ಬೆಂಗಳೂರು, ಫೆ.12 www.bengaluruwire.com : ನಗರದ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ವೈಮಾನಿಕ ಪ್ರದರ್ಶನದ ಹಿನ್ನಲೆಯಲ್ಲಿ ಫೆ.13 ರಿಂದ ಐದು ದಿನಗಳ ಕಾಲ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಗಣ್ಯಾತಿಗಣ್ಯರು, ಸಾರ್ವಜನಿಕರು, ತುರ್ತು ವಾಹನಗಳು ಸಂಚರಿಸುವ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಕೆಲವು ಕಡೆ ಸಂಚಾರ ನಿರ್ಬಂಧಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಚಾರ ನಿರ್ಬಂಧಿಸಿದ ಕಡೆಗಳಲ್ಲಿ ಪರ್ಯಾಯ ಮಾರ್ಗಗಳ ಸಂಚಾರ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಕೆಳಕಂಡ ರಸ್ತೆಗಳಲ್ಲಿ ಭಾರೀ ವಾಹನಗಳ ನಿಷೇಧ ಹಾಗೂ ವಾಹನ ನಿಲುಗಡೆ ನಿರ್ಬಂಧ ಮಾಡಿದ್ದಾರೆ. ಕೆಲವು ಕಡೆ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೆ ತರಲಿದ್ದಾರೆ.
ಪಾಸ್ ಗಳನ್ನು ಹೊಂದಿರದ ಖಾಸಗಿ ವಾಹನಗಳನ್ನು, ಜಿಕೆವಿಕೆ ಆವರಣದ ಪಾರ್ಕಿಂಗ್ ಲಾಟ್ ಅಥವಾ ಜಕ್ಕೂರಿನಲ್ಲಿ ನಿಲುಗಡೆ ಮಾಡಿ, ಪಾರ್ಕಿಂಗ್ ಸ್ಥಳದಿಂದ ಏರೊ ಇಂಡಿಯಾ ಪ್ರದರ್ಶನ ನಡೆಯುವ ಸ್ಥಳದವರೆಗೆ ಬಿಎಂಟಿಸಿ ಬಸ್ ನಲ್ಲಿ ತೆರಳಬಹುದಾಗಿದೆ.
ಸಂಚಾರ ಬದಲಾವಣೆಯ ಮಾಹಿತಿ ಈ ಕೆಳಕಂಡಂತಿದೆ :