ಬೆಂಗಳೂರು, ನ.30 www.bengaluruwire.com : ಹಾವೇರಿಯಲ್ಲಿ 2023ರ ಜನವರಿ 6, 7 ಹಾಗೂ 8ರಂದು ಮೂರು ದಿನಗಳ ಕಾಲ ನಡೆಯುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆಯೋಜಿಸಿರುವ “ಕನ್ನಡ ಜ್ಯೋತಿ”ಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ಡಿಸೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ “ಕನ್ನಡ ಜ್ಯೋತಿ”ಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ವಿಧ್ಯುಕ್ತ ಚಾಲನೆ ನೀಡಲಾಗುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಭುವನಗಿರಿಯಿಂದ ಹೊರಟ ಕನ್ನಡ ರಥದ ಜಾಥಾವು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ರಥವು ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡು, ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಕನ್ನಡ ಜ್ಯೋತಿ”ಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ “ಕನ್ನಡ ರಥ”ದ ಜಾಥಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ. ಸಮ್ಮೇಳನವನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ ಕೈಗೊಳ್ಳುತ್ತಿರುವ ಈ ಹೊಸ ಯೋಜನೆಯನ್ನು ಮುಂದಿನ ಎಲ್ಲ ಸಮ್ಮೇಳನಗಳಲ್ಲೂ ಆಚರಿಸುವಂತೆ ಈ ಜಾಥಾವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ರಥದ ಜಾಥಾವು ಆಯಾ ಜಿಲ್ಲೆಗಳಲ್ಲಿ ಸಂಚರಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಮಠಗಳು, ರೋಟರಿ ಕ್ಲಬ್, ಸ್ತ್ರೀ ಶಕ್ತಿ ಸಂಘಗಳು, ಇತರ ಎಲ್ಲ ಕನ್ನಡ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು “ಕನ್ನಡ ರಥ”ಕ್ಕೆ ಭವ್ಯ ಸ್ವಾಗತವನ್ನು ಕೋರಿ ಬೀಳ್ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕನ್ನಡ ರಥ ಜಾಥವು ಅದ್ಭುತವಾಗಿ ಯಶಸ್ವಿಗೊಳಿಸಲು ಸಮಸ್ತ ಕನ್ನಡಿಗರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿಕೊಳ್ಳುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿದಂತೆ ಸಮ್ಮೇಳನದ ಸಂಪೂರ್ಣ ಮಾಹಿತಿ, ವಿವರಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಪ್ರತಿನಿಧಿ ನೋಂದಣಿಗಾಗಿ :
ಈ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ರೂ. 500/- (ಐದು ನೂರು ರೂಪಾಯಿ)ಗಳ ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಡಂತಿದೆ.
ನೋಂದಣಿ ಪ್ರಕ್ರಿಯೆಗಳು :
1) ಪ್ರತಿನಿಧಿಗಳಾಗಿ ಭಾಗವಹಿಸಲು ನೋಂದಾಯಿಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳತಕ್ಕದ್ದು.
2) ದಿನಾಂಕ 01-12- 2022 ರ ಮಧ್ಯರಾತ್ರಿ 12.೦೦ ರಿಂದ ನೋಂದಣಿ ಲಭ್ಯವಿದ್ದು, ದಿನಾಂಕ 18-12- 2022 (ರಾತ್ರಿ 12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.
3) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಪ್ರತಿನಿಧಿಗಳ ನೋಂದಣಿಗೆ ಅವಕಾಶವಿರುವುದಿಲ್ಲ.
ನೋಂದಾಯಿತ ಪ್ರತಿನಿಧಿಗಳಿಗೆ ಸಿಗುವ ಅನುಕೂಲತೆಗಳು / ಸೌಲಭ್ಯಗಳು :
1) ಹಾವೇರಿ ಜಿಲ್ಲೆಯಿಂದ ನೋಂದಾಯಿಸುವ ಪ್ರತಿನಿಧಿಗಳಿಗೆ ಹೊರತುಪಡಿಸಿ, ಮಿಕ್ಕುಳಿದ ಎಲ್ಲಾ ಜಿಲ್ಲೆಗಳ, ಹೊರ ರಾಜ್ಯಗಳ ನೋಂದಾಯಿತ ಪ್ರತಿನಿಧಿಗಳಿಗೆ ಲಭ್ಯವಿರುವ ವಸತಿ ಏರ್ಪಾಟುಗೊಳಿಸಲಾಗುವುದು.
2) ವಸತಿ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ಲಭ್ಯವಿರುವ ಸಾರಿಗೆ ವ್ಯವಸ್ಥೆ ಮಾಡಲಾಗುವುದು.
3) ನೋಂದಾಯಿತ ಎಲ್ಲಾ ಪ್ರತಿನಿಧಿಗಳಿಗೆ ಊಟ/ಉಪಾಹಾರದ ವ್ಯವಸ್ಥೆ ಕೈಗೊಳ್ಳಲಾಗುವುದು.
4) ಕಿಟ್ ಮತ್ತು ಬ್ಯಾಡ್ಜ್ ನೀಡಲಾಗುವುದು.
5) ಓ.ಓ.ಡಿ. ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು.
ಪುಸ್ತಕ ಮಳಿಗೆಗಳ ನೋಂದಣಿಗಾಗಿ :
ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಪ್ರಕಾಶಕರು, ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ಪುಸ್ತಕ ಮಳಿಗೆ ಒಂದಕ್ಕೆ ರೂ. 3,೦೦೦/- (ಮೂರು ಸಾವಿರ ರೂಪಾಯಿ) ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡAತಿದೆ.
ನೋಂದಣಿ ಪ್ರಕ್ರಿಯೆಗಳು :
1) ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಲೇಖಕರು, ಪ್ರಕಾಶಕರು, ಮಾರಾಟಗಾರರು, ಪುಸ್ತಕ ಮಳಿಗೆಯ ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.
2) ದಿನಾಂಕ ೦1-12-2022 ರ ಮಧ್ಯರಾತ್ರಿ 12.೦೦ ರಿಂದ ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ 18-12-2022 (ರಾತ್ರಿ 12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.
3) ಮೂರು ದಿವಸಗಳಿಗೆ ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಬೇಕಾದಲ್ಲಿ ತಲಾ 3,೦೦೦/- (ಮೂರು ಸಾವಿರ ರೂಪಾಯಿ)ಗಳ ಬಾಡಿಗೆ ನೀಡುವುದು.
4) ಕಡ್ಡಾಯವಾಗಿ ಕನ್ನಡ ಪುಸ್ತಕ ಮಾರಾಟಕ್ಕೆ ಮಾತ್ರ ಅವಕಾಶ. ಬೇರೆ ಭಾಷೆಗಳ ಪುಸ್ತಕ ಮಾರಾಟ ಕಂಡುಬಂದಲ್ಲಿ ಮಾರಾಟಕ್ಕೆ ನೀಡಲಾದ ಪರವಾನಗಿಯನ್ನು ರದ್ದುಪಡಿಸಲಾಗುವುದು.
5) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬAದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.
6) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
7) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರೀಕರಣ ಮಾಡಲಾಗುವುದು.
8) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ 60 ದಿವಸಗಳಲ್ಲಿ ಮರಳಿಸಲಾಗುವುದು.
9) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.
ನೋಂದಾಯಿತ ಪುಸ್ತಕ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು :
1) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.
2) ಮಳಿಗೆಯೊಂದಕ್ಕೆ 2 ಕುರ್ಚಿಗಳು, 2 ಬೆಂಚುಗಳನ್ನು ಒದಗಿಸಲಾಗುವುದು.
3) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.
ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.
ವಾಣಿಜ್ಯ ಮಳಿಗೆಗಳ ನೋಂದಣಿಗಾಗಿ :
ಸಮ್ಮೇಳನದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ವಾಣಿಜ್ಯ ಮಳಿಗೆ ಒಂದಕ್ಕೆ ರೂ. 5,೦೦೦/- (ಐದು ಸಾವಿರ ರೂಪಾಯಿ) ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡಂತಿದೆ.
ನೋಂದಣಿ ಪ್ರಕ್ರಿಯೆಗಳು :
1) ವಾಣಿಜ್ಯ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಮಾರಾಟಗಾರರು, ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.
2) ದಿನಾಂಕ ೦1-12- 2022 ರ ಮಧ್ಯರಾತ್ರಿ 12.೦೦ ರಿಂದ ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ 18-12-2022 (ರಾತ್ರಿ 12.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.
3) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.
4) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
5) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರಿಕರಣ ಮಾಡಲಾಗುವುದು.
6) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ ೬೦ ದಿವಸಗಳಲ್ಲಿ ಮರಳಿಸಲಾಗುವುದು.
7) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.
ನೋಂದಾಯಿತ ವಾಣಿಜ್ಯ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು:
1) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.
2) ಮಳಿಗೆಯೊಂದಕ್ಕೆ 2 ಕುರ್ಚಿಗಳು, 2 ಬೆಂಚುಗಳನ್ನು ಒದಗಿಸಲಾಗುವುದು.
3) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.
ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನ ಸಮಿತಿಗೆ ಮಾಜಿ ಶಾಸಕರಾದ ಶ್ರೀ ಯು.ಬಿ. ಬಣಕಾರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಂ. ಸಾಲಿ ಅವರ ಉಪಾಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಪುಸ್ತಕ / ವಾಣಿಜ್ಯ ಮಳಿಗೆಯಲ್ಲಿನ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕುರಿತು ಈ ಕೆಳಕಂಡವರನ್ನು ಸಂಪರ್ಕಿಲು ಕೋರಿದೆ.
1) ಶ್ರೀ ವಿನಾಯಕ ಜೋಶಿ, ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ, ಹಾವೇರಿ. ಮೊ. 8660348505
2) ಶ್ರೀ ಲಿಂಗಯ್ಯ ಹಿರೇಮಠ, ಅಧ್ಯಕ್ಷರು, ಹಾವೇರಿ ಜಿಲ್ಲಾ ಕ.ಸಾ.ಪ., ಮೊ. 9902768704
3) ಶ್ರೀ ವೈ.ಬಿ. ಆಲದಕಟ್ಟಿ, ಅಧ್ಯಕ್ಷರು, ಹಾವೇರಿ ತಾಲ್ಲೂಕು ಕ.ಸಾ.ಪ., ಮೊ. 9880268265
4) ಶ್ರೀ ಪಾರ್ಶ್ವನಾಥ್, ಕ.ಸಾ.ಪ., ಮೊ. 9901059888
5) ಶ್ರೀ ಧನಂಜಯ, ಕ.ಸಾ.ಪ., ಮೊ. 9980608182