Sunday, June 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Guarantee Schemes Guidelines | ‘ಯುವನಿಧಿ’ ಮತ್ತು ‘ಅನ್ನಭಾಗ್ಯ’ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ : ಗ್ಯಾರಂಟಿ ಷರತ್ತುಗಳೇನು? ಇಲ್ಲಿದೆ ಮಾಹಿತಿ

'ಯುವ ನಿಧಿ' ಯೋಜನೆಯಡಿ ಮಾಸಿಕ 3,000 ಹಾಗೂ 1,500 ನಿರುದ್ಯೋಗ ಭತ್ಯೆ | ಅಂತ್ಯೋದಯ ಪಡಿತರ ಚೀಟಿ ಕುಟುಂಬದಲ್ಲಿ ಮೂವರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತ | ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಆಹಾರ ಧಾನ್ಯ ಉಚಿತ

by Bengaluru Wire Desk
June 4, 2023
in News Wire, Public interest
Reading Time: 1 min read
0
ವಿಧಾನಸೌಧದ ಸಾಂದರ್ಭಿಕ ಚಿತ್ರ

ವಿಧಾನಸೌಧದ ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.4 www.bengaluruwire.com : ಕಾಂಗ್ರೆಸ್‌ ಸರ್ಕಾರದ ಪ್ರಣಾಳಿಕೆ ಯಲ್ಲಿನ ಐದು ಗ್ಯಾರಂಟಿಗಳ ಪೈಕಿ, ‘ಯುವ ನಿಧಿ ಯೋಜನೆ’ಯಡಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್‌) ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಎರಡೂ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿವೆ. ಶುಕ್ರವಾರ ನಡೆದ ಸಂಪುಟ ಸಭೆಯ ನಿರ್ಣಯದಂತೆ ಈ ಆದೇಶಗಳನ್ನು ಮಾಡಿದೆ.

ಪದವಿ ಹಾಗೂ ಡಿಪ್ಲೊಮೊ ಕೋರ್ಸ್ ಗಳನ್ನು 2023ರಲ್ಲಿ ಪೂರೈಸುವವರಿಗೆ ‘ಯುವ ನಿಧಿ’ ಯೋಜನೆಯಡಿ ಅನುಕ್ರಮವಾಗಿ ತಿಂಗಳಿಗೆ 3,000 ಮತ್ತು ಕೆ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಜುಲೈ ತಿಂಗಳಿನಿಂದ ತಲಾ 10 ಕೆ.ಜಿ. ಅಕ್ಕಿ ಜತೆಗಿನ ಹಳೆಯ ವಿತರಿಸಲಾಗುತ್ತದೆ.

ಯುವನಿಧಿ ಯೋಜನೆಯ ಮಾರ್ಗಸೂಚಿಗಳು ಹೀಗಿವೆ :

*ಉತ್ತೀರ್ಣರಾದ ನಂತರ ಅರು ತಿಂಗಳವರೆಗೂ ಉದ್ಯೋಗ ದೊರಕದ ಕನ್ನಡಿಗರಿಗೆ ಯೋಜನೆ ಅನ್ವಯವಾಗುತ್ತದೆ.

*ಎರಡು ವರ್ಷಗಳವರೆಗೆ ಯೋಜನೆ ಯಡಿ ನಿರುದ್ಯೋಗ ಭತ್ಯೆ ಪಡೆಯ ಬಹುದು. ಎರಡು ವರ್ಷಕ್ಕೂ ಮೊದಲೇ ಉದ್ಯೋಗ ದೊರೆತರೆ ಭತ್ಯೆ ಪಾವತಿ ಸ್ಥಗಿತಗೊಳಿಸಲಾಗುತ್ತದೆ.

*ನಿರುದ್ಯೋಗ ಸ್ಥಿತಿಯ ಸ್ವತಂತ್ರ ಪರಿಶೀಲನೆ ನಡೆಸಲಾಗು ತ್ತದೆ. ಉದ್ಯೋಗ ದೊರಕಿದ ಕುರಿತು ತಪ್ಪು ಮಾಹಿತಿ ನೀಡಿದರೆ ಅಥವಾ ಘೋಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

*ನೇರ ನಗದು ಪಾವತಿ ವ್ಯವಸ್ಥೆ ಮೂಲಕ ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಪಡೆದಿರುವವರು. ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಯಾರು ಯುವನಿಧಿ ಯೋಜನೆಗೆ ಅರ್ಹರಲ್ಲ :
*ಸರ್ಕಾರಿ ಅಥವಾ ಖಾಸಗಿ ವಲಯ ದಲ್ಲಿ ಉದ್ಯೋಗ ಪಡೆದಿರುವವರು.

*ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.
*ಪದವಿ ಅಥವಾ ಡಿಪ್ಲೊಮಾ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವವರು.
*ಶಿಶಿಕ್ಷು (ಅಪ್ರೆಂಟಿಸ್‌ಶಿಪ್) ವೇತನ ಪಡೆಯುತ್ತಿರುವವರು.

ಅನ್ನಭಾಗ್ಯ ಯೋಜನೆ ಮಾರ್ಗಸೂಚಿ ಈ ರೀತಿಯಿದೆ :
*ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯ ಉಚಿತವಾಗಿ ಒದಗಿಸುತ್ತಿದೆ.
*ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ.
*ಈ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಯಂತೆ ಉಚಿತ ಅಕ್ಕಿ ಸಿಗಲಿದೆ.
*ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ.ಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
*ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆ.ಜಿ. ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಒದಗಿಸುತ್ತಿದೆ. ಹೆಚ್ಚುವರಿ ಅಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ಶೇ.96ರಷ್ಟು ಗ್ರಾಹಕರಿಗೆ “ಗೃಹಜ್ಯೋತಿ” ಭಾಗ್ಯ ಸಿಗಲಿದೆ :
ರಾಜ್ಯದಲ್ಲಿ 2.14 ಕೋಟಿ ವಿದ್ಯುತ್‌ ಗ್ರಾಹಕರಿದ್ದಾರೆ. ಅವರ ಪೈಕಿ ಶೇ 94ರಿಂದ 96ರಷ್ಟು ಗ್ರಾಹಕರಿಗೆ “ಗೃಹಜ್ಯೋತಿ” ಯೋಜನೆ ಲಾಭ ಸಿಗಲಿದೆ. ಯೋಜನೆಗೆ ವಾರ್ಷಿಕ 13 ಸಾವಿರ ಕೋಟಿ ರೂಪಾಯಿ ಆಗಲಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇಲ್ಲಿ ಮಾಲೀಕರು, ಬಾಡಿಗೆದಾರರು ಎನ್ನುವ ವಿಷಯ ಬಾರದು. ಪ್ರತಿ ಮನೆಯ ವಿದ್ಯುತ್ ಮೀಟರ್ ಆರ್.ಆರ್. ನಂಬರ್ ಮೇಲೆ ಬಿಲ್ ಬರುವುದರಿಂದ ಬಾಡಿಗೆದಾರರಿಗೂ ಯೋಜನೆಯ ಪ್ರಯೋಜನ ಸಿಗಲಿದೆ. ಇಲಾಖೆಗೆ ಸರ್ಕಾರ ಅನುದಾನ ಕೊಡಲಿದೆ’ ಎಂದು ತಿಳಿಸಿದ್ದಾರೆ.

’12 ತಿಂಗಳು ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದಾರೆಂದು ಲೆಕ್ಕ ಮಾಡಿ, 200 ಯೂನಿಟ್‌ವರೆಗೆ ವಿನಾಯಿತಿ ಕೊಡಲು ನಿರ್ಧರಿಸಿದ್ದೇವೆ. 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಸ್ಪಷ್ಟ ಕಾರಣವಿದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಆದ್ದರಿಂದ ಗ್ರಾಹಕರು ಬಳಸುವ ವಿದ್ಯುತ್ ಮೇಲೆ ಶೇ.10ರಷ್ಟು ಹೆಚ್ಚು ಬಳಕೆಗೆ ಅವಕಾಶ ಕೊಟ್ಟಿದ್ದೇವೆ. 200 ಯೂನಿಟ್ ಬಳಿಕ ಎಷ್ಟು ಹೆಚ್ಚು ಬಳಕೆ ಮಾಡುತ್ತಾರೋ ಅದಕ್ಕೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ’ ಎಂದಿದ್ದಾರೆ.

WhatsApp Join our WhatsApp Channel
Previous Post

ಸಮಾಜದಲ್ಲಿ‌ ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

BW Special | Bangalore Flyover -Underpass | ಬೆಂಗಳೂರಿನಲ್ಲಿ ಯದ್ವಾ- ತದ್ವಾ ಫ್ಲೈಓವರ್, ಅಂಡರ್ ಪಾಸ್ : ಇವುಗಳು ಎಷ್ಟರ ಮಟ್ಟಿಗೆ ವೈಜ್ಞಾನಿಕ? ಈ ಕುರಿತು ತಜ್ಞರ ವಿಶ್ಲೇಷಣೆ

Next Post
ಕೋರಮಂಗಲ ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಧಗಿತಗೊಂಡಿರುವ ಸಾಂದರ್ಭಿಕ ಚಿತ್ರ

BW Special | Bangalore Flyover -Underpass | ಬೆಂಗಳೂರಿನಲ್ಲಿ ಯದ್ವಾ- ತದ್ವಾ ಫ್ಲೈಓವರ್, ಅಂಡರ್ ಪಾಸ್ : ಇವುಗಳು ಎಷ್ಟರ ಮಟ್ಟಿಗೆ ವೈಜ್ಞಾನಿಕ? ಈ ಕುರಿತು ತಜ್ಞರ ವಿಶ್ಲೇಷಣೆ

ಹೋಟೆಲ್ ನಲ್ಲಿ ಆಹಾರದ ಸಾಂದರ್ಭಿಕ ಚಿತ್ರ (ಚಿತ್ರಕೃಪೆ : ಚೈತನ್ಯ ಕೃಷ್ಣ/ಗೆಟ್ಟಿ ಇಮೇಜಸ್)

Bangalore Hotels | ಬೆಂಗಳೂರಿನಲ್ಲಿ 24/7 ಹೋಟೆಲ್ ತೆರೆಯಲು ಅನುಮತಿ ಕೋರಿ ಹೋಟೆಲುಗಳ ಸಂಘ ಸರ್ಕಾರಕ್ಕೆ ಮನವಿ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group