ಬೆಂಗಳೂರು, ಜ.12 www.bengaluruwire.com : ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಗರದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ “ಶ್ರೀರಾಮ ಪ್ರತಿಷ್ಠಾಪನಾ ಸಂಭ್ರಮ” ವನ್ನು ಆಯೋಜಿಸಿದೆ.
ವಿದ್ಯಾಪೀಠದಲ್ಲಿ ಜ.22ರಂದು ಬೆಳಗ್ಗೆ 8ದ ರಾತ್ರಿ 10 ಗಂಟೆಯವರೆಗೆ ನಿರಂತರ ಜ್ಞಾನಯಜ್ಞ, ಭಜನೆ, ನೃತ್ಯ, ಜಪ, ರಾಮ ತಾರಕ ಹೋಮ, ಸಂಕೀರ್ತನೆ, ಪಾರಾಯಣ, ಅನ್ನದಾನ, ರಾಮಾಯಣ ಕಥೆಯ ಗೊಂಬೆ ಪ್ರದರ್ಶನ, ರಸಪ್ರಶ್ನೆ, ರಾಮಾಯಣ ದರ್ಶಿನೀ ನಡೆಯಲಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ವಿಶ್ವಸ್ತರಲ್ಲಿ ಒಬ್ಬರಾದ, ವಿದ್ಯಾಪೀಠದ ಕುಲಪತಿಗಳು ಹಾಗೂ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆದೇಶದಂತೆ “ಶ್ರೀರಾಮ ಪ್ರತಿಷ್ಠಾ ಸಂಭ್ರಮ” ವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ :
ಬೆಳಗ್ಗೆ 8 ರಿಂದ 9 ಗಂಟೆಯ ತನಕ ರಾಮಾಯಣದ ಮೆರವಣಿಗೆ ಸಮಗ್ರ ರಾಮಾಯಣ ಪಾರಾಯಣ (ಗುರುಗಳ ವೃಂದಾವನದ ಮುಂದೆ), ಆನಂತರ ದೇವಸ್ಥಾನದಲ್ಲಿ 8.30ರಿಂದ 12.30ವರೆಗೆ ಜೀವನ ಯೋಗ ಸಂಸ್ಥೆಯ ಸಹಕಾರದೊಂದಿಗೆ ಶ್ರೀರಾಮ ತಾರಕ ಹೋಮ ನಡೆಯಲಿದೆ. ಪರ್ಯಾಯವಾಗಿ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಮೈಸೂರು ರಾಮಚಂದ್ರ ಆಚಾರ್ಯರಿಂದ ಹರಿನಾಮ ಸಂಕೀರ್ತನೆ, 11 ರಿಂದ 11.30 ತನಕ ರೋಹಿತ್ ಚಕ್ರತೀರ್ಥ ಅವರಿಂದ ರಾಮಾಯಣದಲ್ಲಿ ಗಾದೆ ನುಡಿಗಟ್ಟುಗಳು ಕಾರ್ಯಕ್ರಮ, 11.30 ರಿಂದ 11.50 ಭಜನೆ, 11.50 ರಿಂದ 12.00 ಶ್ರೀರಾಮ ಜಪ ರಸಪ್ರಶ್ನೆ, 12 ರಿಂದ 1 ರ ತನಕ ಅಯೋಧ್ಯೆಯಲ್ಲಿನ ಶ್ರೀ ರಾಮನ ಪ್ರತಿಷ್ಠೆ ನೇರಪ್ರಸಾರ, ರಾಮಮಂತ್ರ ಜಪ.
ಬಳಿಕ ಮಧ್ಯಾಹ್ನ 1 ರಿಂದ 1.30 ತನಕ ಶ್ರೀವೃಷಾಂಕ ಭಟ್ ಅವರಮದ ರಾಮಾಯಣದ ಪ್ರಸ್ತುತತೆ ಬಗ್ಗೆ ಭಾಷಣ, 1 ರಿಂದ 2.30ರ ವರೆಗೆ ರಾಮಗೀತೆಗಳ ಸಹಸ್ರ ಕಂಠಗಾನ, 2.30 ರಿಂದ 3ರ ತನಕ ಡಾ.ಜಿ.ಬಿ ಹರೀಶ್ ಅವರಿಂದ ಪುರಾತತ್ವ ಹಾಗೂ ಅಯೋಧ್ಯೆ ಕುರಿತು ಭಾಷಣ, 3 ರಿಂದ ಸಂಜೆ 4.30 ರ ತನಕ ರಾಮಕಥಾ ನೃತ್ಯಾಂಜಲಿ ಕಾರ್ಯಕ್ರಮ ಸೇರಿದಂತೆ ಶ್ರೀ ರಾಮನ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೃದ್ಯವಿದ್ಯಾವಿಲಾಸ ವೇದಿಕೆಯಲ್ಲಿ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳಿಗೆ ಅವಕಾಶವಿರುತ್ತದೆ. ಪೂರ್ವಾನುಮತಿ ಪಡೆದು ತಮ್ಮ ಕಲಾಸೇವೆಯನ್ನು ಶ್ರೀರಾಮನಿಗೆ ಅರ್ಪಿಸ ಬಹುದು. ರಾಮಾಯಣ, ಸುಂದರಕಾಂಡ ಪಾರಾಯಣಕ್ಕು ಅವಕಾಶವಿದೆ. ಆಸಕ್ತರು ಭಾಗವಹಿಸಬಹುದು ಎಂದು ವಿದ್ಯಾಪೀಠ ಪ್ರಕಟಣೆಯಲ್ಲಿ ತಿಳಿಸಿದೆ.