ಬೆಂಗಳೂರು, ಸೆ.6 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಕಳೆದ 51 ವರ್ಷಗಳ ದಾಖಲೆ ಮಳೆ ಮೊದಲ ಜೂನ್ ನಿಂದ ಸೆಪ್ಟೆಂಬರ್ 6ರ ತನಕ 899 ಮಿಲಿ ಮೀಟರ್ ಆಗಿದೆ. ಇದರಿಂದಾಗಿ ಬೆಂಗಳೂರಿನ 141 ಕೆರೆಗಳು ತುಂಬಿದ್ದು ಕೆರೆಗಳ ಸುತ್ತಮುತ್ತಲು ನೆಲೆಸಿರುವ ನಾಗರೀಕರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.
1999 ರಿಂದ 23 ವರ್ಷಗಳ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆಯಾಗಿದ್ದು ಇದೇ ಮೊದಲು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ 1971ರ ಇಸವಿಯಲ್ಲಿ 725 ಮಿಲಿ ಮೀಟರ್ ಮಳೆಯಾಗಿತ್ತು. ಬೆಂಗಳೂರಿಗೆ ಜೂನ್ 1ನೇ ತಾರೀಖಿನಿಂದ ಸೆಪ್ಟೆಂಬರ್ 6ನೇ ತಾರೀಖಿನವರೆಗೆ ವಾಡಿಕೆಯಂತೆ 319 ಮಿ.ಮೀ ಮಳೆಯಾಗುತ್ತೆ. ಆದರೆ ಈ ಬಾರಿ 760 ಮಿ.ಮೀ ಅಂದರೆ ಶೇ.138 ರಷ್ಟು ಹೆಚ್ಚಿಗೆ ಮಳೆಯಾಗಿದೆ.
ನಗರದಲ್ಲಿ ಜೂನ್ ತಿಂಗಳಲ್ಲಿ 161 ಮಿ.ಮೀ (71 ಮಿ.ಮೀ ವಾಡಿಕೆ ಮಳೆ), ಜುಲೈನಲ್ಲಿ 138 ಮಿ.ಮೀ (94 ಮಿ.ಮೀ ವಾಡಿಕೆ ಮಳೆ), ಆಗಸ್ಟ್ ನಲ್ಲಿ 332 ಮಿ.ಮೀ (123 ಮಿ.ಮೀ ವಾಡಿಕೆ ಮಳೆ), ಸೆಪ್ಟೆಂಬರ್ 1ರಿಂದ 6ನೇ ತಾರೀಖಿನ ತನಕ 76 ಮಿ.ಮೀ (20 ಮಿ.ಮೀ ವಾಡಿಕೆ ಮಳೆ) ಮಳೆಯಾಗಿರುವ ಕಾರಣದಿಂದ ನಗರದೆಲ್ಲೆಡೆಯ 141 ಕೆರೆಗಳು ತುಂಬಿದೆ.
ಹೀಗಾಗಿ ಕೆರೆಯ ನೀರು ತುಂಬಿ ರಸ್ತೆ ರಸ್ತೆಗಳಲ್ಲಿ ಜನರು ಬೋಟ್ ನಲ್ಲಿ ಸುರಕ್ಷಿತ ಸ್ಥಳಗಳಿಗೆ ಓಡಾಡುವಂತಾಗಿದೆ.
ಸೆಪ್ಟೆಂಬರ್ 1ನೇ ತಾರೀಖಿನಿಂದ 5ರ ತನಕದ ಒಟ್ಟು 5 ದಿನಗಳಲ್ಲಿ ಮಹದೇವಪುರ ವಲಯದಲ್ಲಿ ವಾಡಿಕೆಯಂತೆ 27 ಮಿ.ಮೀ ಮಳೆಯ ಬದಲಿಗೆ 104 ಮಿ.ಮೀ ಮಳೆಯಾಗಿದೆ. ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ವರುಣ ಅಬ್ಬರಿಸಿದ್ದಾನೆ. ಇದಲ್ಲದೆ ಬೊಮ್ಮನಹಳ್ಳಿ ವಲಯದಲ್ಲಿ ವಾಡಿಕೆಯಂತೆ 21 ಮಿ.ಮೀ ಮಳೆಯ ಬದಲಿಗೆ 80 ಮಿ.ಮೀ ಮಳೆಯಾಗಿದೆ. ಅಂದರೆ ಐದು ದಿನಗಳಲ್ಲಿ ಶೇ.290ರಷ್ಟು ಬೋರ್ಗೆದೆರಿದೆ.
ರಾಜರಾಜೇಶ್ವರಿ ನಗರ ವಲಯದಲ್ಲಿ ಶೇ.210 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾದ್ರೂ ಹೆಚ್ಚಿನ ಅನಾಹುತಗಳಾಗಿಲ್ಲ. ಪೂರ್ವ ವಲಯದಲ್ಲಿ 5 ದಿನದಲ್ಲಿ 27 ಮಿ.ಮೀ ಬದಲಿಗೆ 76 ಮಿ.ಮೀ ಮಳೆಯಾಗಿದೆ. ಅಂದರೆ ಶೇ.181 ರಷ್ಟು ಹೆಚ್ಚು ಮಳೆಬಿದ್ದಿದೆ. ಇದೇ ಕಾರಣಕ್ಕೆ ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಹಳೆ ಬೆಂಗಳೂರಿನ ಪೂರ್ವ ವಲಯದಲ್ಲಿ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರಿಪಾಡಲು ಪಡುವಂತಾಗಿದೆ.
ಮಹದೇವಪುರ ಜೋನ್ ನಲ್ಲಿ ಒಟ್ಟು 42 ಕೆರೆಗಳು ಹಾಗೂ, ಬೊಮ್ಮನಹಳ್ಳಿ ವಲಯದಲ್ಲಿ 30 ಕೆರೆಗಳು ತುಂಬಿಕೊಂಡಿದೆ.
ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ
ಬೊಮ್ಮನಹಳ್ಳಿ ವಲಯದಲ್ಲಿ ತುಂಬಿರುವ ಕೆರೆಗಳು : 1) ಗುಬ್ಬಲಾಳ 2)ಉತ್ತರಹಳ್ಳಿ 3) ಕೊತ್ನೂರು 4) ದೊಡ್ಡಕಲ್ಲಸಂದ್ರ 5) ಕೆಂಬತ್ತಹಳ್ಳಿ 6) ಚುಂಚಘಟ್ಟ 7) ಅಂಜನಾಪುರ 8) ಪುಟ್ಟೇನಹಳ್ಳಿ 9) ಕಾಳೇನ ಅಗ್ರಹಾರ 10) ಇಬ್ಬಲೂರು 11) ಅಗರ 12) ಮಂಗಮ್ಮನಪಾಳ್ಯ 13) ಅಗರ 14) ಮಂಗಮ್ಮನಪಾಳ್ಯ 15)ಪರಪ್ಪನ ಅಗ್ರಹಾರ 16) ಬಸಾಪುರ 17) ಬಸವನಪುರ 18) ಗೊಟ್ಟಿಗೆರೆ 19) ಸೋಮಸುಂದರಪಾಳ್ಯ 20) ಸಿಂಗಸಂದ್ರ 21) ಕೊಡಿಗೆ ಸಿಂಗಸಂದ್ರ 22) ಅರೆಕೆರೆ 23) ದೇವರಕೆರೆ 24) ಚಿಕ್ಕಮನಹಳ್ಳಿ 25) ಅಕ್ಷಯನಗರ 26) ಯೇಳೇನಹಳ್ಳಿ
ಆರ್‌ಆರ್‌ನಗರ ವಲಯದ ಕೆರೆಗಳು :
1) ಸೋಂಪುರ ಕೆರೆ, 2)ಹೇರೋಹಳ್ಳಿ ಕೆರೆ 3)ಹಂಡ್ರಹಳ್ಳಿ ಕೆರೆ
4) ಕೊಡಿಗೇಹಳ್ಳಿ ಕೆರೆ, 5) ಎಚ್.ಗೊಲ್ಲಹಳ್ಳಿ ಕೆರೆ 6) ಲಿಂಗದೀರನಹಳ್ಳಿ -13 ಕೆರೆಗಳು, 7) ಚಿಕ್ಕಬಸ್ತಿ ಕೆರೆ 8) ಗಾಂಧಿನಗರ ಹೊಸ್ಕೆರೆ, 9) ಕನ್ನಹಳ್ಳಿ ಕೆರೆ 10) ಸೂಲಿಕೆರೆ,
11) ಕೆಂಚನಾಪುರ ಕೆರೆ, 12) ಮಂಗಮ್ಮನಹಳ್ಳಿ ಕೆರೆ,13) ಮೈಲಸಂದ್ರ ಕೆರೆ, 14) ಬಸೇಗೌಡನ ಕೆರೆ 15) ಭೀಮನಕಟ್ಟೆ 16) ಲಿಂಗಧೀರನಹಳ್ಳಿ 17) ಮಲ್ಲತ್ತಳ್ಳಿ ಕೆರೆ 18) ನಾಗರಭಾವಿ, 19) ಶ್ರೀಗಂಧಕಾವಲ್ 20) ಭೀಮನಕುಪ್ಪೆ 21) ವಿಶ್ವನೀಡಂ 22) ಬೈಯಪ್ಪನಪಾಳ್ಯ ಕುಂಟೆ
ದಕ್ಷಿಣ ವಲಯದ ಕೆರೆಗಳು : 1) ಕೆಂಪಾಂಬುದಿ 2) ಬೈರಸಂದ್ರ 3) ಗೌಡನಪಾಳ್ಯ 4) ದೀಪಾಂಜಲಿ ಕೆರೆ
ಯಲಹಂಕ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು ಈ ರೀತಿಯಿದೆ : 1) ಯಲಹಂಕ, 2) ಅಲ್ಲಾಳಸಂದ್ರ, 3) ಅಟ್ಟೂರು, 4) ವೀರಸಾಗರ, 5) ಜಕ್ಕೂರ್, 6) ರಾಚೇನಹಳ್ಳಿ 7) ಅಮೃತಹಳ್ಳಿ, 8) ದೊಡ್ಡಬೊಮ್ಮಸಂದ್ರ 9) ನರಸೀಪುರ 10) ನರಸೀಪುರ 11) ಅಗ್ರಹಾರ 12) ವೆಂಕಟೇಶಪುರ 13) ಚೊಕ್ಕನಹಳ್ಳಿ 14) ಪಾಲನಹಳ್ಳಿ 15) ಕಟ್ಟಿಗೇನಹಳ್ಳಿ 16) ಕೋಗಿಲು 17) ಸಿಂಗಾಪುರ
ಮಹದೇವಪುರ ವಲಯದಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳು : 1 ಚಿಕ್ಕಬಸವನ ಪುರ ಕೆರೆ 2) ಮಹದೇವಪುರ ಕೆರೆ-1 3) ವಿಜನಾಪುರ ಕೆರೆ 4) ಸೀಗೆಹಳ್ಳಿ ಕೆರೆ 5) ದೇವಸಂದ್ರ ಕೆರೆ 6) ಚಳ್ಳಕೆರೆ ಕೆರೆ 7) ಕಲ್ಕೆರೆ 8) ವಿಭೂತಿಪುರ ಕೆರೆ 9) ಬೆನ್ನಿಗಾನಹಳ್ಳಿ ಕೆರೆ 10) ಹೊರ್ಮಾವು ಅಗರ ಕೆರೆ 11) ನಗರೇಶ್ವರ-ನಾಗೇನಹಳ್ಳಿ ಕೆರೆ 12) ಗಂಗಶೆಟ್ಟಿ ಕೆರೆ 13) ಹೊರಮಾವು ಕೆರೆ 14) ವೆಂಗೈಹ್ನ ಕೆರೆ 15) ಮಹದೇವಪುರ ಕೆರೆ-2 16) ಬಿ. ನಾರಾಯಣಪುರ ಕೆರೆ 17) ಭಟ್ಟರಹಳ್ಳಿ ಕೆರೆ 18) ಕೌಡೇನಹಳ್ಳಿ ಕೆರೆ 19) ಅಂಬಲಿಪುರ ಕೆಳಗಿನ ಕೆರೆ 20) ಗುಂಜೂರು ಕರ್ಮೇಲರಂ ಕೆರೆ 21) ಪಾಣತ್ತೂರು ಕೆರೆ 22) ವಾರಣಾಸಿ ಸರೋವರ 23) ಅಂಬ್ಲಿಪುರ ಮೇಲಿನ ಕೆರೆ 24) ಕೈಗೊಂಡನಹಳ್ಳಿ ಕೆರೆ 25) ಕಸವನಹಳ್ಳಿ ಕೆರೆ 26) ಹರಳೂರು ಕೆರೆ 27) ಸೌಲ್ ಕೆರೆ 28) ದೇವರಬೀಸನಹಳ್ಳಿ ಕೆರೆ 29) ದೊಡ್ಡಕಾನೇನಹಳ್ಳಿ ಕೆರೆ 30) ಮುನ್ನೆಕೊಳಲು ಕೆರೆ 31) ಚಿನ್ನಪ್ಪನಹಳ್ಳಿ ಕೆರೆ 32)ಶೀಲವಂತನ ಕೆರೆ 33) ಕುಂದಲಹಳ್ಳಿ ಕೆರೆ 34) ಸಿದ್ದಾಪುರ ಕೆರೆ 35) ಗರುಡಾಚಾರ್ ಪಾಳ್ಯ ಕೆರೆ 36) ಗರುಡಾಚಾರ್ ಪಾಳ್ಯ (ಗೋಶಾಲೆ) 37) ದೊಡ್ಡನೆಕ್ಕುಂದಿ ಕೆರೆ 38) ಹೂಡಿ ಕೆರೆ 39) ನಲ್ಲೂರಳ್ಳಿ ಟ್ಯಾಂಕ್ 40) ಸೀತಾರಾಮ್ ಪಾಳ್ಯ ಕೆರೆ 41) ಪಟ್ಟಂದೂರು ಅಗ್ರಹಾರ ಕೆರೆ 42) ರಾಂಪುರ ಕೆರೆ
ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಆದಷ್ಟು ಮುಂಜಾಗ್ರತೆವಹಿಸಿದರೆ ಉತ್ತಮ.
ಕೆರೆ ಹೋರಾಟಗಾರರು ಏನ್ ಹೇಳ್ತಾರೆ?
“ಬೆಂಗಳೂರಿನಲ್ಲಿ ಬಹುತೇಕ ಕೆರೆಗಳು ತುಂಬಿವೆ. ಆದರೆ ಅವುಗಳಲ್ಲಿ ಬಹುತೇಕ ಕೆರೆಗಳು ಕೊಳಚೆ ನೀರು, ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿರುವುದು ನಿಜಕ್ಕೂ ದುಖಃಕರ ವಿಷಯ. ಈ ಕೆರೆಗಳು ಶುದ್ಧವಾಗಿದ್ದರೆ ನಗರದ ಅಂತರ್ಜಲಕ್ಕೆ ಗುಣಮಟ್ಟದ ನೀರು ಹೋಗುತ್ತಿತ್ತು. ನಗರದಲ್ಲಿ 10 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಎಸ್ ಟಿಪಿಗಳು ಹಾಳಾಗಿದೆ. ಹಾಗಾಗಿ ಆ ಕೆರೆಗಳು ಮಾಲಿನ್ಯಯುಕ್ತವಾಗಿದೆ”
– ಮಾಧುರಿ, ಕೆರೆ ಸಂರಕ್ಷಣೆ ಹೋರಾಟಗಾರರು