Thursday, October 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

    Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

    CREATOR: gd-jpeg v1.0 (using IJG JPEG v62), quality = 82?

    ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ಬಿಜೆಪಿ ಅವಸರವೇ ಕಾರಣ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ

    Excise News | ಬೆಳಗಾವಿಯಲ್ಲಿ ಭರ್ಜರಿ ಕಾರ್ಯಾಚರಣೆ: ₹32.40 ಲಕ್ಷ ಮೌಲ್ಯದ 24,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ

    Defence News | ಭಾರತೀಯ ಸೇನೆಗೆ ‘ಭಾರತ್ ರೈಸ್’ ಪೂರೈಕೆ ಆರಂಭ: ಈ ಯೋಜನೆ ವಿಶೇಷತೆಯೇನು?

    ಆಸ್ಪತ್ರೆ ಬಿಲ್ ಬಾಕಿ: ಮೃತದೇಹ ನೀಡದಿದ್ದರೆ ಕಠಿಣ ಕಾನೂನು ಕ್ರಮ

    Mysore Dasara 2026 | ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ: ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ

  • Bengaluru Focus

    BW Special | ಖಜಾನೆ ಖಾಲಿ, ಜನರಿಗೆ ಬೆಲೆ ಏರಿಕೆ ಬರೆ; ಸಚಿವರು-ಸಂಸದರ ಐಷಾರಾಮಿ ಕಾರಿಗೆ ₹31 ಲಕ್ಷ ಗಿಫ್ಟ್!

    ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ: ದಾಖಲೆ ನಿರ್ವಹಣೆ ನಿರ್ಲಕ್ಷಿಸಿದ ಅಧಿಕಾರಿ ಅಮಾನತು

    KSRTC News | ದಸರಾ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 3,000ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಸೇವೆ

    ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: 700ರ ಗಡಿ ದಾಟಿದ ವ್ಯಾಘ್ರಗಳ ಸಂಖ್ಯೆ

    BDA News | ಬಿಡಿಎ ಅಧ್ಯಕ್ಷ ಪೀಠದಲ್ಲಿ ವಿಶೇಷ ಚೇತನ ಬಾಲಕ: ಕಚೇರಿಯಲ್ಲಿ ಭಾವುಕ ಕ್ಷಣ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಮುಂಬೈ ಉಗ್ರರ ದಾಳಿಗೆ 17 ವರ್ಷ: ‘ಮತ್ತೆಂದು ಸಂಭವಿಸಬಾರದು’ ಸಂಕಲ್ಪದೊಂದಿಗೆ ಹುತಾತ್ಮರಿಗೆ ರಾಷ್ಟ್ರದ ನಮನ

26/11ರ ಕರಾಳ ನೆನಪು: ಗೇಟ್‌ವೇ ಆಫ್ ಇಂಡಿಯಾದಲ್ಲಿ ಎನ್‌ಎಸ್‌ಜಿ ವಿಶೇಷ ಕಾರ್ಯಕ್ರಮ, ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಎಂದು ಸಾರಿದ ಭಾರತ.

by Bengaluru Wire Desk
November 26, 2025
in News Wire, Public interest
Reading Time: 1 min read
0

ನವದೆಹಲಿ/ಮುಂಬೈ ನ.26 www.bengaluruwire.com : ವಾಣಿಜ್ಯ ನಗರಿ ಮುಂಬೈ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ನಡೆಸಿದ ಭೀಕರ ದಾಳಿಗೆ ಇಂದಿಗೆ 17 ವರ್ಷ ತುಂಬಿದ್ದು, ದೇಶಾದ್ಯಂತ ‘ನೆವರ್‌ ಎವರ್’ (NeverEver) ಎಂಬ ದೃಢ ಸಂಕಲ್ಪದೊಂದಿಗೆ ಹುತಾತ್ಮರಿಗೆ ಭಾವಪೂರ್ಣ ಗೌರವ ಸಲ್ಲಿಸಲಾಗುತ್ತಿದೆ.

2008ರ ನವೆಂಬರ್ 26ರಂದು ನಡೆದ ಈ ದುರಂತವನ್ನು ಸ್ಮರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ರಕ್ಷಣೆಗಾಗಿ ಪ್ರಾಣತೆತ್ತ ವೀರ ಯೋಧರು ಹಾಗೂ ಅಮಾಯಕ ನಾಗರಿಕರ ತ್ಯಾಗವನ್ನು ಸ್ಮರಿಸಿದ್ದಾರೆ.

ಮುಂಬೈನ ತಾಜ್ ಹೋಟೆಲ್ ದಾಳಿಯಾದಗಿನ ಚಿತ್ರ.

“ಮತ್ತೆಂದು ಸಂಭವಿಸಬಾರದು” (Never Ever) ಘೋಷವಾಕ್ಯದಡಿ ವಿಶೇಷ ಶ್ರದ್ಧಾಂಜಲಿ :

ಈ ಕರಾಳ ಘಟನೆಯ ವಾರ್ಷಿಕೋತ್ಸವದ ಅಂಗವಾಗಿ, ರಾಷ್ಟ್ರೀಯ ಭದ್ರತಾ ಪಡೆ (NSG) ಮುಂಬಯಿಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ‘ನೆವರ್‌ ಎವರ್’ (ಮತ್ತೆಂದು ಸಂಭವಿಸಬಾರದು) ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಕೇವಲ ಶ್ರದ್ಧಾಂಜಲಿಯಾಗಿರದೆ, ಇಂತಹ ದಾಳಿ ಮರುಕಳಿಸದಂತೆ ತಡೆಯುವ ಸಾರ್ವಜನಿಕ ಪ್ರತಿಜ್ಞೆಯಾಗಿದೆ. ಹುತಾತ್ಮರಿಗೆ ಬೆಳಗಿಸಿದ ಮೇಣದಬತ್ತಿಗಳ ಮೇಣವನ್ನು ಸಂಗ್ರಹಿಸಿ ‘ಜೀವಂತ ಸ್ಮಾರಕ’ (Living Memorial) ನಿರ್ಮಿಸಲು ನಿರ್ಧರಿಸಲಾಗಿದ್ದು, ಇದು ಭಾರತದ ಒಗ್ಗಟ್ಟು ಮತ್ತು ಸ್ಥೈರ್ಯವನ್ನು ಸಂಕೇತಿಸಲಿದೆ.

ಯುವಜನತೆಯಿಂದ ಶಾಂತಿ ಪ್ರತಿಜ್ಞೆ :

ಮುಂಬೈನ 26 ಶಾಲೆಗಳು ಮತ್ತು 11 ಕಾಲೇಜುಗಳ ವಿದ್ಯಾರ್ಥಿಗಳು ಗೇಟ್‌ವೇ ಆಫ್ ಇಂಡಿಯಾದಲ್ಲಿ ಸೇರಿ, ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಯ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. ರಾತ್ರಿ ಗೇಟ್‌ವೇ ಆಫ್ ಇಂಡಿಯಾವನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗಿದ್ದು, ‘NeverEver’ ಎಂಬ ಸಂದೇಶವನ್ನು ಸ್ಮಾರಕದ ಮೇಲೆ ಪ್ರದರ್ಶಿಸುವ ಮೂಲಕ ಉಗ್ರವಾದದ ವಿರುದ್ಧ ಭಾರತದ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು.

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ :

ಸೋಷಿಯಲ್ ಮೀಡಿಯಾ ಮೂಲಕ ಸಂದೇಶ ರವಾನಿಸಿರುವ ಗೃಹ ಸಚಿವ ಅಮಿತ್ ಶಾ, “ಭಯೋತ್ಪಾದನೆ ಇಡೀ ಮಾನವ ಕುಲಕ್ಕೆ ಕಂಟಕವಾಗಿದೆ. ಭಾರತವು ಭಯೋತ್ಪಾದಕ ಜಾಲಗಳು ಮತ್ತು ಅವುಗಳ ಪೋಷಕರ ವಿರುದ್ಧ ಕಠಿಣ ಮತ್ತು ರಾಜಿರಹಿತ ನಿಲುವಿಗೆ ಬದ್ಧವಾಗಿದೆ,” ಎಂದು ಪುನರುಚ್ಚರಿಸಿದ್ದಾರೆ. 

26/11ರ ದಾಳಿ ಭಾರತದ ಭದ್ರತಾ ನೀತಿಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದ್ದು, ಪ್ರಸ್ತುತ ಭಾರತವು ‘ಜೀರೋ ಟಾಲರೆನ್ಸ್’ (Zero Tolerance) ನೀತಿಯನ್ನು ಅನುಸರಿಸುತ್ತಿದೆ. ಕರಾವಳಿ ಭದ್ರತೆ, ಗುಪ್ತಚರ ಇಲಾಖೆಗಳ ಸಮನ್ವಯ ಮತ್ತು ನಗರಗಳಲ್ಲಿ ಎನ್‌ಎಸ್‌ಜಿ ಹಬ್‌ಗಳ ಸ್ಥಾಪನೆಯ ಮೂಲಕ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತಿಹಾಸದ ಕರಾಳ ಪುಟದ ಇಣುಕು ನೋಟ :

2008ರ ನವೆಂಬರ್ 26 ರಿಂದ 29ರವರೆಗೆ ಲಷ್ಕರ್-ಎ-ತೈಬಾ ಸಂಘಟನೆಯ 10 ಉಗ್ರರು ಮುಂಬೈನ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದ್ದರು.

40 ಬುಲೆಟ್ ಗುಂಡೇಟು ತಿಂದು ಉಗ್ರ ಕಸಬ್ ಹಿಡಿದು ಹುತಾತ್ಮರಾದ ಪೊಲೀಸ್ :

ಆತನ ಹೆಸರೇ ತುಕಾರಾಮ್ ಓಂಬ್ಲೆ. ಭಾರತೀಯ ಪೊಲೀಸ್ ಅಧಿಕಾರಿ ಮತ್ತು ಭಾರತೀಯ ಸೇನೆಯ ಮಾಜಿ ಯೋಧ. ಇವರು ಮುಂಬೈ ಪೊಲೀಸರ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸಿದ್ದರು. ಮುಂಬೈನ ಗಿರ್ಗಾಮ್ ಚೌಪಟ್ಟಿಯಲ್ಲಿ ನಡೆದ 26/11 ದಾಳಿಯ ಸಮಯದಲ್ಲಿ ಉಗ್ರಗಾಮಿ ಅಜ್ಮಲ್ ಕಸಬ್ ನಿಂದ 40 ಸುತ್ತು AK47 ಗುಂಡು ಹಾರಿಸಿದರೂ, ಆ ಗುಂಡೇಟು ತಿಂದು, ಆ ಉಗ್ರನನ್ನು ಜೀವಂತವಾಗಿ ಸೆರೆಹಿಡಿದು ಹುತಾತ್ಮರಾದರು. ಇವರ ಧೈರ್ಯ ಮತ್ತು ಶೌರ್ಯ ಸಾಹಸಕ್ಕೆ ಇಡೀ ಭಾರತವೇ ಅಂದು ತಲೆಬಾಗಿ ನಮಸ್ಕರಿಸಿತ್ತು.

ಮುಂಬೈ ದಾಳಿಯಲ್ಲಿ ಹುತಾತ್ಮರಾದ ತುಕಾರಾಮ್ ಓಂಬ್ಲೆ.

ಭಾರತ ಸರ್ಕಾರವು 2009 ರ ಜನವರಿ 26ರಂದು ದೇಶದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ಓಂಬ್ಳೆ ಅವರ ಹೆಸರಲ್ಲಿ ಅವರ ಕುಟುಂಬಕ್ಕೆ ನೀಡಿ ಗೌರವಿಸಿತು.

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕಲ್ಬುರ್ಗಿ ಸಮೀಪ ಭೀಕರ ಕಾರು ಅಪಘಾತ; ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬಿಳಗಿ ಸೇರಿ ಮೂವರು ದುರ್ಮರಣ

Next Post

ಇಂಗ್ಲೆಂಡ್ ಕಂಪನಿಗಳಿಗೆ ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನ : ಗ್ರೀನ್ ಜೆಟ್ಸ್ ಕಂಪನಿ ಬೆಂಗಳೂರು ಸಮೀಪ‌ ಉತ್ಪದನಾ ಘಟಕ ತೆರೆಯಲು ಉತ್ಸುಕ

Next Post

ಇಂಗ್ಲೆಂಡ್ ಕಂಪನಿಗಳಿಗೆ ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನ : ಗ್ರೀನ್ ಜೆಟ್ಸ್ ಕಂಪನಿ ಬೆಂಗಳೂರು ಸಮೀಪ‌ ಉತ್ಪದನಾ ಘಟಕ ತೆರೆಯಲು ಉತ್ಸುಕ

ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರಗಳ  ಕರಡು ಮತದಾರರ ಪಟ್ಟಿ ಪ್ರಕಟ

Please login to join discussion

Like Us on Facebook

Follow Us on Twitter

Recent News

ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

October 14, 2026

Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

October 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಜೆಡಿಎಸ್ ಸೋಶಿಯಲ್ ಮೀಡಿಯಾ ಹುಡುಗನನ್ನು ಪೊಲೀಸ್ ವಶಕ್ಕೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

October 14, 2026

Railway News | ಹಾಸನಾಂಬ ಜಾತ್ರೆ: ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸೇವೆ ಆರಂಭ

October 14, 2026
CREATOR: gd-jpeg v1.0 (using IJG JPEG v62), quality = 82?

ಬಿಹಾರದಲ್ಲಿ ಭೀಕರ ದುರಂತ: ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಕ್ಕಳು ಜಲಸಮಾಧಿ?

October 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d