ಸ್ಯಾನ್ ಫ್ರಾನ್ಸಿಸ್ಕೋ, ಡಿ.21 www.bengaluruwire.com : ಜಗತ್ತಿನ ಅತಿದೊಡ್ಡ ಸಾಮಾಜಿಕ ಮಾಧ್ಯಮವಾದ ಟ್ವಿಟರ್(Twiter) ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆ (CEO)ಯಿಂದ ಕೆಳಗಿಳಿಯುವುದಾಗಿ ಎಲೋನ್ ಮಸ್ಕ್ (Elon Musk) ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ಟ್ವಿಟರ್ ಸಮೀಕ್ಷೆಯಲ್ಲಿ ತಾವು ಆ ಹುದ್ದೆಯಿಂದ ಕೆಳಗಿಳಿಯುವಂತೆ ಟ್ವಿಟರ್ ಸಮೀಕ್ಷೆಯ ಫಲಿಕಾಂಶದ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
44 ಬಿಲಿಯನ್ ಡಾಲರ್ ನ ಕಂಪನಿಯನ್ನು ಖರೀದಿಸಿ ಅಕ್ಟೋಬರ್ 27ರಂದು ಟ್ವಿಟರ್ ಪ್ಲಾಟ್ ಫಾರ್ಮ್ ನ ಏಕೈಕ ಮಾಲೀಕರಾಗಿದ್ದರು. ಸೋಮವಾರ ಪೋಸ್ಟ್ ಮಾಡಿದ ಸಮೀಕ್ಷೆಯ ಫಲಿತಾಂಶಗಳಲ್ಲಿ, ಶೇ.57 ರಷ್ಟು ಬಳಕೆದಾರರು ಅಥವಾ 10 ಮಿಲಿಯನ್ ಮತಗಳ (1.76 ಕೋಟಿ ಮತಗಳು) ಮೂಲಕ ಟ್ವಿಟರ್ ಬಳಕೆದಾರರು, ಎಲೋನ್ ಮಸ್ಕ್ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯುವಂತೆ ಒಲವು ತೋರಿಸಿದ್ದರು. ಆಗ ಮಸ್ಕ್ ಟ್ವಿಟರ್ ನಲ್ಲಿ ಬಂದ ಫಲಿತಾಂಶಗಳಿಗೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ತಮ್ಮ ಹೇಳಿಕೆಯ ಬಗ್ಗೆ ಉಲ್ಟಾ ಹೊಡಿದಿದ್ದು, ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಗಳಲ್ಲಿ, ಉದ್ಯಮಿ ಬಾಟ್ ಗಳಿಂದ ತಾವು ಈ ಹುದ್ದೆಯಿಂದ ಕೆಳಗಿಳಿಯುವಂತೆ ತಮ್ಮ ವಿರುದ್ಧವಾಗಿ ಮತಗಳನ್ನು ಸಜ್ಜುಗೊಳಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ತಿಳಿಸಲಾಗಿದೆ.
ಆದರೆ ಪೋಲಿಂಗ್ ಕಂಪನಿ ಹ್ಯಾರಿಸ್ಎಕ್ಸ್ (HarrisX) ಮಂಗಳವಾರ ಟ್ವಿಟರ್ ಬಳಕೆದಾರರ ಸ್ವಂತ ಸಮೀಕ್ಷೆಯನ್ನು ಟ್ವೀಟ್ ಮಾಡಿದೆ, ಇದರಲ್ಲಿ 61 ಪ್ರತಿಶತದಷ್ಟು ಪ್ರತಿಕ್ರಿಯಿಸಿದವರು ಮಸ್ಕ್ ಅನ್ನು ಸಿಇಒ ಆಗಿ ಇರಿಸಲು ಮತ ಹಾಕಿದ್ದಾರೆ ಎಂದು ಹೇಳಿದೆ. ಇದಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, “ಆಸಕ್ತಿದಾಯಕವಾಗಿದೆ. ಟ್ವಿಟರ್‌ನಲ್ಲಿ ನಾವು ಇನ್ನೂ ಇಟ್ಸಿ ಬಿಟ್ಸಿ ಬೋಟ್ ಸಮಸ್ಯೆಯನ್ನು ಹೊಂದಿರಬಹುದು.” ಎಂದು ಹೇಳಿದ್ದಾರೆ.
ಇದೇ ಎಲೋನ್ ಮಸ್ಕ್, ಮಂಗಳವಾರವಷ್ಟೆ ‘ನಾನು ಸಿಇಒ ಹುದ್ದೆಗೆ ಬೇರೊಬ್ಬ ಸೂಕ್ತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ಆ ಬಳಿಕ ರಾಜಿನಾಮೆ ಕೊಡುತ್ತೇನೆ. ನಂತರ ತಾನು ಸಾಫ್ಟ್ ವೇರ್ ಮತ್ತು ಸರ್ವರ್ ಗಳ ತಂಡಗಳನ್ನು ನಡೆಸುತ್ತೇನೆ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಹ್ಯಾರಿಸ್‌ಎಕ್ಸ್, ಸಂಶೋಧನೆಗಳು ಟ್ವಿಟರ್‌ನಲ್ಲಿನ ಮತವನ್ನು “ಬಯಲಿಗೆಳೆದಿದೆ” (Debunk) ಎಂದು ಹೇಳಿದೆ, “ಟ್ವಿಟರ್ ಅಥವಾ ಯಾವುದೇ ಎಲೋನ್ ಮಸ್ಕ್ ಸಂಬಂಧಿತ ಸಂಸ್ಥೆಗಳಿಂದ” ಸಮೀಕ್ಷೆಯನ್ನು ಸ್ವತಂತ್ರವಾಗಿ ನಡೆಸಲಾಗಿದೆ ಎಂದು ತಿಳಿಸಿದೆ. ಟ್ವಿಟರ್ ಸಮೀಕ್ಷೆಯನ್ನು ಬಾಟ್‌ಗಳು ಹಿಂದಿಕ್ಕಿವೆ ಎಂದು ಸೂಚಿಸುವ ಮತ್ತೊಂದು ಟ್ವೀಟ್ ಅನ್ನು ಮಸ್ಕ್ ಅನುಮೋದಿಸಿದ್ದಾರೆ. ಭವಿಷ್ಯದ ಯಾವುದೇ ಸಮೀಕ್ಷೆಗಳು ಟ್ವಿಟರ್‌ನ ಪಾವತಿಸುವ ಚಂದಾದಾರರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಮಸ್ಕ್ ದೃಢಪಡಿಸಿದ್ದಾರೆ.
ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಅಮಾನತುಗೊಂಡ ಬಳಕೆದಾರರ ಖಾತೆಯನ್ನು ಮರುಸ್ಥಾಪಿಸುವುದು ಸೇರಿದಂತೆ ವೇದಿಕೆಯಲ್ಲಿ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಸ್ಕ್ ಟ್ವಿಟರ್ ಸಮೀಕ್ಷೆಗಳನ್ನು ಬಳಸಿದ್ದರು. ಸೋಮವಾರದ ಟ್ವಿಟರ್ ನ ಸಮೀಕ್ಷೆಯ ಫಲಿತಾಂಶದ ಮೂಲಕ ಎಲೋನ್ ಮಸ್ಕ್, ಟ್ವಿಟರ್‌ನಲ್ಲಿ ಕಡಿಮೆ ಸಮಯವನ್ನು ಕಳೆಯುತ್ತಾರೆ ಎಂದು ಎಂಬ ಹೂಡಿಕೆದಾರರ ಭರವಸೆ ಹೊಂದಿದದ ನಂತರ ಮಸ್ಕ್ ಅವರ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದಲ್ಲಿ ಷೇರು ಬೆಲೆ ಏರಿಕೆ ಕಂಡಿತ್ತು.