ವಿಶ್ವದೆಲ್ಲೆಡೆಯಿಂದ ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವಕ್ಕೆ ಶುಭ ಹಾರೈಕೆಗಳು ಹರಿದುಬರುತ್ತಿರುವ ನಡುವೆಯೇ ಆಕಾಶದಿಂದಲೂ ದೇಶಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಭಾರತ- ಅಮೆರಿಕ ಗಗನಯಾನಿ ರಾಜಾಚಾರಿ, ದೇಶದಿಂದ ಹೊರಗಿರುವ ಭಾರತೀಯರಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಿಂದ ಭಾರತದ ರಾಷ್ಟ್ರಧ್ವಜದ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿ ತ್ರಿವರ್ಣ ಧ್ವಜ ಹಿಂಬದಿ ಭೂಮಿಯ ಚಿತ್ರವು ಕಾಣುತ್ತಿದೆ.
ರಾಜಾಚಾರಿ ಇತ್ತೀಚೆಗಷ್ಟೇ ಐಎಸ್ಎಸ್ ನಿಲ್ದಾಣದಿಂದ ಸ್ಪೇಸ್ ಎಕ್ಸ್ ಗಗನನೌಕೆಯ ಮೂಲಕ ಮೆಕ್ಸಿಕೋ ಕೊಲ್ಲಿಯಲ್ಲಿ ಇವರು ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಮೇ ತಿಂಗಳಿನಲ್ಲಿ ಭೂಮಿಗೆ ಬಂದಿಳಿದಿದ್ದರು.
‘ಭಾರತೀಯ ಸ್ವಾತಂತ್ರ್ಯದ ಮುನ್ನಾದಿನದಂದು ಭಾರತದ ಚದುರುವಿಕೆಯನ್ನು ನಾನು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ನನ್ನ ತಂದೆಯ ಪೂರ್ವಜರ ತವರೂರಾದ ಭಾರತದಲ್ಲಿನ ಹೈದರಾಬಾದ್, ಪ್ರಕಾಶಿಸುತ್ತಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಭಾರತೀಯರು ಮತ್ತು ಅಮೆರಿಕನ್ನರು ಪ್ರತಿದಿನ ವ್ಯತ್ಯಾಸ ಹೊಂದುತ್ತಿರಲು ನಾಸಾ ಒಂದು ಸ್ಥಳವಾಗಿದೆಯಷ್ಟೆ. ಭಾರತೀಯ ರಾಯಭಾರಿ ಕಚೇರಿಯು ಅಮೆರಿಕದಲ್ಲಿ ಸಂಭ್ರಮಾಚರಿಸುವುದನ್ನು ಎದುರು ನೋಡುತ್ತೇನೆ’ ರಾಜಾಚಾರಿ ಟ್ವೀಟ್ ಮಾಡಿದ್ದಾರೆ.
ರಾಜಾಚಾರಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ (NASA)ದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2017ರಲ್ಲಿ ಗಗನಯಾನಿಯಾಗಿ ಆಯ್ಕೆ ಮಾಡಲಾಗಿತ್ತು. ಅಮೆರಿಕದ ವಿಸ್ಕೋನ್ ಸಿನ್ ನ ಮಿಲ್ವಾಕೀನಲ್ಲಿ ಹುಟ್ಟಿದ್ದ ಭಾರತೀಯ ಮೂಲದ ರಾಜಾಚಾರಿ ಲೊವಾ ಸಿಡರ್ ಫಾಲ್ಸ್ ನಲ್ಲಿ ಬೆಳೆದಿದ್ದರು. ಹಾಲಿ ಸ್ಕಾಫ್ಟರ್ ಚಾರಿ ಎಂಬಾಕೆಯನ್ನು ಮದುವೆಯಾಗಿರುವ ಇವರಿಗೆ ಮೂರು ಮಕ್ಕಳಿದ್ದಾರೆ.
ನಾಸಾ ವೆಬ್ ಸೈಟ್ ನಲ್ಲಿ ರಾಜಾಚಾರಿ ಕುರಿತಂತೆ ನೀಡಿರುವ ಮಾಹಿತಿಯಲ್ಲಿ, ಲೊವಾದ ವಾಟರ್ ಲೂ ನಲ್ಲಿನ ಕೊಲಂಬಸ್ ಹೈಸ್ಕೂಲ್ ನಲ್ಲಿ ಓದಿ, ಕೊಲರೆಡೊ ಅಮೆರಿಕ ಏರ್ ಫೋರ್ಸ್ ಅಕಾಡೆಮಿಯಲ್ಲಿ ಕಲಿತು ವೈಮಾನಿಕ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು. ಮಸಾಚುಯೇಟ್ಸ್ ಕೇಂಬ್ರೀಡ್ಜ್ ನಲ್ಲಿರುವ ಮೆಸಾಚುಯೇಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಾಯುಯಾನ (Aeronautics) ಮತ್ತು ಅಂತರಿಕ್ಷಯಾನ (Astronautics)ದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಅಮೆರಿಕ ವಾಯುಪಡೆಯ ಸೇನಾಪತಿಯಾಗಿರುವ ರಾಜಾಚಾರಿ, ಎರಡು ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ.ರಾಜಾಚಾರಿ ತಾತ ತೆಲಂಗಾಣದಲ್ಲಿರುವ ಮೆಹಬೂಬಾ ನಗರದ ನಿವಾಸಿಯಾಗಿದ್ದು, ಹೈದರಾಬಾದ್ ನಲ್ಲಿರುವ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರೊಫೆಸರ್ ಆಗಿದ್ದರು.
ಇದೇ ವಿಶ್ವವಿದ್ಯಾಲಯದಲ್ಲಿ ರಾಜಾಚಾರಿ ತಂದೆ ಶ್ರೀನಿವಾಸ ಆಚಾರಿ ಎಂಜಿನಿಯರಿಂಗ್ ಪದವಿ ಓದಿ ತದನಂತರ ಅಮೆರಿಕದಲ್ಲಿ ನೆಲಸಿದ್ದರು. ರಾಜಾಚಾರಿ ಹೈದರಾಬಾದ್ ನಲ್ಲಿರುವ ತಮ್ಮ ಸಂಬಂಧಿಗಳನ್ನು ಭೇಟಿ ಮಾಡಲು ಹಲವು ಬಾರಿ ಭಾರತಕ್ಕೆ ಬಂದಿದ್ದರು.