Friday, June 12, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಸುದ್ದಿ ಪತ್ರಿಕೆಗಳಿಗೆ ಅಂಚೆ ರಿಯಾಯಿತಿ ಕಡಿತ: ಸೌಲಭ್ಯ ಮರುಸ್ಥಾಪಿಸಲು ಪ್ರಧಾನಿ ಮೋದಿಗೆ ಕೆಯುಡಬ್ಲ್ಯೂಜೆ ಒತ್ತಾಯ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

  • Bengaluru Focus

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    BDA News | ಉದ್ಯಾನ ನಗರಿ ಮರುಸೃಷ್ಟಿಗೆ ಬಿಡಿಎ ಹೊಸ ಹೆಜ್ಜೆ: ‘ಗ್ರೀನ್ ಬೆಂಗಳೂರು’ ಜಾಲತಾಣ ಲೋಕಾರ್ಪಣೆ

    ಬೆಂಗಳೂರು ನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಾಂತರಾಜು ಪಿ.ಎಸ್ ನೇಮಕ: ಜಿ.ಜಗದೀಶ ಜಿಬಿಎ ಕೇಂದ್ರ ಪಾಲಿಕೆ ನೂತನ ಕಮಿಷನರ್

    Big Breaking News | ರಾಜಧಾನಿಯಲ್ಲಿ ಕಸದ ದರ್ಬಾರ್: ಬಿಎಸ್‌ಡಬ್ಲ್ಯೂಎಂಎಲ್, ಜಿಬಿಎಗೆ ಬೆವರಿಳಿಸಿದ ಲೋಕಾಯುಕ್ತ; ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಅಮೃತ ಕರ್ನಾಟಕ ಸೃಷ್ಟಿಸಲಿರುವ ಬಿಜೆಪಿಯ ಪ್ರಣಾಳಿಕೆ : 224 ಕ್ಷೇತ್ರಗಳಲ್ಲಿ ಸಲಹೆ ಸ್ವೀಕಾರ

ವಾಟ್ಸಾಪ್‌ ನಂಬರ್‌, ವೆಬ್‌ಸೈಟ್‌, ಪ್ರಗತಿ ರಥ, ಸಲಹಾ ಪೆಟ್ಟಿಗೆ ಮೂಲಕ ಜನರಿಂದ ಸಲಹೆ ಸ್ವೀಕಾರ : ಸಚಿವ ಡಾ.ಕೆ.ಸುಧಾಕರ್‌

by Bengaluru Wire Desk
February 22, 2023
in News Wire
Reading Time: 1 min read
0

ಬೆಂಗಳೂರು, ಫೆ.22 www.bengaluruwire.com : ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಈಗ ಸಮೃದ್ಧ ಕರ್ನಾಟಕ ನಿರ್ಮಿಸಲು ಜನರ ಅಭಿಪ್ರಾಯದೊಂದಿಗೆ ಬಿಜೆಪಿ ಪ್ರಣಾಳಿಕೆ ತಯಾರಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ನೀಡಿದೆ. ಬಿಜೆಪಿ ಕಚೇರಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೊಂದಿಗೆ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಪ್ರಣಾಳಿಕೆ ತಯಾರಿ ಕುರಿತು ಸಚಿವರು ಮಾಹಿತಿ ಹಂಚಿಕೊಂಡರು.

ʼಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆʼ ಎಂಬ ಘೋಷಣೆಯಲ್ಲಿ ಜನರ ಬಳಿ ಹೋಗುತ್ತೇವೆ. ಕನಿಷ್ಠ 50 ಸೆಕ್ಟರ್‌ ಸಭೆಗಳನ್ನು ಮಾಡಲಿದ್ದೇವೆ. ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಕ್ಷೇತ್ರಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲೂ ಸಭೆ ನಡೆಸಿ, ಸಂಘಟನೆಗಳ ಸಲಹೆ ಪಡೆಯಲಾಗುವುದು ಎಂದರು.

ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಬಂದು ಭಾಗಿಯಾಗುತ್ತಾರೆ. ವಿದೇಶಾಂಗ ನೀತಿಯ ವಿಷಯ ಬಂದಾಗ, ವಿದೇಶಾಂಗ ಸಚಿವರು, ಕೇಂದ್ರ ಆರ್ಥಿಕ ಸಚಿವರು ಬರುತ್ತಾರೆ ಎಂದು ಹೇಳಿದರು.

ವಾಟ್ಸಾಪ್‌ ನಂಬರ್‌ ಬಿಡುಗಡೆ :
+91 8595158158 ನಂಬರ್‌ ಪ್ರಕಟಿಸಿದ ಸಚಿವರು, ಇದಕ್ಕೆ ಜನರು ಸಲಹೆ ಕಳುಹಿಸಬಹುದು ಎಂದು ತಿಳಿಸಿದರು.

ಪ್ರಗತಿ ರಥದಲ್ಲಿಡುವ ಸಲಹಾ ಪೆಟ್ಟಿಗೆ ಪ್ರದರ್ಶಿಸುತ್ತಿರುವ ಸಚಿವ ಡಾ.ಕೆ.ಸುಧಾಕರ್

ಬಿಜೆಪಿಯ ಪ್ರತಿ ಮಂಡಲದಲ್ಲಿ 8 ಸಾವಿರ ಬಾಕ್ಸ್‌ಗಳನ್ನು ಇಟ್ಟು, ಅದರ ಮೂಲಕ ಸಲಹೆ ಪಡೆಯಲಾಗುವುದು. www.bjp4samruddhakarnataka.in ನಲ್ಲೂ ಸಲಹೆ ನೀಡಬಹುದು. ಕನಿಷ್ಠ ಒಂದು ಕೋಟಿ ಜನರನ್ನು ತಲುಪುವ ಗುರಿ ಇದೆ. ಮಾರ್ಚ್‌ 25 ರವರೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರ ಸಭೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಬೆಂಗಳೂರು ನಗರ ಮೊದಲಾದ ವಿಭಾಗಗಳಲ್ಲೂ ಸಲಹೆ ಪಡೆಯಲಾಗುವುದು. ಪ್ರಗತಿ ರಥಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟು, ಅಲ್ಲಿಂದಲೂ ಸಲಹೆ ಪಡೆಯಲಾಗುವುದು ಎಂದು ವಿವರಿಸಿದರು.

ಕಾಂಗ್ರೆಸ್ ಹೇಳಿದಂತೆ ನಡೆದಿಲ್ಲ :
ಕಾಂಗ್ರೆಸ್‌ನವರು 173 ಭರವಸೆ ನೀಡಿ, ಶೇ.38 ರಷ್ಟು ಪೂರೈಸಿದ್ದು, ಶೇ.98 ರಷ್ಟು ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಅಂತಹ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಈ ಅವಧಿಯಲ್ಲಿ ಕೋವಿಡ್‌ ಸಾಂಕ್ರಾಮಿಕವಿತ್ತು. ಅಲ್ಲದೆ, ಮೊದಲ ವರ್ಷ ಅಧಿಕಾರ ಸಿಕ್ಕಿರಲಿಲ್ಲ. ಆದರೂ ಬಿಜೆಪಿ ಉತ್ತಮ ಕೆಲಸ ಮಾಡಿದೆ. ಜನರು ಸ್ಪಷ್ಟ ಬಹುಮತವನ್ನು ಬಿಜೆಪಿಗೆ ನೀಡಿದರೆ, ನೂರಕ್ಕೆ ನೂರು ಭರವಸೆ ಈಡೇರಿಸುತ್ತೇವೆ ಎಂದರು.

ಕೋವಿಡ್‌ ನಂತರ ದೇಶದಲ್ಲಿ ಆರ್ಥಿಕ ಪ್ರಗತಿ ಶೇ.7 ರಷ್ಟಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಿಯಾಶೀಲತೆಗೆ ಸಾಕ್ಷಿ. ರಾಜ್ಯದಲ್ಲಿ ಆರ್ಥಿಕ ಪ್ರಗತಿ ಶೇ.7.9 ರಷ್ಟಿದೆ. ಜೊತೆಗೆ, ಜಿಮ್‌ನಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆ ಹರಿದುಬಂದಿದೆ. ಇಡೀ ದೇಶದ ಎಫ್‌ಡಿಐನಲ್ಲಿ ಶೇ.38 ರಷ್ಟು ಪಾಲು ರಾಜ್ಯದ್ದಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಆರ್ಥಿಕ ನೀತಿ, ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ ಕ್ರಮಕ್ಕೆ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿಯವರು 5 ಟ್ರಿಲಿಯನ್‌ ಆರ್ಥಿಕತೆ ನೀಡುವ ಗುರಿ ತಿಳಿಸಿದ್ದು, ಕರ್ನಾಟಕವು 1 ಟ್ರಿಲಿಯನ್‌ ಆರ್ಥಿಕತೆ ನೀಡುವ ಗುರಿ ಹೊಂದಿದೆ ಎಂದರು.

ರೈಲ್ವೆ ಇಲಾಖೆಗೆ ವಿಶೇಷ ಒತ್ತನ್ನು ಡಬಲ್‌ ಎಂಜಿನ್‌ ಸರ್ಕಾರ ನೀಡಿದೆ. ಯುಪಿಎ ಅವಧಿಗೆ ಹೋಲಿಸಿದರೆ, ಈ ಬಾರಿ ರೈಲ್ವೆ ಯೋಜನೆಗಳಿಗೆ 9 ಪಟ್ಟು ಹೆಚ್ಚು ಅನುದಾನ ಬಂದಿದೆ. ಉಪನಗರ ರೈಲು ಯೋಜನೆಗೆ ಹಿಂದಿನ ಸರ್ಕಾರ ಒತ್ತು ನೀಡಿರಲಿಲ್ಲ. ಅದನ್ನು ಬಿಜೆಪಿ ಸರ್ಕಾರ ಮಾಡಿದೆ. ಹಲವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೂಡ ಡಬಲ್‌ ಎಂಜಿನ್‌ ಸರ್ಕಾರದಿಂದ ಸಾಧ್ಯವಾಗಿದೆ. ರೈಲ್ವೆ ಯೋಜನೆಗಳಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರೈತರಿಗೆ ಲಾಭವಾಗಿದ್ದು, ಇವೆಲ್ಲವೂ ದೀರ್ಘಕಾಲದವರೆಗೆ ಅನುಕೂಲ ಕಲ್ಪಿಸುತ್ತವೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದ್ದು, ಜನರಿಗೆ ಬಹಳ ಅನುಕೂಲವಾಗಿದೆ. ಕಾಂಗ್ರೆಸ್‌ ನಡಿಗೆ ಕೃಷ್ಣಾ ಕಡೆಗೆ ಎಂದು ಹೇಳಿದ್ದರು. ಆದರೆ ಹೆಚ್ಚು ಅನುದಾನವನ್ನೇ ನೀಡಲಿಲ್ಲ. ಪ್ರಧಾನಿಯವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡಿದ್ದು, ಮಧ್ಯ ಕರ್ನಾಟಕದ ಜನರ ನೀರಾವರಿಗೆ ಅನುಕೂಲ ಕಲ್ಪಿಸಿದ್ದಾರೆ. ಕರ್ನಾಟಕ ಹಾಗೂ ಗೋವಾದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ, ಮಹಾದಾಯಿಯಿಂದ ನೀರು ನೀಡುವ ಪ್ರಸ್ತಾವವೇ ಇಲ್ಲ ಎನ್ನಲಾಗಿತ್ತು. ಆದರೀಗ ಅದೇ ಯೋಜನೆಗೆ 1,000 ಕೋಟಿ ರೂ. ನೀಡಲಾಗಿದೆ ಎಂದರು.

ಉಪನಗರ ರೈಲು ಯೋಜನೆ ಈವರೆಗೆ ಕೇಂದ್ರ ಸರ್ಕಾರ 15,767 ಕೋಟಿ ರೂ. ನೀಡಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 2013-18 ರಲ್ಲಿ 2,080 ಕೋಟಿ ರೂ. ನೀಡಲಾಗಿದೆ. ಒಂದು ವರ್ಷಕ್ಕೆ 5,000 ಕೋಟಿ ರೂ. ಅನುದಾನವನ್ನು ಇಂದಿನ ಬಿಜೆಪಿ ಸರ್ಕಾರ ಘೋಷಿಸಿದೆ. ಸೆಮಿ ಕಂಡಕ್ಟರ್‌ ಹೂಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಎಂಟು ವರ್ಷಗಳಲ್ಲಿ 1.6 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಹೆದ್ದಾರಿ, ರಸ್ತೆ ಯೋಜನೆಗಳಿಗೆ ನೀಡಿದೆ. 4,000 ಕಿ.ಮೀ. ಉದ್ದದ ಹೆದ್ದಾರಿ ರಾಜ್ಯದಲ್ಲಿ ನಿರ್ಮಾಣವಾಗಿದೆ. 12 ಕೋಟಿ ಕೋವಿಡ್‌ ಡೋಸ್‌ ರಾಜ್ಯದಲ್ಲಿ ನೀಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯಕ್ಕೆ ನೀಡಿದ ಯೋಜನೆ ಹಾಗೂ ಅನುದಾನವನ್ನು ಕಾಂಗ್ರೆಸ್‌ ನೋಡಬೇಕು ಎಂದು ಹೇಳಿದರು.

ತವುಡು ಯಾರದ್ದು ಎಂದು ಗೊತ್ತಾಗಿದೆ :
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೆಜಿಗೆ 29 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರ 3 ರೂ. ನೀಡುತ್ತಿತ್ತು. ಅಕ್ಕಿ ಚೀಲಕ್ಕೂ ಮೂರು ರೂ. ಇಲ್ಲ. ಸಿದ್ದರಾಮಯ್ಯನವರು ತವುಡು ಕುಟ್ಟುವ ಬಗ್ಗೆ ಹೇಳಿದ್ದಾರೆ. ಭತ್ತ ಯಾರದ್ದು, ಅಕ್ಕಿ ಯಾರದ್ದು ತವುಡು ಯಾರದು ಎಂದು ಜನರಿಗೆ ಈಗ ಗೊತ್ತಾಗಿದೆ ಎಂದರು.

WhatsApp Join our WhatsApp Channel
Previous Post

BW Special | BBMP Illegal A Khata | ಅಕ್ರಮ “ಎ” ಖಾತೆ ಮಾಡಿದ ಅಧಿಕಾರಿಗಳು ಹಾಗೂ ಆಸ್ತಿ ಮಾಲೀಕರಿಗೆ ಶುರುವಾಗಿದೆ ನಡುಕ !!

Next Post

ಫೆ.25 ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನಲೆ : ಐಐಎನಲ್ಲಿ ನಾನಾ ವೈಜ್ಞಾನಿಕ ಚಟುವಟಿಕೆ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ

Next Post

ಫೆ.25 ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನಲೆ : ಐಐಎನಲ್ಲಿ ನಾನಾ ವೈಜ್ಞಾನಿಕ ಚಟುವಟಿಕೆ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ

ಗಣಿ ಪ್ರದೇಶವೊಂದರಲ್ಲಿ ಸ್ಪೋಟಕ ಬಳಸಿದ ಸಂದರ್ಭದಲ್ಲಿ ಸಿಡಿತವಾಗುತ್ತಿರುವ ದೃಶ್ಯ

BW SPECIAL | BIG NEWS | ರಾಜ್ಯದ ಏಳು ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆಗಾಗಿ ಸಿಡಿಸಲಾಗಿತ್ತು 21.27 ಲಕ್ಷ ಕೆ.ಜಿ ಅಕ್ರಮ ಸ್ಪೋಟಕ....!!

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

June 11, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

June 11, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

June 11, 2026
ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

June 11, 2026

ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

June 11, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group