ಸೇನಾಪಡೆಯ ಭಾಗವಾಗಿರುವ ಎಎಸ್ ಸಿ ಕೇಂದ್ರದ 11 ನೇ ಎಎಸ್‌ಸಿ ಪುನರ್ಮಿಲನ ಮತ್ತು 262 ನೇ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ಮಿಲಿಟರಿ ಟ್ಯಾಟೂದಲ್ಲಿ 1 ಎಟಿಸಿ ನಾರ್ಥ್ ಕುದುರೆ ತಂಡದಿಂದ ಟೆಂಟ್ ಪೆಗ್ಗಿಂಗ್ ಪ್ರದರ್ಶನ ನಡೆಯಿತು. ಅಲ್ಲದೆ ಟೇಕ್ವಾಂಡೋ, ಪ್ಯಾರಾಮೋಟರ್ ಡೆಮೊ ಪ್ರದರ್ಶನ, ಬೆಂಕಿಯ ರಿಂಗ್ ನಲ್ಲಿ ಜಿಗಿಯುವ ಸಾಹಸ ಕಾರ್ಯಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು. ಬಾರಾಖಾನಾದಲ್ಲಿ ಮದ್ರಾಸ್ ರೆಜಿಮೆಂಟ್‌ನ ಸೈನಿಕರು ಕೇರಳದ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಎಎಸ್ ಸಿ ಯೋಧರು ಕುದುರೆ ಸಾಹಸ ಪ್ರದರ್ಶನ ಕೈಗೊಂಡರು. ಮೈಕ್ರೋಲೈಟ್ ವಿಮಾನ ಪ್ರದರ್ಶನ, ಮಿಲಿಟರಿ ಬ್ಯಾಂಡ್ ಪ್ರದರ್ಶನ ಕೂಡ ನಡೆಯಿತು. ಪ್ಯಾರಾ ಮೋಟಾರ್ ಡಿಸ್ಪ್ಲೇ ಮತ್ತು ಧೈರ್ಯಶಾಲಿ ಪ್ಯಾರಾಟ್ರೂಪರ್‌ಗಳಿಂದ ಫ್ರೀ ಫಾಲ್ ಮತ್ತು ಭಾರತೀಯ ವಾಯುಪಡೆಯ ಸಾರಂಗ್ ತಂಡದಿಂದ ಅದ್ಭುತವಾದ ವೈಮಾನಿಕ ಪ್ರದರ್ಶನ ನಡೆಯಿತು.