ನವದೆಹಲಿ, ಜು.21 www.bengaluruwire.com : ಬಿಜೆಪಿ ಕರ್ನಾಟಕದ ಉಪಾಧ್ಯಕ್ಷೆ ಹಾಗೂ ಅದಮ್ಯ ಚೇತನದ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಗುರುವಾರ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕುಟುಂಬ ಸಮೇತರಾಗಿ ಭೇಟಿಯಾದರು.
ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ದೊಡ್ಡ ಮಗಳಾದ ಐಶ್ವರ್ಯ, ಅಳಿಯ ದಿವ್ಯೇಶ ಮತ್ತು ಮೊಮ್ಮಗ ಅಪ್ರಮೇಯ ಪ್ರಧಾನಿ ಅವರೊಂದಿಗೆ ಉಭಯ ಕುಶಲೋಪರಿ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಕೆಲ ಕ್ಷಣ ತೇಜಸ್ವಿನಿ ಅನಂತಕುಮಾರ್ ಮೊಮ್ಮಗ ಅಪ್ರಮೇಯ ಜೊತೆ ಕಾಲ ಕಳೆದು ಅವನನ್ನು ಮುದ್ದಿಸಿದರು.
ತೇಜಸ್ವಿನಿ ಅನಂತಕುಮಾರ್ ಕುಟುಂಬ ಪ್ರಧಾನಿವರ ಜೊತೆ ಫೊಟೊ ತೆಗೆಸಿಕೊಂಡ ಸಂದರ್ಭದಲ್ಲಿ ಮೋದಿ, ಬಾಲಕ ಅಪ್ರಮೇಯಯನ ಎರಡು ಕಿವಿಯನ್ನು ಹಿಡಿದು ಫೊಟೋಗೆ ಪೋಸ್ ನೀಡಿರುವುದು, ಅವರಲ್ಲಿನ ಮಕ್ಕಳ ಮೇಲಿನ ಮುಗ್ಧ ಪ್ರೀತಿಯನ್ನು ಎದ್ದು ತೋರಿಸುವಂತಿತ್ತು.