ನವದೆಹಲಿ, ಮಾ.22 www.bengaluruwire.com : ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರ ಅನುಕೂಲಕ್ಕೆಂದು ಅವರ ವಿವಿಧ ಆದಾಯ ಮೂಲಗಳ ಮಾಹಿತಿ ವಿವರ ಇರುವ, ವಾರ್ಷಿಕ ಮಾಹಿತಿ ಹೇಳಿಕೆ (AIS) ಅಥವಾ ತೆರಿಗೆದಾರರ ಮಾಹಿತಿ ಸಾರಾಂಶ (TIS) ವೀಕ್ಷಿಸಲು “ಎಐಎಸ್ ಫಾರ್ ಟ್ಯಾಕ್ಸ್ ಪೇಯರ್” (AIS For Taxpayer) ಮೊಬೈಲ್ ಆಂಡ್ರಾಯ್ಡ್ ಆಪ್ ಅನ್ನು ಬಿಡುಗಡೆ ಮಾಡಿದೆ.
ಈ ಅಪ್ ನಲ್ಲಿ ಆದಾಯ ತೆರಿಗೆ ಪಾವತಿದಾರರು, ಲಭ್ಯವಿರುವ ಮಾಹಿತಿಯನ್ನು ವೀಕ್ಷಿಸಲು ತೆರಿಗೆದಾರಿಗೆ ಅನುಕೂಲವಾಗುವಂತೆ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ‘AIS for Taxpayer’ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ಉಚಿತವಾಗಿ ಒದಗಿಸಲಾದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಗೂಗಲ್ ಪ್ಲೇ ಸ್ಟೋರ್ (Google Play) ಹಾಗೂ ಆಪ್ ಸ್ಟೋರ್ (App Store)ನಲ್ಲಿ ಲಭ್ಯವಿದೆ ಎಂದು ಆದಾಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತೆರಿಗೆದಾರರಿಗೆ ಸಂಬಂಧಿಸಿದ ವಿವಿಧ ಮೂಲಗಳಿಂದ ಸಂಗ್ರಹಿಸಿದ ಸಮಗ್ರ ಮಾಹಿತಿಯನ್ನು ಫಾರಮ್ 26ಎಎಸ್ (Form 26AS) ನಡಿ ಒದಗಿಸುವ ಗುರಿಯನ್ನು ಅಪ್ಲಿಕೇಶನ್ ಹೊಂದಿದೆ. ಎಐಎಸ್ ಹಾಗೂ ಟಿಐಎಸ್ ನಲ್ಲಿ ಲಭ್ಯವಿರುವಂತೆ ಮೂಲದಲ್ಲೇ ತರಿಗೆ ಕಡಿತ (TDS), ಮೂಲದಲ್ಲೇ ತೆರಿಗೆ ಸಂಗ್ರಹ (TCS), ಬಡ್ಡಿ (Interest), ಲಾಭಾಂಶಗಳು (Profit), ಷೇರು ವಹಿವಾಟುಗಳು (Share Transaction), ತೆರಿಗೆ ಪಾವತಿಗಳು (Tax Payment), ಆದಾಯ ತೆರಿಗೆ ಮರುಪಾವತಿಗಳು (Tax Refund), ಇತರ ಮಾಹಿತಿ (ಜಿಎಸ್ ಟಿ ದತ್ತಾಂಶ -GST, ವಿದೇಶಿ ರವಾನೆಗಳು, ಇತ್ಯಾದಿ) ಗೆ ಸಂಬಂಧಿಸಿದ ತಮ್ಮ ಮಾಹಿತಿಯನ್ನು ವೀಕ್ಷಿಸಲು ತೆರಿಗೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬಹುದು.
ಈ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ನೀಡುವ ಆಯ್ಕೆಯನ್ನು ಮತ್ತು ಸೌಲಭ್ಯವನ್ನು ತೆರಿಗೆದಾರರು ಹೊಂದಿದ್ದಾರೆ. ಈ ಆಪ್ ಒಳಗೆ ಪ್ರವೇಶಿಸಲು, ತೆರಿಗೆದಾರರು ತಮ್ಮ ಪ್ಯಾನ್ ಸಂಖ್ಯೆ (Pan Card Number)ಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ನಲ್ಲಿ ಕಳುಹಿಸಲಾದ ಒಟಿಪಿ (OTP) ಯೊಂದಿಗೆ ದೃಢೀಕರಿಸಬೇಕು. ದೃಢೀಕರಣದ ನಂತರ, ತೆರಿಗೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು 4-ಅಂಕಿಯ ಪಿನ್ ಅನ್ನು ಹೊಂದಿಸಬಹುದು.
ಇದು ಆದಾಯ ತೆರಿಗೆ ಇಲಾಖೆಯ ಮತ್ತೊಂದು ಉಪಕ್ರಮವಾಗಿದ್ದು, ತೆರಿಗೆ ಪಾವತಿದಾರರು ಸುಗಮವಾಗಿ ತಮ್ಮ ತೆರಿಗೆ ಮಾಹಿತಿ ತಿಳಿಯಲು ಇಲಾಖೆ ಈ ಆಪ್ ಅಭಿವೃದ್ಧಿಪಡಿಸಿದೆ.