Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home News Wire

Deepavali How To Celebrate? | ಭಾರತೀಯ ಪರಂಪರೆಯ ದೀಪಾವಳಿ ಹಬ್ಬದ ವಿಶೇಷತೆಯೇನು? ಇದರ ಆಚರಣೆ ಹೇಗೆ? ದೀಪಗಳ ಹಬ್ಬದ ಸಂಪ್ರದಾಯದ ಪೂರ್ಣ ಮಾಹಿತಿ ಇಲ್ಲಿದೆ

ಆಶ್ವಯುಜ ಕೃಷ್ಣ ದ್ವಾದಶಿಯಂದು ಆರಂಭಿಸಿ ಬಲಿಪಾಡ್ಯದ ತನಕ ಪ್ರತಿದಿನ ಸಾಯಂಕಾಲ ದೇವರಿಗೆ ದೀಪಮಾಲೆಯನ್ನು ಸಮರ್ಪಿಸಬೇಕು. ಆದ್ದರಿಂದ ಇದಕ್ಕೆ 'ದೀಪಾವಲೀ' ಎಂದು ಹೆಸರು. ದೀಪ- ಅವಲಿ ಎಂದರೆ ಸಾಲು ದೀಪಗಳ ಮಾಲೆ ಎಂದರ್ಥ. ದೇವರಿಗೆ ಸಮರ್ಪಿಸುವ ಒಂದು ವಿಶೇಷ ಉಪಚಾರ.

by Bengaluru Wire Desk
November 9, 2023
in News Wire, Public interest
Reading Time: 4 mins read
0
ದೀಪಗಳ ಹಬ್ಬ ದೀಪಾವಳಿ ಸಾಲು- ದೀಪಗಳ ಸಂಭ್ರಮದ ಹಬ್ಬ.

ದೀಪಗಳ ಹಬ್ಬ ದೀಪಾವಳಿ ಸಾಲು- ದೀಪಗಳ ಸಂಭ್ರಮದ ಹಬ್ಬ.

ಸನಾತನ ಭಾರತೀಯರ ಅತ್ಯಂತ ಜನಪ್ರಿಯ ಹಬ್ಬವೆಂದರೆ ಅದು “ದೀಪಾವಳಿ”. ಭಾರತದ ಎಲ್ಲ ರಾಜ್ಯ, ನಗರಗಳಲ್ಲಿ ಸಂಭ್ರಮ, ಸಡಗರಗಳಿಂದ ಆಚರಿಸುವ ರಾಷ್ಟ್ರೀಯ ಹಬ್ಬ ಎನ್ನಬಹುದು. ಆಶ್ವಯುಜ ಕೃಷ್ಣ ದ್ವಾದಶಿಯಂದು ಆರಂಭಿಸಿ ಬಲಿಪಾಡ್ಯದ ತನಕ ಪ್ರತಿದಿನ ಸಾಯಂಕಾಲ ದೇವರಿಗೆ ದೀಪಮಾಲೆಯನ್ನು ಸಮರ್ಪಿಸಬೇಕು. ಆದ್ದರಿಂದ ಇದಕ್ಕೆ ‘ದೀಪಾವಲೀ’ ಎಂದು ಹೆಸರು. ದೀಪ- ಅವಲಿ ಎಂದರೆ ಸಾಲು ದೀಪಗಳ ಮಾಲೆ ಎಂದರ್ಥ. ದೇವರಿಗೆ ಸಮರ್ಪಿಸುವ ಒಂದು ವಿಶೇಷ ಉಪಚಾರ. ‘ಭಕ್ತ್ಯಾ ದೀಪಂ ಪ್ರಯಚ್ಛಾಮಿ” ಎಂದು ಭಕ್ತಿಯಿಂದ ದೀಪವನ್ನು ಸಮರ್ಪಿಸಬೇಕು. ಈ ಹಬ್ಬದ ಹಿನ್ನೆಲೆ ಬಹಳ ಸುಂದರ. ಸ್ನಾನದ ಕೋಣೆಯಿಂದ ಮನೆಯ ಎಲ್ಲ ಪರಿಸರಗಳನ್ನು ಸ್ವಚ್ಛಗೊಳಿಸುವ, ಸುಂದರವಾಗಿಸುವ ಪರಿಕಲ್ಪನೆ ಅತ್ಯದ್ಭುತ.

ಈ ಹಬ್ಬವನ್ನು ಗಂಗಾಪೂಜೆ(ನೀರುತುಂಬುವ ಹಬ್ಬ), ನರಕಚತುರ್ದಶೀ, ಲಕ್ಷ್ಮೀ ಪೂಜೆ, ಬಲಿಪಾಡ್ಯ, ಭಗಿನೀತೃತಿಯಾ, ಅಮ್ಮನ ಚೌತಿ, ಕಡೆ ಪಂಚಮಿ ಹೀಗೆ ಹೆಸರುಗಳಿಂದ ಕರೆಯುವ ರೂಢಿ ಹಲವೆಡೆಯಿದೆ.

ಯಮದೀಪ- ನೀರು ತುಂಬುವ ಹಬ್ಬ :

ಅಶ್ವಿನ ಕೃಷ್ಣ ತ್ರಯೋದಶಿ ನೀರು ತುಂಬುವ ಹಬ್ಬ, ಇಂದು ಸಾಯಂಕಾಲ ಸೂರ್ಯಾಸ್ತವಾದೊಡನೆ ಮನೆಯ ಹೊರಗೆ ದಕ್ಷಿಣಾಭಿಮುಖವಾಗಿ ಎಳ್ಳೆಣ್ಣೆಯಿಂದ ಯಮದೀಪವನ್ನು ಬೆಳಗಿಸುವುದರಿಂದ ಅಪಮೃತ್ಯು ಪರಿಹಾರವಾಗುವುದು . ಕಂಚಿನ ದೀಪ, ಬಾಳೆದಿಂಡಿನ ದೀಪ, ಮಣ್ಣಿನ ದೊಡ್ಡ ಹಣತೆಯಲ್ಲಿ ದೀಪ ಹಚ್ಚಿ ಗಂಧ ಪುಷ್ಪ ಮಾಲೆಗಳಿಂದ ಅಲಂಕರಿಸಿ ಪ್ರಾರ್ಥಿಸಬೇಕು.

ಯಮದೀಪ ದಾನ ಸಂಕಲ್ಪ :

ಈ ದಿನ ಸಂಜೆ ದೇಶ,ಕಾಲಾದಿಗಳನ್ನುಚ್ಚರಿಸಿ, ‘ಆಶ್ವೀನ ಕೃಷ್ಣ ತ್ರಯೋದಶ್ಯಾಂ ಶುಭತಿಥೌ ಸಾಯಂಕಾಲೇ ಯಮಾಂತರ್ಗತ ಶ್ರೀಲಕ್ಷ್ಮೀನೃಸಿಂಹಾತ್ಮಕ ಕಾರ್ತಿಕ ದಾಮೋದರ ಪ್ರೇರಣಾಯ ಕಾರ್ತಿಕ ದಾಮೋದರ ಪ್ರೀತ್ಯರ್ಥಂ ಅಪಮೃತ್ಯು ಬಾಧಾದಿಸಮಸ್ತಪೀಡಾಪರಿಹಾರಾರ್ಥಂ ದೀರ್ಘಾಯುರಾರೋಗ್ಯಸಿದ್ಧ್ಯರ್ಥಂ ಯಮದೀಪದಾನಾಖ್ಯಂ ಕರ್ಮ ಕರಿಷ್ಯೇ’ ಎಂದು ಸಂಕಲ್ಪಿಸಿ ದಕ್ಷಿಣಾಭಿಮುಖವಾಗಿ ದೀಪವನ್ನು ಹಚ್ಚಬೇಕು.

ಪ್ರಾರ್ಥನಾ ಮಂತ್ರ :

ಸಾಂಪ್ರದಾಯಿಕ ಶೈಲಿಯಲ್ಲಿ ಗಂಗೂಪೂಜೆ ತಾಮ್ರದ ಹಂಡೆಯನ್ನು ರಂಗೋಲಿ ಹಾಕಿ ಸಿಂಗರಿಸಿರುವ ಚಿತ್ರ.

(- ಸ್ಕಂದ ಪುರಾಣ)

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಲಾಯುತ: |

ಪ್ರಯೋದಶ್ಯಾಂ ದೀಪದಾನಾತ್ ಸೂರ್ಯಜ: ಪ್ರೀಯತಾಂ ಮಮ ||

ಎಂದು ಪ್ರಾರ್ಥಿಸಿ ದೀಪವನ್ನು ಎತ್ತರದಲ್ಲಿ ದಕ್ಷಿಣಾಭಿಮುಖವಾಗಿ ಇಟ್ಟು ದಕ್ಷಿಣಕ್ಕೆ ಮುಖ ಮಾಡಿ ಯಮನಿಗೆ ವಂದಿಸಬೇಕು.

ಗಂಗಾಪೂಜೆ :

ಯಮದೀಪದಾನದ ನಂತರ ವಿಷ್ಣುಪೂಜೆಯ ನಂತರ ಗಂಗಾಪೂಜೆಯನ್ನು ಮಾಡಬೇಕು. ಸ್ನಾನದ ಕೋಣೆಯನ್ನು, ಹಂಡೆ, (ಬಿಸಿನೀರಿನ ಭಾಂಡ ಒಳ) ಯನ್ನು ತೊಳೆದು ಸೆಗಣಿಯಿಂದ ಸಾರಿಸಿ ಕಮ್ಮಣ್ಣು,ಸುಣ್ಣದಿಂದ, ತೋರಣ ಪುಷ್ಪಮಾಲೆಗಳಿಂದ ಅಲಂಕರಿಸಿ ಒಲೆಯ ಮೇಲಿಟ್ಟು ನೀರು ತುಂಬಬೇಕು.

ದೇವರಕೋಣೆಯಲ್ಲಿ ದೇವರ ಮುಂದೆ ರಂಗೋಲಿ ಬರೆದು ಮಣೆಯ ಮೇಲೆ ಅದರಲ್ಲಿ ಅಕ್ಕಿಯನ್ನು ಹರವಿ ಮೈಮೇಲೆ ನೀರಿನ ಕಲಶವನ್ನಿಟ್ಟು (ಗಂಗಾ ಕಲಶದಲ್ಲಿ ನಾಣ್ಯವನ್ನು ಹಾಕಬೇಕು). ಆ ಜಲದಲ್ಲಿ ಗಂಗಾಜನಕ ತ್ರಿವಿಕ್ರಮನನ್ನು ಗಂಗಾದಿ ತೀರ್ಥಗಳನ್ನು ಆವಾಹಿಸಿ ಪೂಜಿಸಬೇಕು. ಅಪೂಪ ನಿವೇದನೆಯನ್ನು ಮಾಡಬೇಕು. ಬಿಸಿನೀರಿನ ಹಂಡೆಯನ್ನು ಪೂಜಿಸಬೇಕು.

ಪಾರಾಯಣ:

“ಗಂಗೇ ಚ ಯಮುನ ನಂದಿನೀ ನಲಿನೀ ಸೀತಾ…

ಭಾಗೀರಥೀದೇವಿ ಗಂಗೆ ಭಾಗೀರಥೀ”….

ಪೂಜಾನಂತರ ಕಲಶದಲ್ಲಿರುವ ನೀರನ್ನು ಬಿಸಿನೀರಿನ ಹಂಡೆಗೆ ಹಾಕಿಕೊಂಡು ನರಕ ಚತುರ್ದಶೀ ಸ್ನಾನಕ್ಕೆ ಉಪಯೋಗಿಸಬೇಕು.

ನರಕಚತುರ್ದಶೀ ಹಿನ್ನಲೆ :

ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಿರುವ ಪೌರಾಣಿಕ ಹಿನ್ನಲೆಯ ಚಿತ್ರ.

ಶ್ರೀಕೃಷ್ಣನು ಸತ್ಯಭಾಮೆಯೊಡಗೂಡಿ ಅಶ್ವಿನಿ ಕೃಷ್ಣ ಚತುರ್ದಶೀಯಂದು ನರಕಾಸುರನನ್ನು ಸಂಹರಿಸಿ ನರಕನ ಅರಮನೆಯಲ್ಲಿ ಬಂಧಿಗಳಾಗಿದ್ದ 16,100 ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿ ಅನುಗ್ರಹಿಸಿದ ಪರ್ವದಿನ. ಸತ್ಯಭಾಮಾ, ರುಕ್ಷ್ಮಿಣಿಯರು ಅಭ್ಯಂಗಸ್ನಾನ ಮಾಡಿ ಹೊಸ ವಸ್ತ್ರವನ್ನು ಧರಿಸಿ ಅಲಂಕೃತಗೊಂಡು ಹಬ್ಬವನ್ನು ಆಚರಿಸಿದರು. ಅಲ್ಲದೇ ಸತ್ಯಭಾಮಾ, ರುಕ್ಷ್ಮಿಣಿಯರು ಶ್ರೀಕೃಷ್ಣನಿಗೆ ಅಭ್ಯಂಗವನ್ನು ಮಾಡಿಸಿದರು. ಈ ಹಿನ್ನಲೆಯಲ್ಲಿ ದೇಶದ ಸಮಗ್ರ ಜನತೆ ಒಗ್ಗೂಡಿ ಸಂಭ್ರಮದಿಂದ ಉತ್ಸವವನ್ನು ಆಚರಿಸುವ ಹಬ್ಬ. ಇದರ ಸ್ಮರಣೆಗಾಗಿ ಈಗಲೂ ಕೂಡ ಈ ದಿನದಲ್ಲಿ ಮನೆ ಮಂದಿಯೆಲ್ಲ ಸೇರಿ ಸಂತಸದಿಂದ ಅಭ್ಯಂಗವನ್ನು ಮಾಡುತ್ತಾರೆ. ಇಂದಿನ ದಿನ ಅಭ್ಯಂಗವನ್ನು ಮಾಡಲೇಬೇಕು ಎಂದು ಶಾಸ್ತ್ರ ಹೇಳುತ್ತದೆ.

ನರಕಚತುರ್ದಶೀ ಆಚರಣೆ ಹೇಗೆ?:

ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿರುವ ಚಿತ್ರ.

ಪ್ರಾತ: ಕಾಲ 4.30 ರ ಅರುಣೋದಯ ಕಾಲದಲ್ಲಿ ಎದ್ದು ಕೈಕಾಲು ಮುಖ ತೊಳೆದು ಮಂತ್ರಸ್ನಾನದಿಂದ ಶುದ್ಧರಾಗಿ ವಸ್ಯಾಂತರ ಮಾಡಿ (ಹೊಸ ಬಟ್ಟೆ ಧರಿಸುವ ಸಂಪ್ರದಾಯವೂ ಹಲವೆಡೆ ಇದೆ) ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು.

ಸಂಕಲ್ಪ ಮಾಡುವ ವಿಧಾನ :

…”ಚತುರ್ದಶ್ಯಾಂ ಶುಭತಿಥ್ ಚಂದ್ರೋದಯಕಾಲೇ ನರಕಾಂತಕ ಶ್ರೀಗೋಪಾಲಕೃಷ್ಣ ಪ್ರೇರಣಯಾ ಶ್ರೀಗೋಪಾಲಕೃಷ್ಣ ಪ್ರೀತ್ಯರ್ಥಂ ಸಪರಿವಾರಾಯ ಶ್ರೀಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗಸಮರ್ಪಣಪೂಜಾಂ ಕರಿಷ್ಯೇ…” ಎಂದು ಹೇಳಿ,

ಎಳ್ಳೆಣ್ಣೆ, ಶೃಂಗಾಮಲಕ ತೈಲ, ಸುಗಂಧದೆಣ್ಣೆ, ಸೀಗೆಪುಡಿ, ಕಡಲೆಹಿಟ್ಟು, ಬಿಸಿನೀರು, ಎಲ್ಲ ಅಭ್ಯಂಗ ಸಾಮಗ್ರಿಗಳನ್ನು ದೇವರ ಮುಂದೆ ಇಟ್ಟು ನಿವೇದಿಸಿ ಕೃಷ್ಣಾಷ್ಟೋತ್ತರವನ್ನು ಪಠಿಸಿ ಜಲದಲ್ಲಿ ಗಂಗೆಯನ್ನು ತೈಲದಲ್ಲಿ ಲಕ್ಷ್ಮಿಯನ್ನು ಧ್ಯಾನಿಸಿ ಶಂಖ,ತಾಳ, ಘಂಟೆಗಳ ನಿನಾದದಿಂದ ಮಂಗಳಾರತಿ ಮಾಡಬೇಕು. ನಂತರ…

ಎಣ್ಣೆ ಶಾಸ್ತ್ರ ವಿಧಾನ :

ಗುರುಗಳು ಇದ್ದಲ್ಲಿ ಗುರುಗಳ ಬಳಿ ಎಣ್ಣೆ ಶಾಸ್ತ್ರ ಮಾಡಿಸಿಕೊಂಡು ನಂತರ ಮನೆಯಲ್ಲಿ ಶಾಸ್ತ್ರ ಮಾಡಿಸಿಕೊಳ್ಳಬೇಕು. ಮನೆಯ ಗೃಹಿಣಿ ಎಣ್ಣೆಶಾಸ್ತ್ರ ಮಾಡಬೇಕು. ಮನೆಯ ಹಿರಿಯರಿಂದ ಆರಂಭಿಸಿ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ 7 ಗರಿಕೆಗಳನ್ನು ಹಿಡಿದು ಭಗವಂತನಿಗೆ ಸಮರ್ಪಿಸಿದ ಸುಗಂಧಿತ ಎಣ್ಣೆಯನ್ನು ಭಗವಂತನ ಸ್ಮರಣೆಯೊಂದಿಗೆ, ದಾಸರಪದಗಳಿಂದ, ಸಾಂಪ್ರದಾಯಿಕ ಹಾಡುಗಳನ್ನು ಹೇಳುತ್ತಾ ಭೂಮಿಗೆ ಗರಿಕೆ 7 ಬಾರಿ ಸ್ಪರ್ಶಿಸಿ ನಂತರ 3 ಬಾರಿ ನೆತ್ತಿಗೆ ಎಣ್ಣೆ ಹಚ್ಚಿ ಎಣ್ಣೆಶಾಸ್ತ್ರ ಮಾಡಬೇಕು.

“ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚವಿಭೀಷಣ:I ಕೃಪಃ ಪರಶುರಾಮಶ್ಚ ಸತೇ ಚಿರಂಜೀವಿನಃ।”

ವಿಶೇಷ ಸೂಚನೆ :

1. ಹಿರಿಯ ಮುತ್ತೈದೆಯರಿಂದ ಶಾಸ್ತ್ರ ಮಾಡಿಸಿಕೊಳ್ಳಬೇಕು .

2. ಎಳ್ಳೆಣ್ಣೆಯನ್ನೇ ಉಪಯೋಗಿಸಬೇಕು

3. ಪೂರ್ವಾಭಿಮುಖವಾಗಿ ಕುಳಿತು ಎಣ್ಣೆಶಾಸ್ತ್ರ ಮಾಡಿಸಿಕೊಳ್ಳಬೇಕು.

4. ಎಣ್ಣೆಶಾಸ್ತ್ರಕ್ಕೆ ಕುಳಿತುಕೊಳ್ಳುವವರು ದೇವರಿಗೂ ಹಿರಿಯರಿಗೂ ನಮಸ್ಕರಿಸಿ ಕುಳಿತುಕೊಳ್ಳಬೇಕು

5. ಎಣ್ಣೆ ಶಾಸ್ತ್ರದ ನಂತರ ನಮಸ್ಕರಿಸುವಂತಿಲ್ಲ.

6. ಸ್ನಾನವಾದ ತಕ್ಷಣ, ಎಣ್ಣೆಶಾಸ್ತ್ರ ಮಾಡಿದವರು ಅಪಾಮಾರ್ಗದ ( ಉತ್ತರದ ಗಿಡದ ) ಬೇರಿನಿಂದ ಕೂಡಿದ ಮಣ್ಣಿನ ಹೆಂಟೆಯನ್ನು ಕೈಯಲ್ಲಿ ಹಿಡಿದು ….

“ಸೀತಾಲೋಷ್ಠಸಮಾಯುಕ್ತ ಸಕಂಟಕದಲಾನ್ವಿತ I ಹರ ಪಾಪಮಪಾಮಾರ್ಗ ಭ್ರಾಮಮಾಣ ಪುನಃಪುನಃ ||

(– ಭವಿಷ್ಯತ್ತರ ಪುರಾಣದ ಶ್ಲೋಕ)

ಹೀಗೆ ಹೇಳಿ ಸ್ನಾನ ಮಾಡಿದವನ ಶಿರಸ್ಸಿಗೆ ಮೂರು ಬಾರಿ ನಿವಾಳಿಸಿ, ನೈಋತ್ಯದಡೆಗೆ ಎಸೆಯಬೇಕು. ಇದರಿಂದ ಪಾಪ ಪರಿಹಾರವಾಗಿ ದೃಷ್ಟಿ ನಿವಾರಣೆಯಾಗುತ್ತದೆ.

ಅಭ್ಯಂಗದ ನಂತರ ಲಕ್ಷ್ಮೀ ಸಮುತ್ಥಾನ ಪೂಜೆಯನ್ನು ಮಾಡಬೇಕು. ಆಷಾಢ ಮಾಸದ ಶಯನೀ ಏಕಾದಶಿಯೆಂದು ನಾರಾಯಣನೊಡನೆ ಮಲಗಿದ್ದ ಮಹಾಲಕ್ಷ್ಮಿಯು ಆಶ್ವಿನಿ ದ್ವಾದಶಿಯಂದು ಎಚ್ಚರಗೊಂಡು ಚತುರ್ದಶಿಯಂದು ಎದ್ದೇಳುತ್ತಾಳೆ. ಇನ್ನು 13 ದಿನಕ್ಕೆ ಭಗವಂತನ ಉತ್ಥಾನ, ಗೃಹಿಣಿಯ ಕರ್ತವ್ಯವನ್ನು ತೋರಿಸಿಕೊಟ್ಟ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಬೇಕು.

ಉಲ್ಕಾ ಪ್ರದರ್ಶನ :

ಹಳ್ಳಿಗಳ ಕಡೆಯಲ್ಲಿ ತೆಂಗಿನ ಗರಿ ಅಥವಾ ಮತ್ತಿತರ ಸಾಮಗ್ರಿಗಳ ಕೊಳ್ಳಿಯನ್ನು ಅಮಾವಾಸ್ಯೆಯ ರಾತ್ರಿ ಪ್ರದರ್ಶಿಸುವ ಸಾಂದರ್ಭಿಕ ಚಿತ್ರ.

ಇಂದು ಸಂಜೆ ಅಥವಾ ಅಮಾವಾಸ್ಯೆಯ ರಾತ್ರಿ, ಪಿತೃಗಳ ಪ್ರೀತಿಗಾಗಿ, ಬೆಂಕಿಯ ಕೊಳ್ಳಿಯನ್ನು ದಕ್ಷಿಣ ಮುಖವಾಗಿ ಪ್ರದರ್ಶಿಸುತ್ತಾ, “ಉತ್ಸಾಹಸ್ತಾ, ನರಾ, ಕುರ್ಯು, ಪಿತೃಣಾಂ ಮಾರ್ಗದರ್ಶನಂ” ಎಂದು ಪಠಿಸಬೇಕು. ಉಲ್ಕಾ ಪ್ರದರ್ಶನವೆಂಬ ವಿಧಿಯು ಧರ್ಮಶಾಸ್ತ್ರಗಳಲ್ಲಿದೆ.

ಲಕ್ಷ್ಮಿ ಪೂಜೆ – ಅಲಕ್ಷ್ಮೀ ನಿಸ್ಸರಣ :

ಅಮಾವಾಸ್ಯೆಯ ದಿನದಂದು ಶ್ರೀ ಮಹಾಲಕ್ಷ್ಮಿದೇವಿಯನ್ನು ಪೂಜಿಸಬೇಕು. ಎಲ್ಲಾ ಅಭರಣಗಳನ್ನು ಧನ ಧಾನ್ಯಗಳನ್ನು ಕಲಶದಲ್ಲಿ ಹಾಕಿ ಷೋಡಶೋಪಚಾರಗಳಿಂದ ಸ್ತೋತ್ರ ಪಾರಾಯಣ ಭಜನೆಗಳಿಂದ ಶ್ರೀ ಮಹಾಲಕ್ಷ್ಮಿದೇವಿಯನ್ನು ಪೂಜಿಸಬೇಕು.

ಹರಿವಾಣದಲ್ಲಿ ಧಾನ್ಯದ ಮೇಲೆ ದೀಪಗಳನ್ನು ಹಚ್ಚಿ ಮನೆಯ ಇತರ ಎಲ್ಲೆಡೆಯೂ ದೀಪ ಹಚ್ಚಿಟ್ಟು ಎಲ್ಲಾ ಕಡೆಗೂ ಧಾನ್ಯದ ದೀಪವನ್ನು ತೋರಿಸುತ್ತಾ, ಆ ಸಂದರ್ಭದಲ್ಲಿ “ಚಿರಕಾಲಂ ಲಕ್ಷ್ಮೀನಿವಾಸ ಸಿದ್ಧರ್ಥಂ ಅಲಕ್ಷ್ಮೀ ನಿಸ್ಸರಣಪೂರ್ವಕಂ ನೀರಾಜನಂ ಕರಿಷ್ಯೇ” ಎಂದು ಹೇಳಿ ದೀಪವನ್ನು ಎಲ್ಲೆಡೆ ತೋರಿಸಿ, ನಂತರ ಪುಷ್ಪ ಸಮರ್ಪಣೆ ಮಾಡಬೇಕು.

ಬಲಿಪಾಡ್ಯಮಿ ಆಚರಣೆ ವಿಧಾನ :

ಸಾಂಪ್ರದಾಯಿಕವಾಗಿ ಲಕ್ಷ್ಮಿಪೂಜೆ ಮಾಡಿರುವ ಚಿತ್ರ.

ಬಲಿರಾಜನು ಪ್ರಹ್ಲಾದನ ಮೊಮ್ಮಗ. ಮುಂದಿನ ಮನ್ವಂತರದ ಇಂದ್ರ. ಆದ್ದರಿಂದಲೇ ಬಲೀಂದ್ರನನ್ನು ಇಂದು ಪೂಜಿಸಬೇಕೆಂಬುದು ತ್ರಿವಿಕ್ರಮ ವಾಮನನ ಅದೇಶ. ಇದು ಭಗವದ್ಭಕ್ತನಾದ ಬಲೀಂದ್ರನಿಗೆ ಭಗವಂತ ನೀಡಿದ ವರ. ಮನೆಯ ಮುಂದೆ ರಂಗೋಲಿಯಿಂದ ಬಲಿ ಪ್ರತಿಮೆಯನ್ನು ಬರೆದು ಅಥವಾ ಮಂಡಲದಲ್ಲಿ ಸ್ವಸ್ತಿಕವನ್ನಿಟ್ಟು ಬಲೀಂದ್ರಾಂತರ್ಗತ ವಾಮನನನ್ನು ಧ್ಯಾನಿಸಿ ಪೂಜಿಸಬೇಕು. ಬಲಿಪಾಡ್ಯದಂದು ದಾನಗಳನ್ನು ಕೊಟ್ಟಷ್ಟು ಅದು ಅಕ್ಷಯವಾಗುತ್ತದೆ ಭಗವಂತನಿಗೆ ಸಂತೋಷವನ್ನು ಉಂಟುಮಾಡುತ್ತದೆ.

ವಾಮನ ಅವತಾರದಲ್ಲಿ ಮಹಾವಿಷ್ಣು (ಸಾಂದರ್ಭಿಕ ಚಿತ್ರ)

“ಬಲಿಮುದ್ದಿಶ್ಯ ದೀಯಂತೇ ಬಲಯಃ ಕುರುನಂದನ | ಯಾನಿ ತಾನ್ಯಕ್ಷಯಾನ್ಯಾಯುಃ ಮಯೈವಂ ಸಂಪ್ರದರ್ಶಿತಂ ||

– ಭವಿಷ್ಯತ್ತರಪುರಾಣ

ಸಂಕಲ್ಪ :

ಬಲಿಪಾಡ್ಯದಂದು ಉತ್ತರ ಕರ್ನಾಟಕದ ಕಡೆ ಪಗಡೆಯಾಟ ಆಡುವ ಸಂಪ್ರದಾಯವಿದೆ. ಸರ್ವಸಂಪದಭಿವೃಧ್ಯರ್ಥಂ ವೃಷ್ಟಿ ಪುಷ್ಟ್ಯಾದಿ ಸಿದ್ಧ್ಯರ್ಥಂ ಬಲೀಂದ್ರಾಂತರ್ಗತ ಶ್ರೀ ವಾಮನ ಪೂಜಾಂ ಕರಿಷ್ಯೇ… ಧ್ಯಾಯೇದ್‌ ಬಲೀಂದ್ರ ಜಗದೇಕನಾಥಂ ಮುಕ್ತಾಫಲಾಲಂಕೃತಸರ್ವಗಾತ್ರಮ್ | ನಕ್ಷತ್ರನಾಥಂ ಭುವನಾರ್ಘವಸ್ತ್ರಮ್ ಪ್ರಿಯಂ ಮುರಾರೇ, ಕರವಾಲಹಸ್ತಮ್ ||

ಬಲೀಂದ್ರ ಪ್ರಾರ್ಥನೆ :

“ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಸ್ಥಾನೇ ಸಮಾಸೀನ ವಿಷ್ಣುಸಾನಿಧ್ಯದೋ ಭವ ||

ಬಲೀಂದ್ರಾಂತರ್ಗತ ಶ್ರೀವಾಮನ ಪ್ರೀಯತಾಮ್”

ತುಳಸೀ ಸಂಕೀರ್ತನೆ :

ತುಳಸಿ ಕಟ್ಟೆಗೆ ಪೂಜೆ ಮಾಡಿದ ಚಿತ್ರ.

ಬಲಿಪಾಡ್ಯದಿಂದ ಆರಂಭಿಸಿ ಉತ್ಥಾನ ದ್ವಾದಶಿಯವರೆಗೆ ತುಳಸಿ ಸಂಕೀರ್ತನೆಯನ್ನು ಮಾಡಬೇಕು. ತುಳಸೀ ಕಟ್ಟೆಯ ಸುತ್ತ ದೀಪಗಳನ್ನು ಬೆಳಗಿಸಿ ಪ್ರದಕ್ಷಿಣಾಕಾರವಾಗಿ ಹಾಡು ಹಾಡುತ್ತಾ, ಸ್ತೋತ್ರ ಹೇಳುತ್ತಾ, ತಾಳತಟ್ಟುತ್ತಾ, ಮನೆ ಮಂದಿ ಎಲ್ಲರೂ ಸೇರಿ ನರ್ತನವನ್ನು ಮಾಡುವ ವಿಶೇಷ ಸಂಪ್ರದಾಯ ಹಲವಾರು ಕಡೆ ಇದೆ. ಇದನ್ನು ನಾವು ನೀವು ರೂಢಿಸಿಕೊಂಡು ಅಚರಿಸೋಣ, ಕಾರ್ತಿಕ ಮಾಸದಲ್ಲಿ ತುಳಸಿಯಲ್ಲಿ ವಿಶೇಷವಾಗಿ ಮಹಾಲಕ್ಷ್ಮಿಯ ಸಾನಿಧ್ಯ ಇರುತ್ತದೆ. ಉತ್ಥಾನ ದ್ವಾದಶಿಯವರೆಗೆ ಈ ಆಚರಣೆ ಮುಂದುವರಿಯಬೇಕು.

ಗೋಪೂಜೆ ಮಾಡುವ ವಿಧಾನ :

ಗೋವುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಅವುಗಳಿಗೆ ಅರಿಷಿಣ, ಕುಂಕುಮ, ಸುಣ್ಣ, ಮೊದಲಾದವುಗಳಿಂದ ಅಲಂಕರಿಸಿ, ತಿನ್ನುವುದಕ್ಕೆ ಆಹಾರವನ್ನಿತ್ತು ಮಂಗಳಾರತಿ ಮಾಡಬೇಕು. “ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ | ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||” ಎಂದು ಪಠಿಸುತ್ತಾ

ಗವಾಂತರ್ಗತ ಗೋಪಾಲಕೃಷ್ಣನನ್ನು ಅರ್ಚಿಸಿ, ಪೂಜಿಸಿ, ಪ್ರಾರ್ಥಿಸಿ, ನಮಸ್ಕರಿಸಬೇಕು.

( ಗೋಪೂಜೆಗೆ ಅವಕಾಶವಿಲ್ಲದ ಸ್ಥಿತಿಯಲ್ಲಿ ಗೋಗ್ರಾಸಕ್ಕಾಗಿ ಒಂದಿಷ್ಟು ಧನವನ್ನು ತೆಗೆದಿಟ್ಟು ಪ್ರಾರ್ಥಿಸಬೇಕು)

ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣುಪದಾಶ್ರಿತಾ | ಗೋಗ್ರಾಸಸ್ತು ಮಯಾದ ತ್ತಃ ಸುರಭೇ ಪ್ರತಿಗೃಹ್ಯತಾಮ್ || ಗವಾಮಂಗೇಶು ತಿಷ್ಠಂತಿ ಭುವನಾನಿ ಚತುರ್ದಶ | ಯಸ್ಮಾತ್ ತಸ್ಮಾತ್ ಶುಭಂ ಮೇ ಸ್ಯಾತ್ ಇಹ ಲೋಕೇ ಪರತ್ರ ಚ ||

ಗೋವರ್ಧನಪೂಜೆ :

ಭಗವಾನ್ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಬಲಿಪಾಡ್ಯದಂದು ಗೋವರ್ಧನ ಗಿರಿಯನ್ನು ಎತ್ತಿದ ಸ್ಮರಣೆಗಾಗಿ ಇಂದು ಗೋವರ್ಧನ ಪೂಜೆಯನ್ನು ಮಾಡಬೇಕು. ಗೋಮಯದಲ್ಲಿ ಗೋವರ್ಧನದ ಆಕಾರವನ್ನು ಮಾಡಿ ಅದನ್ನು ಮುಖ್ಯದ್ವಾರದ ಹೊಸ್ತಿಲಲ್ಲಿಟ್ಟು ಪೂಜಿಸಿ “ಗೋವರ್ಧನಾಚಲಾಧಾರ ಗೋಕುಲತ್ರಾಣಕಾರಕ | ಬಹುಬಾಹುಕೃತಚ್ಛಾಯ ಗವಾಮ್ ಕೋಟಿಪ್ರದೋ ಭವ ||” ಎಂದು ಪ್ರಾರ್ಥನೆ ಮಾಡಬೇಕು.

ಯಮದ್ವಿತೀಯ ಎಂದರೇನು?

ಯಮದೇವ ತನ್ನ ತಂಗಿಯಾದ ಯುಮುನೆಗೆ ಅನುಗ್ರಹಿಸುತ್ತಿರುವ ಚಿತ್ರ.

ಕಾರ್ತಿಕ ಶುದ್ಧ ದ್ವಿತೀಯ ದಿನದಂದು ಯಮದೇವರು ತಾನಾಗಿಯೇ ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಔತಣವನ್ನು ಸ್ವೀಕರಿಸಿ, ತಂಗಿ ಯಮುನೆಗೆ ಉಡುಗೊರೆಯನಿತ್ತು ಬಂದರಂತೆ. ಅದ್ದರಿಂದ ಅಂದು ಮಧ್ಯಾಹ್ನ ಪುರುಷರು ಸೋದರಿಯರ ಮನೆಗೆ ಹೋಗಿ ಅವರ ಕೈಯಿಂದ ಪ್ರೀತಿಯ ಭೋಜನವನ್ನು ಔತಣವನ್ನು ಸ್ವೀಕರಿಸಬೇಕು. ಸೋದರಿಗೆ ಪ್ರೀತಿಯ ಉಡುಗೊರಯನ್ನು ಕೊಟ್ಟು ಗೌರವಿಸಬೇಕು.

ಯಮನಿಗೂ, ಯಮುನಾ ದೇವಿಗೂ ಚಿತ್ರಗುಪ್ತನಿಗೂ ಅರ್ಘ್ಯವನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು.

“ಯಮಂ ಚ ಯಮುನಾಂ ಚೈವ ಚಿತ್ರಗುಪ್ತಂ ಚ ಪೂಜಯೇತ್ | ಅರ್ಘ್ಯಶ್ಚಾತ್ರ ಪ್ರದಾತವ್ಯೊ ಯಮಾಯ ಸಹಜ ದ್ವಯೈ: ||

ಸೋದರಿಯರು ಇಲ್ಲದಿದ್ದ ಪಕ್ಷದಲ್ಲಿ ಸೋದರಿಯನ್ನು ಹೋಲುವ ಸಂಬಂಧವುಳ್ಳ ಚಿಕ್ಕಪ್ಪನ ಮಗಳು ದೊಡ್ಡಪ್ಪನ ಮಗಳು, ಸ್ನೇಹಿತನ ಮಗಳು ಮುಂತಾದವರ ಮನೆಯಲ್ಲಿ ಪ್ರೀತಿಯ ಭೋಜನವನ್ನು ಸ್ವೀಕರಿಸಬೇಕು.

ಇದು ಸಂಪ್ರದಾಯವಾಗಿ ಆಚರಣೆಗೆ ಬಂದ ಪದ್ಧತಿ. ಇಂದು ಅಕ್ಕ ತಂಗಿಯರನ್ನು ಮನೆಗೆ ಕರೆದು ಅತಿಥ್ಯವನ್ನು ನೀಡಬೇಕು. ಭಾರತದ ಎಲ್ಲಾ ಪರ್ವಗಳು ಸಂಬಂಧವನ್ನು ಗಟ್ಟಿಗೊಳಿಸುವ ನಿಲುವನ್ನು ಹೊಂದಿರುವುದನ್ನು ಇಲ್ಲಿ ಕಾಣಬಹುದು.

ಅಮ್ಮನ ಚೌತಿ :

ಮನೆಯ ಶ್ರೇಯಸ್ಸಿಗಾಗಿ ಹಗಲಿರಲು ಬೇಸರವಿಲ್ಲದೆ ಪ್ರೀತಿಯಿಂದ ದುಡಿಯುವ ತಾಯಿಯನ್ನು ಇಂದು ಕೂಡಿಸಿ ಉಪಚರಿಸಬೇಕು. ಇದು ಹಲವು ಪ್ರಾಂತ್ಯಗಳಲ್ಲಿ ಸಂಪ್ರದಾಯವಾಗಿ ಆಚರಣೆಯಲ್ಲಿದೆ ಹಾಗೂ ಅರ್ಥಗರ್ಭಿತವಾಗಿದೆ. ಇಂದು ಮನೆ ಮಂದಿ ಎಲ್ಲರೂ ಸೇರಿ ಒಂದಾಗಿ ಸಂತೋಷದಿಂದ ಪಗಡೆಯಾಟ, ಚೌಕಾಬಾರಾ ಬಲಿಪಾಡ್ಯದಿಂದ ಪಂಚಮೀವರೆಗೆ 5 ದಿನಗಳು ಅಡುವ ಸಂಪ್ರದಾಯ ಹಲವೆಡೆ ಇದೆ.

ಪೋಷಕರಿಗೆ ಒಂದು ಸೂಚನೆ :

ಈ ಹಬ್ಬದ ಪ್ರತಿಯೊಂದು ಕೆಲಸಗಳನ್ನು ನಿಮ್ಮ ಮಕ್ಕಳನ್ನು ಸೇರಿಸಿಕೊಂಡು ಹಬ್ಬದ ಆಚರಣೆಯನ್ನು ನಡೆಸಿ. ಮಕ್ಕಳಿಗೆ ಆಚರಣೆಯ ಮಹತ್ವವನ್ನು ತಿಳಿಸಿಕೊಡಿ. ಆಹಾರ ಪದಾರ್ಥಗಳನ್ನು ಮಕ್ಕಳೊಂದಿಗೆ ಸಿದ್ಧಪಡಿಸಿ. ಇದರಿಂದ ಮಕ್ಕಳಿಗೆ ಪದಾರ್ಥಗಳನ್ನು ಸಿದ್ದಪಡಿಸುವ ಹಿಂದಿನ ಶ್ರಮ, ರುಚಿ, ಶುಚಿಯ ಮಹತ್ವ ತಿಳಿಯಲು ಸಹಾಯವಾಗುತ್ತದೆ. ಪ್ರತಿಯೊಂದು ಮಗು ತಾವು ತಿಳಿದ ವಿಷಯವನ್ನು ಆಧ್ಯಾಪಕರೊಂದಿಗೆ ಹಂಚಿಕೊಳ್ಳುವಂತೆ ಆಗಲಿ.

ಈ ಲೇಖನ ಒಂದು ಮಾದರಿ ಮಾತ್ರ, ನಿಮ್ಮ ಕುಲದ ಸಂಪ್ರದಾಯವನ್ನು ಕುಟುಂಬದ ಹಿರಿಯರಿಂದ ತಿಳಿದು ಅದರಂತೆ ಆಚರಿಸುವುದು ಬಹಳ ಉತ್ತಮ. ಇದಕ್ಕೆ ಅವಕಾಶ ಇಲ್ಲದ ಪಕ್ಷದಲ್ಲಿ ಈ ಲೇಖನ ಉಪಕಾರಿಯಾದೀತು.

|| ಶ್ರೀಕೃಷ್ಣಾರ್ಪಣ ಮಸ್ತು ||

ಲೇಖನ ಕೃಪೆ :  ಪೂರ್ಣಪ್ರಮತಿ.ಇನ್

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Auroville Bamboo Revolution | ಆರೋವಿಲ್ಲೆ ಮಡಿಲಲ್ಲಿ ಬಿದಿರಿನ ಕ್ರಾಂತಿ : ಹಸಿರು ಹೊನ್ನಿನ ಮನೆಗೆ ಸರಿಸಾಟಿ ಎಲ್ಲಿ?

Next Post

Lal Salaam Film | ರಜನಿಕಾಂತ್ ನಟನೆಯ ‘ಲಾಲ್ ಸಲಾಂ’ ಚಿತ್ರದ ದೃಶ್ಯಾವಳಿ ಮಿಸ್ಸಿಂಗ್? : ತಲೈವಾ ಪುತ್ರಿಗೆ ತಲೆಬಿಸಿ

Next Post

Lal Salaam Film | ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಚಿತ್ರದ ದೃಶ್ಯಾವಳಿ ಮಿಸ್ಸಿಂಗ್? : ತಲೈವಾ ಪುತ್ರಿಗೆ ತಲೆಬಿಸಿ

Ayurveda Health Tips | ನಿಮ್ಮ ಆರೋಗ್ಯಕರ ಜೀವನಕ್ಕೆ ದಿನಚರ್ಯ ಹೇಗಿರಬೇಕು? ಇಲ್ಲಿದೆ ಸಮಗ್ರ ಮಾರ್ಗದರ್ಶಿ

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d