ಬೆಂಗಳೂರು, ಡಿ.16 www.bengaluruwire.com : ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಲು ಬೆಂಗಳೂರು ಮೂಲದ ಜಿಎನ್‌ಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ (GNA India) ಸೋಮವಾರ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿದ್ದು, ರಾಜ್ಯ ಹಾಗೂ ದೇಶಾದ್ಯಂತ ಸುರಕ್ಷಿತ ಸಾರ್ವಜನಿಕ ವೈ-ಫೈ (Public Wi-Fi) ಸೇವೆಗಳನ್ನು ವಿಸ್ತರಿಸುವ ಮಹತ್ವದ ಯೋಜನೆಯನ್ನು ಪ್ರಕಟಿಸಿದೆ.
ಈ ವಿಶೇಷ ಸಂದರ್ಭದಲ್ಲಿ ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಕರ್ನಾಟಕವನ್ನು ತನ್ನ ಕಾರ್ಯಾಚರಣೆಯ ಪ್ರಮುಖ ಕೇಂದ್ರವನ್ನಾಗಿರಿಸಿಕೊಂಡಿರುವ ಜಿಎನ್‌ಎ ಇಂಡಿಯಾ, ಹಂತ ಹಂತವಾಗಿ ದೇಶದಾದ್ಯಂತ ತನ್ನ ಜಾಲವನ್ನು ವಿಸ್ತರಿಸಲಿದೆ.
ಗ್ರಾಮೀಣ ಭಾಗಗಳು, ಪ್ರವಾಸಿ ತಾಣಗಳು ಮತ್ತು ಇಂಟರ್ನೆಟ್ ಸಂಪರ್ಕ ಕಡಿಮೆ ಇರುವ ದುರ್ಗಮ ಪ್ರದೇಶಗಳಲ್ಲಿ ವೇಗವಾದ ಹಾಗೂ ವಿಶ್ವಾಸಾರ್ಹ ಇಂಟರ್ನೆಟ್ ಒದಗಿಸಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಮೂರು ವರ್ಷಗಳ ಒಪ್ಪಂದಕ್ಕೆ ಹರ್ಭಜನ್ ಸಹಿ:

ಸಂಸ್ಥೆಯ ರಾಯಭಾರಿಯಾಗಿ ನೇಮಕಗೊಂಡಿರುವ ಹರ್ಭಜನ್ ಸಿಂಗ್ ಅವರು ಮುಂದಿನ ಮೂರು ವರ್ಷಗಳ ಕಾಲ ಜಿಎನ್‌ಎ ಇಂಡಿಯಾದೊಂದಿಗೆ ಗುರುತಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರ್ಭಜನ್, “ಡಿಜಿಟಲ್ ಸಂಪರ್ಕ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಸುರಕ್ಷಿತ ಹಾಗೂ ಸಮಾನ ಡಿಜಿಟಲ್ ಪ್ರವೇಶಕ್ಕಾಗಿ ಶ್ರಮಿಸುತ್ತಿರುವ ಜಿಎನ್‌ಎ ಇಂಡಿಯಾ ಜೊತೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ,” ಎಂದು ತಿಳಿಸಿದರು.
‘ಭಾರತ್ ಸ್ಮಾರ್ಟ್ ಚೈನ್’ ಮತ್ತು ಸುರಕ್ಷತೆ :
ಜಿಎನ್‌ಎ ಇಂಡಿಯಾದ ಪ್ರಮುಖ ಯೋಜನೆಯಾದ ‘ಭಾರತ್ ಸ್ಮಾರ್ಟ್ ಚೈನ್’ (Bharat Smart Chain) ಅತ್ಯಾಧುನಿಕ ‘ಕ್ವಾಂಟಮ್ ಕ್ರಿಪ್ಟೋಗ್ರಫಿ’ (Quantum Cryptography) ತಂತ್ರಜ್ಞಾನವನ್ನು ಒಳಗೊಂಡಿದೆ. ಜಾಗತಿಕ ಮಟ್ಟದ ಗಣಿತಜ್ಞರು ವಿನ್ಯಾಸಗೊಳಿಸಿರುವ ಈ ತಂತ್ರಜ್ಞಾನವು ಡಿಜಿಟಲ್ ಪಾವತಿ ಮತ್ತು ಹಣಕಾಸು ವ್ಯವಹಾರಗಳಿಗೆ ಅತ್ಯುನ್ನತ ಮಟ್ಟದ ಭದ್ರತೆಯನ್ನು ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಯೋಜನೆಯು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿದ್ದು, ಅಕ್ಟೋಬರ್ 2023ರಿಂದಲೇ ಬಿಎಸ್‌ಎನ್‌ಎಲ್ (BSNL) ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಜನವರಿ 2024ರಲ್ಲಿ ಅಧಿಕೃತ ಸಾರ್ವಜನಿಕ ವೈ-ಫೈ ಪಾಲುದಾರ ಒಪ್ಪಂದವನ್ನೂ ಪಡೆದುಕೊಂಡಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















