ಬೆಂಗಳೂರು, ಆ.3 www.bengaluruwire.com : ಇಂದು ಸಂಜೆ ನಮ್ಮ ಮೆಟ್ರೋ (Namma Metro) ರೈಲು ಆಗಮಿಸುತ್ತಿದ್ದಾಗ ಅದರ ಮುಂದೆ ಹಳಿಗೆ ಹಾರಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Namma Metro Green Lane) ಈ ದುರ್ಘಟನೆ ನಡೆದಿದೆ.
ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ (Dodda Kallasandra) ಮೆಟ್ರೋ ಸ್ಟೇಷನ್‌ನಲ್ಲಿ ಇಂದು ಸಂಜೆ 5.45ರ ಸಮಯದಲ್ಲಿ ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಈ ಘಟನೆಯಿಂದಾಗಿ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತವಾಗಿತ್ತು. ಈ ಘಟನೆಯ ಮೂರು ಗಂಟೆಗಳ ನಂತರ 8.45 ಗಂಟೆಯಿಂದ ಎಂದಿನಂತೆ ರೈಲು ಸೇವೆಗಳನ್ನು ಸಂಪೂರ್ಣವಾಗಿ ಹಸಿರು ಮಾರ್ಗದಲ್ಲಿ ಪುನರಾರಂಭಿಸಲಾಗಿದೆ. ಈ ದುರ್ಘಟನೆಯಿಂದಾಗಿ ಪ್ರಯಾಣಿಕರಿಗೆ ಆದ ಅನಾನುಕೂಲತೆಗೆ ವಿಷಾದಿಸುವುದಾಗಿ ನಮ್ಮ ಮೆಟ್ರೊ ತಿಳಿಸಿದೆ.
ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಏಕಾಏಕಿ ಸ್ಥಗಿತ ಆಗಿದ್ದರಿಂದ ಕೆಲವು ಕಾಲ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಯಲಚೇನಹಳ್ಳಿ ಇಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವೆ ನಮ್ಮ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಈ ಬಗ್ಗೆ ನಮ್ಮ ಮೆಟ್ರೋದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಆ.1ರಂದು ರಾತ್ರಿ ಬೈಯಪ್ಪನಹಳ್ಳಿ ಪರ್ಪಲ್ ಲೈನ್‌ನಲ್ಲಿ (ನೇರಳೆ ಮಾರ್ಗ) ಮೆಟ್ರೋ ಮಾರ್ಗದ ಭಯಯ್ಯಪ್ಪನಹಳ್ಳಿ 2ನೇ ಪ್ಲಾಟ್ ಫಾರ್ಮ್‌ನಲ್ಲಿ ಆಡವಾಡುತ್ತಿದ್ದ ಗಂಡು ಮಗು ಆಕಸ್ಮಾತ್ ಆಗಿ ಮೆಟ್ರೋ ಹಳಿಗೆ ಬಿದ್ದಿತ್ತು. ಆಗ ನಿಲ್ದಾಣದಲ್ಲಿದ್ದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಹಳಿಯ ವಿದ್ಯುತ್ ಸಂಪರ್ಕ ಕಡಿತ ಮಾಡಿ, ಆ ಮಾರ್ಗದಲ್ಲಿ ಬರುವ ಮೆಟ್ರೊ ರೈಲಿನ ಚಾಲಕರಿಗೆ ಕೂಡಲೇ ಮಾಹಿತಿ ರವಾನಿಸಲಾಗಿತ್ತು. ಮಾಡಲಾಗಿತ್ತು. ಇದ್ರಿಂದ ಸಂಚಾರ ವ್ಯತ್ಯಯವಾಗಿತ್ತು. ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 15 ನಿಮಿಷದವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇದರಿಂದಾಗಿ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಸಂಚಾರವನ್ನ ಬಿಎಂಆರ್‌ಸಿಎಲ್ ಸ್ಥಗಿತಗೊಳಿಸಿತ್ತು.