ಬೆಂಗಳೂರು, ಜು.15 www.bengaluruwire.com : ಕಾಪಿರೈಟ್ ಉಲ್ಲಂಘನೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಎಂ ಆರ್ ಟಿ ಮ್ಯೂಸಿಕ್ ಪಾಲುದಾರ ನವೀನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪರಮ್ವಾ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನ್ಯಾಯ ಎಲ್ಲಿದೆ ಮತ್ತು ಗಾಳಿಮಾತು ಎಂಬ 2 ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬ್ಯಾಚುಲರ್ ಪಾರ್ಟಿ ಸಿನಿಮಾಗೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ವಿರುದ್ಧ ನವೀನ್ ಕುಮಾರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎಂಆರ್ ಟಿ ಮ್ಯೂಸಿಕ್ ಪಾಲುದಾರ ನವೀನ್ ಕುಮಾರ್ ಜೊತೆ ರಕ್ಷಿತ್ ಶೆಟ್ಟಿ 2024 ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆ ಬಗ್ಗೆ ಮಾತುಕತೆಯಾಗಿತ್ತು. ಅದರೆ ಮಾತುಕತೆ ಸರಿ ಹೊಂದದೆ ಇದ್ದರಿಂದ ಅಲ್ಲಿಗೆ ನಿಲ್ಲಿಸಲಾಗಿತ್ತು. ನಂತರ 2024 ಮಾರ್ಚ್ ನಲ್ಲಿ ಅಮೇಜಾನ್ ಫ್ರೈಮ್ ನಲ್ಲಿ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಈ ಚಿತ್ರದಲ್ಲಿ ನ್ಯಾಯ ಎಲ್ಲಿದೆ ಚಿತ್ರದ ‘ನ್ಯಾಯ ಎಲ್ಲಿದೆ ಹಾಡು’ ಹಾಗೂ ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಚಿತ್ರದ ಹಾಡುಗಳನ್ನ ಅನುಮತಿ ಇಲ್ಲದೆ ಬಳಕೆ ಆರೋಪವನ್ನು ರಕ್ಷಿತ್ ಶೆಟ್ಟಿ ಎದುರಿಸುತ್ತಿದ್ದಾರೆ.
ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನು ಖರೀದಿ ಮಾಡದೇ ಈ ಚಿತ್ರಗಳ ಹಾಡುಗಳನ್ನು ಬಳಕೆ ಮಾಡಿದ್ದಾರೆ ಎಂದು ನವೀನ್ ಕುಮಾರ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬ್ಯಾಚುಲರ್ ಪಾರ್ಟಿ’ ಸಿನಿಮಾವನ್ನು ಅಭಿಜಿತ್ ಮಹೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಿರಿ ರವಿಕುಮಾರ್, ಅಚರ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿದ್ದರು.