ದೇಶದ ಭೂಮಿ ಮೇಲಿನ ಸ್ವರ್ಗವೆಂದು ಹೇಳುವ ಹಿಮಾಚಲ ಪ್ರದೇಶ ಬರಿಗಣ್ಣಲ್ಲಿ ನೋಡುವುದೇ ಚೆಂದ. ಹೀಗಿರುವಾಗ ದೆಹಲಿ-ಕುಲು ವಿಮಾನದ ಪ್ರಯಾಣ ಸಂದರ್ಭದಲ್ಲಿ ಸೆರೆಹಿಡಿಯಲಾದ ಹಿಮಾಚಲ ಪ್ರದೇಶದ ಬೆಟ್ಟಗಳ ಬೆಳಗಿನ ಸೌಂದರ್ಯವನ್ನು ಸೆರೆಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋವನ್ನು ಸಿದ್ಧಾರ್ಥ್ ಬಕಾರಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಲಮೂಲದಿಂದ ಗುಡ್ಡಗಾಡು ಪ್ರದೇಶಗಳನ್ನು ಸೀಳಿಕೊಂಡು ಹೋಗಿರುವ ಮನೋಹರ ದೃಶ್ಯ ನೆಟ್ಟಿಗರನ್ನು ಸೆಳೆದಿದೆ. “ದಿಲ್ಲಿಯಿಂದ ಕುಲು ವಿಮಾನದಲ್ಲಿ ಹೋಗುವಾಗ, ಸೆರೆಹಿಡಿಯಲಾದ ಹಿಮಾಚಲ ಪ್ರದೇಶದ ಭವ್ಯವಾದ ಬೆಳಗಿನ ನೋಟ” ಎಂಬ ಶೀರ್ಷಿಕೆಯನ್ನು ಈ ವೀಡಿಯೊ ಹೊಂದಿದೆ.
ಈ ವಿಡಿಯೊವನ್ನು ಇದುವರೆಗೆ 1 ಕೋಟಿಗಿಂತಲೂ ಹೆಚ್ಚ ಜನರು ವೀಕ್ಷಿಸಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು, “ನೀವು ಪರ್ವತಗಳ ಮೇಲೆ ಹಾರಿದಾಗ ಪಡೆಯುವ ನೋಟವನ್ನು ಪ್ರೀತಿಸಿ – ಅವು ತುಂಬಾ ಸುಂದರ ಮತ್ತು ಶಾಶ್ವತವಾಗಿ ಹೋಗುತ್ತವೆ” ಎಂದಿದ್ದಾರೆ. ಇನ್ನೊಬ್ಬರು “ಕನಸುಗಳ ನೋಟ!” ಎಂದು ಬಣ್ಣಿಸಿದ್ದಾರೆ. ಮೂರನೇ ಬಳಕೆದಾರರು “ಏರೋಪ್ಲೇನ್‌ನಲ್ಲಿ ಇರಬೇಕಾದ ಏಕೈಕ ವಿಷಯಗಳಲ್ಲಿ ಇದು ಒಂದಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಈ ರೀತಿಯ ದೃಶ್ಯಗಳು ನನ್ನ ಪ್ರಯಾಣದ ಉತ್ಸಾಹವನ್ನು ಬಲಪಡಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.