Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಬಿಬಿಎಂಪಿಯ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳು ಭೂಗಳ್ಳರ ಪಾಲು?: ಗುತ್ತಿಗೆ ಕೊಟ್ಟ 372 ಸ್ವತ್ತುಗಳ ಬಗ್ಗೆ ಪಾಲಿಕೆ ಬಳಿಯಿಲ್ಲ ಸೂಕ್ತ ಮಾಹಿತಿ!! ಬೆಂಗಳೂರು ವೈರ್ ಹೊರಗೆಡುವುತ್ತಿದೆ ಗಂಭೀರ ವಿಚಾರ

1905 ಇಸವಿಯಿಂದ ಹಿಡಿದು 1983 ಇಸವಿಯಲ್ಲೇ ಪಾಲಿಕೆ ಸ್ವತ್ತುಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಅವುಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವ, ನವೀಕರಣ ಮಾಡಿಕೊಳ್ಳುವ ಹಾಗೂ ಬಾಕಿ ಮೊತ್ತ ಸಂಗ್ರಹಿಸುವ ಕಾರ್ಯಕ್ಕೆ ಪಾಲಿಕೆ ಕಂದಾಯ ವಿಭಾಗ ಮುಂದಾಗುತ್ತಿಲ್ಲ ಯಾಕೆ? ಪಾಲಿಕೆ ಸ್ವತ್ತುಗಳ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ? ಇಲ್ಲಿದೆ Special Report.

by Bengaluru Wire Desk
October 14, 2023
in Bengaluru Focus, BW Special, Public interest
Reading Time: 2 mins read
0
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14 www.bengaluruwire.com : ನಗರದಲ್ಲಿ ಭೂಮಿ ಬೆಲೆ ಅಡಿ ಅಡಿಗೂ ಸಾವಿರಾರು ರೂಪಾಯಿ ಮೌಲ್ಯವಿದೆ. ಭೂಮಾಫಿಯಾ, ನೆಲಗಳ್ಳರು ನಗರದಲ್ಲಿ ಜಾಗ ಲಪಟಾಯಿಸಲು ಇನ್ನಿಲ್ಲದಂತೆ ಪ್ರಯತ್ನ ಮಾಡ್ತಿರ್ತಾರೆ. ಇದೆಲ್ಲಾ ಗೊತ್ತಿದ್ದೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ತನ್ನ ಸ್ವತ್ತನ್ನು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಿದ ಅವಧಿ ಮುಗಿದು 40-50 ವರ್ಷಗಳು ಕಳೆದರೂ ಬಾಕಿ ವಸೂಲಿ ಮಾಡಿ ಮರುವಶಕ್ಕೆ ಪಡೆಯುವ ಅಥವಾ ನವೀಕರಣ ಮಾಡುವ ಗೋಜಿಗೇ ಹೋಗಿಲ್ಲ.

ಪಾಲಿಕೆಯಲ್ಲಿ  ಸದ್ಯ 225 ವಾರ್ಡ್ ಗಳಿದ್ದು, ಇದಕ್ಕೂ 198 ವಾರ್ಡ್ ಹಾಗೂ ಅದಕ್ಕಿಂತ ಮುಂದೆ 100 ವಾರ್ಡ್ ಗಳಿದ್ದವು. ಮೂಲ ಬೆಂಗಳೂರಿನಲ್ಲಿ ಹಿಂದಿನ ಬೆಂಗಳೂರು ನಗರ ಪಾಲಿಕೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಪಶ್ಚಿಮ ವಲಯಗಳಷ್ಟೇ ಇದ್ದವು. ಈ ಮೂರು ವಲಯಗಳಲ್ಲಿ ಒಟ್ಟು 157 ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿರುವ ಹಾಗೂ ಗುತ್ತಿಗೆ ಅವಧಿ ನವೀಕರಣಗೊಳ್ಳದಿರುವ ಆಸ್ತಿಗಳಿವೆ. ಈ ಗುತ್ತಿಗೆ ನೀಡಿರುವ ಆಸ್ತಿಗಳ ಪೈಕಿ, 1905ನೇ ಇಸವಿಯಲ್ಲೇ ಗುತ್ತಿಗೆ ಮುಗಿದ ಆಸ್ತಿಗಳಿಂದ ಹಿಡಿದು 1957, 1958, 1971, 1972, 1981 ಹೀಗೆ ಪಾಲಿಕೆ ಸ್ವತ್ತುಗಳ ಗುತ್ತಿಗೆ ಅವಧಿ ಮುಗಿದು ಹಲವು ದಶಕಗಳೇ ಸಂದರೂ ಈತನಕ ಪಾಲಿಕೆ ಸಂಬಂಧಿಸಿದ ಅಧಿಕಾರಿಗಳನ್ನು ಬಿಬಿಎಂಪಿಯ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಗೋಜಿಗೇ ಹೋಗಿಲ್ಲ. ಕೆಲವು ಪ್ರಕರಣಗಳಲ್ಲಿ ಸ್ವತ್ತಿನ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕೆಲವು ಪ್ರಕರಣಗಳಲ್ಲಿ ಕೋರ್ಟ್ ನಲ್ಲಿ ಕೇವಿಯಟ್ ಆರ್ಜಿ ಸಲ್ಲಿಸಿ ಕೈತೊಳೆದುಕೊಂಡಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್.

ಪಾಲಿಕೆಯ ಬಹುತೇಕ ಆಸ್ತಿಗಳು ನಗರದ ಕೇಂದ್ರ ಭಾಗದಲ್ಲಿದ್ದು, ಇವುಗಳನ್ನು ಸಾರ್ವಜನಿಕವಾಗಿ ಮರು ಹರಾಜು ಹಾಕಿ ಅಥವಾ ಗುತ್ತಿಗೆಯನ್ನು ಪ್ರಸ್ತುತ ಮಾರುಕಟ್ಟೆ ದರದ ಅನ್ವಯ ಲೆಕ್ಕ ಹಾಕಿ ನವೀಕರಣ ಮಾಡಿದರೆ ಪಾಲಿಕೆ ವರ್ಷಂಪ್ರತಿ ನೂರಾರು ಕೋಟಿ ರೂಪಾಯಿ ಆದಾಯ ಲಭ್ಯವಾಗುತ್ತದೆ. ಆದ್ರೆ ಪಾಲಿಕೆ ಆದಾಯ ಸಂಗ್ರಹ ವಿಚಾರದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಅಂಶವು ಬಿಬಿಎಂಪಿ ಆಸ್ತಿ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಈ ಮೂರು ವಲಯಗಳ ಜಂಟಿ ಆಯುಕ್ತರಿಗೆ 14.09.2023ರಂದು ಬರೆದ ಪತ್ರದಿಂದ ತಿಳಿದು ಬಂದಿದೆ.

ಈ ಮೂರು ಕೋರ್ ಜೋನ್ ಗಳಲ್ಲಿನ 157 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ಇವುಗಳಿಗೆ ಸಂಪೂರ್ಣವಾಗಿ ಗುತ್ತಿಗೆ ಮೊತ್ತ ಪಾವತಿಯಾಗಿದ್ಯಾ? ಅಥವಾ ಎಷ್ಟು ಆಸ್ತಿಗಳು ಬಾಕಿ ಮೊತ್ತ ಪಾವತಿಸಿಲ್ಲ? ಭೋಗ್ಯದ ಅವಧಿ ಮುಕ್ತಾಯಗೊಂಡಿರುವ ಆಸ್ತಿಗಳು ನವೀಕರಣವಾಗಿದೆಯಾ ಅಥವಾ ನವೀಕರಣಗೊಳ್ಳದಿದ್ದಲ್ಲಿ ಪಾಲಿಕೆ ವಶಕ್ಕೆ ಪಡೆಯಲು ಕೈಗೊಂಡಿರುವ ಕ್ರಮವೇನು? ಎಂಬ ಬಗ್ಗೆ ಆಸ್ತಿ ವಿಭಾಗಕ್ಕೆ ಅತಿ ಶೀಘ್ರವಾಗಿ ವರದಿ ನೀಡುವಂತೆ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

 ಪಾಲಿಕೆಯ 225 ವಾರ್ಡ್ ಗಳಲ್ಲಿ ವರ್ಷಂಪ್ರತಿ ಪಾಲಿಕೆಗೆ ಹೊಸ ಹೊಸ ಸ್ವತ್ತುಗಳು ಸೇರ್ಪಡೆಯಾದರೂ ಅವುಗಳ ಸಮರ್ಪಕವಾಗಿ ಮಾಹಿತಿಯನ್ನು ಆಸ್ತಿ ಶಾಖೆಯ ಆಸ್ತಿವಹಿಯಲ್ಲಿ ಸರಿಯಾಗಿ ದಾಖಲು ಮಾಡುವಲ್ಲಿ ಕಂದಾಯ ವಿಭಾಗದ ಸಿಬ್ಬಂದಿ ಸಂಪೂರ್ಣವಾಗಿ ವಿಫಲವಾಗಿರುವುದು ಬಿಬಿಎಂಪಿ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಬಿಬಿಎಂಪಿಯ 8 ವಲಯಗಳಿಗೆ ಆಗಸ್ಟ್ 29ರಂದು ಬರೆದ ಪತ್ರದಲ್ಲಿ ಬಹಿರಂಗವಾಗಿದೆ.

5.61 ಕೋಟಿ ರೂ. ಅಲ್ಲ ಬದಲಿಗೆ 35.21 ಕೋಟಿ ರೂ. ವಸೂಲಿಯಾಗಬೇಕು:

2018-19ನೇ ಸಾಲಿನಿಂದ 2021-222ನೇ ಸಾಲಿನ 4 ವರ್ಷಗಳ ಅವಧಿಗೆ 372 ಪಾಲಿಕೆ ಆಸ್ತಿಗಳನ್ನು ನಗರದ ವಿವಿಧೆಡೆಯಲ್ಲಿ ಗುತ್ತಿಗೆ ಅಥವಾ ಬಾಡಿಗೆಗೆ ನೀಡಲಾಗಿದ್ದು ಹಾಗೂ ಅವಧಿಯು ಮುಗಿದು ನವೀಕರಣಗೊಳ್ಳದೇ ಇರುವ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಮೊತ್ತ ಕೇವಲ 5,61,46,235 (5.61 ಕೋಟಿ ರೂ.) ಎಂದು ಪಾಲಿಕೆಯ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ 17.07.2023ರ ವರೆಗೆ ಬಿಬಿಎಂಪಿ ಕೇಂದ್ರ ಕಚೇರಿ ಆಸ್ತಿ ವಿಭಾಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ಆಸ್ತಿ ವಿಭಾಗದ ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್ 8 ವಲಯಗಳ ಜಂಟಿ ಆಯುಕ್ತರಿಗೆ ಪಾಲಿಕೆ ಆಸ್ತಿಗಳ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳವಂತೆ ಬರೆದ ಪತ್ರದ ದಾಖಲೆ.

ಆದರೆ ಮುಖ್ಯ ಲೆಕ್ಕಪರಿಶೋಧಕರು (Chief Auditor) ಈ ಆಸ್ತಿಗಳಿಂದ 35,21,05,327 (35.21 ಕೋಟಿ ರೂ.) ಹಣ ಬಾಕಿ ವಸೂಲಿಯಾಗಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅಂದರೆ ಎಆರ್ ಒಗಳು ನೀಡಿದ ಮಾಹಿತಿಗೂ, ಮುಖ್ಯ ಲೆಕ್ಕಪರಿಶೋಧಕರು ನೀಡಿರುವ ಬಾಕಿ ವಸೂಲಿ ಮೊತ್ತವನ್ನು ಗಮನಿಸಿದಾಗ 29,59,59,092 (29.59 ಕೋಟಿ ರೂ.) ರೂ.ಗಳಷ್ಟು ಬಾಕಿ ವಸೂಲಿ ವ್ಯತ್ಯಾಸ ಕಂಡು ಬಂದಿದೆ. ಇದು ಎಆರ್ ಒಗಳು ಪಾಲಿಕೆ ಆಸ್ತಿ ಸಂರಕ್ಷಣೆ ವಿಚಾರ, ಬಾಡಿಗೆ ಅಥವಾ ಗುತ್ತಿಗೆ ಮೊತ್ತ ವಸೂಲಿಯಲ್ಲಿ ಎಷ್ಟು ನಿರ್ಲಕ್ಷ್ಯ ತೋರಿದ್ದಾರೆ ಎಂಬುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ನಗರದಲ್ಲಿದೆ ಪಾಲಿಕೆಯ 3,855 ಆಸ್ತಿಗಳು:

ಇನ್ನೊಂದು ಗಂಭೀರವಾದ ವಿಷಯ ಏನಪ್ಪಾ ಅಂದರೆ, ಪಾಲಿಕೆ ವ್ಯಾಪ್ತಿಯ ಸಹಾಯಕ ಕಂದಾಯ ಇಲಾಖೆ ಅಧಿಕಾರಿ (ARO)ಗಳ ಕಚೇರಿಯಿಂದ ನೀಡಿರುವ ದಾಖಲೆಗಳ ಅನ್ವಯ ಈ ವರ್ಷದ ಫೆ.15 ರಿಂದ ಒಂದು ವಾರಗಳ ಕಾಲ ಲೆಕ್ಕ ತನಿಖೆ ಕೈಗೊಂಡಾಗ ನಗರದಲ್ಲಿ ಒಟ್ಟು 3,855 ಪಾಲಿಕೆ ಆಸ್ತಿಗಳಿದ್ದು, ಅವುಗಳ ಪೈಕಿ 372 ಆಸ್ತಿಗಳನ್ನು ಬಿಬಿಎಂಪಿಯು ವಿವಿಧ ಸಂಘ ಸಂಸ್ಥೆ, ಸರ್ಕಾರಿ ಇಲಾಖೆ ಹಾಗೂ ವ್ಯಕ್ತಿಗಳಿಗೆ ಗುತ್ತಿಗೆ ಹಾಗೂ ಬಾಡಿಗೆಗೆ ನೀಡಿದೆ. ಆದರೆ ಸಹಾಯಕ ಕಂದಾಯ ಇಲಾಖೆ ಅಧಿಕಾರಿಗಳು ಹೀಗೆ ಗುತ್ತಿಗೆ ಹಾಗೂ ಬಾಡಿಗೆಗೆ ನೀಡಿರುವ ಆಸ್ತಿಗಳ ಪೈಕಿ ಕೇವಲ 145 ಆಸ್ತಿಗಳ ಕಡತಗಳನ್ನಷ್ಟೇ ಲೆಕ್ಕ ಪರಿಶೋಧನಾ ಇಲಾಖೆಗೆ ಹಾಜರುಪಡಿಸಿದೆ. ಆದರೆ ಉಳಿದ 227 ಕಡತಗಳನ್ನು ಆಡಿಟ್ ಮಾಡಲು ಫೈಲ್ ಗಳನ್ನು ಕೊಟ್ಟೇ ಇಲ್ಲ. ಹೀಗಾಗಿ ಸಂಪೂರ್ಣವಾಗಿ ಲೆಕ್ಕಪರಿಶೋಧನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ 227 ಕಡತಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಿ, ಬಾಡಿಗೆ, ಗುತ್ತಿಗೆ ಮೊತ್ತ ವಸೂಲಿಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಎಂದು ವಿಶೇಷ ಆಯುಕ್ತರು ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಧಿವೇಶನಕ್ಕೂ ಪಾಲಿಕೆ ಆಸ್ತಿಗಳ ಕುರಿತಂತೆ ಅಪೂರ್ಣ ಮಾಹಿತಿ!!! :

ಸರ್ಕಾರದ ಅಧಿವೇಶನ ಸಂದರ್ಭದಲ್ಲಿ ಚುಕ್ಕೆ ಗುರುತಿನ ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ನಿಗಧಿತ ಅವಧಿಯಲ್ಲಿ ಅಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದೆ. ಅದೇ ರೀತಿ ಸಂಬಂಧಪಟ್ಟ ಉಪ ವಿಭಾಗಗಳಿಂದ ಪಾಲಿಕೆ ಆಸ್ತಿ ಕುರಿತ ಮಾಹಿತಿಯನ್ನು ಕ್ರೋಢೀಕರಿಸಿ ಸಲ್ಲಿಸದೇ ಯಥಾವತ್ತಾಗಿ ಸಲ್ಲಿಸುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರವಾಣಿ, ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಲಾಗಿದ್ದರೂ ವಿಳಂಬವಾಗಿ ಮಾಹಿತಿ ಸಲ್ಲಿಸುತ್ತಿರುವುದಲ್ಲದೆ, ಅಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದು ಪಾಲಿಕ ಆಸ್ತಿ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ವಲಯ ಜಂಟಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಆಸ್ತಿಗಳ ಬಗ್ಗೆ ಎ ಮತ್ತು ಎಂ ನಮೂನೆಯಂತೆ ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಆಸ್ತಿಗಳ ಮಾಹಿತಿಗಳನ್ನು ತಂತ್ರಾಂಶದಲ್ಲಿ ತ್ವರಿತಗತಿಯಲ್ಲಿ ದಾಖಲಿಸುವ ಮೂಲಕ ಪಾಲಿಕೆ ಆಸ್ತಿಗಳ ಸಂರಕ್ಷಣೆಯಲ್ಲಿ ಪ್ರಗತಿ ಸಾಧಿಸುವಂತೆಯೂ ಅವರು ಜಂಟಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ. ಅದೇ ರೀತಿ ಈ ಮಾಹಿತಿಗಳನ್ನು ರಾಜ್ಯ ಸರ್ಕಾರದ ಕೆಜಿಐಎಸ್ ಪೋರ್ಟಲ್ (KGIS PORTAL) ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಪಾಲಿಕೆ ಸ್ವತ್ತುಗಳ ಮಾಹಿತಿ ದೊರಕುವಂತೆ ಮಾಡಬೇಕೆಂದು ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಡಿಎ ನಿಂದ ಒಮ್ಮೆಗೆ ಆಸ್ತಿ ಹಸ್ತಾಂತರಕ್ಕೆ ಸೂಚನೆ :

ಬಿಡಿಎನಿಂದ ಪಾಲಿಕೆಗೆ ಹಲವಾರು ಬಡಾವಣೆಗಳು ಹಸ್ತಾಂತರಿಸಲಾಗಿದ್ದು, ಕೆಲವೊಂದು ಪ್ರಕರಣಗಳಲ್ಲಿ ಸಿಎ ನಿವೇಶನ, ಉದ್ಯಾನವನ, ರಸ್ತೆ ಹಾಗೂ ಇನ್ನಿತರೆ ಸ್ವತ್ತುಗಳನ್ನು ಬೇರೆ ಬೇರೆಯಾಗಿ ವಿವಿಧ ದಿನಾಂಕಗಳಂದು ಹಸ್ತಾಂತರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಈ ಆಸ್ತಿಗಳನ್ನು ಒಮ್ಮೆಗೆ ಹಸ್ತಾಂತರ ಮಾಡಿಕೊಳ್ಳಲು ಕ್ರಮವಹಿಸಿ, ಅವುಗಳ ಮಾಹಿತಿಯನ್ನು ಆಸ್ತಿ ಶಾಖೆಯ ಆಸ್ತಿ ರಿಜಿಸ್ಟರ್ ನಲ್ಲಿ ದಾಖಲಿಸಲು ಪ್ರಸ್ತಾವನೆ ಸಲ್ಲಿಸುವಂತೆಯೂ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಪಾಲಿಕೆ ಗುತ್ತಿಗೆ ಆಸ್ತಿಗಳ ವಿವರ ಸಂಗ್ರಹಕ್ಕೆ ಸಿಬ್ಬಂದಿ ನಿಯೋಜನೆ :

ಇನ್ ಟೈಮ್ ನಲ್ಲಿ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಗಳು ಪಾಲಿಕೆ ಸ್ವತ್ತುಗಳ ಗುತ್ತಿಗೆ ಅಥವಾ ಬಾಡಿಗೆಗಳ ಮೊತ್ತ, ಬಾಕಿ ಮೊತ್ತ, ಖಾಸಗಿ ಅಥವಾ ಸಂಘ ಸಂಸ್ಥೆಗಳಿಗೆ ವಾಣಿಜ್ಯ ಉಪಯೋಗಕ್ಕಾಗಿ ಗುತ್ತಿಗೆ ಅವಧಿ ಮುಕ್ತಾಗೊಂಡಿರುವ ಸ್ವತ್ತುಗಳು, ನವೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಕೆಯಾಗಿರುವ ಹಾಗೂ ಪಾಲಿಕೆ ವಶಕ್ಕೆ ಹಿಂಪಡೆಯಬೇಕಾಗಿರುವ ಸ್ವತ್ತುಗಳ ವಿವರಗಳನ್ನು ಸಂಗ್ರಹಿಸಿ ಸರಿಯಾಗಿ ಆಸ್ತಿ ವಿಭಾಗಕ್ಕೆ ನೀಡುತ್ತಿಲ್ಲ. ಹೀಗಾಗಿ ಆಸ್ತಿ ವಿಭಾಗದ ಸಹಾಯಕ ಆಯುಕ್ತೆ, ವ್ಯವಸ್ಥಾಪಕರು ಹಾಗೂ ಪ್ರಥಮ ದರ್ಜೆ ಸಹಾಯಕ ಸಿಬ್ಬಂದಿಯನ್ನು ಅ.10 ರಿಂದ 13ರ ವರೆಗೆ ಈ ಮಾಹಿತಿಗಳನ್ನು 8 ವಲಯಗಳಿಂದ ಸಂಗ್ರಹಿಸಲು ಅಧಿಕೃತವಾಗಿ ನಿಯೋಜಿಸಲಾಗಿತ್ತು. ಇಲ್ಲಿಯವರೆಗೆ ಪಾಲಿಕೆಯ ಬಳಿಯಿರುವ 3,855 ಆಸ್ತಿಗಳಿದ್ದರೂ, ಕೇವಲ 1,300 ಸ್ವತ್ತುಗಳಿಗೆ ಮಾತ್ರ ಪಿಐಡಿ (Property Identification Number) ನಂಬರ್ ಗಳನ್ನಷ್ಟೇ ನೀಡಲಾಗಿದೆ. ಹಾಗೆಂದ ಮೇಲೆ ಪಾಲಿಕೆ ಸ್ವತ್ತುಗಳಿಗೆ ಬೇಲಿ ಹಾಕಿ ಸಂರಕ್ಷಿಸಿ, ಸೂಕ್ತ ಖಾತೆ, ಸ್ವತ್ತಿನ ಅಳತೆ, ವಿಸ್ತೀರ್ಣ, ಚೆಕ್ ಬಂದಿ ಮತ್ತಿತರ ಮಾಹಿತಿಗಳ ಬಗ್ಗೆ ಆಸ್ತಿ ರಿಜಿಸ್ಟರ್ ನಲ್ಲಿ ಎಷ್ಟರ ಮಟ್ಟಿಗೆ ದಾಖಲಿಸಿ ಇಟ್ಟಿರಬಹುದು ಎಂಬುದು ಗೊತ್ತಾಗುತ್ತಿದೆ.

ಬಿಬಿಎಂಪಿಯ ಆಸ್ತಿ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಪಾಲಿಕೆ ಸ್ವತ್ತುಗಳ ಸಂರಕ್ಷಣೆ ಬಗ್ಗೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದರೂ, ಪಾಲಿಕೆ ವ್ಯಾಪ್ತಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿಯ ಸಮರ್ಪಕ ಸಹಕಾರದ ಕೊರತೆಯಿಂದ ಪಾಲಿಕೆ ಸ್ವತ್ತುಗಳು ಭೂಗಳ್ಳರ ಪಾಲಾಗುವ ದಿನ ದೂರವಿಲ್ಲ. ಈಗಾಗಲೇ ಬಿಬಿಎಂಪಿಯ ಸ್ವತ್ತುಗಳ ನಿಖರ ಮಾಹಿತಿ, ದಾಖಲೆಗಳಿಲ್ಲದೆ ಕೋಟ್ಯಾಂತ ರೂಪಾಯಿ ಮೌಲ್ಯದ ಆಸ್ತಿಗಳು ಪಾಲಿಕೆಯ ಕೈತಪ್ಪುತ್ತಿದೆ. ಈ ಬಗ್ಗೆ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಜ್ಞ ನಾಗರೀಕರು ಒತ್ತಾಯಿಸುತ್ತಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Cyber Crime News | ನಿಮ್ಮ ದುಡಿಮೆಯ ಹಣ ಸೈಲೆಂಟಾಗಿ ಸೈಬರ್ ವಂಚಕರ ಪಾಲಾಗುತ್ತಿದೆ ಎಚ್ಚರ : OTP ಬರದಂತೆ ಹಣ ಕದಿಯುವ ಖತರ್ ನಾಕ್ ಸೈಬರ್ ವಂಚಕರು!!: ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

Next Post

Mysore Dasara 2023 | ನಾಡಹಬ್ಬ ದಸರಾ ಮಹೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ಚಾಲನೆ : ಸಾಂಸ್ಕೃತಿಕ ನಗರದಲ್ಲಿ ಕಳೆಗಟ್ಟಿದ ಸಂಭ್ರಮ

Next Post
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದೀಪ ಬೆಳಗುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಚಾಲನೆ ನೀಡಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ಸದಸ್ಯರು ಪಾಲ್ಗೊಂಡಿದ್ದರು.

Mysore Dasara 2023 | ನಾಡಹಬ್ಬ ದಸರಾ ಮಹೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ಚಾಲನೆ : ಸಾಂಸ್ಕೃತಿಕ ನಗರದಲ್ಲಿ ಕಳೆಗಟ್ಟಿದ ಸಂಭ್ರಮ

ಇಸ್ರೋ ಗಗನಯಾನ ಯೋಜನೆ : ಅ.21ಕ್ಕೆ ಪರಿಕ್ಷಾರ್ಥ ಉಡಾವಣೆ ; ಏನೆಲ್ಲಾ ಪರೀಕ್ಷೆಗಳು ನಡೆಯುತ್ತೆ? ಇವು ಎಷ್ಟು ಮುಖ್ಯ?

Please login to join discussion

Like Us on Facebook

Follow Us on Twitter

Recent News

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d