ಬೆಂಗಳೂರು, ಆ.5 www.bengaluruwire.com : ವೈಯನಾಡು ಪ್ರಕೃತಿ ವಿಕೋಪದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ, ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಹಾಗೂ ಕೇರಳ ಸರ್ಕಾರಕ್ಕಾಗಿ ಬೆಂಗಳೂರು ಮಹಾನಗರ ಸ್ವಚ್ಚತೆ ಮತ್ತು ಲಾರಿ ಮಾಲೀಕರ ಹಾಗೂ ಗುತ್ತಿಗೆದಾರರ ಸಂಘ ನೆರವು ನೀಡಲು ನಿರ್ಧರಿಸಿದೆ.
ಇಂದು ನಡೆದ ಗುತ್ತಿಗೆದಾರರುಗಳ ಸಭೆಯಲ್ಲಿ ಕೇರಳ ಸರ್ಕಾರಕ್ಕೆ ಸಹಾಯ ಹಸ್ತ ನೀಡುವಂತೆ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಜೂನ್ 2024ರ ಮಾಹೆಯ ಬಿಲ್ಲಿನಲ್ಲಿ ಶೇ.1 ರಷ್ಟು ಮೊತ್ತವನ್ನು ಮೂಲದಲ್ಲಿಯೇ ಕಟಾವಣೆ ಮಾಡಿಕೊಂಡು ಕ್ರೋಢೀಕರಣಗೊಳ್ಳುವ ಮೊತ್ತವನ್ನು ಗುತ್ತಿಗೆದಾರರೊಂದಿಗೆ ನೇರವಾಗಿ ಕೇರಳದ ಪ್ರಕೃತಿ ವಿಕೋಪ ಪರಿಹಾರಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಮೂಲಕ ನೀಡಲು ಒಮ್ಮತದ ತೀರ್ಮಾನಕ್ಕೆ ಬಂದಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಾಲಸುಬ್ರಮಣ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : SaveSahakaraSarige | Video News | ಮಲೆನಾಡಿನ ಜನರ ಬದುಕಿನ ಬಂಡಿಯಾಗಿದ್ದ ಬಸ್ಸಿನ ರಿಯಲ್ ಸ್ಟೋರಿ : “ರೈಟ್… ರೈಟ್….!!
2023ರಲ್ಲಿ ಕರೆಯಲಾದ ಟೆಂಡರ್‌ಗೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಆದಷ್ಟು ಕೂಡಲೇ ಬಗೆಹರಿಸಿಕೊಂಡು ನೂತನ ಟೆಂಡರ್‌ನ ಕಾರ್ಯಾದೇಶವನ್ನು ಪಡೆಯಲು ಪ್ರಯತ್ನಿಸುವ ಬಗ್ಗೆ ಹಾಗೊಂದು ವೇಳೆ 89 ಪ್ಯಾಕೇಜ್‌ಗಳ ಟೆಂಡರ್ ಕಾರ್ಯಾದೇಶ ನೀಡದೆ ಇದ್ದ ಪಕ್ಷದಲ್ಲಿ ಮುಂದಿನ ನಡೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಯಿತು.
ಇದಲ್ಲದೇ ಸಂಘದ ಗುತ್ತಿಗೆದಾರರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ನಗರದ ಹಲವು ಸಂಘ ಸಂಸ್ಥೆಗಳು, ಸರ್ಕಾರಿ ನೌಕರರ ಸಂಘಟನೆಗಳು ವಯನಾಡು ದುರ್ಘಟನೆಗೆ ತಮ್ಮ ಕೈಲಾದ ನೆರವು ನೀಡುತ್ತಿವೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.