ಬೆಂಗಳೂರು, ನ.29 www.bengaluruwire.com : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಮ್ಮ ಇಲಾಖೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಸುಧಾರಣೆಗಳ ವರದಿಯನ್ನು ಬುಧವಾರ ವಿಕಾಸಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜನತೆಯ ಮುಂದಿರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಪೂರೈಸಿದೆ. ನಾನು ಆರೋಗ್ಯ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ಬಳಿಕ ಈ ಆರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ತುರ್ತಾಗಿ ಆಗಬೇಕಾದ ಆರೋಗ್ಯ ಸೇವೆಗಳನ್ನ, ಸುಧಾರಣೆಯತ್ತ ತರುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿದ್ದೇನೆ.”
“ಅಂಬ್ಯುಲೆನ್ಸ್ ಮತ್ತು ಡಯಾಲಿಸಿಸ್, ಈ ಎರಡು ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಾನು ಹಳೆಯದನ್ನ ಕೆದಕಲು ಹೋಗುವುದಿಲ್ಲ. ಸಕಾರಾತ್ಮಕ ಚಿಂತನೆಯೊಂದಿಗೆ ಇರುವ ಸಮಸ್ಯೆಗಳನ್ನ ಸರಿಪಡಿಸುವತ್ತ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 108 ಆರೋಗ್ಯ ಕವಚ ಸೇವೆಯಲ್ಲಿನ ಆಂಬ್ಯುಲೆನ್ಸ್ ಗಳಿಗೆ ಹೆಚ್ಚುವರಿಯಾಗಿ 262 ಹೊಸ ಆಂಬ್ಯುಲೆನ್ಸ್ ಗಳನ್ನು ಸೇರ್ಪಡೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 715 ಆಂಬ್ಯುಲೆನ್ಸ್ ಸೇವೆಗೆ ಲಭ್ಯವಾಗುತ್ತದೆ” ಎಂದು ಸಚಿವರು ಹೇಳಿದರು.
108 ಅಂಬ್ಯುಲೆನ್ಸ್ ಆರೋಗ್ಯ ಸೇವೆ 262 ಹೊಸ ಆಂಬ್ಯುಲೆನ್ಸ್ :
* 108 ಅಂಬ್ಯುಲೆನ್ಸ್ ಆರೋಗ್ಯ ಸೇವೆಗೆ 262 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ.
* ಒಟ್ಟು 82,02,88,120 (82.02) ಕೋಟಿ ರೂ. ವೆಚ್ಚದ ಯೋಜನೆ.
* 157 BLS – ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು.
* 105 ALS – ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳು.
* ALS ಅಂಬ್ಯುಲೆನ್ಸ ಗಳು, ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ ಹೊಂದಿವೆ.
* ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿತಿಗಳಲ್ಲಿ ಇವು ಸಹಕಾರಿ.
* ಪ್ರತಿ ಆಂಬ್ಯುಲೆನ್ಸ್‌ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ (EMT – ಶುಶ್ರೂಷಾ ಸಿಬ್ಬಂದಿ) ಮತ್ತು ಒಬ್ಬ ಪೈಲಟ್ (ಚಾಲಕ) ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.
* ಮುಂಬರುವ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆಂಬ್ಯುಲೆನ್ಸ್‌ಗಳನ್ನು ಹೆಚ್ಚಿಸಲಾಗುವುದು.
*108 ಆಂಬ್ಯುಲೆನ್ಸ್ ಸೇವೆಗಳಿಗೆ ಹೊಸ ಸೇವಾದಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ.
* ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಮಾದರಿಗಳ ಅಧ್ಯಯನಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ.
* ತಾಂತ್ರಿಕ ಸಮಿತಿಯ ಸಲಹೆ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದ ತಂಡಗಳು ಸಲ್ಲಿಸಿದ ವರದಿಯನ್ನು ಆಧರಿಸಿ, ಸಾರ್ವಜನಿಕರಿಗೆ ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತುರ್ತು ಆರೋಗ್ಯ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಕೆ :
* 173 ಡಯಾಲಿಸಿಸ್ ಕೇಂದ್ರಗಳು 219 ಕ್ಕೆ ಏರಿಕೆ.
* 46 ತಾಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ
* ರಾಜ್ಯಾದ್ಯಂತ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಗೆ ಕ್ರಮ.
* ಒಟ್ಟು 800 ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸಲಾಗುತ್ತಿದೆ.
* ಈಗಾಗಲೇ ನಾಲ್ಕು ವಿಭಾಗವಾರು ಟೆಂಡರ್ ಪ್ರಕ್ರೀಯೆಯನ್ನ ಬಹುತೇಕ ಪೂರ್ಣಗೊಳಿಸಲಾಗಿದೆ.
* ಬೆಂಗಳೂರು ವಿಭಾಗ – 250
* ಮೈಸೂರು ವಿಭಾಗ – 225
* ಬೆಳಗಾವಿ ವಿಭಾಗ – 201
* ಕಲಬುರಗಿ ವಿಭಾಗ – 125.
* ಪಿಪಿಪಿ ಮಾಡೆಲ್ ನಲ್ಲಿ ಈ ಯಂತ್ರಗಳ ಅಳವಡಿಸಲಾಗುತ್ತಿದೆ.
* ಒಂದು ಡಯಾಲಿಸಿಸ್ ಸರ್ವೀಸ್ ಗೆ
* ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ಏಕ ಬಳಕೆಯ ಡಯಾಸಿಸ್ ಯಂತ್ರಗಳ ಸೇವೆ ಲಭ್ಯವಾಗಲಿದೆ.
ಸಿ.ಟಿ ಸ್ಕ್ಯಾನ್ ಮತ್ತು ಎಂ.ಆರ್.ಐ ಸೇವೆಗಳು :
* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಿ.ಟಿ ಸ್ಯ್ಕಾನ್ ಮತ್ತು ಎಂ.ಆರ್.ಐ ಸ್ಕ್ಯಾನಿಂಗ್ ಆರೋಗ್ಯ ಸೇವೆ ವಿಸ್ತರಣೆ.
* ಹೊಸದಾಗಿ 5 ಸಿ.ಟಿ ಮತ್ತು 15 ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರಗಳನ್ನ ಒದಗಿಸಲು ಕ್ರಮ.
* ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೇಯಲ್ಲಿದೆ.
* 6 ತಿಂಗಳಲ್ಲಿ ಒಟ್ಟು 1,58,969 ಸಿ.ಟಿ ಸ್ಕ್ಯಾನ್ ಹಾಗೂ 53,659 ಎಂ ಆರ್ ಐ ಸ್ಕ್ಯಾನ್ ಸೇವೆಗಳನ್ನು ಒದಗಿಸಲಾಗಿದೆ.
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ :
* ಹಠಾತ್ ಹೃದಯಾಘಾತಗಳನ್ನ ತಡೆಯಲು STEMI – ST Elevated Myocardial Infraction ಕಾರ್ಯಕ್ರಮ.
* 31 ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ HUB and Spoke ಮಾದರಿಯ ತುರ್ತು ಚಿಕಿತ್ಸಾ ವ್ಯವಸ್ಥೆ.
* ಎದೆನೋವು ಕಾಣಿಸಿಕೊಂಡವರಿಗೆ ತಾಲೂಕು ಮಟ್ಟದ ಆಸ್ಪತ್ರೆಯಲ್ಲೇ AI ತಂತ್ರಜ್ಞಾನದ ಮೂಲಕ ತಪಾಸಣೆ.
* ಹಠಾತ್ ಹೃದಘಾತದ ಮೂನ್ಸೂಚನೆ ಇರುವವರಿಗೆ ತಾಲೂಕು ಆಸ್ಪತ್ರೆಗಳ Spoke ಕೇಂದ್ರಗಳಲ್ಲೇ ಉಚಿತ Tenecteplase ಇಂಜೆಕ್ಷನ್.
* 35 ರಿಂದ 45 ಸಾವಿರ ಬೆಲೆ ಬಾಳುವ Tenecteplase ಇಂಜೆಕ್ಷನ್ ಉಚಿತ.
* ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 10 ಹುಬ್ ಸೆಂಟರ್ ಗಳಲ್ಲಿ ಉನ್ನತ ಮಟ್ಟದ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
* ಜಯದೇವ ಸಹಯೋಗದೊಂದಿಗೆ ಈಗಾಗಲೇ 45 Spoke ಸೆಂಟರ್ ರೂಪಿಸಲಾಗಿದ್ದು, 7 ಹುಬ್ ಹಾಗೂ 40 spoke ಸೆಂಟರ್ ನಿರ್ಮಾಣ ಪ್ರಗತಿಯಲ್ಲಿದೆ.
* ಸಾರ್ವಜನಿಕ ಸ್ಥಳಗಳಲ್ಲಿ 50 AED – Defibrilator ಗಳ ಅಳವಡಿಕೆಗೆ ಕ್ರಮ.
* Defibrilator ಖರೀದಿಗೆ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗಿದೆ.
* ಎನ್.ಸಿ.ಡಿ ರೋಗಗಳ ತಪಾಸಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ 2 ನೇ ಸ್ಥಾನಗಳಿಸಿದೆ. (CPHC – NCD APP)
* 6 ತಿಂಗಳಲ್ಲಿ ಒಟ್ಟು 12,29,712 ತಪಾಸಣೆ ಮಾಡಲಾಗಿದೆ.
2025 ರೊಳಗೆ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಗುರಿ :
* ಕರ್ನಾಟಕದಲ್ಲಿ ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ 185.74 ಕೋಟಿ ಅನುದಾನವನ್ನು ಅನುಮೋದಿಸಲಾಗಿದೆ.
* ಯೋಜನೆಯಡಿ ಶಾಲಾ ಕಾಲೇಜು ಮಕ್ಕಳ ರಕ್ತ ಹೀನತೆ ತಪಾಸಣೆ ಹಾಗೂ ಉಚಿತ ಔಷಧಿ ಒದಗಿಸಲಾಗುವುದು.
*ಶುಚಿ ಯೋಜನೆಯಡಿ ನ್ಯಾಪ್ಕಿನ್ ವಿತರಣಾ ಯೋಜನೆಗೆ ಮರು ಚಾಲನೆ
* ನಾಲ್ಕು ವರ್ಷಗಳ ಬಳಿಕ ಶುಚಿ ಯೋಜನೆಗೆ ಮರು ಚಾಲನೆ.
* ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಒದಗಿಸಲು ಕ್ರಮ.
* ಈ ನಿಟ್ಟಿನಲ್ಲಿ ವಿಭಾಗೀಯವಾರು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದ್ದು, ಕಾರ್ಯಾದೇಶವನ್ನು ನೀಡಲಾಗುತ್ತಿದೆ.
* 40.50 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ.
* ಸರ್ಕಾರಿ ಮತ್ತು ಅನುದಾನಿತ ಶಾಲಾ ಹೆಣ್ಣು ಮಕ್ಕಳಿಗೆ ವಿತರಣೆ.
* ದಕ್ಷಿಣ ಕನ್ನಡ, ಚಾಮರಾಜ ನಗರ ಜಿಲ್ಲೆಗಳಲ್ಲಿ ನನ್ನ ಮೈತ್ರಿ ಕಪ್ ಯೋಜನೆ ಪ್ರಾಯೋಗಿಕವಾಗಿ ಜಾರಿ.
* 15 ಸಾವಿರ ಹೆಣ್ಣು ಮಕ್ಕಳಿಗೆ ಮೆನ್ಶುಯಲ್ ಕಪ್ ಗಳನ್ನ ವಿತರಿಸಲಾಗಿದೆ.
ಅಂಧತ್ವ ನಿವಾರಣೆಗೆ ಆಶಾ ಕಿರಣ ಯೋಜನೆ :
* ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಜಾರಿ.
ಅಂಧತ್ವ ಪ್ರಮಾಣ ದರವನ್ನು 0.25% ಇಳಿಸುವ ಉದ್ದೇಶ.
* ಸಮಗ್ರ ಕಣ್ಣಿನ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ.
* ಚಿಕ್ಕಬಳ್ಳಾಪುರ, ಚಾಮರಾಜನಗರ, ಕಲಬುರ್ಗಿ, ಹಾವೇರಿ ನಾಲ್ಕು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ತಪಾಸಣಾ ಕಾರ್ಯ ಪೂರ್ಣ.
* ನಾಲ್ಕು ಜಿಲ್ಲೆಗಳ 24 ತಾಲೂಕುಗಳಲ್ಲಿ ಒಟ್ಟು 67 ಲಕ್ಷ 76 ಸಾವಿರ ಜನರಿಗೆ ಪ್ರಾಥಮಿಕ ಕಣ್ಣಿನ ತಪಾಸಣೆ ನಡೆಸಲಾಗಿದೆ.
* 11 ಲಕ್ಷ ಜನರಿಗೆ ಸೆಕೆಂಡರ್ ಸ್ಕ್ಯಾನಿಂಗ್ ಪೂರ್ಣಗೊಳಿಸಲಾಗಿದೆ.
* 1 ಲಕ್ಷದ 31 ಸಾವಿರ ಜನರಿಗೆ ಕನ್ನಡಕ ನೀಡುವ ಕಾರ್ಯ ಪ್ರಗತಿಯಲ್ಲಿದೆ.
* 21452 ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಅಂಗಾಂಗ ದಾನ ಹೆಚ್ಚಳಕ್ಕೆ ಅಂಗಾಂಗ ದಾನ ಪ್ರತಿಜ್ಞೆ ಕಾರ್ಯಕ್ರಮ :
* ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗ್ತಿದೆ.
* ಭಾರತೀಯ ಅಂಗಾಂಗ ದಾನ ದಿನವನ್ನು ಅಗಸ್ಟ್ 03 ರಂದು ಆಚರಿಸಲಾಯಿತು.
* NOTTO ಅಡಿಯಲ್ಲಿ Organ pledge ನಡೆಯುತ್ತಿದ್ದು, ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ.
* ಆರೋಗ್ಯ ಸಚಿವನಾಗಿ ನಾನು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಲು ನಿರ್ಧರಿಸಿದ್ದೇವೆ.
* ಇಲ್ಲಿಯವರೆಗೆ ಒಟ್ಟು 9742 ಅಂಗಾಂಗ ದಾನ ಪ್ರತಿಜ್ಞೆ (Organ pledge) ಆಗಿದೆ.
* ಅಂಗಾಂಗ ದಾನದ ದರದಲ್ಲಿ ಕರ್ನಾಟಕವು ಭಾರತ ಹಾಗೂ ದಕ್ಷಿಣ ವಲಯದಲ್ಲಿ ಮೂರನೇ ಸ್ಥಾನದಲ್ಲಿದೆ.
* 6 ತಿಂಗಳಲ್ಲಿ 89 ಅಂಗ ದಾನಿಗಳಂದ, 240 ಜನರಿಗೆ ಅಂಗಾಂಗಗಳು, 10 ಜನರಿಗೆ ಬಹು ಅಂಗಾಂಗಗಳು ಹಾಗೂ 195 ಜನರಿಗೆ ಅಂಗಾಂಶಗಳನ್ನ ದಾನ ಮಾಡಿ ಸಹಾಯ ಮಾಡಿದ್ದಾರೆ.
* 162 ಕಿಡ್ನಿಗಳನ್ನು ಹಾಗೂ ಅಂಗಾಂಗ ಭಾಗಗಳಾದ 27 ಲಿವರ್ ಗಳನ್ನು ದಾನ ಪಡೆಯಲಾಗಿದೆ.
ಬ್ರೇನ್ ಹೆಲ್ತ್ ಇನಿಶೇಟಿವ್ :
* ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ ನಿಮ್ಹಾನ್ಸ್ ಸಹಯೋಗದೊಂದಿಗೆ ಜಯನಗರ ಜನರಲ್ ಆಸ್ಪತ್ರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ.
* ಉತ್ತಮ ಫಲಿತಾಂಶವನ್ನು ಗಮನಿಸಿ ರಾಜ್ಯದ 31 ಜಿಲ್ಲೆಗಳು ಮತ್ತು 01 ಬಿಬಿಎಮ್‌ಪಿಯಲ್ಲಿ Brain Health ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
*ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮ ಅನುಷ್ಠಾನ
* ದಡಾರ್, ರುಬೆಲ್ಲಾ ತಡೆಗೆ MR 1, MR 2 ಲಸಿಕೆ ಕಾರ್ಯಕ್ರಮ
* ಗರ್ಭೀಣಿ ಸ್ತ್ರೀಯರು ಹಾಗೂ 5 ವರ್ಷದ ಒಳಗಿನ ಮಕ್ಕಳಿಗೆ ಮೂರು ಸುತ್ತಿನಲ್ಲಿ ಲಸಿಕಾ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ.
ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮ :
* ಅಕ್ಟೋಬರ್ 2023 ರವರೆಗೆ 220 ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಲಾಗಿದೆ.
* 500 ಕಾಕ್ಲಿಯರ್ ಇಂಪ್ಲಾಟ್ ಖರೀದಿ ಮಾಡಲಾಗಿರುತ್ತದೆ.
* ಒಟ್ಟು 16761 ನವ ಜಾತ ಶಿಶುಗಳಿಗೆ ಶ್ರವಣ ತಪಾಸಣೆ ಮಾಡಲಾಗಿದೆ.
* ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 516 RBSK ಫಲಾನುಭವಿಗಳಿಗೆ ಸೀಳು ತುಟಿ ಮತ್ತು ಅಂಗುಳಿನ Craniofacial Surgeries ಸೇವೆ ಒದಗಿಸಲಾಗಿದೆ.
* 262 RBSK ಫಲಾನುಭವಿಗಳಿಗೆ ಸೊಟ್ಟ ಪಾದ ಶಸ್ತ್ರ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗಿರುತ್ತದೆ.
* ಗ್ರಾಮ ಪಂಚಾಯಿತ್ ಅಮೃತ್ ಆರೋಗ್ಯ ಅಭಿಯಾನದಡಿಯಲ್ಲಿ 14 ಜಿಲ್ಲೆಗಳಲ್ಲಿ 2816 ಗ್ರಾಮಪಂಚಾಯಿತಿಗಳಲ್ಲಿ ಎನ್.ಸಿ.ಡಿ ರೋಗಗಳ ತಪಾಸಣೆ ಪರೀಕ್ಷೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಕರ್ನಾಟಕ :
* ಆರೋಗ್ಯ ಕ್ಷೇತ್ರ ವೃತ್ತಿಪರರ ನೋಂದಣಿಯಲ್ಲಿ (HPR)ಕರ್ನಾಟಕವು ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದು, ಇದುವರೆಗೂ 40,643ಕ್ಕೂ ಹೆಚ್ಚು ನೋಂದಣಿಯನ್ನು ಪರಿಶೀಲಿಸಲಾಗಿದೆ.
* ಜಿಲ್ಲಾ ಆಸ್ಪತ್ರೆ, ಮೈಸೂರು ಜಿಲ್ಲೆಯು QR code ಬಳಸಿ ಹೆಚ್ಚಿನ ಸಂಖ್ಯೆಯಲ್ಲಿ OPD ನೋಂದಣಿ ಮಾಡಿರುವುದಕ್ಕೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಭಾರತ ಸರ್ಕಾರದಿಂದ ಪ್ರಶಸ್ತಿ ಪಡೆದು ಗುರುತಿಸಲ್ಪಟ್ಟಿದೆ.
* ರಾಜ್ಯವು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ದಾಖಲೆಗಳನ್ನು ಆಬಾ (ABHA) ನಲ್ಲಿ ಲಿಂಕ್ ಮಾಡಿರುವುದರಲ್ಲಿ ಮತ್ತು Scan and share ಟೋಕನ್ ಸೃಜನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಭಾರತ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆಯಲಾಗಿರುತ್ತದೆ.
* ಜಿಲ್ಲಾ ಆಸ್ಪತ್ರೆ, ಧಾರವಾಡ ಜಿಲ್ಲೆಯು ವೈದ್ಯಕೀಯ ದಾಖಲೆಗಳನ್ನು ABHA ನಲ್ಲಿ ಲಿಂಕ್ ಮಾಡಿರುವುದರಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ.
* ರಾಷ್ಠ್ರೀಯ ಕುಟುಂಬ ಯೋಜನೆಯ ಅಡಿಯಲ್ಲಿ ಎರಡು ನೂತನ ಗರ್ಭನಿರೋಧಕಗಳಾದ ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್ (ಬೆಂಗಳೂರು ಮತ್ತು ಬೀದರ್) ಮತ್ತು ಸಬ್ ಕ್ಯೂಟೇನಿಯಸ್ ಇಂಜೆಕ್ಷನ್ ಅಂತರಾ (ಯಾದಗಿರಿ ಮತ್ತು ಮೈಸೂರು) ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ
* ಯೋಜನೆಯಡಿಯಲ್ಲಿ 16,79,433 ಪ್ರಕರಣಗಳ ಚಿಕಿತ್ಸೆಗೆ ಒಟ್ಟು ರೂ.1079.29 ಕೋಟಿಗಳ ಅನುಮೋದನೆ ನೀಡಲಾಗಿರುತ್ತದೆ.
* ಆಯುಷ್ಮಾನ್ ಭಾರತ್- ಪ್ರಧಾನ ಜನಾರೋಗ್ಯ ಯೋಜನೆ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಈವರೆಗೆ 1.55 ಕೋಟಿ ಕಾರ್ಡ್ ಗಳು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಾಲತಾಣದಲ್ಲಿ ನೊಂದಾವಣೆ ಆಗಿರುತ್ತದೆ.