ಬೆಂಗಳೂರು: ಡಿ.07 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರೀಕರಿಗೆ ಇ-ಖಾತಾ (E Khata) ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ವೃತ್ತಿಪರ, ಏಕ ಇ-ಖಾತಾ ನಾಗರೀಕ ಸಹಾಯವಾಣಿ (Citizen Helpline) 9480683695 ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಲಾಗಿದೆ.
ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 28 ಲಕ್ಷ (ನಿವೇಶನ/ಕಟ್ಟಡಗಳು) ಆಸ್ತಿಗಳ ಪೈಕಿ 23 ಲಕ್ಷ ಆಸ್ತಿಗಳ ಕರಡು ಇ-ಖಾತಾಗಳನ್ನು ಬಿಬಿಎಂಪಿ ವೆಬ್ ಸೈಟಿನಲ್ಲಿವ ಅಪಲೋಡ್ ಮಾಡಲಾಗಿದೆ. ಆ ಪೈಕಿ ಇಲ್ಲಿಯ ತನಕ 6 ಲಕ್ಷ ಕರಡು ಇ-ಖಾತಾವನ್ನು ಸ್ವತ್ತಿನ ಮಾಲೀಕರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. 30 ಸಾವಿರ ಆಸ್ತಿಗಳ ದಾಖಲೆ ಈತನಕ ಅಪಲೋಡ್ ಆಗಿದೆ. ಇನ್ನು 21,369 ಇ-ಖಾತಾ ಡೌನ್ ಲೋಡ್ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ:
1. ವೃತ್ತಿಪರ, ಏಕ ಇ-ಖಾತಾ ನಾಗರೀಕ ಸಹಾಯವಾಣಿಯನ್ನು ಪ್ರಾರಂಭ
eKhata Citizen Helpline – 9480683695
2. ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ನಾಗರೀಕ ಸಹಾಯವಾಣಿಗೆ ಕರೆ ಮಾಡಿ.
3. ನಾಗರೀಕರು ತಾವೇ ಆನ್‌ಲೈನ್ (Online)ನಲ್ಲಿ https://BBMPeAasthi.karnataka.gov.in ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ.
ನಾಗರಿಕರು ಯುಟ್ಯೂಬ್ (YouTube) ತರಬೇತಿ ವೀಡಿಯೊಗಳನ್ನು ನೋಡಬಹುದು:
ಕನ್ನಡ ಭಾಷೆ: https://youtu.be/JR3BxET46po
ಆಂಗ್ಲ ಭಾಷೆ: https://youtu.be/GL8CWsdn3wo
4. ಸಹಾಯಕ ಕಂದಾಯ ಅಧಿಕಾರಿ ಕಛೇರಿಗಳನ್ನು ನಾಗರೀಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ:
ಎ. 1000ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ. ಇದನ್ನೂ ಓದಿ : ಬೆಂಗಳೂರು : ಈ ತಿಂಗಳಲ್ಲಿ ತುರ್ತಾಗಿ ಆಸ್ತಿ ನೋಂದಣಿ ಮಾಡಿಸುತ್ತಿದ್ದೀರಾ? ಬಿಬಿಎಂಪಿಯಿಂದ ಅಂತಿಮ ಇ-ಖಾತಾ ಪಡೆಯುವ ವಿಧಾನ ಹೀಗಿದೆ
ಬಿ. 200ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸಿ. ಯಾರಿಂದಾದರೂ ಯಾವುದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ನಾಗರೀಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್ ಗಳನ್ನು ಸಹ ಭೇಟಿ ನೀಡಬಹುದಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. /