ಬೆಂಗಳೂರು, ಫೆ.02 www.bengaluruwire.com :
ಬೆಂಗಳೂರು ದಕ್ಷಿಣ ತಾಲ್ಲೂಕಿನ, ಕೆಂಗೇರಿ ಹೋಬಳಿಯ ಕೆಂಚನಹಳ್ಳಿಯ ಸರ್ವೇ ನಂ 18ರಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 2.06 ಗುಂಟೆ ಸರ್ಕಾರಿ ಜಮೀನನ್ನು ಶನಿವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ ಅವರ ನೇತೃತ್ವದಲ್ಲಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಪ್ರತಿ ಚದರ ಅಡಿಗೆ ಸುಮಾರು ರೂ. 20 ಸಾವಿರ ಬೆಲೆ ಬಾಳುವ ಈ ಜಮೀನನ್ನು ವಶಪಡಿಸಿಕೊಂಡ ಕಾರ್ಯಚರಣೆ ಸಂದರ್ಭದಲ್ಲಿ ಬೆಂಗಳೂರು ನಗರ ದಕ್ಷಿಣ ಉಪ ವಿಭಾಗಧಿಕಾರಿ ಅಪೂರ್ವ ಬಿದರಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾಹಶೀಲ್ದಾರ್ ಶ್ರೀನಿವಾಸ್ ಉಪಸ್ಥಿತರಿದ್ದರು.



















