ಬೆಂಗಳೂರು, ಜೂ.9 www.bengaluruwire.com : ಯುನಿಸಿಸ್ ಕಾರ್ಪೊರೇಷನ್ (NYSE:UIS) ತನ್ನ ಹದಿಮೂರನೆಯ ವರ್ಷದ ಯೂನಿಸಿಸ್ ಇನ್ನೊವೇಷನ್ ಪ್ರೊಗ್ರಾಮ್ (Unisys Innovation Program) ತಾಂತ್ರಿಕ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಘೋಷಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಮೂಲಕ ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚಿನ ಕಾಲೇಜುಗಳಿಂದ ಸುಮಾರು 200 ತಾಂತ್ರಿಕ ಪ್ರಾತ್ಯಕ್ಷಿಕೆಗಳನ್ನು ಪಡೆದುಕೊಂಡಿತ್ತು.
ಮುಂಚೆ ಕ್ಲೌಡ್ 20/20TM ಎಂದು ಕರೆಯಲ್ಪಡುತ್ತಿದ್ದ ಈ ಹೆಮ್ಮೆಯ ವಾರ್ಷಿಕ ತಂತ್ರಜ್ಞಾನ ಉತ್ಸವ, ತಂತ್ರಜ್ಞಾನ ಉದ್ಯಮ ಮತ್ತು ಶಿಕ್ಷಣದ ನಡುವಿನ ಕೊಂಡಿಯಾಗುತ್ತಿದೆ. ಆ ಮೂಲಕ ಆವಿಷ್ಕಾರಗಳಿಗೆ ಹೊಸ ಆಯಾಮಗಳನ್ನು ಸೃಷ್ಟಿಸುವತ್ತ ಕೊಡುಗೆ ನೀಡುತ್ತಿದೆ.
ಇನ್ನೂರಕ್ಕೂ ಹೆಚ್ಚಿನ ಪ್ರಾತ್ಯಕ್ಷಿಕೆಗಳಿಂದ, ಯುನಿಸಿಸ್ ಸಂಸ್ಥೆಯ ವಿಶೇಷ ತಜ್ಞರ ತಂಡ ಸುಮಾರು 89 ವಿದ್ಯಾರ್ಥಿ ತಂಡಗಳನ್ನು UIP ಮೂಲಕ ಆಯ್ಕೆ ಮಾಡಿ ತರಬೇತುಗೊಳಿಸಿದ್ದರು. ಅದರಲ್ಲಿ ಆರು ತಂಡಗಳನ್ನು ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಲು ಆಹ್ವಾನಿಸಲಾಗಿತ್ತು. ಬ್ಲಾಕ್ ಚೈನ್, IoT, 5G ಮತ್ತು ಕ್ಲೌಡ್ ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಈ ತಂಡಗಳು ಆಯ್ದುಕೊಂಡಿದ್ದವು, ಅಂತಿಮ ಸುತ್ತಿನಲ್ಲಿ, ಈ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ತಂತ್ರಜ್ಞರ ತಂಡ ಅದರ ಮೌಲ್ಯಮಾಪನೆ ನಡೆಸಿ, ಅದರ ಆಧಾರದ ಮೇಲೆ ವಿಜೇತರ ಸುತ್ತಿಗೆ ಮೂರು ತಂಡಗಳನ್ನು ಆರಿಸಿದರು. ಮೂರು ತಂಡಗಳಿಗೆ ಸೇರಿಸಿ, ಸುಮಾರು 5,500 ಡಾಲರುಗಳನ್ನು (ಒಂದರಿಂದ ಎರಡು ಲಕ್ಷದವರೆಗೆ) ಬಹುಮಾನವಾಗಿ ನೀಡಲಾಯಿತು.
“ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ, ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದರ ಹಿನ್ನೆಲೆ ಸ್ಪಷ್ಟ. ಅವರುಗಳು, ಇವತ್ತಿನ ಸ್ಪರ್ಧಾತ್ಮಕ ಉದ್ಯಮದಲ್ಲಿ, ಕ್ರಿಯಾಶೀಲತೆಯನ್ನು ಮೂಲವಾಗಿಟ್ಟುಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಯುನಿಸಿಸ್ ಸಂಸ್ಥೆಯ ಗುರಿ, ಇವತ್ತಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಕೌಶಲ್ಯಗಳನ್ನು ಈ ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದು ಮತ್ತು ಆವಿಷ್ಕಾರದ ಅನುಭವಕ್ಕೆ ಕರೆದೊಯ್ದು, ಅವರನ್ನು ತಂತ್ರಜ್ಞಾನ ಉದ್ಯಮಕ್ಕೆ ಮುಖಾ-ಮುಖಿಯಾಗಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳಲ್ಲಿರುವ ಕುಶಲತೆ ಮತ್ತು ಉದ್ಯಮದ ಅಗತ್ಯದ ನಡುವೆ ಸೇತುವೆಯಾಗಿದೆ” ಎನ್ನುತ್ತಾರೆ ಯುನಿಸಿಸ್ ಇಂಡಿಯಾದ ಮುಖ್ಯಸ್ಥ ಸುಮೇದ್ ಮಾರ್ವಾಹ.
ಸಂಸ್ಥೆಯ ಚೀಫ್ ಟೆಕ್ನಾಲಜಿ ಆಫೀಸರ್ ಮತ್ತು ಸಲ್ಯೂಷನ್ ಇನ್ನೋವೇಶನ್ ಮತ್ತು ಆರ್ಕಿಟೆಕ್ಚರ್ ವಿಭಾಗದ, ಹಿರಿಯ ಉಪಾಧ್ಯಕ್ಷರಾದ ಅಲೆನ್ ಡ್ವೆಯ್ನ್ ಅವರು ಹೇಳುವಂತೆ, “ಭವಿಷ್ಯದ ಜಗತ್ತನ್ನು ಬದಲಾವಣೆಯತ್ತ ಕೊಂಡೊಯ್ಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಯುನಿಸಿಸ್ ಸಂಸ್ಥೆಗೆ ಹೆಮ್ಮೆಯ ವಿಷಯ” ಎಂದು ಬಣ್ಣಿಸಿದ್ದಾರೆ.
ಯುನಿಸಿಸ್ ಮಾಹಿತಿ ಸುರಕ್ಷತೆಯ ತಂತ್ರಾಂಶ- ಭದ್ರತೆ ಒದಗಿಸುವ ಸಂಸ್ಥೆ :
ಯುನಿಸಿಸ್, ಒಂದು ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಜಗತ್ತಿನ ಬಹುತೇಕ ಡಿಜಿಟಲ್ ತಂತ್ರಜ್ಞಾನ ಅವಲಂಬಿತ ಸಂಸ್ಥೆಗಳು ಮತ್ತು ಸರ್ಕಾರದ ವಿಭಾಗಗಳಿಗೆ ಮಾಹಿತಿ ಸುರಕ್ಷತೆಯ ನಿಟ್ಟಿನಲ್ಲಿ ತಂತ್ರಾಂಶಗಳನ್ನು ಒದಗಿಸುವ ಮೂಲಕ, ಭದ್ರತೆಯನ್ನು ಒದಗಿಸುತ್ತಿದೆ. ಇದಲ್ಲದೆ, ಮಾಹಿತಿ ತಂತ್ರಜ್ಞಾನದ ವಿಸ್ತೃತ ಜಗತ್ತಿನ ಹಲವಾರು ವಿಭಾಗಗಳಲ್ಲಿ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಒದಗಿಸುತ್ತಿದೆ.
2009ರಲ್ಲಿ ತಂತ್ರಜ್ಞಾನ ವಿಷಯಾಧಾರಿತ ಪ್ರಸ್ತುತಿಯಾಗಿ ಶುರುವಾದ ಯೂನಿಸಿಸ್ ಇನ್ನೊವೇಷನ್ ಪ್ರೊಗ್ರಾಮ್ ಕಾರ್ಯಕ್ರಮ, ಇವತ್ತು ಉದ್ಯಮದ ಸಮಸ್ಯೆಗಳು ಸವಾಲುಗಳನ್ನು ಎದುರಿಸುವತ್ತ ತನ್ನ ಹೆಜ್ಜೆ ಇಟ್ಟಿದೆ. ಉದ್ಯಮದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಹೊಸ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ, ವಿದ್ಯಾರ್ಥಿಗಳಿಗೆ ಉದ್ಯಮದ ಒಳ-ಹೊರಗನ್ನು ಪರಿಚಯ ಮಾಡಿಸುವತ್ತ ಹೊರಟಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಸಂಶೋಧನಾ ವಿದ್ಯಾರ್ಥಿಗಳು, ತಂತ್ರಜ್ಞಾನ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರ ಭಾಗವಾಗಿದ್ದಾರೆ.
ವಿಜೇತರ ವಿವರಗಳು ಈ ಕೆಳಕಂಡಂತಿದೆ :
ಮೊದಲ ಬಹುಮಾನ :
ವಿದ್ಯಾರ್ಥಿಗಳು – ಸೌಜನ್ಯ ಆರ್, ಯೋಗಲಕ್ಷ್ಮಿ ಆರ್, ಅಶೋಕ್ ಕೆ ಮತ್ತು ಪಾರ್ವತಿ ವಿ ಎಸ್
ಕಾಲೇಜು – ಮನುಕುಲ ವಿನಾಯಗರ್ ತಾಂತ್ರಿಕ ವಿದ್ಯಾಲಯ
ಯೋಜನೆಯ ಹೆಸರು – Continuous Authentication Using Behavioral Biometrics
ಮಾರ್ಗದರ್ಶಕರು – ಡಾ।। ಆರ್.ಸುರೇಶ್
ಎರಡನೆಯ ಬಹುಮಾನ :
ವಿದ್ಯಾರ್ಥಿಗಳು – ಮೊಹಮ್ಮದ್ ಫಾಝಿಲ್ ಮತ್ತು ಜಯಂತ್ ಕುಮಾರ್ ಎನ್
ಕಾಲೇಜು – ಮಂಗಳೂರು ತಾಂತ್ರಿಕ ವಿದ್ಯಾಲಯ
ಯೋಜನೆಯ ಹೆಸರು – Standard Operating Procedure (SOP) Monitoring System – Video Analytics
ಮಾರ್ಗದರ್ಶಕರು – ರಾಮಲಿಂಗಂ ಎಚ್.ಎಂ
ಮೂರನೆಯ ಬಹುಮಾನ :
ವಿದ್ಯಾರ್ಥಿಗಳು – ಜೀವಿತಾ ರಾಜ್ ಮತ್ತು ಅರವಿಂದ್ ನಾರಾಯಣನ್
ಕಾಲೇಜು – ಕಾಮರಾಜ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿದ್ಯಾಲಯ
ಯೋಜನೆಯ ಹೆಸರು – Transforming Real Estate Using Web3 Technologies
ಮಾರ್ಗದರ್ಶಕರು – ಆರ್ ಮುತ್ತುಸೆಲ್ವಿ