ಬೆಂಗಳೂರು, ಆ.21 www.bengaluruwire.com: ತೀವ್ರ ಗದ್ದಲ ಮತ್ತು ಕೋಲಾಹಲದ ನಡುವೆಯೂ ಕರ್ನಾಟಕ ವಿಧಾನಸಭೆಯಲ್ಲಿ ಮೂರು ಪ್ರಮುಖ ತಿದ್ದುಪಡಿ ವಿಧೇಯಕಗಳು ಧ್ವನಿಮತದ ಮೂಲಕ ಅಂಗೀಕಾರಗೊಂಡಿವೆ.
ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರ ಪರವಾಗಿ ಈ ಕೆಳಗಿನ ಮೂರು ವಿಧೇಯಕಗಳನ್ನು ಮಂಡಿಸಿದರು:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ – 2026: ಸಾರ್ವಜನಿಕರು ನಿವೇಶನ ಮತ್ತು ಭೂಹಂಚಿಕೆ ಪಡೆಯಲು ಉತ್ತೇಜಿಸಲು ಚಾಲ್ತಿಯಲ್ಲಿರುವ ಹಂಚಿಕೆ ಶುಲ್ಕವನ್ನು ಶೇ. 50ರಷ್ಟು ಕಡಿಮೆ ಮಾಡುವ ಪ್ರಸ್ತಾವನೆ ಇದರಲ್ಲಿ ಸೇರಿದೆ. ಜೊತೆಗೆ, ಬಿಡಿಎ ಫ್ಲಾಟ್ಗಳು, ವಿಲ್ಲಾಗಳು ಮತ್ತು ಬಡಾವಣೆಗಳ ದುರಸ್ತಿ- ನಿರ್ವಹಣಾ ಕಾಮಗಾರಿಗಳ ವಿಳಂಬ ತಪ್ಪಿಸಲು ಪ್ರಾಧಿಕಾರದ ಆಯುಕ್ತರ ಆರ್ಥಿಕ ಅನುಮೋದನೆ ಮಿತಿಯನ್ನು ಹೆಚ್ಚಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ- 2026: ಪ್ರಾಧಿಕಾರದ ಪದನಿಮಿತ್ತ ಉಪಾಧ್ಯಕ್ಷರನ್ನಾಗಿ ಉಪ ಮುಖ್ಯಮಂತ್ರಿ ಅಥವಾ ಕಂದಾಯ ಸಚಿವರನ್ನು ಹಾಗೂ ಸಂಬಂಧಪಟ್ಟ ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಕೆಂಪೇಗೌಡರ ಇತಿಹಾಸ ತಜ್ಞರಾದ 6 ಸರ್ಕಾರೇತರ ಸದಸ್ಯರ ನೇಮಕಕ್ಕೂ ತಿದ್ದುಪಡಿ ತರಲಾಗಿದೆ.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ: (ತಿದ್ದುಪಡಿ) ವಿಧೇಯಕ – 2026: ಅನುಮೋದಿತ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಡೆವಲಪರ್ಗಳಿಗೆ ದಂಡ ವಿಧಿಸಲು ಹಾಗೂ ಈಗಾಗಲೇ ವಿಧಿಸಲಾದ ದಂಡವನ್ನು ಶಾಸನಾತ್ಮಕವಾಗಿ ಸಿಂಧುಗೊಳಿಸಲು ಕಾನೂನು ತಿದ್ದುಪಡಿ ತರಲಾಗಿದೆ.
ಸಭಾಧ್ಯಕ್ಷ ಜಿ.ಎನ್. ಪಾಟೀಲ ಅವರು ಪ್ರಕ್ರಿಯೆ ನಡೆಸಿ, ವಿಧೇಯಕಗಳು ಧ್ವನಿಮತದಿಂದ ಅಂಗೀಕಾರಗೊಂಡಿವೆ ಎಂದು ಪ್ರಕಟಿಸಿದರು.















