Thursday, August 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

₹1,464 ಕೋಟಿ ನಕಲಿ ಬಿಲ್ ಜಾಲ ಭೇದಿಸಿದ ವಾಣಿಜ್ಯ ತೆರಿಗೆ ಇಲಾಖೆ: ನಾಲ್ವರ ಬಂಧನ

ಬರೋಬ್ಬರಿ ₹355 ಕೋಟಿ ಜಿಎಸ್‌ಟಿ ವಂಚನೆ; ತಮಿಳುನಾಡು-ಕರ್ನಾಟಕದಾದ್ಯಂತ ನಡೆಯಿತು 'ಜಂಟಿ' ಕಾರ್ಯಾಚರಣೆ; ಸಿಮೆಂಟ್-ಸ್ಟೀಲ್ ಹೆಸರಲ್ಲಿ ಮಹಾ ಮೋಸ!!

by Bengaluru Wire Desk
January 4, 2026
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಜ.04 www.bengaluruwire.com : ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುತ್ತಿದ್ದ ಬೃಹತ್ ಅಂತರರಾಜ್ಯ ನಕಲಿ ಬಿಲ್ (Fake Invoice) ಜಾಲವೊಂದನ್ನು ಭೇದಿಸುವಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿದಳ (Enforcement Wing) ಯಶಸ್ವಿಯಾಗಿದೆ. 

ಒಂದಲ್ಲ ಎರಡಲ್ಲ…ಬರೋಬ್ಬರಿ ₹1,464 ಕೋಟಿ ಮೌಲ್ಯದ ನಕಲಿ ವಹಿವಾಟು ನಡೆಸಿ, ಸರ್ಕಾರಕ್ಕೆ ₹355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯು ವಾಣಿಜ್ಯ ತೆರಿಗೆ ಇಲಾಖೆಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದ್ದು, ತಮಿಳುನಾಡು ವಾಣಿಜ್ಯ ತೆರಿಗೆ ಅಧಿಕಾರಿಗಳ ಸಹಕಾರದೊಂದಿಗೆ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕಲಾಗಿದೆ.

ಸರಕು ಇಲ್ಲ, ಬರೀ ಬಿಲ್ ಹಾವಳಿ:

ಈ ಜಾಲವು ಸಿಮೆಂಟ್, ಕಬ್ಬಿಣ ಮತ್ತು ಸ್ಟೀಲ್ ಹಾಗೂ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಹೆಸರಿನಲ್ಲಿ ನಕಲಿ ವಹಿವಾಟು ನಡೆಸುತ್ತಿತ್ತು. ಯಾವುದೇ ಸರಕುಗಳ ಸಾಗಾಟವಿಲ್ಲದೆ ಕೇವಲ ಕಾಗದದ ಮೇಲೆ ₹1,464 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ, ಅಂದಾಜು ₹355 ಕೋಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ತಂತ್ರಜ್ಞಾನದ ಮೂಲಕ ಬೇಟೆ:

ಜಿಎಸ್‌ಟಿ ವ್ಯವಸ್ಥೆಯ ಸುಧಾರಿತ ಅನಾಲಿಟಿಕ್ಸ್ ಮತ್ತು ಇಲಾಖೆಯು ಆಂತರಿಕವಾಗಿ ಅಭಿವೃದ್ಧಿಪಡಿಸಿದ ‘ನಾನ್-ಜೆನ್ಯೂನ್ ಟ್ಯಾಕ್ಸ್ ಪೇಯರ್’ (NGTP) ಮಾಡ್ಯೂಲ್ ಬಳಸಿ ಈ ವಂಚನೆಯನ್ನು ಪತ್ತೆಹಚ್ಚಲಾಗಿದೆ. ಐಪಿ ಅಡ್ರೆಸ್ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ, ನಕಲಿ ಬಿಲ್ ಸೃಷ್ಟಿಸುವ ಮತ್ತು ಐಟಿಸಿ ವರ್ಗಾವಣೆ ಮಾಡುವ ಅನುಮಾನಾಸ್ಪದ ಜಾಲದ ಸುಳಿವು ಸಿಕ್ಕಿತ್ತು.

ಮೋಸದ ಮಾದರಿ (Modus Operandi) ಹೇಗಿತ್ತು?:

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಸ್ಟ್ಯಾಂಪ್ ಪೇಪರ್‌ಗಳನ್ನು ತರಿಸಿ, ನಕಲಿ ಬಾಡಿಗೆ ಒಪ್ಪಂದಗಳು, ಭೂಮಾಲೀಕರ ಮತ್ತು ಬಾಡಿಗೆದಾರರ ನಕಲಿ ಸಹಿಗಳು ಹಾಗೂ ನಕಲಿ ನೋಟರಿ ದೃಢೀಕರಣಗಳನ್ನು ಬಳಸಿ ಜಿಎಸ್‌ಟಿ ನೋಂದಣಿಗಳನ್ನು ಮಾಡಲಾಗಿತ್ತು. ಈ ನಕಲಿ ದಾಖಲೆಗಳ ಮೂಲಕ ‘ಶೆಲ್ ಕಂಪನಿ’ಗಳನ್ನು (Shell Entities) ಸೃಷ್ಟಿಸಿ, ಅವುಗಳ ಮೂಲಕ ನಕಲಿ ಬಿಲ್ ಹರಿದಾಡುವಂತೆ ಮಾಡಿ, ನಂತರ ಆಡಿಟ್‌ನಿಂದ ತಪ್ಪಿಸಿಕೊಳ್ಳಲು ಜಿಎಸ್‌ಟಿ ನೋಂದಣಿಯನ್ನು ತಾವೇ ರದ್ದುಗೊಳಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ನಾಲ್ವರು ಆರೋಪಿಗಳ ಬಂಧನ:

ಬೆಂಗಳೂರು, ಚೆನ್ನೈ, ವೆಲ್ಲೂರು ಮತ್ತು ಪೆರ್ನಂಪಟ್ಟುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

 * ತಮಿಳುನಾಡಿನ ಪೆರ್ನಂಪಟ್ಟು ಮೂಲದ ಸಹೋದರರಾದ ಇರ್ಬಾಜ್ ಅಹ್ಮದ್ ಮತ್ತು ನಫೀಜ್ ಅಹ್ಮದ್ (ಟ್ರಯಾನ್ ಟ್ರೇಡರ್ಸ್, ರಾಯಲ್ ಟ್ರೇಡರ್ಸ್ ಮುಂತಾದ ನಕಲಿ ಸಂಸ್ಥೆಗಳ ರೂವಾರಿಗಳು).

 * ಬೆಂಗಳೂರಿನ ಎದ್ದಲ ಪ್ರತಾಪ್ ಮತ್ತು ರೇವತಿ (ಪವರ್ ಸ್ಟೀಲ್, ಪಿ.ಆರ್. ಕನ್‌ಸ್ಟ್ರಕ್ಷನ್ ಮುಂತಾದ ಸಂಸ್ಥೆಗಳ ರೂವಾರಿಗಳು).

ಬಂಧಿತರಿಂದ 24 ಮೊಬೈಲ್ ಫೋನ್‌ಗಳು, 51 ಸಿಮ್ ಕಾರ್ಡ್‌ಗಳು, ಪೆನ್ ಡ್ರೈವ್‌ಗಳು ಮತ್ತು ನಕಲಿ ರಬ್ಬರ್ ಸ್ಟ್ಯಾಂಪ್‌ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಎಸ್‌ಟಿ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದ್ದು, ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ದಕ್ಷಿಣ ವಲಯದ ಜಾರಿದಳ ಪ್ರಕಟಣೆಯಲ್ಲಿ ತಿಳಿಸಿದೆ.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ಬಳ್ಳಾರಿ ಫೈರಿಂಗ್‌ ಪ್ರಕರಣ: ಅಮಿತ್ ಶಾಗೆ ಪತ್ರ ಬರೆದ ಜನಾರ್ದನ ರೆಡ್ಡಿ; ಕೇಂದ್ರ ಭದ್ರತೆಗೆ ಮನವಿ

Next Post

Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ? 

Next Post

Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ? 

ಕೋಗಿಲು ಅಕ್ರಮ ಶೆಡ್ ತೆರವು: ಕರವೇ ಪ್ರತಿಭಟನೆ ಮುಂದೂಡಿಕೆ ; ಸತ್ಯ ಶೋಧನಾ ವರದಿ ಬಳಿಕ ಚಳುವಳಿ

Please login to join discussion

Like Us on Facebook

Follow Us on Twitter

Recent News

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026

Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

August 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group