ನವದೆಹಲಿ, ಆ.7 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಿರ್ಮಿತ ಸಣ್ಣ ಉಪಗ್ರಹ ಉಡಾವಣಾ ವಾಹಕ (Small Satellite Launch Vehicle – SSLV) ಇಒಎಸ್ -08 (EOS-08) ಎಂಬ ಮೈಕ್ರೋಸ್ಯಾಟಲೈಟ್ ಹೊತ್ತು ಸ್ವಾತಂತ್ರ್ಯ ದಿನಾಚರಣೆ (ಆ.15) ದಿನಂದಂದು ಮೂರನೇ ಮತ್ತು ಅಂತಿಮ ಉಡಾವಣೆಯಾಗಲಿದ್ದು, ಶ್ರೀಹರಿಕೋಟಾದಿಂದ ಬೆಳಗ್ಗೆ 9.17 ಕ್ಕೆ ನಭಕ್ಕೆ ಚಿಮ್ಮಲಿದೆ.
ಆ ಮೂಲಕ ಎಸ್ ಎಸ್ ಎಲ್ ವಿ ರಾಕೆಟ್ ಅಭಿವೃದ್ಧಿ ಯೋಜನೆಯು ಪೂರ್ಣಗೊಳ್ಳಲಿದ್ದು, ಭಾರತೀಯ ಉದ್ಯಮ ಮತ್ತು ಎನ್ ಎಸ್ ಐಎಲ್ (NSIL) ನಿಂದ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಇಸ್ರೊ ತನ್ನ ಅಧಿಕೃತ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದೆ.
ಇಸ್ರೋ ಅದ್ಭುತವಾದ ಭೂ ವೀಕ್ಷಣಾ ಉಪಗ್ರಹ ಇಒಎಸ್ -08 (EOS-08) ಅನ್ನು ಸಣ್ಣ ಉಪಗ್ರಹ ಉಡಾವಣಾ ವಾಹನ ಎಸ್ ಎಸ್ ಎಲ್ ವಿ – ಡಿ3 (SSLV-D3 ) ಬಳಸಿಕೊಂಡು ಉಡಾವಣೆಯಾಗಲಿದೆ. ಈ ಯೋಜನೆಯಿಂದ ಎಸ್ ಎಸ್ ಎಲ್ ವಿ ರಾಕೇಟ್ ಮೂರನೇ ಹಾರಾಟ ಇದಾಗಲಿದ್ದು, ಉಪಗ್ರಹ ತಂತ್ರಜ್ಞಾನ ಮತ್ತು ಉಡಾವಣಾ ಸಾಮರ್ಥ್ಯಗಳಲ್ಲಿ ಇಸ್ರೋ ನ ನಿರಂತರ ಪ್ರಗತಿಯನ್ನು ಇದು ಎತ್ತಿ ತೋರಿಸುತ್ತದೆ.
ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯ :
ಇಒಎಸ್ -08 ಮಿಷನ್ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಮೈಕ್ರೋಸ್ಯಾಟಲೈಟ್ ಅನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು, ಹೊಂದಾಣಿಕೆಯ ಪೇಲೋಡ್ ಉಪಕರಣಗಳನ್ನು ರಚಿಸಲು ಮತ್ತು ಭವಿಷ್ಯದ ಕಾರ್ಯಾಚರಣಾ ಉಪಗ್ರಹಗಳಿಗೆ ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಮೈಕ್ರೋಸ್ಯಾಟ್/ ಐಎಂಎಸ್ -1 (Microsat/IMS-1) ವರ್ಗದಲ್ಲಿ ನಿರ್ಮಿಸಲಾದ ಇಒಎಸ್ -08 ಮೂರು ಮಹತ್ವದ ಪೇಲೋಡ್‌ಗಳನ್ನು ಸಾಗಿಸುವಂತೆ ಸಜ್ಜುಗೊಳಿಸಲಾಗಿದೆ. ಸಣ್ಣ ಉಪಗ್ರಹದಲ್ಲಿನ ಪ್ರಮುಖ ಪೇಲೋಡ್‌ಗಳೂ, ವಿಶಿಷ್ಟ ಉದ್ದೇಶ ಮತ್ತು ಸುಧಾರಿತ ಸಾಮರ್ಥ್ಯಗಳನ್ನು ಹೊಂದಿದೆ.
ಎಲೆಕ್ಟ್ರೋ ಆಪ್ಟಿಕಲ್ ಇನ್ಫ್ರಾರೆಡ್ ಪೇಲೋಡ್ (EOIR):
ಈ ಪೇಲೋಡ್ ಅನ್ನು ಮಿಡ್-ವೇವ್ IR (MIR) ಮತ್ತು ಲಾಂಗ್-ವೇವ್ IR (LWIR) ಬ್ಯಾಂಡ್‌ಗಳಲ್ಲಿ ಹಗಲು ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ.
ಇದರ ಬಹುಮುಖ ಅಪ್ಲಿಕೇಶನ್‌ಗಳೇನು? :
* ಉಪಗ್ರಹ ಆಧಾರಿತ ಕಣ್ಗಾವಲು
* ವಿಪತ್ತು ಮೇಲ್ವಿಚಾರಣೆ
* ಪರಿಸರ ಮೇಲ್ವಿಚಾರಣೆ
* ಬೆಂಕಿ ಪತ್ತೆ
* ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ
* ಕೈಗಾರಿಕಾ ವಿಪತ್ತು ಮೇಲ್ವಿಚಾರಣೆ
ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ (GNSS-R) :
ಜಿಎನ್ ಎಸ್ ಎಸ್ -ಆರ್ ಪೇಲೋಡ್ ಅನ್ನು ರಿಮೋಟ್ ಸೆನ್ಸಿಂಗ್ ಬಳಸುವ ಸಾಮರ್ಥ್ಯವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ:
* ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ
* ಮಣ್ಣಿನ ತೇವಾಂಶ ಮೌಲ್ಯಮಾಪನ
* ಹಿಮಾಲಯ ಪ್ರದೇಶದ ಮೇಲೆ ಕ್ರಯೋಸ್ಪಿಯರ್ ಅಧ್ಯಯನಗಳು
* ಪ್ರವಾಹ ಪತ್ತೆ
* ಒಳನಾಡಿನ ಜಲಮೂಲ ಪತ್ತೆ
ಎಸ್ ಐಸಿ ಯುವಿ (SIC UV) ಡೋಸಿಮೀಟರ್ :
ಗಗನ್ಯಾನ್ ಮಿಷನ್‌ನಲ್ಲಿನ ಕ್ರೂ ಮಾಡ್ಯೂಲ್‌ನ ವ್ಯೂಪೋರ್ಟ್‌ನಲ್ಲಿ ಯುವಿ ವಿಕಿರಣವನ್ನು ಮೇಲ್ವಿಚಾರಣೆ ಮಾಡಲು ಈ ಉಪಕರಣವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಗಾಮಾ ವಿಕಿರಣಕ್ಕೆ ಹೆಚ್ಚಿನ-ಡೋಸ್ ಎಚ್ಚರಿಕೆ ಸಂವೇದಕವಾಗಿ ಇದು ಕಾರ್ಯನಿರ್ವಹಿಸುತ್ತದೆ.
ಸಣ್ಣ ಉಪಗ್ರಹದಲ್ಲಿನ ತಾಂತ್ರಿಕ ವಿಶೇಷ ಮತ್ತು ನಾವೀನ್ಯತೆಗಳು :
ಈ ಮೈಕ್ರೊ ಸ್ಯಾಟಲೈಟ್ ಸರಿಸುಮಾರು 175.5 ಕೆಜಿ ತೂಕದ ಇಒಎಸ್ -08 ಉಪಗ್ರಹವನ್ನು 37.4 ° ಇಳಿಜಾರಿನೊಂದಿಗೆ 475 ಕಿಮೀ ಎತ್ತರದಲ್ಲಿ ವೃತ್ತಾಕಾರದ ಕಡಿಮೆ ಎತ್ತರದ ಭೂಕಕ್ಷೆ (Low Earth Orbit – LEO) ನಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಸ್ಯಾಟಲೈಟ್, ಒಂದು ವರ್ಷ ಕಾರ್ಯಾಚರಣೆ ನಡೆಸುವ ರೀತಿ ವಿನ್ಯಾಸಗೊಳಿಸಲಾಗಿದೆ. ಅದರ ಸುಧಾರಿತ ವೈಶಿಷ್ಟ್ಯಗಳಲ್ಲಿ ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸಿಸ್ಟಮ್ ಇದ್ದು,, ಇದನ್ನು ಸಂವಹನ, ಬೇಸ್‌ಬ್ಯಾಂಡ್, ಸ್ಟೋರೇಜ್ ಮತ್ತು ಪೊಸಿಷನಿಂಗ್ (CBSP) ಪ್ಯಾಕೇಜ್ ಎಂದೂ ಕರೆಯಲಾಗುತ್ತದೆ. ಈ ವ್ಯವಸ್ಥೆಯು ಬಹು ವಿಧದ ಕಾರ್ಯಗಳನ್ನು ಒಂದೇ ಸಮರ್ಥ ಘಟಕವಾಗಿ ಸಂಯೋಜಿಸುತ್ತದೆ. 400 ಜಿಬಿವರೆಗೆ ದತ್ತಾಂಶ ಡೇಟಾ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.
ಇಒಎಸ್ -08 ಉಪಗ್ರಹನಲ್ಲಿನ ಆವಿಷ್ಕಾರಗಳು ಎಕ್ಸ್-ಬ್ಯಾಂಡ್ ಡೇಟಾ ಟ್ರಾನ್ಸ್‌ಮಿಷನ್, ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು ಮತ್ತು ವರ್ಧಿತ ಥರ್ಮಲ್ ಮ್ಯಾನೇಜ್‌ಮೆಂಟ್ ವಸ್ತುಗಳನ್ನು ಒಳಗೊಂಡಿವೆ. ಸೌರ ಕೋಶ ತಯಾರಿಕೆಯ ಪ್ರಕ್ರಿಯೆಗಳು ಮತ್ತು ಮೈಕ್ರೊಸ್ಯಾಟಲೈಟ್ ಅಪ್ಲಿಕೇಶನ್‌ಗಳಿಗಾಗಿ ನ್ಯಾನೊ-ಸ್ಟಾರ್ ಸೆನ್ಸರ್‌ನ ಬಳಕೆಯನ್ನು ಒಳಗೊಂಡಿರುವ ಸ್ವದೇಶಿ ತಂತ್ರಜ್ಞಾನದ ಪ್ರಯತ್ನಗಳನ್ನು ಸಹ ಈ ಯೋಜನೆ ಒತ್ತಿಹೇಳುತ್ತದೆ.
ಎಸ್ ಎಸ್ ಎಲ್ ವಿ ಎಂಬ ಗೇಮ್ ಚೇಂಜರ್ :
ಎಸ್ ಎಸ್ ಎಲ್ ವಿ ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳಲ್ಲಿ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಕೆಳಮಟ್ಟದ ಭೂ ಕಕ್ಷೆಗೆ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ವೆಚ್ಚ ಮಿತವ್ಯಯಕಾರಿ ಮತ್ತು ಹೊಂದಿಕೊಳ್ಳುವ ಪರಿಹಾರವನ್ನು ಒದಗಿಸುತ್ತದೆ. ಕೆಳಮಟ್ಟದ ಭೂ ಕಕ್ಷೆಗೆ 500 ಕೆಜಿಯವರೆಗಿನ ಪೇಲೋಡ್ ಸಾಮರ್ಥ್ಯದೊಂದಿಗೆ, ಇದು ಸಣ್ಣ ಉಪಗ್ರಹ ಉಡಾವಣೆಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಲಿದೆ. ಎಸ್ ಎಸ್ ಎಲ್ ವಿಯ ಕಾಂಪ್ಯಾಕ್ಟ್ ಗಾತ್ರ ಮತ್ತು ತ್ವರಿತ ತಿರುಗುವಿಕೆಯ ಸಮಯವು ಚಿಕ್ಕ ಉಪಗ್ರಹಗಳನ್ನು ನಿಯೋಜಿಸಲು ಸೂಕ್ತವಾಗಿದೆ. ಈಗಿನ ಸಂದರ್ಭದಲ್ಲಿ ಭೂಮಿಯ ವೀಕ್ಷಣೆ, ಸಂವಹನ ಮತ್ತು ವೈಜ್ಞಾನಿಕ ಸಂಶೋಧನೆಗಾಗಿ ಈ ರೀತಿಯ ರಾಕೆಟ್ ಗೆ ಹೆಚ್ಚು ಬೇಡಿಕೆಯಿದೆ.