ಬೆಂಗಳೂರು, ಜೂ.17, www.bengaluruwire.com : ರಾಜ್ಯದಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ACB)ದ 555 ಅಧಿಕಾರಿ ಮತ್ತು ಸಿಬ್ಬಂದಿ ಶುಕ್ರವಾರ ಬೆಳ್ಳಂಬೆಳಗ್ಗೆ ವಿವಿಧ ಸರ್ಕಾರಿ ಇಲಾಖೆಗಳ 21 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 80 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ಅಧಿಕಾರಿಗಳು ಮನೆ, ಅವರ ಸಂಬಂಧಿಕರಿಗಳಿಗೆ ಸೇರಿದ ಮನೆ, ಕಚೇರಿ ಮತ್ತಿತರ ಸ್ಥಳಗಳದಲ್ಲಿ ದಾಳಿ ಮಾಡುತ್ತಿದ್ದಂತೆ ಅದೆಷ್ಟೋ ಅಧಿಕಾರಿಗಳು ಬೆಚ್ಚಿ ಬಿದ್ದರು. ಕೆಲವು ಅಧಿಕಾರಿಗಳು ಆದಾಯಕ್ಕಿಂತ ಹಲವು ಪಟ್ಟು ಹಣ, ಆಸ್ತಿ ಸಂಪಾದಿಸಿದ್ದನ್ನು ನೋಡಿದ ಎಸಿಬಿ ಅಧಿಕಾರಿಗಳು ಸಹ ಸುಸ್ತಾಗಿದ್ದಾರೆ.
ಎಸಿಬಿ ದಾಳಿ ಯಾರ ಮೇಲೆ ಮತ್ತು ಎಲ್ಲಿ ನಡೆದಿದೆ..?
1.ಭೀಮ ರಾವ್ ವೈ ಪವಾರ್, ಸೂಪರಿಡಿಟೆಂಟ್ ಇಂಜಿನಿಯರ್ ಬೆಳಗಾವಿ
- ಹರೀಶ್, ಸಹಾಯಕ ಅಭಿಯಂತರರು, , ಸಣ್ಣ ನೀರಾವರಿ , ಉಡುಪಿ
- ರಾಮಕೃಷ್ಣ ಎಚ್. ವಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹಾಸನ
- ರಾಜೀವ್ ಪುರಸಯ್ಯ ನಾಯಕ್, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕಾರವಾರ
- ಬಿ. ಆರ್. ಬೋಪಯ್ಯ, ಕಿರಿಯ ಅಭಿಯಂತರರು, ಪೊನ್ನಂ ಪೇಟೆ ಜಿಲ್ಲಾ ಪಂಚಾಯತ್,
- ಮಧುಸೂದನ್, ಜಿಲ್ಲಾ ರಿಜಿಸ್ಟರ್, ಐಜಿಆರ್ ಕಚೇರಿ, ಬೆಂಗಳೂರು
- ಪರಮೇಶ್ವರಪ್ಪ, ಸಹಾಯಕ ಅಭಿಯಂತರರು, ಸಣ್ಣ ನೀರಾವರಿ, ಹೂವಿನಡಗಲಿ
- ಯಲ್ಲಪ್ಪ ಎನ್ ಪದಸಾಲಿ, ಆರ್ಟಿಒ, ಬಾಗಲಕೋಟೆ
- ಶಂಕರಪ್ಪ ನಾಗಪ್ಪ ಗೋಗಿ, ಯೋಜನ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ
- ಪ್ರದೀಪ್ ಎಸ್ ಆಲೂರು, ಪಂಚಾಯಿತಿ ಗ್ರೇಡ್ ಕಾರ್ಯದರ್ಶಿ, ಆರ್ಡಿಪಿಆರ್, ಗದಗ
- ಸಿದ್ದಪ್ಪ ಟಿ, ಉಪ ಮುಖ್ಯ ಎಲೆಕ್ಟ್ರಿಕಲ್ ಅಧಿಕಾರಿ, ಬೆಂಗಳೂರು
- ತಿಪ್ಪಣ್ಣ ಪಿ ಸಿರಸಂಗಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಬೀದರ್.
- ಮೃತ್ಯುಂಜಯ ಚನ್ನಬಸಯ್ಯ ತಿರಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ವೆಟೆರ್ನಿಟಿ, ಅನಿಮಲ್ ಮತ್ತು ಫಿಷರಿ ಸೈನ್ಸ್ ಯೂನಿವರ್ಸಿಟಿ, ಬೀದರ್
- ಮೋಹನ್ ಕುಮಾರ್, ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ.
- ಶ್ರೀಧರ್, ಜಿಲ್ಲಾ ರಿಜಿಸ್ಟರ್, ಕಾರವಾರ
- ಮಂಜುನಾಥ್ ಜಿ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ
- ಶಿವಲಿಂಗಯ್ಯ, ಗ್ರೂಪ್ ಸಿ ನೌಕರ, ಬಿಡಿಎ
- ಉದಯ ರವಿ, ಪೊಲೀಸ್ ಇನ್ಸ್ಪೆಕ್ಟರ್, ಕೊಪ್ಪಳ
- .ಬಿ.ಜಿ. ತಿಪ್ಪಯ್ಯ, ಕೇಸ್ ವರ್ಕರ್, ಕುದೂರು ಪುರಸಭೆ.
- ಚಂದ್ರಪ್ಪ ಸಿ. ಹೊಳೆಕಾರ್, ಯುಟಿಪಿ, ಅಧಿಕಾರಿ, ರಾಣಿಬೆನ್ನೂರು.
- ಜನಾರ್ಧನ್, ನಿವೃತ್ತ, ರಿಜಿಸ್ಟರ್ ಭೂ ಮೌಲ್ಯಮಾಪಕರು, ಬೆಂಗಳೂರು.
ಪಿಡಬ್ಲ್ಯುಡಿ ಅಧಿಕಾರಿ ಮನೆಯ ಬಾತ್ ರೂಮಲ್ಲಿ ಕಂತೆ ಕಂತೆ ಹಣ :
ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರನಾಗಿರುವ ಭೀಮರಾವ್ ಯಶವಂತ ಪವಾರ್( ಬಿ.ವೈ ಪವಾರ್) ಮನೆಯ ಬಾತ್ ರೂಮ್ ನಲ್ಲಿ ಲಕ್ಷ ಲಕ್ಷ ರೂಪಾಯಿ ಹಣ ಸಿಕ್ಕಿದೆ.
ಮನೆಯಲ್ಲಿ ಬಾತ್ರೂಮ್ ಸ್ನಾನಕ್ಕೆ ಕಟ್ಟಿಸಿದ್ದರೆ, ಈ ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮ್ನಲ್ಲಿ 5 ಲಕ್ಷ ರೂ. ಹಣವಿಟ್ಟಿರೋದು ಎಸಿಬಿ ದಾಳಿಯ ವೇಳೆಯಲ್ಲಿ ಪತ್ತೆಯಾಗಿದೆ.
ಜೂನ್ 30ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದ ಬಿವೈ ಪವಾರ್
ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಅಧಿಕಾರಿಯಾಗಿದ್ದರು. ಜೂನ್ 30ರಂದು ನಿವೃತ್ತಿ ಅಂಚಿನಲ್ಲಿದ್ದರು. ಆದರೆ ಅಕ್ರಮ ಸಂಪತ್ತನ್ನು ಗಳಿಸಿರುವ ಆರೋಪದ ಮೇಲೆ ಅವರ ಮನೆ ಮೇಲೆ ಎಸಿಬಿ ದಾಳಿಯಾಗಿದೆ.
ಎಜಿಒ ಅಧಿಕಾರಿ ಮನೆಯಲ್ಲಿ 39 ಲಕ್ಷ ರೂ. ನಗದು ಪತ್ತೆ
ಬೆಂಗಳೂರಿನಲ್ಲಿ ಸಹಾಯಕ ನೋಂದಣಿ ಮಹಾ ಪರಿವೀಕ್ಷ (AGO)ರಾಗಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್ ಅವರ ರಾಜಾಜಿನಗರ ಹಾಗೂ ಬಸವೇಶ್ವರ ಮನೆಗಳಲ್ಲಿ ಪರಿಶೀಲನೆ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮಧುಸೂದನ್ ಅವರ ಬಳಿ 39 ಲಕ್ಷ ರೂ. ನಗದು, 2.3 ಕೆಜಿ ಚಿನ್ನಾಭರಣ ಹಾಗೂ 4.9 ಕೆ.ಜಿ ಬೆಳ್ಳಿಯ ಆಭರಣಗಳು ಪತ್ತೆಯಾಗಿದೆ. ಇದಲ್ಲದೆ ಎಸಿಬಿ ಅಧಿಕಾರಿಗಳು ಇತರೆ ಆಸ್ತಿಪಾಸ್ತಿಗಳ ಕುರಿತ ದಾಖಲೆಗಳಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಎಸಿಬಿ ಅಧಿಕಾರಿಗಳು ಈ 21 ಅಧಿಕಾರಿಗಳಿಗೆ ಸೇರಿದ 80 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಸಿಬಿ ದಾಳಿ ಮುಗಿದ ಬಳಿಕವಷ್ಟೇ ಯಾವ ಅಧಿಕಾರಿ ಎಷ್ಟು ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂಬುದು ಸಂಪೂರ್ಣವಾಗಿ ತಿಳಿದುಬರಲಿದೆ.