ನೀವು ನಿಮ್ಮ ಮೆಚ್ಚಿನ ಹಾಡುಗಳನ್ನು ಕೇಳುತ್ತಾ ವ್ಯಾಯಾಮ ಮಾಡುತ್ತಿದ್ದರೆ ಅಂತಹ ಎಕ್ಸೈಸ್ ಸಾಕಷ್ಟು ಪ್ರಭಾವಶಾಲಿಯಾಗಿರುತ್ತೆ. ಫಂಗಸ್ (ಶಿಲೀಂಧ್ರ) ವಿಷಯದಲ್ಲೂ ಇದು ನಿಜವಾಗಿದೆ. ಇದು ಕೇಳಲು ಸ್ವಲ್ಪ ವಿಚಿತ್ರವಾದರೂ ನಿಜ ಎನ್ನುತ್ತಿದೆ ಹೊಸ ಸಂಶೋಧನೆ.
ಸೈನ್ಸ್ ನಿಯತಕಾಲಿಕೆಯಲ್ಲಿ, ನಿರ್ದಿಷ್ಟ ಧ್ವನಿ ಆವರ್ತನಗಳು ಶಿಲೀಂಧ್ರ ಮಣ್ಣಿನ ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುತ್ತವೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ ಎಂದು ಪ್ರಕಟಿಸಿದೆ. ಇದು, ನವೀನ ಪರಿಸರ ವ್ಯವಸ್ಥೆಯಲ್ಲಿ ಅವು ನವ ಯೌವನ ಪಡೆಯುವ ತಂತ್ರಗಳಿಗೆ ದಾರಿ ಮಾಡಿಕೊಡುತ್ತದೆ. ವಿಜ್ಞಾನಿಗಳು, ಈ ಸಂಶೋಧನೆಯಿಂದ ಪರಿಸರ ವ್ಯವಸ್ಥೆಯ ಮರುಸ್ಥಾಪನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಉಂಟು ಮಾಡುವ ಅದ್ಭುತ ಆವಿಷ್ಕಾರ ಇದಾಗಿದೆ ಎಂದು ಹೇಳಿದ್ದಾರೆ.
ಹೊಸ ಸಂಶೋಧನೆಯು ಪ್ರಯೋಗಾಲಯದಲ್ಲಿ ನಿರ್ದಿಷ್ಟ ಧ್ವನಿ ಆವರ್ತನಕ್ಕೆ ಒಡ್ಡಿಕೊಂಡ ಸೂಕ್ಷ್ಮಜೀವಿಗಳನ್ನು ಕಂಡುಹಿಡಿದಿದೆ. “ನಿರ್ದಿಷ್ಟ ಧ್ವನಿ ತಂತ್ರ (sonic techniques)ಗಳನ್ನು ಬಳಸಿದಾಗ, ಶಿಲೀಂಧ್ರಗಳ ಮಣ್ಣಿನ ಸೂಕ್ಷ್ಮಜೀವಿಗಳು ವೇಗವರ್ಧಿತ ಬೆಳವಣಿಗೆಯಾಗುತ್ತದೆ. ಸಸ್ಯ ಸೂಕ್ಷ್ಮಾಣು ಜೀವಿಗಳಲ್ಲಿ ನಿರ್ಣಾಯಕ ಪೋಷಕ ಪಾತ್ರಗಳನ್ನು ನಿರ್ವಹಿಸುವ ಸೂಕ್ಷ್ಮಜೀವಿಗಳ ಬೆಳವಣಿಗೆ ಉತ್ತೇಜಿಸುತ್ತದೆ ಮತ್ತು ಒತ್ತಡಕ್ಕೊಳಗಾದ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಎಂದು ಬಯಾಲಜಿ ಲೆಟರ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಸಂವಿಜ್ಞಾನಿಗಳು ಹೀಗೆ ಹೇಳಿದ್ದಾರೆ.
ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಜೇಕ್ ರಾಬಿನ್ಸನ್ ಮತ್ತು ಮಾರ್ಟಿನ್ ಬ್ರೀಡ್ ನಡೆಸಿದ ಸಂಶೋಧನೆಯು ಟ್ರೈಕೋಡರ್ಮಾ ಹಾರ್ಜಿಯಾನಮ್, ಸಸ್ಯಗಳ ಬೆಳವಣಿಗೆ ಮತ್ತು ರೋಗದ ರಕ್ಷಣೆಯನ್ನು ಉತ್ತೇಜಿಸುವ ಮಣ್ಣಿನ ಸೂಕ್ಷ್ಮಜೀವಿಗಳ ಮೇಲೆ ಕೇಂದ್ರೀಕರಿಸಿದೆ. ಪ್ರತಿದಿನ 30 ನಿಮಿಷಗಳ ಕಾಲ 8000 ಕಂಪನಾಂಕದಲ್ಲಿ (Hz) ಬಿಳಿ ಶಬ್ದ (White Noice)ಕ್ಕೆ ಶಿಲೀಂಧ್ರವನ್ನು ಒಡ್ಡುವುದರಿಂದ 1.7 ಪಟ್ಟು ಹೆಚ್ಚಿನ ಜೀವರಾಶಿ ಬೆಳವಣಿಗೆ, ಬೀಜ ಮೊಳಕೆ ಒಡೆಯುವ ವೇಗ ಹೆಚ್ಚಾಯಿತು ಎಂದು ತಂಡವು ಕಂಡುಹಿಡಿದಿದೆ.
“ಇದು ಒಂದು ರೋಮಾಂಚಕಾರಿ ಸಂಶೋಧನೆಯಾಗಿದೆ. ಸಸ್ಯ-ಸ್ನೇಹಿ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುವ ಮೂಲಕ ಒತ್ತಡದ ಪರಿಸರ ವ್ಯವಸ್ಥೆಗಳನ್ನು ಬೆಂಬಲಿಸಲು ಧ್ವನಿಯನ್ನು ಬಳಸುವುದನ್ನು ನಾವು ಊಹಿಸುತ್ತೇವೆ” ಎಂದು ರಾಬಿನ್ಸನ್ ಹೇಳಿದರು.
ಸಂಕೀರ್ಣ ಕಾಡುಗಳಲ್ಲಿ ಸೂಕ್ಷ್ಮಜೀವಿಗಳ ಮೇಲೆ ಶಬ್ದವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಪಟ್ಟಿದ್ದಾರೆ.
ಸಂಶೋಧನೆಯಲ್ಲಿ ಕಂಡು ಬಂದ ಅಂಶಗಳೇನು?:
ಶಿಲೀಂಧ್ರಗಳ ಜೀವಕೋಶದ ಗೋಡೆಗಳು ಮಾನವ ಚರ್ಮದ ಸ್ಪರ್ಶ ಗ್ರಾಹಕಗಳಂತೆಯೇ ಯಾಂತ್ರಿಕ ಗ್ರಾಹಕಗಳನ್ನು ಹೊಂದಿರುತ್ತವೆ. ಅಕೌಸ್ಟಿಕ್ ಕಂಪನಗಳು ಜೀನ್ ಅಭಿವ್ಯಕ್ತಿ ಮತ್ತು ಸೆಲ್ ಸಿಗ್ನಲಿಂಗ್ ಅನ್ನು ಉತ್ತೇಜಿಸಬಹುದು. ಸಂಭಾವ್ಯ ಅನ್ವಯಿಕೆಗಳಲ್ಲಿ ಪರಿಸರ ಪುನಃಸ್ಥಾಪನೆ ಮತ್ತು ಮಣ್ಣಿನ ಪುನಶ್ಚೇತನಗೊಳಿಸುವಿಕೆ ಸೇರಿವೆ.