ಪಾರ್ಕ್, ಫಿಲಮ್ ಥಿಯೇಟರ್ ಗಳಾಯ್ತು. ಇದೀಗ ಯುವ ಜೋಡಿಯೊಂದು ಮೆಟ್ರೊ ಕೋಚ್ ನಲ್ಲೇ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಪರಸ್ಪರ ಚುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರೋದು ದೆಹಲಿ ಮೆಟ್ರೋ ರೈಲು ನಿಗಮ (DRMC) ಮೆಟ್ರೊ ರೈಲಿನಲ್ಲಿ. ಇಂತಹ ಘಟನೆಯ ನಡೆದ ಬಗ್ಗೆ ವರದಿಯಾದ ಬಳಿಕ ದೆಹಲಿ ಮೆಟ್ರೊ ತನ್ನ ಪ್ರಯಾಣಿಕರಿಗೆ “ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಿರಿ” ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಇದಾದ ಬಳಿಕ
ಡಿಎಂಆರ್‌ಸಿಯು ಪ್ರಯಾಣಿಕರಿಗೆ ಇಂತಹ ಘಟನೆಗಳನ್ನು “ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ/ಸಿಐಎಸ್‌ಎಫ್‌ಗೆ ತಕ್ಷಣ ತಿಳಿಸಲು ವಿನಂತಿಸಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬಹುದು” ಎಂದು ತಿಳಿಸಿದೆ.
ಈ ವೈರಲ್ ವಿಡಿಯೋ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಇಂಟರ್ ನೆಟ್ ಬಳಕೆದಾರರು ಕೋಪ ಮತ್ತು ಹಾಸ್ಯದಿಂದ ಪ್ರತಿಕ್ರಿಯಿಸಿದ್ದಾರೆ. ವೀಡಿಯೊದಲ್ಲಿ, ಹುಡುಗಿ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತಿರುವ ಯುವಕನ ಮಡಿಲಲ್ಲಿ ಮಲಗಿರುತ್ತಾರೆ. ಅದಾಗಿ ಕೆಲವೇ ಕ್ಷಣದಲ್ಲಿ ಇಬ್ಬರೂ ಅನ್ಯೋನ್ಯವಾಗಲು ಪ್ರಾರಂಭಿಸುತ್ತಾರೆ. ಯುವಕನು ಪಕ್ಕದಲ್ಲಿರುವ ಸಹ ಪ್ರಯಾಣಿಕರಿದ್ದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಅವಳ ತುಟಿಗಳಿಗೆ ಚುಂಬಿಸುತ್ತಾನೆ. ದಿನಾಂಕವಿಲ್ಲದ ಈ ವಿಡಿಯೊವು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಆ ಯುವ ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ದೆಹಲಿ ಮೆಟ್ರೋ ನಿಗಮವನ್ನು ಒತ್ತಾಯಿಸಿದ್ದಾರೆ.
ಆದರೆ ಕೆಲವರು ಈ ಕೃತ್ಯವನ್ನು ಚಿತ್ರೀಕರಿಸುವ ಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ, ಅವರು “ಅವರಿಗೆ ಸಿಪಿಆರ್ ನೀಡುತ್ತಿದ್ದಾರೆ, ಅದರಲ್ಲಿ ತಪ್ಪೇನು?”.
ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಚಿತ್ರೀಕರಿಸಲಾದ ಅನೇಕ ವೀಡಿಯೊಗಳು ವೈರಲ್ ಆಗಿವೆ. ಏತನ್ಮಧ್ಯೆ, ಡಿಎಂಆರ್‌ಸಿ ಹೇಳಿಕೆಯಲ್ಲಿ, “ದೆಹಲಿ ಮೆಟ್ರೋವನ್ನು ಬಳಸುವಾಗ ತನ್ನ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಎಲ್ಲಾ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ನಿರೀಕ್ಷಿಸುತ್ತದೆ” ಎಂದು ಹೇಳಿದೆ.
“ಪ್ರಯಾಣಿಕರು ಯಾವುದೇ ಅಸಭ್ಯ/ಅಶ್ಲೀಲ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು, ಅದು ಇತರ ಸಹ ಪ್ರಯಾಣಿಕರ ಸಂವೇದನೆಯನ್ನು ಕೆರಳಿಸಬಹುದು. ಡಿಎಂಆರ್ ಸಿ ಯ ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಕಾಯಿದೆಯು ವಾಸ್ತವವಾಗಿ ಸೆಕ್ಷನ್ 59 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪಟ್ಟಿಮಾಡುತ್ತದೆ” ಎಂದು ಅದು ತಿಳಿಸಿದೆ.
ಘಟನೆಯ ಬಗ್ಗೆ ವ್ಯಾಪಕ ಖಂಡನೆ :
ಪುಣ್ಯಕ್ಕೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಇಂತಹ ಘಟನೆಗಳು ನಡೆಯದಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದಿದ್ದರೆ, ಅಥವಾ ಇದು ತಮ್ಮ ಜೀವನ ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಎಂಬ ದರ್ಪವೋ ಏನೊ ಈ ರೀತಿಯ ಘಟನೆಗಳು ಆಗಾಗ ಮರುಕಳಿಸಲು ಕಾರಣವಿರಬಹುದು. ಬಸ್, ರೈಲು ಮತ್ತಿತರ ಸಾರಿಗೆ ಸೇವೆಯಲ್ಲಿ ಇಂತಹ ಘಟನೆಗಳು ನಡೆದಾಗ ಮುಲಾಜಿಲ್ಲದೆ ಖಂಡಿಸಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.