Thursday, June 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

    ಟಾಟಾ ಪವರ್ ಅರ್ಜಿಗಳು ಸಂಪೂರ್ಣ ಆಂಗ್ಲಮಯ: ಕನ್ನಡಿಗರ ಭಾಷಾ ಹಕ್ಕಿಗೆ ಧಕ್ಕೆ,  ಡಾ. ಪುರುಷೋತ್ತಮ ಬಿಳಿಮಲೆ ಕೆಇಆರ್‌ಸಿಗೆ ಪತ್ರ

    Vidhana Soudha

    IAS Transfer | ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ

    Viral Video | 25 ಸಾವಿರದ ಆಫೀಸ್ ಕೆಲಸಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಡ್ರೈವರ್ ಆದ ಯುವಕ; ಈಗ ಈತನ ತಿಂಗಳ ಗಳಿಕೆ 1 ಲಕ್ಷ ರೂ.!

  • Bengaluru Focus

    ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

    PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

    ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

    15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ: ಹಸಿರು ಬೆಂಗಳೂರು ನಿರ್ಮಾಣಕ್ಕೆ ಮೆಗಾ ಡ್ರೈವ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    GBA Head Office Image

    GBA News | ಬೆಂಗಳೂರಿನಲ್ಲಿ ಇ-ಖಾತಾ ಸೇವೆ ಮತ್ತಷ್ಟು ಸುಲಭ: 6 ವಾರಗಳಲ್ಲಿ 6,169 ಅರ್ಜಿಗಳ ಯಶಸ್ವಿ ವಿಲೇವಾರಿ

    ಬಿಡದಿ ಟೌನ್‌ಶಿಪ್ ವಿರೋಧಿ ರೈತರ ಹೋರಾಟ 450 ದಿನಕ್ಕೆ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ  ನಾಳೆ ಬೃಹತ್ ಪಾದಯಾತ್ರೆ 

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನ 6 ಆರ್.ಟಿ.ಒ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಏಜೆಂಟರ ಜಾಲ, ಅಧಿಕಾರಿಗಳ ಭ್ರಷ್ಟಾಚಾರ ಬಯಲು

6 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಏಕಕಾಲಕ್ಕೆ ಪರಿಶೀಲನೆ; ಡಿಎಲ್, ವಾಹನಗಳ ಆರ್‌ಸಿಗಳು ಖಾಸಗಿ ವ್ಯಕ್ತಿ ಬಳಿ ಪತ್ತೆ : ಸಮಗ್ರ ತನಿಖೆಗೆ ಲೋಕಾಯುಕ್ತರ ಸೂಚನೆ

by Bengaluru Wire Desk
November 8, 2025
in Bengaluru Focus, Public interest
Reading Time: 1 min read
0

ಬೆಂಗಳೂರು, ನ.08 www.bengaluruwire.com : ಬೆಂಗಳೂರಿನ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒ) ಭ್ರಷ್ಟಾಚಾರ ಮತ್ತು ಅಕ್ರಮಗಳ ಕೂಪಗಳಾಗಿ ಮಾರ್ಪಟ್ಟಿವೆ ಎಂಬ ಸಾರ್ವಜನಿಕ ದೂರುಗಳ ಮೇರೆಗೆ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ಆರು ತಂಡಗಳು ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ನಗರದ ಆರು ಪ್ರಮುಖ ಆರ್‌ಟಿಒ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ.

ಯಶವಂತಪುರ, ರಾಜಾಜಿನಗರ, ಜಯನಗರ, ಯಲಹಂಕ, ಕಸ್ತೂರಿನಗರ, ಹಾಗೂ ಕೆ.ಆರ್. ಪುರಂ ಕಚೇರಿಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಲವಾರು ಅಕ್ರಮಗಳು ಮತ್ತು ಲೋಪದೋಷಗಳು ಬೆಳಕಿಗೆ ಬಂದಿವೆ.

ಏಜೆಂಟರ ಬಳಿ ಸರ್ಕಾರಿ ದಾಖಲೆಗಳು: 

ಕಸ್ತೂರಿ ನಗರದಲ್ಲಿ ಬೆಚ್ಚಿಬೀಳಿಸುವ ಸತ್ಯ

ದಾಳಿಯ ವೇಳೆ ಏಜೆಂಟರ ಹಾವಳಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದು ಸ್ಪಷ್ಟವಾಗಿದೆ. ಕಸ್ತೂರಿನಗರ ಆರ್.ಟಿ.ಓ ಕಚೇರಿಯ ಮುಂದೆ ಇದ್ದ ‘ಮಾರುತಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಅಂಗಡಿಯನ್ನು ಪರಿಶೀಲಿಸಿದಾಗ, ಶ್ರೀ ರಜನೀಕಂತ ಎಂಬ ವ್ಯಕ್ತಿಯ ವಶದಲ್ಲಿ 49 ನೋಂದಣಿ ಪ್ರಮಾಣ ಪತ್ರಗಳು (RC) ಮತ್ತು 83 ಚಾಲನಾ ಪರವಾನಗಿಗಳು (DL) ಪತ್ತೆಯಾಗಿವೆ. ಈ ಸರ್ಕಾರಿ ದಾಖಲೆಗಳು ಮತ್ತು ಕಚೇರಿಯ ಸೀಲ್‌ಗಳು ಖಾಸಗಿ ವ್ಯಕ್ತಿಯ ಬಳಿ ಇರುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಈ ಸಂಬಂಧ, ಆರ್.ಟಿ.ಓ., ಎ.ಆರ್.ಟಿ.ಓ., ಸೂಪರಿಂಟೆಂಡೆಂಟ್ ಮತ್ತು ಖಾಸಗಿ ವ್ಯಕ್ತಿ ರಜನೀಕಾಂತ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಲೋಕಾಯುಕ್ತ ಡಿ.ವೈ.ಎಸ್.ಪಿ.ಗೆ ನಿರ್ದೇಶನ ನೀಡಲಾಗಿದೆ.

ಇದಲ್ಲದೆ, ಯಶವಂತಪುರದಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಓಡಿಹೋಗುತ್ತಿದ್ದ ಏಜೆಂಟರೊಬ್ಬನನ್ನು ಹಿಡಿದು ವಿಚಾರಿಸಿದಾಗ, ಆತನ ಬಳಿ ರೂ. 14,000 ನಗದು ದೊರೆತಿದೆ.

ವಿತರಣೆಯಾಗದ ಡಿಎಲ್‌, ಆರ್‌ಸಿಗಳ ರಾಶಿ :

ಹಲವು ಕಚೇರಿಗಳಲ್ಲಿ ಪ್ರಮುಖ ದಾಖಲೆಗಳನ್ನು ವಿತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ರಾಜಾಜಿನಗರ ಕಚೇರಿಯಲ್ಲಿ 3,800 ಚಾಲನಾ ಪರವಾನಗಿ (DL) ಮತ್ತು 6,300 ನೋಂದಣಿ ಪ್ರಮಾಣ ಪತ್ರ (RC) ಸ್ಮಾರ್ಟ್ ಕಾರ್ಡ್‌ಗಳು ಮುದ್ರಣ ಮಾಡಲು ಬಾಕಿ ಇರುವುದು ಪತ್ತೆಯಾಗಿದೆ. ಹೊರ ಗುತ್ತಿಗೆ ಪಡೆದ ‘ರೋಸ್ ಮಾರ್ಟ್’ ಕಂಪನಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಆರ್.ಟಿ.ಓ. ವಿವರಣೆ ನೀಡಿದ್ದಾರೆ.

ಯಶವಂತಪುರದಲ್ಲಿ 2095 ಡಿಎಲ್‌ಗಳನ್ನು ಪ್ರಿಂಟ್ ಮಾಡಲು ಮತ್ತು 789 ಡಿಎಲ್‌ಗಳನ್ನು ಸಂಬಂಧಿಸಿದವರಿಗೆ ರವಾನಿಸಲು ಬಾಕಿ ಇರಿಸಿಕೊಂಡಿರುವುದು ಕಂಡುಬಂದಿದೆ. ಜಯನಗರ ಕಚೇರಿಯಲ್ಲಿ, ಅಂಚೆ ಇಲಾಖೆಯಿಂದ ವಾಹನ ಮಾಲೀಕರ ವಿಳಾಸಕ್ಕೆ ಜಾರಿಯಾಗದೆ ಹಿಂದಿರುಗಿ ಬಂದಿದ್ದ ಸುಮಾರು 1300 ಆರ್.ಸಿ ಕಾರ್ಡುಗಳನ್ನು ಕಚೇರಿಯಲ್ಲಿಯೇ ಇರಿಸಿಕೊಂಡಿರುವುದು ಕಂಡು ಬಂದಿದೆ. ಇದರಿಂದಾಗಿ ಸಾರ್ವಜನಿಕರು ನಾಲ್ಕು ತಿಂಗಳಿಂದ ಅಲೆದಾಡುತ್ತಿರುವುದಾಗಿ ದೂರಿದರು.

ನಗದು ಘೋಷಣೆ, ಡ್ರೆಸ್ ಕೋಡ್‌ ಉಲ್ಲಂಘನೆ :

ಜಯನಗರ, ಯಲಹಂಕ, ಕಸ್ತೂರಿನಗರ ಮತ್ತು ಕೆ.ಆರ್. ಪುರಂ ಕಚೇರಿಗಳಲ್ಲಿ ನಗದು ಘೋಷಣಾ ವಹಿ, ಚಲನ-ವಲನ ವಹಿ ಮತ್ತು ಹಾಜರಾತಿ ವಹಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಸಮರ್ಪಕವಾಗಿ ನಿರ್ವಹಿಸಿಲ್ಲದಿರುವುದು ಕಂಡುಬಂದಿದೆ. ಅಲ್ಲದೆ, ಕೆ.ಆರ್. ಪುರಂ ಕಚೇರಿಯಲ್ಲಿ ದೂರುದಾರರೊಬ್ಬರು ಸರ್ಕಾರಿ ಶುಲ್ಕ ಪಾವತಿಸಿದಾಗ ಉಳಿದ ರೂ. 120 ಬಾಕಿ ಮೊತ್ತವನ್ನು ಅಧಿಕಾರಿಗಳು ಹಿಂದಿರುಗಿಸಿರುವುದಿಲ್ಲವೆಂದು ಪ್ರಾದೇಶಿಕ ಅಧಿಕಾರಿಗಳ ಸಮುಖದಲ್ಲಿಯೇ ತಿಳಿಸಿರುತ್ತಾರೆ.

ಕೆ.ಆರ್. ಪುರಂ ಮತ್ತು ಕಸ್ತೂರಿ ನಗರ ಕಚೇರಿಗಳಲ್ಲಿ ಸಿಬ್ಬಂದಿಗಳು ಸರ್ಕಾರದ ಮಾರ್ಗಸೂಚಿಯಂತೆ ವಸ್ತ್ರಗಳನ್ನು (ಡ್ರೆಸ್‌ಕೋಡ್) ಧರಿಸದೇ, ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸೂಚನೆ ನೀಡಿದ್ದಾರೆ.

WhatsApp Join our WhatsApp Channel
Previous Post

KUWJ News | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : 20 ಜಿಲ್ಲೆಗಳಲ್ಲಿ ನ.9ರಂದು ಮತದಾನ

Next Post

Vande Bharath Express | ರೈಲು ಸಂಪರ್ಕಕ್ಕೆ ಹೊಸ ಶಕ್ತಿ: ಪ್ರಧಾನಿ ಮೋದಿಯಿಂದ 4 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ

Next Post

Vande Bharath Express | ರೈಲು ಸಂಪರ್ಕಕ್ಕೆ ಹೊಸ ಶಕ್ತಿ: ಪ್ರಧಾನಿ ಮೋದಿಯಿಂದ 4 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ

ಚಿನ್ನದ ಬಿಸ್ಕತ್ ಸಾಂದರ್ಭಿಕ ಚಿತ್ರ.

Finance News | ಸೆಬಿಯಿಂದ Online ಡಿಜಿಟಲ್ ಚಿನ್ನದ ವ್ಯವಹಾರದ ಬಗ್ಗೆ ಎಚ್ಚರಿಕೆ: ನಿಯಂತ್ರಣವಿಲ್ಲದ ವೇದಿಕೆಗಳಲ್ಲಿ ಹೂಡಿಕೆ ಅಪಾಯಕಾರಿ

Please login to join discussion

Like Us on Facebook

Follow Us on Twitter

Recent News

ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

June 25, 2026

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

June 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

June 25, 2026

PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

June 25, 2026

ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

June 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group