ದೇಶದಲ್ಲಿ ಜನರಿಗೆ ಹಳದಿ ಮೋಹದ ಮೇಲಿನ ವ್ಯಾಮೋಹ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಹೆಚ್ಚು ಎಂಬುದು, ಚಿನ್ನದ ಮೇಲಿನ ಬೇಡಿಕೆಯಿಂದಲೇ ತಿಳಿಯುತ್ತದೆ. ಚಿನ್ನವು ಒಂದು ಸಮಯ ಪರೀಕ್ಷಿತ ಆಸ್ತಿಯಾಗಿದ್ದು ಅದು ಇತರ ಸ್ವತ್ತು ವರ್ಗಗಳೊಂದಿಗೆ ಹೋಲಿಸಿದರೆ ಬಹಳ ಆಕರ್ಷಕ ಆದಾಯವನ್ನು ನೀಡುತ್ತದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ದ ಮಾಹಿತಿಯ ಪ್ರಕಾರ 18 ಏಪ್ರಿಲ್ 2024 ರಂದು 10 ಗ್ರಾಂ 999 ಕ್ಯಾರೆಟ್ ಚಿನ್ನದ ಬೆಲೆ 73,477 ರೂ.ಗೆ ತಲುಪಿತು. ಚಿನ್ನವು 74,000 ರೂ. ನಷ್ಟು ಅಂದರೆ ಸುಮಾರು ಮೂರು ಪಟ್ಟು ಹೆಚ್ಚಾಗಲು 9 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. 2015 ರಲ್ಲಿ 10 ಗ್ರಾಮ್ 999 ಕ್ಯಾರೇಟ್ ಅಪರಂಜಿ ಚಿನ್ನದ ದರವು 24,740 ರೂ.ಗಳಷ್ಟಿತ್ತು. ಇದಕ್ಕೂ ಮೊದಲು, 2006 ರಲ್ಲಿ 8,250 ರೂ.ಗಳಿತ್ತು. ಆದರೆ 9 ವರ್ಷಗಳಲ್ಲಿ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೂ ಮೊದಲು, ಬಂಗಾರ ಬೆಲೆ 1987 ರಲ್ಲಿ 10 ಗ್ರಾಂಗೆ 2,570 ರಿಂದ ಮೂರು ಪಟ್ಟು ಹೆಚ್ಚಾಗಲು ಸುಮಾರು 19 ವರ್ಷಗಳನ್ನು ತೆಗೆದುಕೊಂಡಿತು. ಈ ಚಕ್ರದ ಮೊದಲು, ಟ್ರಿಪ್ಲಿಂಗ್ ಸಮಯವು ಸುಮಾರು 8 ವರ್ಷಗಳು ಮತ್ತು 6 ವರ್ಷಗಳಾಗಿತ್ತು.
ದಿ ಎಕಾನಾಮಿಕ್ ಟೈಮ್ಸ್ ವೆಲ್ತ್ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ, ಚಿನ್ನದ ದರವು ಈಗಿನ ಮಟ್ಟದಿಂದ ಮೂರು ಪಟ್ಟು ಹೆಚ್ಚಾದರೆ, ಅಂದರೆ ಪ್ರತಿ 10 ಗ್ರಾಂ. ಅಪರಂಜಿ ಚಿನ್ನದ ದರವು 2 ಲಕ್ಷ ರೂ.ಗಿಂತ ಹೆಚ್ಚಿನ ದರಕ್ಕೆ ಜಿಗಿತವನ್ನು ಕಾಣುತ್ತದೆ ಎಂದು ತಿಳಿಸಿದೆ. ಆದರೆ ಪ್ರತಿ ಹೂಡಿಕೆದಾರರು ತಿಳಿದುಕೊಳ್ಳಲು ಬಯಸುವ ನಿರ್ಣಾಯಕ ಪ್ರಶ್ನೆಯೆಂದರೆ ಬೆಲೆ ಮೂರು ಪಟ್ಟು ಹೆಚ್ಚಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದಾಗಿದೆ. ಚಿನ್ನದ ಮೇಲಿನ ಭವಿಷ್ಯದ ಆದಾಯ ಮತ್ತು 2 ಲಕ್ಷ ರೂಪಾಯಿ ಮಟ್ಟವನ್ನು ತಲುಪುವ ಸಮಯದ ಬಗ್ಗೆ ತಜ್ಞರು ತಮ್ಮದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಳದಿ ಲೋಹ 2 ಲಕ್ಷ ರೂ.ಗೆ ಯಾವ ತಲುಪುತ್ತೆ? :
ಪ್ರಪಂಚದ ಯಾವುದೇ ಮೂಲೆಯಲ್ಲಿ ದೊಡ್ಡ ಸಂಘರ್ಷ ಉಂಟಾದಾಗ ಅಥವಾ ಕೆಲವು ಅನಿಶ್ಚಿತತೆ ಇದ್ದಾಗ ಚಿನ್ನದ ಬೆಲೆಗಳು ಸಾಮಾನ್ಯವಾಗಿ ಹೆಚ್ಚು ಏರಿಕೆಯಾಗುತ್ತವೆ ಎಂದು ಈ ಹಿಂದಿನ ವಿದ್ಯಮಾನಗಳಿಂದ ತಿಳಿದುಬಂದಿದೆ. ಆದ್ದರಿಂದ ಈಗಾಗಲೇ ನಡೆಯುತ್ತಿರುವ ಜಾಗತಿಕ ಸಮಸ್ಯೆಗಳಿಂದ ಹೇಗೆ ಹೊರಬರುತ್ತವೆ ಎಂಬುದರ ಮೇಲೆ ಚಿನ್ನದ ಬೆಲೆಗಳು ನಿರ್ಧಾರಿತವಾಗಿರುತ್ತದೆ. “ಇತಿಹಾಸದ ದತ್ತಾಂಶಗಳನ್ನು ನೋಡಿದಾಗ ಭೌಗೋಳಿಕ ರಾಜಕೀಯ ಉದ್ವಿಘ್ನತೆಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳಂತಹ ಪ್ರಮುಖ ಜಾಗತಿಕ ಬದಲಾವಣೆಗಳು ಚಿನ್ನದ ಬೆಲೆಗಳ ಮೇಲೆ ಗಣನೀಯವಾಗಿ ಪ್ರಭಾವ ಬೀರಬಹುದು ಎಂದು ತೋರಿಸಿದೆ. ತುಲನಾತ್ಮಕವಾಗಿ ಕಡಿಮೆ ಅವಧಿಯಲ್ಲಿ ಚಿನ್ನದ ಬೆಲೆ ತ್ವರಿತ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇತ್ತೀಚಿನ 5 ವರ್ಷಗಳಲ್ಲಿ ರೂಪಾಯಿ ದುರ್ಬಲತೆ ಮತ್ತು ಭೌಗೋಳಿಕ ರಾಜಕೀಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ಮತ್ತು ಇವುಗಳೆಲ್ಲವೂ ಸೇರಿ ಹಳದಿ ಲೋಹದ ದರವು 40,000 ರೂ.ಗಳಿಂದ 70,000+ ರೂ.ಗೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರು ಕೇವಲ 3.3 ವರ್ಷಗಳಲ್ಲಿ ಶೇ. 75 ರಷ್ಟು ಲಾಭ ಕಾಣುವಂತಾಗಿದೆ. 2014 ರಲ್ಲಿ 10 ಗ್ರಾಮ್ ಅಪರಂಜಿ ಚಿನ್ನದ ದರವು 28,000 ರೂ.ಗಳಾಗಿತ್ತು ಮತ್ತು 2018 ರಲ್ಲಿ 31,250 ರೂ. ಗಳಿಗೆ ಏರಿಕೆಯಾಯಿತು. ಅಂದರೆ 5 ವರ್ಷಗಳಲ್ಲಿ ಶೇ.12ರಷ್ಟು ಲಾಭ ಲಭ್ಯವಾಯಿತು” ಎಂದು ಹೇಳುತ್ತಾರೆ ಎಲ್ ಕೆಪಿ ಸೆಕ್ಯುರಿಟೀಸ್‌ನ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ.
ಸುಮಾರು 9 ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಮತ್ತು ಇದು ಮತ್ತೆ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. “ಇತ್ತೀಚಿನ ಟ್ರೆಂಡ್‌ಗಳನ್ನು ಗಮನಿಸಿದರೆ, ಮುಂದಿನ 7 ರಿಂದ 12 ವರ್ಷಗಳಲ್ಲಿ ಚಿನ್ನದ ಬೆಲೆಗಳು 2 ಲಕ್ಷದ ಗಡಿ ತಲುಪುವ ಸಾಧ್ಯತೆಯಿದೆ” ಎಂದು ತ್ರಿವೇದಿ ಹೇಳುತ್ತಾರೆ ಎಂದು ಉಲ್ಲೇಖಿಸಿ ದಿ ಎಕಾನಾಮಿಕ್ ಟೈಮ್ಸ್ ವೆಲ್ತ್ ಮಾಧ್ಯಮದಲ್ಲಿ ತಿಳಿಸಿದೆ.
ಮುಂದಿನ 6 ವರ್ಷಗಳಲ್ಲಿ ಚಿನ್ನದ ಬೆಲೆ ಎರಡು ಲಕ್ಷ ರೂ. ಆಗುವ ನಿರೀಕ್ಷೆ :
ಕೆಲವು ತಜ್ಞರು ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿ ಮತ್ತು 2 ಲಕ್ಷ ದಾಟುವ ಬಗ್ಗೆ ಹೆಚ್ಚು ಆಶಾವಾದಿಯಾಗಿದ್ದಾರೆ. “ರಂಜಾನ್ ನಂತರ ಇರಾನ್ ಮತ್ತು ಇಸ್ರೇಲ್ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಚೀನಾ-ತೈವಾನ್ ಉದ್ವಿಗ್ನತೆಯು ಅನಿಶ್ಚಿತತೆಯನ್ನು ತರಬಹುದು. ಈ ಎರಡು ಅಂಶಗಳು, ಶಾಂಘೈ ಚಿನ್ನದ ವಿನಿಮಯ (SGE) ಮತ್ತು ಸರಕು ವಿನಿಮಯ ಮಾರುಕಟ್ಟೆ (Comex) ನಲ್ಲಿ ಚಿನ್ನದ ಭಾರೀ ಕಾಗದದ ವ್ಯಾಪಾರದ ಹೊರತಾಗಿ, ನಾವು ಈಗಾಗಲೇ ಸಾರ್ವಕಾಲಿಕ ಹೆಚ್ಚಿನ (All Time High -ATH ) ಚಿನ್ನದ ಬೆಲೆಗಳನ್ನು ನೋಡುತ್ತಿರುವ ಕಾರಣ ಕಳವಳಕ್ಕೆ ಕಾರಣವಾಗಿದೆ. ನನ್ನ ಅಭಿಪ್ರಾಯದಲ್ಲಿ, ಈ ಅನಿಶ್ಚಿತತೆಗಳಿಂದಾಗಿ ಮುಂದಿನ 6 ವರ್ಷಗಳಲ್ಲಿ ಚಿನ್ನದ ಬೆಲೆಗಳು ಮೂರು ಪಟ್ಟು ಹೆಚ್ಚಾಗಬಹುದು. ಇದು ವಿಶ್ವದಲ್ಲಿ ಅಮೆರಿಕ ಡಾಲರ್ ಮೇಲಿನ ಅವಲಂಬನೆಯು ಕಡಿಮೆಯಾಗುವತ್ತ ಅಂದರೆ ಡಿಡಾಲರೈಸೇಶನ್‌ಗೆ ಕಾರಣವಾಗುತ್ತದೆ ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ವಿಶ್ಲೇಷಿಸಿದ್ದಾರೆ.
ಆದಾಗ್ಯೂ, ಹಳದಿ ಲೋಹದ ದರವು ಮೂರು ಪಟ್ಟು ಹೆಚ್ಚಾಗಲು, ಸುಮಾರು 19 ವರ್ಷಗಳವರೆಗೆ ಸಮಯ ಹಿಡಿದ ಉದಾಹರಣೆಯೂ ಇದೆ. ಯಾವುದೇ ಅವಧಿಯನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂಬುದನ್ನು ಇದು ಸೂಚಿಸುತ್ತೆ. ” ಯಾವುದೇ ಇತರ ಆಸ್ತಿಯಂತೆ, ಚಿನ್ನವು ಕರಡಿ ಮತ್ತು ಗೂಳಿ ಷೇರು ಮಾರುಕಟ್ಟೆಗಳಿಗೆ ಒಳಪಟ್ಟಿರುತ್ತದೆ. ಹೀಗಾಗಿ ಬರುವ ಆದಾಯವು ಹೆಚ್ಚು ಕಡಿಮೆ ಆಗಿರುತ್ತದೆ. ಆದಾಗ್ಯೂ, ಚಿನ್ನಕ್ಕೆ ಉತ್ತಮ ಪರ್ಯಾಯವಿಲ್ಲದಿದ್ದರೆ, ಇದರ ದರವು ಏರಿಕೆಯಾಗುವುದು ಮುಂದುವರಿಯುತ್ತದೆ. ಗ್ರಾಹಕರು ಮತ್ತು ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆಯಿದೆ, ಅವರ ಆದಾಯ ನಿರೀಕ್ಷೆಗಳನ್ನು ಪೂರೈಸಲು ಆಶಾದಾಯಕವಾಗಿ ಏರುತ್ತಿದೆ” ಎಂದು ನಿಪ್ಪಾನ್ ಇಂಡಿಯಾ ಮ್ಯೂಚುಯಲ್ ಫಂಡ್‌ನ ಫಂಡ್ ಮ್ಯಾನೇಜರ್ ಮತ್ತು ಹೆಡ್ – ಕಮೋಡಿಟೀಸ್ ವಿಕ್ರಮ್ ಧವನ್ ಹೇಳುತ್ತಾರೆ.
ಆಭರಣದಿಂದ ಬುಲಿಯನ್‌ಗೆ ಬದಲಾವಣೆ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತಾ? :
ಚಿನ್ನದ ಪೂರೈಕೆಯು ಸ್ಥಿರವಾಗಿದೆ ಮತ್ತು ಬೇಡಿಕೆಯ ಯಾವುದೇ ಏರಿಕೆಯು ಕಡಿಮೆ ಅವಧಿಯಲ್ಲಿ ಬೆಲೆಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. “ಚಿನ್ನದ ಒಟ್ಟು ಪೂರೈಕೆಯು ಸೀಮಿತವಾಗಿದೆ. ಇದು ಲೋಹವನ್ನು ಅಮೂಲ್ಯವಾದ ಆಸ್ತಿ ಎಂದು ಪರಿಗಣಿಸಲು ಒಂದು ಕಾರಣವಾಗಿದೆ. ಚಿನ್ನದ ಪೂರೈಕೆಯು ಎರಡು ಮುಖ್ಯ ಮೂಲಗಳಿಂದ ಬರುತ್ತದೆ. ಒಂದು ಗಣಿಗಾರಿಕೆ ಮತ್ತೊಂದು ಚಿನ್ನದ ಮರುಬಳಕೆ. ಪ್ರತಿ ವರ್ಷ ಗಣಿಗಾರಿಕೆ ಮಾಡುವ ಹೊಸ ಚಿನ್ನದ ಪ್ರಮಾಣವು ತುಲನಾತ್ಮಕವಾಗಿ ಸ್ಥಿರವಾಗಿರುತ್ತದೆ. ಉಳಿದವು ಚಿನ್ನದ ಚೂರು ಅಥವಾ ತುಣುಕುಗಳ ಮರುಬಳಕೆ ಮಾಡುವ ಮೂಲಕ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಪೂರೈಸಲಾಗುತ್ತದೆ. ಹಣದುಬ್ಬರವೂ ಕೂಡ ಚಿನ್ನದ ದರದ ಬೆಲೆ ಏರಿಕೆ, ಇಳಿಕೆ ಮೇಲೆ ನೇರ ಸಂಬಂಧ ಹೊಂದಿದೆ. ಹಣದುಬ್ಬರ ಏರಿದಂತೆಲ್ಲಾ ಚಿನ್ನದ ದರವೂ ಏರಿಕೆಯಾಗುತ್ತದೆ” ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ಕಮಾಡಿಟಿ ಮುಖ್ಯಸ್ಥರಾದ ವಿ.ಹರೀಶ್ ಹೇಳುತ್ತಾರೆ.
ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳಿಂದ ಚಿನ್ನಕ್ಕೆ ಹೆಚ್ಚುತ್ತಿರುವ ಬೇಡಿಕೆಯು ಮುಂದುವರಿಯುವ ಸಾಧ್ಯತೆಯಿದೆ. ಇದರಿಂದಾಗಿ ಹಳದಿ ಲೋಹದ ಬೆಲೆಗಳನ್ನು ಹೆಚ್ಚಿಸಬಹುದು. ” ರಷ್ಯಾ, ಚೀನಾ, ಭಾರತ, ಇತ್ಯಾದಿ ರಾಷ್ಟ್ರಗಳಲ್ಲಿನ ದೊಡ್ಡ ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಚಿನ್ನದ ಹಿಡುವಳಿಗಳನ್ನು ಗಣನೀಯವಾಗಿ ಹೆಚ್ಚಿಸುತ್ತಿರುವುದರಿಂದ ದೊಡ್ಡ ಪ್ರಮಾಣದ ಖರೀದಿ ನಡೆದಿದೆ. ಚಿನ್ನದ ಪೂರೈಕೆಯು ಸೀಮಿತವಾಗಿರುವುದರಿಂದ, ಸಾರ್ವಭೌಮ ಖಜಾನೆ ಹಿಡುವಳಿಗಳಲ್ಲಿನ ಈ ಹೆಚ್ಚಳವು ಒತ್ತಡವನ್ನು ಉಂಟುಮಾಡುತ್ತದೆ. ಚಿನ್ನದ ಪೂರೈಕೆಯ ಮೇಲೆ ಮತ್ತು ಇದರ ಬೆಲೆಗಳನ್ನು ಬೆಂಬಲಿಸುತ್ತದೆ. ಭೌಗೋಳಿಕ ರಾಜಕೀಯ ಘರ್ಷಣೆಗಳ ಅಪಾಯವು ಸಾಮಾನ್ಯ ಸ್ಥಿತಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಸದ್ಯದಲ್ಲಿಯೇ ಚಿನ್ನದ ಪೂರೈಕೆ ಬದಿಯ ಒತ್ತಡವು ಕಡಿಮೆಯಾಗುವುದಿಲ್ಲ. ಬದಲಿಗೆ ಹೆಚ್ಚಾಗುತ್ತದೆ ”ಎಂದು ಫಿನ್ ಎಡ್ಜ್ ಸಿಇಒ ಮತ್ತು ಸಹ ಸಂಸ್ಥಾಪಕ ಹರ್ಷ ಗಹ್ಲೌಟ್ ಹೇಳುತ್ತಾರೆ.
ಸಾಂಪ್ರದಾಯಿಕವಾಗಿ ಚಿನ್ನದ ಆಭರಣವು ಹಳದಿ ಲೋಹದ ಬೇಡಿಕೆ ಹೆಚ್ಚಾಗುವಲ್ಲಿ ಪ್ರಮುಖ ಅಂಶವಾಗಿದೆ. ಆದರೆ ಚಿನ್ನದ ಆಭರಣಗಳು ಭವಿಷ್ಯದಲ್ಲಿ ಇನ್ನು ಮುಂದೆ ಬೇಡಿಕೆಗೆ ಕಾರಣವಾಗುವುದಿಲ್ಲ. ಆದರೆ ಅಪರಂಜಿ ಚಿನ್ನಕ್ಕೆ ಹೆಚ್ಚಿ ಬೇಡಿಕೆ ಬರುವ ನಿರೀಕ್ಷೆಯಿದೆ. “ಭಾರತದಂತಹ ದೇಶದಲ್ಲಿ, ಚಿನ್ನವು ತನ್ನ ಕಕ್ಷೆಯನ್ನು ಬಳಕೆಯ ವಸ್ತುವಿನಿಂದ ಹೂಡಿಕೆಯ ವಸ್ತುವಾಗಿ ಹೆಚ್ಚು ವೇಗದಲ್ಲಿ ಪರಿವರ್ತಿಸುವುದನ್ನು ನಾನು ನೋಡುತ್ತೇನೆ. ಆದ್ದರಿಂದ, ಚಿನ್ನದ ಆರ್ಥಿಕರಣದಿಂದಾಗಿ ಅಪರಂಜಿ ಚಿನ್ನ (ಬುಲಿಯನ್) ದ ಸುಧಾರಿತ ಮಾರಾಟ ಹೆಚ್ಚಾಗಿ ಆಭರಣಗಳ ಮಾರಾಟ ಕುಸಿಯುತ್ತದೆ”ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ವಿವರಿಸುತ್ತಾರೆ.
ಹಾಗಾದರೆ ಹೂಡಿಕೆದಾರರು ಏನು ಮಾಡಬೇಕು? :
ಚಿನ್ನದ ಬೆಲೆ ಎಷ್ಟು ವೇಗವಾಗಿ ಮೂರು ಪಟ್ಟು ಹೆಚ್ಚಾಗುತ್ತದೆ ಎಂಬುದಕ್ಕೆ ನಿಮ್ಮ ಹೂಡಿಕೆಯನ್ನು ನೀವು ಲಿಂಕ್ ಮಾಡಬೇಕೇ? ” ಚಿನ್ನದ ಬೆಲೆಗಳ ಪಥ ನಿರ್ಧಾರವಾಗುವುದು, ಆರ್ಥಿಕ ಸೂಚಕಗಳು, ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಮಾರುಕಟ್ಟೆಯ ಭಾವನೆಗಳ ಸಂಯೋಜನೆಯಿಂದ ರೂಪಿತವಾಗುತ್ತದೆ. ನಿಖರವಾದ ಬೆಲೆ ಚಲನೆಯನ್ನು ಊಹಿಸುವುದು ಸವಾಲಿನದ್ದಾಗಿದ್ದರೂ, ಭವಿಷ್ಯದಲ್ಲಿ ಚಿನ್ನವು ಸುರಕ್ಷಿತ ಆಸ್ತಿಯಾಗುವ ಅದರ ಮೂಲಭೂತ ಪಾತ್ರದಿಂದಾಗಿ, ನಿರಂತರ ಬೆಳವಣಿಗೆಯ ಸಾಮರ್ಥ್ಯವನ್ನು ಸೂಚಿಸುತ್ತದೆ” ಎಲ್ ಕೆಪಿ ಸೆಕ್ಯುರಿಟೀಸ್‌ನ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿ ವೇದಿ ಹೇಳುತ್ತಾರೆ.
ನಿಮ್ಮ ಹೂಡಿಕೆ ವೈವಿಧ್ಯಗೊಳಿಸಲು ಚಿನ್ನವು ಉತ್ತಮ ಆಸ್ತಿ ವರ್ಗವಾಗಿದೆ. “ಹೂಡಿಕೆಗಳನ್ನು ವೈವಿಧ್ಯಗೊಳಿಸುವುದು ಮತ್ತು ಚಿನ್ನ ಸೇರಿದಂತೆ ವಿವಿಧ ಸ್ವತ್ತುಗಳನ್ನು ಪರಿಗಣಿಸುವುದು ಹಣದುಬ್ಬರಕ್ಕೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಹಣದುಬ್ಬರ ಇಳಿತದ ಹಂತಗಳಲ್ಲಿ, ಹೆಚ್ಚಿನ ಆಸ್ತಿ ವರ್ಗಗಳಿಗೆ ಹೋಲಿಸಿದರೆ ಚಿನ್ನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ವಿಕ್ರಮ್ ಧವನ್ ಹೇಳುತ್ತಾರೆ.
ನಿಮ್ಮ ಚಿನ್ನದ ಹೂಡಿಕೆಯನ್ನು ಅದರ ಮೂರು ಪಟ್ಟು ಸಾಮರ್ಥ್ಯದ ಮೇಲೆ ಮಾತ್ರ ನೀವು ಬಾಜಿ ಕಟ್ಟಬೇಕೆ? “ಚಿನ್ನವು ಪ್ರಸ್ತುತ ಮಟ್ಟದಿಂದ ಮೂರು ಪಟ್ಟು ಹೆಚ್ಚಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಊಹಿಸಲು ಅಸಾಧ್ಯವಾದರೂ, ಒಂದು ಆಸ್ತಿ ವರ್ಗವಾಗಿ, ಚಿನ್ನವು ಹಣದುಬ್ಬರ, ಚಂಚಲತೆ, ಭೌಗೋಳಿಕ ಮತ್ತು ಕರೆನ್ಸಿ ಅಪಾಯಗಳ ವಿರುದ್ಧ ಉತ್ತಮ ರಕ್ಷಕನಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆಯು, ವ್ಯಕ್ತಿಯ ಪೋರ್ಟ್‌ಫೋಲಿಯೊದಲ್ಲಿ ಆಸ್ತಿ ಹಂಚಿಕೆಯ ಪ್ರಮುಖ ಭಾಗವಾಗಿ ಉಳಿಯುತ್ತದೆ” ಎಂದು ಗಹ್ಲೋಟ್ ಹೇಳುತ್ತಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.