ನವದೆಹಲಿ, ಮಾ.18 www.bengaluruwire.com : ದೇಶದಲ್ಲಿ ಸೀಮೆಎಣ್ಣೆ ಬಳಕೆ ಪ್ರಮಾಣವು 2013-14ನೇ ಇಸವಿಯಿಂದ 2022-23 ನಡುವೆ ಶೇ 26ರಷ್ಟು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO – ಎನ್‌ಎಸ್‌ಒ) ವಿವರಿಸಿದೆ.
ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಗೆ ಒತ್ತು ನೀಡಿದೆ. ಹೀಗಾಗಿ, ಈ 10 ವರ್ಷಗಳ ಅವಧಿಯಲ್ಲಿ ಸೀಮೆಎಣ್ಣೆ ಬಳಕೆ ಕುರಿತಾದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್) ಇಳಿಕೆಯಾಗಿದೆ ಎಂದು ಎನ್‌ಎಸ್‌ಒ ಇತ್ತೀಚೆಗೆ ಪ್ರಕಟಿಸಿರುವ ‘ಭಾರತದ ಇಂಧನದ ಅಂಕಿ-ಅಂಶ 2024’ ವರದಿಯಲ್ಲಿ ತಿಳಿಸಿದೆ.
2022-23ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಹೈ ಸ್ಪೀಡ್ ಡೀಸೆಲ್ ಆಯಿಲ್ (ಎಚ್ ಎಸ್ ಡಿಒ -ಡೀಸೆಲ್) ಬಳಕೆ ಪ್ರಮಾಣ ಹೆಚ್ಚಿದೆ (ಶೇ 38.52). 2021- 22ನೇ ಸಾಲಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಶೇ 12.05ರಷ್ಟು ಏರಿಕೆ ಆಗಿದೆ. ಪೆಟ್ರೋಲ್ ಬಳಕೆಯು ಶೇ 13.38 ರಷ್ಟು ಇದ್ದರೆ, ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುವ ಪೆಟ್ರೋಲಿಯಂ ಕೋಕ್ ಬಳಕೆಯು ಶೇ 28.68ರಷ್ಟಿದೆ. ಹೈ ಸ್ಪೀಡ್ ಡೀಸೆಲ್ (ಎಚ್‌ಎಸ್‌ಡಿ-ಡೀಸೆಲ್) ಬಳಕೆಯು ಶೇ12.05ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.