ಬೆಂಗಳೂರು, ಜು.15 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇಂಟರ್ ನೆಟ್, ಮೊಬೈಲ್ ಬಳಕೆ ಹೆಚ್ಚಾದಂತೆ ಹಾಗೂ ಸೇವೆಯಲ್ಲಿ ಅಂತರ್ಜಾಲದ ವೇಗ ಜಾಸ್ತಿಯಾದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ ಸಿಕ್ಕ ಕರೆಂಟ್ ಕಂಬ, ಮರಗಿಡ, ಕಟ್ಟಡಗಳ ಮೇಲೆಲ್ಲಾ ಒಎಫ್ ಸಿ ಕೇಬಲ್, ಡಾಟಾ ಮತ್ತು ಡಿಶ್ ಕೇಬಲ್ ಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬೆಸ್ಕಾಂ ನಗರದಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಮೇಲೆ ಹಾಕಲಾಗಿದ್ದ 821 ಕಿ.ಮೀ ಅನಧಿಕೃತ ಕೇಬಲ್ ಗಳನ್ನು ಗುರ್ತಿಸಿ ಆ ಪೈಕಿ 761.71 ಕಿ.ಮೀ ಕೇಬಲ್ ಗಳನ್ನು ಮುಲಾಜಿಲ್ಲದೆ ಕಿತ್ತುಹಾಕಿದೆ.
ಈ ಅನಧಿಕೃತ ಕೇಬಲ್ ಗಳಿಂದ ವಿದ್ಯುತ್ ಅಪಘಾತ ಒಂದು ಕಡೆಯಾದರೆ ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಳಿ ಮತ್ತಿತರ ಕಾರಣಕ್ಕೆ ಮರಗಿಡ, ಕಟ್ಟಡ ಮತ್ತಿತರ ಸ್ಥಳಗಳಲ್ಲಿ ಕೇಬಲ್ ಕಟ್ಟಾಗಿ ಬಿದ್ದು, ವಾಹನ ಚಾಲಕರು, ಪಾದಚಾರಿಗಳ ಪಾಲಿಗೆ ಮೃತ್ಯುಪಾಶವಾಗಿದೆ. ಇದರಿಂದ ಹಲವು ಬಾರಿ ಅಪಘಾತ, ಜೀವಹಾನಿ ಆದ ಉದಾಹರಣೆಯಿದೆ.
ಅನಧಿಕೃತವಾಗಿ ಹಾಕಲಾಗಿತ್ತು 401 ಕಿ.ಮೀ ಉದ್ದದ ಒಎಫ್ ಸಿ ಕೇಬಲ್ :
ಈ ನಿಟ್ಟಿನಲ್ಲಿ ಬೆಸ್ಕಾಂ ಇತ್ತೀಚೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ಜು.08 ರ ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್ ಗಳಿಗೆ ಬೆಸ್ಕಾಂ ಗಡವು ನೀಡಿತ್ತು. ಇದೀಗ ಆ ಗಡುವು ಮುಗಿದ ಹಿನ್ನಲೆಯಲ್ಲಿ ಜುಲೈ 8 ರಿಂದ 14ನೇ ತಾರೀಖಿನ ವೇಳೆಗೆ ನಗರದ ಉತ್ತರ ವೃತ್ತ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವೃತ್ತಗಳಲ್ಲಿನ ಬೆಸ್ಕಾಂ ವಿದ್ಯುತ್ ಕಂಬದ ಮೇಲೆ ಅನಧಿಕೃತವಾಗಿ 401.611 ಕಿ.ಮೀ ಒಎಫ್ ಸಿ ಕೇಬಲ್ ಗಳ ಪೈಕಿ 358.05 ಕಿ.ಮೀ ವೈರ್ ಗಳನ್ನು ಬೆಸ್ಕಾಂ ಸಿಬ್ಬಂದಿ ತೆರವು ಮಾಡಿದ್ದಾರೆ.
231 ಕಿ.ಮೀ ಅನಧಿಕೃತ ಡಿಶ್ ವೈರ್, 172 ಕಿ.ಮೀ ಇಂಟರ್ ನೆಟ್ ಕೇಬಲ್ ಗಳು ಕಡಿತ :
ಇನ್ನು ನಗರದ 4 ವೃತ್ತಗಳಲ್ಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬದ ಮೇಲೆ 235.35 ಕಿ.ಮೀ ಉದ್ದದ ಡಿಶ್ ಕೇಬಲ್ ಗಳನ್ನು ಹಾಕಿರುವುದನ್ನು ಪತ್ತೆ ಹಚ್ಚಿರುವ ಬೆಸ್ಕಾಂ ಸಿಬ್ಬಂದಿ ಆ ಪೈಕಿ 231.33 ಕಿ.ಮೀ ಕೇಬಲ್ ಗಳನ್ನು ಕಿತ್ತು ಹಾಕಿದೆ. ಅದೇ ರೀತಿ 184.474 ಕಿ.ಮೀ ಉದ್ದದ ಅನಧಿಕೃತವಾಗಿ ಹಾಕಲಾದ ಇಂಟರ್ ನೆಟ್ ಕೇಬಲ್ ಗಳನ್ನು ಪತ್ತೆ ಹಚ್ಚಿ ಅವುಗಳ ಪೈಕಿ 172.32 ಕಿ.ಮೀ ಕೇಬಲ್ ಗಳನ್ನು ಕಿತ್ತುಹಾಕಿದೆ. ಬೆಸ್ಕಾಂ ತಾನೇ ಡಕ್ಟ್ ಗಳನ್ನು ಬಿಬಿಎಂಪಿ ರಸ್ತೆಗಳಲ್ಲಿ ನೂರಾರು ಕಿ.ಮೀ ಮಾಡಿದ್ದರೂ, ಇದರಲ್ಲಿ ಇಂತಿಷ್ಟು ಶುಲ್ಕ ನೀಡಿ ಕೇಬಲ್ ಅಳವಡಿಸಲು ಸರ್ವೀಸ್ ಪ್ರೊವೈಡರ್ ಸಂಸ್ಥೆಗಳಿಗೆ ಸಮಸ್ಯೆಯೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಸ್ಕಾಂ ಡಕ್ಟ್ ನಲ್ಲಿ ಖಾಸಗಿಯವರು ಕೇಬಲ್ ಹಾಕಲು ನಿರ್ಲಕ್ಷ್ಯವೇಕೆ? :
ಬೆಸ್ಕಾಂ ಕಳೆದ 2- 3 ವರ್ಷಗಳ ಹಿಂದೆ ನಗರದಾದ್ಯಂತ ಹೈಟೆನ್ಶನ್ ವೈರ್ ಕೇಬಲ್ ಗಳನ್ನು ನೆಲದಡಿಯಲ್ಲಿ ಹಾಕಲು ಡಕ್ಟ್ ಗಳನ್ನು ಮಾಡಿದ್ದು, ಅದರ ಪಕ್ಕದಲ್ಲಿಯೇ ಇಂಟರ್ ನೆಟ್, ಒಎಫ್ ಸಿ ಮತ್ತಿತರ ಕೇಬಲ್ ಗಳನ್ನು ಅಳವಡಿಸುವ ಸಂಸ್ಥೆಗಳಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಲು ಪ್ರತ್ಯೇಕ ಖಾಲಿ ಡಕ್ಟ್ ಗಳನ್ನು ಅಳವಡಿಸಿದೆ. ಆದರೂ ಕೇಬಲ್ ಟಿವಿ, ಇಂಟರ್ ನೆಟ್ ಸೇವೆ ನೀಡುವ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಹಣ ಮಾಡುತ್ತಿವೆಯಷ್ಟೆ. ಡಿಶ್ ಕೇಬಲ್, ಡಾಟಾ ಕೇಬಲ್ ಹಾಗೂ ಒಎಫ್ ಸಿ ಕೇಬಲ್ ಗಳನ್ನು ಬಿಬಿಎಂಪಿ ಅಥವಾ ಬೆಸ್ಕಾಂ ಗೆ ಯಾವುದೇ ಶುಲ್ಕವನ್ನು ನೀಡದೆ ಉಚಿತವಾಗಿ ಹಾಗೂ ಅನಧಿಕೃತವಾಗಿ ಕಟ್ಟಡ, ಮರ, ವಿದ್ಯುತ್ ಕಂಬ, ಬಸ್ ಸ್ಟಾಪ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುತ್ತಾ ಬರುವುದನ್ನು ರೂಢಿಸಿಕೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಗೆ ಭ್ರಷ್ಟ ಎಂಜಿನಿಯರ್ ಗಳ ಕೈಬಿಸಿ ಮಾಡಿ ಒಪ್ಪಿಗೆ ಪಡೆದಕ್ಕಿಂತ ಹೆಚ್ಚಿನ ಕೇಬಲ್ ಗಳನ್ನು ನೆಲದಡಿಯಲ್ಲಿ ಅಳವಡಿಸಿ ಏಮಾರಿಸುವ ವರ್ಗವೇ ಸೃಷ್ಟಿಯಾಗಿದೆ. ಅದನ್ನು ಬುಡ ಸಮೇತ ಕಿತ್ತು ಎಸೆಯುವಲ್ಲಿ ಪಾಲಿಕೆ ಆಡಳಿತ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಎಷ್ಟೋ ವೇಳೆ ಮಳೆಗಾಳಿಗೆ ಇಂತಹ ಕೇಬಲ್ ಗಳು ಕಿತ್ತು ಬಂದು, ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರ ಕುತ್ತಿಗೆ, ಮೈಗೆ, ವಾಹನಕ್ಕೆ ಸಿಲುಕಿ ಅಪಘಾತವಾಗಿ ಜೀವಹಾನಿಯಾದ ಬಗ್ಗೆ ವರದಿಗಳಾಗಿದೆ. ಹೀಗಿದ್ದರೂ ಟೆಲಿಕಾಂ ಸಂಸ್ಥೆಗಳಾಗಲಿ, ಇಂಟರ್ ನೆಟ್ ಸೇವೆ ನೀಡುವ ಸಂಸ್ಥೆಗಳಗಾಲಿ ತಾವು ಅನಧಿಕೃತವಾಗಿ ಅಳವಡಿಸಿದ ಕೇಬಲ್ ಗಳನ್ನು ತೆಗೆಯುವ ಗೋಜಿಗೆ ಹೋಗಿಲ್ಲ.
ಬೆಸ್ಕಾಂ ಡೆಕ್ಟ್ ನಲ್ಲಿ ಕೇಬಲ್ ಹಾಕೋಕೆ 4 ಬಾರಿ ಟೆಂಡರ್!!
ಕಡಿಮೆ ದರದ ನೆಲ ಬಾಡಿಗೆ ವಿಧಿಸಿದ್ದರೂ ಕೇಬಲ್ ಮಾಫಿಯಾಕ್ಕೆ ಬೇಕಿಲ್ಲ!!
ಬಿಎಂಆರ್ ಸಿಎಲ್ ತನ್ನ ಮಾರ್ಗದಲ್ಲಿ ಒಎಫ್ ಸಿ ಸೇರಿದಂತೆ ಮತ್ತಿತರ ಕೇಬಲ್ ಗಳನ್ನು ತನ್ನ ಡಕ್ಟ್ ನಲ್ಲಿ ಅಳವಡಿಸಲು ಪ್ರತಿ ಕಿ.ಮೀಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ನೆಲಬಾಡಿಗೆಯನ್ನು ನಿಗದಿಪಡಿಸಿದೆ. ಇದೇ ದರವನ್ನು ಆಧಾರವಾಗಿಟ್ಟುಕೊಂಡು ಬೆಸ್ಕಾಂ ಕೂಡ ಮೊದಲ ಬಾರಿಗೆ ನಗರದಾದ್ಯಂತ ತಾನು ರಸ್ತೆ ಬದಿಯಲ್ಲಿ ಅಳವಡಿಸಿರುವ ಡಕ್ಟ್ ಗಳಲ್ಲಿ (ನೆಲದಡಿಯಲ್ಲಿ ಹಾಕಲಾದ ಡಬ್ಬಿ) ಒಎಫ್ ಸಿ, ಡಾಟಾ ಹಾಗೂ ಡಿಶ್ ಕೇಬಲ್ ಗಳನ್ನು ಅಳವಡಿಸಲು ತಾನೇ ಕೇಬಲ್ ಗಳನ್ನು ಹಾಕಿಕೊಟ್ಟು, ತಾವು ಕೇವಲ ಮಾಸಿಕ ಬಾಡಿಗೆ ನೀಡಿ ಎಂದು ಸೇವಾದಾತರಿಗಾಗಿ ಟೆಂಡರ್ ಕರೆದಿತ್ತು. ಇದಕ್ಕೂ ಸರ್ವೀಸ್ ಪ್ರೊವೈಡರ್ಸ್ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಕೊನೆಗೆ ವಿದ್ಯುತ್ ಸರಬರಾಜು ಸಂಸ್ಥೆಯೇ ನಿಮಗೆ ಡಕ್ಟ್ ಒದಗಿಸಲಿದೆ, ನೀವೇ ಕೇಬಲ್ ಅಳವಡಿಸಿಕೊಂಡು ಇಂತಿಷ್ಟು ಬಾಡಿಗೆ ನೀಡಿ ಅಂತ ದರವನ್ನು ಕಡಿಮೆ ಮಾಡಿ ಟೆಂಡರ್ ಕರೆದಿತ್ತು. ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕೊನೆಗೆ ಮೂರನೇ ಬಾರಿಗೆ ಸೇವಾದಾತರ ಜೊತೆ ಸಭೆ ನಡೆಸಿ ಅವರು ಬೇಡಿಕೆಯಿಟ್ಟಂತೆ ಬೆಸ್ಕಾಂ ವೃತ್ತದ ವ್ಯಾಪ್ತಿಯ ಬದಲಿಗೆ ಸಣ್ಣ ಮಟ್ಟದಲ್ಲಿ ಕೇಬಲ್ ಅಳವಡಿಸಲು ಅವಕಾಶ ನೀಡಿ ಪುನಃ ಟೆಂಡರ್ ಕರೆದರೂ ಕೇಬಲ್ ಮಾಫಿಯಾ ಅದಕ್ಕೂ ಬಗ್ಗಲಿಲ್ಲ ಎಂದು ಬೆಸ್ಕಾಂ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ. ಈ ರೀತಿ ಒಟ್ಟು ನಾಲ್ಕು ಬಾರಿ ಟೆಂಡರ್ ಕರೆದರೂ ಕೇಬಲ್ ಮಾಫಿಯಾದವರು ಬಗ್ಗದಿದ್ದಾಗ ಬೆಸ್ಕಾಂ, ಅನಧಿಕೃತವಾಗಿ ತನ್ನ ವಿದ್ಯುತ್ ಕಂಬದ ಮೇಲೆ ಹಾಕಿರುವ ಕೇಬಲ್ ಗಳನ್ನು ಕಡಿತ ಮಾಡುವ ಕೆಲಸಕ್ಕೆ ಇಳಿದು ಅಕ್ರಮ ಎಸಗುವವರಿಗೆ ಚುರುಕು ಮುಟ್ಟಿಸಿದೆ.
ಅಲ್ಲದೇ ಇದಕ್ಕೂ ಮುನ್ನ ನಾಲ್ಕನೇ ಬಾರಿಗೆ ಬೆಸ್ಕಾಂ ತನ್ನ ಡೆಕ್ಟ್ ಗಳಲ್ಲಿ ವಿವಿಧ ರೀತಿಯ ಕೇಬಲ್ ಗಳನ್ನು ಅಳವಡಿಸಲು ಆಸಕ್ತಿ ವ್ಯಕ್ತಪಡಿಸುವಿಕೆಯನ್ನು ವಿವಿಧ ಟೆಲಿಕಾಂ, ಇಂಟರ್ ನೆಟ್ ಹಾಗೂ ಡಿಶ್ ಸೇವೆ ಒದಗಿಸುವ ಸೇವಾದಾತರಿಗಾಗಿ ಕರೆದಿದ್ದು, ಇದೇ ಜುಲೈ 20 ಈ ಅವಧಿ ಕೊನೆಯಾಗಲಿದೆ.
2023ನೇ ಇಸವಿಯಲ್ಲೂ ನಡೆದಿತ್ತು ವಿಶೇಷ ಕಾರ್ಯಾಚರಣೆ :
ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್ ಸಿ, ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು, ಅನಧಿಕೃತ ಡಾಟ ಕೇಬಲ್, ಓಎಫ್‌ಸಿ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು. ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್ ಗಳನ್ನು ವಿದ್ಯುತ್ ಕಂಬಗಳ ಮೇಲೆ ಮತ್ತೆ ಕೇಬಲ್ ಮಾಫಿಯಾ ಕೆಲಸ ಮಾಡಿ ಪುನಃ ಕೇಬಲ್ ಅಳವಡಿಸಿದೆ. ವಿದ್ಯುತ್ ಕಂಬ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಈ ರೀತಿಯ ಅನಧಿಕೃತ ಕೇಬಲ್ ಅಳವಡಿಕೆ ಮಾಡುವ ಸರ್ವೀಸ್ ಪ್ರೊವೈಡರ್ ಸಂಸ್ಥೆಯ ಪ್ರತಿನಿಧಿಗಳು ನೂರಾರು ಕಿ.ಮೀ ಅಳವಡಿಸಿದ ಕೇಬಲ್ ಗಳನ್ನು ಬೆಸ್ಕಾಂ ಕಿತ್ತು ಹಾಕಿದರೂ ಇನ್ನು ಕೆಲವೇ ದಿನಗಳಲ್ಲಿ ಪುನಃ ಅಕ್ರಮವಾಗಿ ಕೇಬಲ್ ಅಳವಡಿಸುವುದನ್ನು ಶಾಶ್ವತವಾಗಿ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಠಿಣ ಕ್ರಮಗಳನ್ನು ತರಲು ಕಾನೂನು ಅಥವಾ ಚಾಲ್ತಿಯಲ್ಲಿರುವ ಕಾನೂನಿಗೆ ಸೂಕ್ತ ತಿದ್ದಪಡಿ ತಂದು ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.