ನವದೆಹಲಿ, ಜ.3 www.bengaluruwire.com : ದೇಶಾದ್ಯಂತ ತಲೆ ಎತ್ತಿರುವ ಆನ್ ಲೈನ್ ಗೇಮಿಂಗ್ ಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಆನ್ ಲೈನ್ ಗೇಮಿಂಗ್ ಗೆ ಕರಡು ನಿಯಮ ರೂಪಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
‘ಆನ್ ಲೈನ್ ಗೇಮಿಂಗ್ ಕಂಪನಿಗಳು ಆಟಗಳ ಫಲಿತಾಂಶಗಳ ಮೇಲೆ ಬೆಟ್ಟಿಂಗ್ ನಲ್ಲಿ ಭಾಗವಹಿಸುವಂತಿಲ್ಲ ಎಂದು ಆನ್ ಲೈನ್ ಗೇಮಿಂಗ್ ಕುರಿತಂತೆ ಕರಡು ನಿಯಮದಲ್ಲಿ ತಿಳಿಸಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಈ ವಿಷಯ ತಿಳಿಸಿದ್ದಾರೆ.
‘ಆನ್ ಲೈನ್ ಗೇಮಿಂಗ್ ನಿಯಮಗಳ ಕುರಿತು ಇರುವ ಸ್ವಯಂ ನಿಯಂತ್ರಕ ಸಂಸ್ಥೆಯಲ್ಲಿ ಎಲ್ಲ ಆನ್ ಲೈನ್ ಗೇಮಿಂಗ್ ಕಂಪನಿಗಳು ನೋಂದಾಯಿಸಿಕೊಳ್ಳಬೇಕು. ಈ ಕರಡು ನಿಯಮಗಳ ಬಗ್ಗೆ ಸಂಬಂಧಿಸಿದ ಕಂಪನಿಗಳು ಪ್ರತಿಕ್ರಿಯೆ ನೀಡಿಲು ಜನವರಿ 17ರ ಗಡುವನ್ನು ನೀಡಲಾಗಿದೆ. ಫೆಬ್ರವರಿ ತಿಂಗಳ ವೇಳೆಗೆಲ್ಲಾ ಈ ನಿಯಮಗಳು ಸಿದ್ಧವಾಗಲಿದೆ’ ಎಂದು ಅವರು ಹೇಳಿದ್ದಾರೆ.