ಬೆಂಗಳೂರು, ಮಾ.04 www.bengaluruwire.com : ರಾಜಧಾನಿಯ ಪೂರ್ವ ನಿಲ್ದಾಣದಲ್ಲಿ ಹಳಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 13ರಿಂದ ನಿಲ್ದಾಣವನ್ನು ಮುಂದಿನ ಸೂಚನೆಯ ತನಕ ತಾತ್ಕಾಲಿಕವಾಗಿ ಮುಚ್ಚಲು ನೈರುತ್ಯ ರೈಲ್ವೆ ತೀರ್ಮಾನಿಸಿದೆ.
ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಈಗ ಇರುವ ಎತ್ತರ-ತಗ್ಗಿನ ಪ್ಲಾಟ್‌ಫಾರ್ಮ್‌ಗಳನ್ನು ತೆಗೆದು ಹಾಕಿ ಮೂರು ಮತ್ತು ನಾಲ್ಕನೇ ಹಳಿಗಳನ್ನು ಹಾಕಲು ಯೋಜನೆ ರೂಪಿಸಲಾಗಿದೆ. ಮಾರ್ಚ್ 13ರಿಂದ ಕಾಮಗಾರಿ ಆರಂಭಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ 15 ಎಕ್ಸ್‌ಪ್ರೆಸ್ ಮತ್ತು 26 ಪ್ಯಾಸೆಂಜರ್, ಮೆಮು ಸೇರಿ 41 ರೈಲುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತಾತ್ಕಾಲಿಕವಾಗಿ ನಿಲುಗಡೆ ರದ್ದಾಗಿರುವ ರೈಲುಗಳ ಯಾವುದು? :
ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ-ಬೆಂಗಳೂರು, ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು, ತಿರುಪತಿ-ಚಾಮರಾಜನಗರ, ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು, ಕಡಲೂರು ಪೋರ್ಟ್-ಮೈಸೂರು, ಸಿಎಎಂಟಿ ಮುಂಬೈ-ಕೆಎಸ್‌ಆರ್ ಬೆಂಗಳೂರು, ತೂತುಕುಡಿ-ಮೈಸೂರು, ಕಾಚಿಗುಡ-ಮೈಸೂರು, ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು, ಜೋಲಾರಪೇಟೆ-ಕೆಎಸ್‌ಆರ್ ಬೆಂಗಳೂರು, ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು, ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು, ದರ್ಭಾಂಗ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಇರುವುದಿಲ್ಲ.

ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ-ಬೆಂಗಳೂರು, ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ-ಬೆಂಗಳೂರು, ಕೆಎಸ್ ಆರ್ ಬೆಂಗಳೂರು-ಬಂಗಾರಪೇಟೆ-ಬೆಂಗಳೂರು, ಕೇಸ್ ಆರ್ ಬೆಂಗಳೂರು-ಧರ್ಮಪುರಿ-ಬೆಂಗಳೂರು, ಬೆಂಗಳೂರು ಕಂಟೋನ್ಮಂಟ್-ಕೋಲಾರ- ಕಂಟೋನ್ಮೆಂಟ್, ಕೆಎಸ್‌ಆರ್ ಬೆಂಗಳೂರು-ಕೋಲಾರ, ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಬೆಂಗಳೂರು, ಕೆಎಸ್‌ಆರ್ ಬೆಂಗಳೂರು-ಜೋಲಾರಪೇಟೆ ಬೆಂಗಳೂರು ಈ ರೈಲುಗಳ ನಿಲುಗಡೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಅದೇ ರೀತಿ ಕೆಎಸ್‌ಆರ್ ಬೆಂಗಳೂರು-ವೈಟ್ ಫೀಲ್ಡ್-ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ, ಕುಪ್ಪಂ-ಕೆಎಸ್‌ಆರ್ ಬೆಂಗಳೂರು ರೈಲುಗಳು ಪ್ಯಾಸೆಂಜರ್ ಮತ್ತು ಮೆಮು ರೈಲುಗಳು ರದ್ದಾಗಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ರೈಲು ನಿಲ್ದಾಣಗಳಲ್ಲಿ ಪೂರ್ವ ರೈಲು ನಿಲ್ದಾಣವೂ ಪ್ರಮುಖವಾಗಿದೆ.






















