ಆನೆಮರಿಗಳು ನೋಡಲು ಬಲು ಚೆನ್ನ. ಅವುಗಳ ಚೇಷ್ಟೆ, ತಾಯಿ ಆನೆಯೊಂದಿಗಿನ ಅವುಗಳ ಒಡನಾಟ, ಹೊಸ ಕೌಶಲ್ಯಗಳನ್ನು ಕಲಿಯುವುದರ ದೃಶ್ಯಗಳು ಎಲ್ಲರಿಗೂ ಸಿಗುವುದು ದುರ್ಲಭ. ಸಾಮಾನ್ಯವಾಗಿ ಆನೆಮರಿಗಳು ತಮ್ಮ ಸೋಂಡಿಲನ್ನು ತನ್ನ ದೈನಂದಿನ ಆಹಾರದ ಅಗತ್ಯಗಳಿಗೆ, ಸ್ವಯಂ ರಕ್ಷಣೆಗೆ ಹೀಗೆ ವಿವಿಧ ರೀತಿಯಲ್ಲಿ ಬಳಸಲು ಹಾಗೂ ಅವುಗಳನ್ನು ನಿಯಂತ್ರಿಸಲು ಸರಿಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಒಂದೇ ಬಾರಿಗೆ ಆನೆ ಮರಿಗಳಿಗೆ ತನ್ನ ಸೋಂಡಿಲಿನ ಮೇಲೆ ನಿಯಂತ್ರಣ ಸಾಧಿಸಲು ಆಗದು.
ಟುಡೆ ಇಯರ್ಸ್ ಓಲ್ಡ್ ಎಂಬ ಇನ್ ಸ್ಟಾಗ್ರಾಮ್ ನಲ್ಲಿ ಆನೆ ಸಾಕುವ ಮಾವುತನೊಬ್ಬ ಒಂದು ಮರಿ ಆನೆಗೆ ಆಹಾರ ನೀಡುತ್ತಾನೆ. ಬಾಟಲಿಯಲ್ಲಿನ ಆಹಾರವನ್ನು ಸೇವಿಸಿದ ಆ ಪುಟ್ಟ ಮರಿ ಲಗುಬಗೆಯಲ್ಲಿ ನಡೆಯಲು ಓಡಲು ಆರಂಭಿಸಿದಾಗ ಆಕಸ್ಮಾತ್ ಆಗಿ ತನ್ನ ಸೋಂಡಿಲನ್ನೇ ತುಳಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ಸೆಕೆಂಡುಗಳ ಈ ವಿಡಿಯೋದಲ್ಲಿ ತನ್ನ ಸೋಂಡಿಲನ್ನೇ ತುಳಿದ ಆ ಪುಟ್ಟ ಆನೆಮರಿ ಅದನ್ನು ನೋಡಿ ಖುಷಿಪಟ್ಟಿತು. ವೀಡಿಯೊದಲ್ಲಿ ಇರುವ ಸಂದರ್ಶಕರು ಆನೆ ಮತ್ತು ಅದರ ಚೇಷ್ಟೆಗಳನ್ನು ಬಹಳ ಹತ್ತಿರದಿಂದ ಅಲ್ಲಿ ನೆರದಿದ್ದವರೆಲ್ಲರೂ ಗಮನಿಸುವುದನ್ನು ಸಹ ನೋಡಬಹುದು.
“ನಾನು ಈ ಒಂದು ಸಾಧ್ಯತೆಯನ್ನು ಎಂದಿಗೂ ಪರಿಗಣಿಸಲಿಲ್ಲ” ಎಂಬ ಶೀರ್ಷಿಕೆಯನ್ನು ವೀಡಿಯೊಗೆ ನೀಡಲಾಗಿದೆ. ಕ್ಲಿಪ್ ಅನ್ನು ಮೂಲತಃ ಇನ್‌ಸ್ಟಾಗ್ರಾಮ್ ಬಳಕೆದಾರರಾದ ರೇಗನ್ ಆಂಥೋನಿ ಅವರು ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. ಆಂಟನಿ ಅವರು ಕೀನ್ಯಾದಲ್ಲಿದ್ದಾಗ ಈ ವೀಡಿಯೊವನ್ನು ಚಿತ್ರೀಕರಿಸಿದ್ದರು. ಮರುಹಂಚಿಕೊಂಡ ಈ ವೀಡಿಯೊ 4.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು 2.24 ಲಕ್ಷ ಲೈಕ್‌ಗಳನ್ನು ಸಂಗ್ರಹಿಸಿದೆ. ಈ ಪೇಜ್ , “ಮೋಜಿನ ಸಂಗತಿ: ಆನೆ ಮರಿಗಳು ಸುಮಾರು ಒಂದು ವರ್ಷದವರೆಗೆ ತಮ್ಮ ಸೋಂಡಿಲುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಲಿಯುವುದಿಲ್ಲ.”
ಅನೇಕ ಇಂಟರ್ನೆಟ್ ಬಳಕೆದಾರರು ಆನೆಯ ಪರಿಸ್ಥಿತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಒಬ್ಬ ಇನ್ ಸ್ಟಾಗ್ರಾಮ್ ಬಳಕೆದಾರರು, “ಯಾರೋ ಈಗಲೇ ಅವನನ್ನು ಮುದ್ದಾಡಿ!” ಎಂದು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬರು “ತಿನ್ನುವಾಗ ನಿಮ್ಮ ನಾಲಿಗೆಯನ್ನು ನೀವೇ ಕಚ್ಚಿಕೊಂಡಂತೆ ಮರಿಯಾನೆಯ ಪರಿಸ್ಥಿತಿಯಾಗಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು, “ಅದು ಸುತ್ತಲೂ ಯಾರದರೂ ಅದನ್ನು ನೋಡಿದ ನಂತರ ತನಗೆ ಮುಜುಗರ ಆದಂತೆ ಪ್ರತಿಕ್ರಿಯಿಸಿತು” ಎಂದು ಪ್ರತಿಕ್ರಿಯಿಸಿದ್ದಾರೆ.
ನ್ಯಾಷನಲ್ ಜಿಯಾಗ್ರಾಫಿಕ್ ಟಿವಿ ವಾಹಿನಿಯ ಪ್ರಕಾರ, ಆನೆಮರಿಗಳು ತಮ್ಮ ಸೋಂಡಿಲನ್ನು ನಿಯಂತ್ರಿಸಲು ಕಲಿಯುವಾಗ ಈ ರೀತಿ ತನ್ನ ಸೋಂಡಿಲನ್ನು ಆಕಸ್ಮಾತಾಗಿ ತುಳಿದುಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ಒಂದು ರೀತಿಯ ಸ್ಥಳಾಂತರದ ವರ್ತನೆಯಾಗಿರಬಹುದು. ಎಳೆಯ ಆನೆಗಳು ತಮ್ಮ ಮುಂದಿನ ನಡೆಯ ಬಗ್ಗೆ ಖಚಿತತೆ ಇಲ್ಲದಿದ್ದಾಗ ತಮ್ಮ ಪಾದಗಳನ್ನು ಬೀಸುತ್ತವೆ ಮತ್ತು ಸೊಂಡಿಲುಗಳನ್ನು ತಿರುಗಿಸುತ್ತವೆ ಎಂದು ಆನೆ ತಜ್ಞೆ ಜಾಯ್ಸ್ ಪೂಲ್ ತಿಳಿಸಿದ್ದಾರೆ.