂತು ಆಹಾರವನ್ನರಿಸುವ ಪರಿ ಎಂತಹವರಲ್ಲೂ ಕುತೂಹಲ ಮೂಡಿಸದೇ ಇರದು. ಅಂತಹ ಕೆಲವು ಹಕ್ಕಿಗಳ ಪರಿಚಯವನ್ನು ನಿಮ್ಮ ಬೆಂಗಳೂರು ವೈರ್ ನಲ್ಲಿ ತಿಳಿಸುತ್ತಿದ್ದೇವೆ.
ಪಶ್ಚಿಮ ಘಟ್ಟಗಳ ಸರಹದ್ದಿನಲ್ಲಿರುವ ದಾಂಡೇಲಿ ವಿಶಿಷ್ಟ ಕಾಡುಗಳಲ್ಲಿ ಕಂಡು ಬರುವ ಮಲಬಾರ್ ಪೈಡ್ ಹಾರ್ನ್ ಬಿಲ್, ಕಾಪರ್ಸ್ಮಿತ್ ಬಾರ್ಬಿಟ್, ಪ್ಯಾರಡೈಸ್ ಫ್ಲೈ ಕ್ಯಾಚರ್ ಹಾಗೂ ಇಂಡಿಯನ್ ಗ್ರೇ ಹಾರ್ನ್ ಬಿಲ್ ಗಳ ಚಿತ್ರವನ್ನು ಹವ್ಯಾಸಿ ಫೊಟೊಗ್ರಾಫರ್ ಅನಂತ ಬಾಯರಿ ತಮ್ಮ ಕ್ಯಾಮರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಮಲಬಾರ್ ಪೈಡ್ ಹಾರ್ನ್ ಬಿಲ್ (Malabar Pied Hornbill) ಕನ್ನಡದಲ್ಲಿ ಮಲೆದಾಸ ಮಂಗಟ್ಟೆ ಎಂದು ಕರೆಯುವ ಇದು ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿದೆ ಎಂದು ಅದರ ಹೆಸರು ಸೂಚಿಸಿದರೂ, ಇದು ಮಧ್ಯ ಹಾಗೂ ಪೂರ್ವ ಭಾರತದ ಎರಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿನ ಇವುಗಳ ವಾಸಸ್ಥಾನವಾಗಿದೆ. ಈ ಹಕ್ಕಿಗಳು 65 ರಿಂದ 92 ಸೆಂ.ಮೀ ಉದ್ದ ಹಾಗೂ ಸುಮಾರು ಒಂದು ಕೆಜಿ ಭಾರವಿರುತ್ತದೆ.
ಅವು ಸಾಮಾನ್ಯವಾಗಿ ತೊರೆಗಳು ಮತ್ತು ಸಣ್ಣ ನದಿಗಳ ಸಮೀಪವಿರುವ ಕಾಡುಗಳಲ್ಲಿ ಈ ಮಂಗಟ್ಟೆ ಹಕ್ಕಿ ಕಂಡುಬರುತ್ತವೆ. ಮಳೆಕಾಡಿನ ಅಂಚುಗಳು ಮತ್ತು ಪತನಶೀಲ ಕಾಡುಪ್ರದೇಶಗಳು, 300 ಮೀ ವರೆಗಿನ ಎತ್ತರದ ಪ್ರತ್ಯೇಕವಾಗಿರುವ ಹಣ್ಣಿನ ಮರಗಳಿಗೆ ಭೇಟಿ ನೀಡುತ್ತದೆ.
ಈ ಮಂಗಟ್ಟೆ ಪಕ್ಷಿಯನ್ನು ನೋಡಲು ಉತ್ತಮ ಸ್ಥಳಗಳೆಂದರೆ ಕರ್ನಾಟಕದ ಬಂಡೀಪುರ, ನಾಗರಹೊಳೆ, ದಾಂಡೇಲಿ ಹಾಗೂ ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
ಇಂಡಿಯನ್ ಗ್ರೇ ಹಾರ್ನ್ ಬಿಲ್ :
ಇನ್ನು ಭಾರತೀಯ ಗ್ರೇ ಹಾರ್ನ್ ಬಿಲ್ (Indian Grey Hornbill) ಅಥವಾ ಕನ್ನಡದಲ್ಲಿ ಇದನ್ನು ಕಂದು/ಬೂದು ಬಣ್ಣದ ಮಂಗಟ್ಟೆಹಕ್ಕಿ, ಕಲದಾಲ ಹಕ್ಕಿ ಎಂದು ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಎತ್ತರದ ಆರ್ದ್ರ ಕಾಡುಗಳಲ್ಲಿ ಮಾತ್ರ ಇವು ಕಂಡುಬರುತ್ತದೆ. ಇವುಗಳ ಗಾತ್ರ: 45 ಸೆಂ.ಮೀವಿರುತ್ತೆ. ಗಂಡು ಹಕ್ಕಿ ಸುಮಾರು 238-240 ಗ್ರಾಂ. ತೂಕ ಹೊಂದಿರುತ್ತದೆ. ಅವುಗಳ ಉದ್ದ ಕೇವಲ 60 ಸೆಂ.ಮೀ ಆಗಿರುತ್ತೆ. ಇವುಗಳು ವಿನಾಶದಂಚಿನಲ್ಲಿರುವ ಹಕ್ಕಿಗಳಾಗಿದೆ.
ಈ ಹಾರ್ನ್ ಬಿಲ್ ಭಾರತಕ್ಕೆ ಸ್ಥಳೀಯವಾಗಿದೆ ಮತ್ತು ನೈಋತ್ಯ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ನಿತ್ಯಹರಿದ್ವರ್ಣ ಮತ್ತು ಪತನಶೀಲ ಕಾಡುಗಳಲ್ಲಿ ಕಂಡುಬರುತ್ತದೆ, ನದಿ ಪ್ರದೇಶದ ಆಸುಪಾಸು ಮತ್ತು ತಗ್ಗು ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ದಟ್ಟವಾದ ಮರಗಳ ಹೊದಿಕೆಯನ್ನು ಹೊಂದಿರುವ ಕಾಡುಗಳಲ್ಲಿ ಭಾರತೀಯ ಕಂದು ಮತ್ತು ಬೂದು ಬಣ್ಣದ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತದೆ.
ಈ ಪಕ್ಷಿಯನ್ನು ನೋಡಲು ಉತ್ತಮ ಸ್ಥಳಗಳು: ತಮಿಳುನಾಡಿನ ಅನೈಮಲೈ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ಪೆರಿಯಾರ್ ಮತ್ತು ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬರುತ್ತದೆ.
ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಹಕ್ಕಿಯ ವಿವರ
ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ (Paradise fly catcher) ಕನ್ನಡದಲ್ಲಿ ಬಾಲದಂಡೆಯ ಹಕ್ಕಿ ಎಂದು ಕರೆಯುವ, ಮಧ್ಯಮ ಗಾತ್ರದ ಪ್ಯಾಸರೀನ್ ಪಕ್ಷಿ ಏಷ್ಯಾ ಖಂಡದ ಅಲ್ಲ ಕಂಡುಬರುವ ಹಕ್ಕಿಯಾಗಿದ್ದು ಸ್ಥಳೀಯವಾಗಿ ಇದು ವ್ಯಾಪಕವಾಗಿ ಕಂಡುಬರುತ್ತದೆ. ಈ ಬಾನಾಡಿಯ ಜಾಗತಿಕ ಜನಸಂಖ್ಯೆಯು ಸ್ಥಿರವೆಂದು ಪರಿಗಣಿಸಲ್ಪಟ್ಟಿರುವುದರಿಂದ, 2004 ರಿಂದ ಐಯುಸಿಎನ್ ರೆಡ್ ಲಿಸ್ಟ್‌ನಲ್ಲಿ ಕಡಿಮೆ ಕಾಳಜಿಯ ಹಕ್ಕಿ ಎಂದು ಪಟ್ಟಿ ಮಾಡಲಾಗಿದೆ. ಇದು ಭಾರತೀಯ ಉಪಖಂಡ, ಮಧ್ಯ ಏಷ್ಯಾ ಮತ್ತು ಮ್ಯಾನ್ಮಾರ್ ನಲ್ಲಿ ಕಂಡುಬರುತ್ತದೆ. ಬೇರೆ ಬೇರೆ ಪ್ರದೇಶದಲ್ಲಿ ವಿವಿಧ ಬಣ್ಣಗಳಲ್ಲಿರುತ್ತದೆ.
ಕಾಪರ್ಸ್ಮಿತ್ ಬಾರ್ಬಿಟ್ ಹಕ್ಕಿಯ ವಿವರ :
ಕಾಪರ್ಸ್ಮಿತ್ ಬಾರ್ಬಿಟ್ (Coppersmith Barbit) ಕನ್ನಡದಲ್ಲಿ ಕುಟ್ರುಹಕ್ಕಿ, ಚೋಂಬು ಕುಟ್ಟಿಗ ಹಕ್ಕಿ ಎಂದು ಕರೆಯುವ ಈ ಪುಟ್ಟ ಹಕ್ಕಿ ಕಡುಗೆಂಪು ಹಣೆ ಮತ್ತು ಗಂಟಲು ಹೊಂದಿರುವ ಏಷ್ಯಾದ ಬಾರ್ಬೆಟ್ ಬಾನಾಡಿಯಾಗಿದೆ. ಇದು ತಾಮ್ರಗಾರನು ಸುತ್ತಿಗೆಯಿಂದ ಲೋಹವನ್ನು ಹೊಡೆಯುವಂತೆಯೇ ಧ್ವನಿಸುವ ಮೆಟ್ರೋನಾಮಿಕ್ ಕರೆಗೆ ಹೆಸರುವಾಸಿಯಾಗಿದೆ. ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ ವಾಸಿಸುವ ಈ ಪಕ್ಷಿಗಳು, ಗೂಡು ಕಟ್ಟಲು ಮರದೊಳಗೆ ರಂಧ್ರಗಳನ್ನು ಕೊರೆಯುತ್ತದೆ. ಇವು ಕೀಟಗಳನ್ನು, ವಿಶೇಷವಾಗಿ ರೆಕ್ಕೆಯ ಗೆದ್ದಲುಗಳನ್ನು ತಿನ್ನುತ್ತವೆ.