Sunday, March 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

AICC CRITICIZE CENTERAL GOVT. RATES HIKE | ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜೇಯ್ ಮಕಾನ್ ಟೀಕಾ ಪ್ರಹಾರ

ಕೇಂದ್ರದ ಬಿಜೆಪಿ ಸರ್ಕಾರದಿಂದ ಜನ ಸಾಮಾನ್ಯರ ಮೇಲೆ 1.25 ಲಕ್ಷ ಕೋಟಿ ರೂ. ಬೆಲೆ ಏರಿಕೆ ಹೊರೆ - ಅಜೇಯ್ ಮಕಾನ್ ವಾಗ್ದಾಳಿ

by Bengaluru Wire Desk
April 7, 2022
in News Wire
Reading Time: 2 mins read
0

ಬೆಂಗಳೂರು, (www.bengaluruwire.com ) : ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ಜನಸಾಮಾನ್ಯರಿಗೆ 1,25,407.20 ಕೋಟಿ ಬೆಲೆ ಏರಿಕೆ ಹೊರೆಯ ಉಡುಗೊರೆ ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜೇಯ್ ಮಕಾನ್ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಸರ್ಕಾರ ವಿವಿಧ ರಾಜ್ಯಗಳಲ್ಲಿನ ಚುನಾವಣೆಯ ಗೆಲುವು ಲೂಟಿಗೆ ಸಿಕ್ಕ ಪರವಾನಿಗೆ ಎಂದು ಭಾವಿಸಿದೆ. ಏಪ್ರಿಲ್.1 ರಿಂದ ಕೇಂದ್ರದ ಮೋದಿ ಸರ್ಕಾರದ ಬೆಲೆ ಏರಿಕೆಯ ನಿರ್ಧಾರದಿಂದ ಎಲ್ಲ ಜನಸಾಮಾನ್ಯರ ನಿತ್ಯ ಬದುಕಿನ ಬಜೆಟ್ ಮೇಲೆ ಗದಾಪ್ರಹಾರ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

ಪ್ರತಿಯೊಬ್ಬರಿಗೂ ‘ದುಬಾರಿ’ಯಲ್ಲಿ ಬದುಕುವುದು ದೊಡ್ಡ ಸವಾಲಾಗಿದೆ. ‘ದುಬಾರಿ’ಯಿಂದ ಪ್ರತಿಯೊಂದು ಮನೆಯಲ್ಲಿ ಬದುಕು ದುಸ್ತರವಾಗಿದೆ ಎಂದ ಅವರು ಈ ಕುರಿತಂತೆ ಬಿಜೆಪಿ ಸರ್ಕಾರದ ವಿರುದ್ಧ ದರ ಏರಿಕೆಯಿಂದ ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಎಳೆಎಳೆಯಾಗಿ ತಿಳಿಸಿದ್ದಾರೆ.

1. ದೇಶದ 62 ಕೋಟಿ ರೈತರಿಗೆ ತೆರಿಗೆ :

ದೇಶದಾದ್ಯಂತ ಪ್ರತಿಭಟನೆ ಮಾಡಿದ ಕಾರಣಕ್ಕೆ ಮೋದಿ ಸರ್ಕಾರ ದೇಶದ ಅನ್ನದಾತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. 50 ಕೆ.ಜಿಯ DAP ರಸಗೊಬ್ಬರ ಚೀಲದ ಬೆಲೆ 150 ರೂ. ಹೆಚ್ಚಾಗಿದ್ದು, ಅದರ ಬೆಲೆ 1,350 ರೂ. ಆಗಿದೆ. ಇನ್ನು ಚೀಲಕ್ಕೆ ಹೆಚ್ಚುವರಿಯಾಗಿ 3 ರೂ. ದರ ಏರಿಸಲಾಗಿದೆ. ದೇಶದ ರೈತರು 1.20 ಕೋಟಿ ಟನ್ ಗಳಷ್ಟು DAP ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರೈತರ ಮೇಲೆ ಹೆಚ್ಚುವರಿಯಾಗಿ 3600 ಕೋಟಿ ರೂ. ಹೊರೆ ಬೀಳಲಿದೆ. 50 ಕೆ.ಜಿಯ NKPS ಚೀಲದ ದರ 110 ರೂ ಹೆಚ್ಚಳ ಮಾಡಲಾಗಿದೆ. 1,290ರಿಂದ 1,400 ರೂ. ಆಗಿದೆ. ಇದರಿಂದ ರೈತರಿಗೆ ಹೆಚ್ಚುವರಿಯಾಗಿ 3,740 ಕೋಟಿ ರೂ. ಹೊರೆಯಾಗಲಿದೆ.

2. ಎಂಟು ವರ್ಷಗಳಿಂದ ಪೆಟ್ರೋಲ್- ಡೀಸೆಲ್ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ರೂ.‌ಸಂಗ್ರಹ :

ಕಳೆದ 12 ದಿನಗಳಲ್ಲಿ 10ನೇ ಬಾರಿಗೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 7.20 ರೂ ಹೆಚ್ಚಾಗಿದೆ.

ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 27,969 ಸಾವಿರ ಮೆಟ್ರಿಕ್ ಟನ್ ಗಳಷ್ಟು ಪೆಟ್ರೋಲ್ ಬಳಕೆಯಾಗಿದೆ. ಈಗ 7.20 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 20,138 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 72,713 ಸಾವಿರ ಮೆಟ್ರಿಕ್ ಟನ್ ಗಳಷ್ಟು ಡೀಸೆಲ್ ಬಳಕೆಯಾಗಿದೆ. ಈಗ 7.20 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 52,353 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.41 ರೂ. ಹಾಗೂ ಡೀಸೆಲ್ 55.49 ರೂ.ನಷ್ಟಿತ್ತು. ಆದರೆ ಈಗ ಬೆಂಗಳೂರಿನಲ್ಲಿ ಅದು ಕ್ರಮವಾಗಿ 108 ಹಾಗೂ 92 ರೂ. ಆಗಿದೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ 9.20 ರೂ ಹಾಗೂ ಡೀಸೆಲ್ ಮೇಲೆ 3.46 ರೂ.ನಷ್ಟು ಅಬಕಾರಿ ಸುಂಕ ಇತ್ತು. ಕಳೆದ ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ವಿಧಿಸಿದೆ. ಪೆಟ್ರೋಲ್ ಮೇಲೆ ಶೇ.203ರಷ್ಟು ಹಾಗೂ ಡೀಸೆಲ್ ಮೇಲೆ ಬರೋಬ್ಬರಿ ಶೇ.531ರಷ್ಟು ಸುಂಕ ಹೆಚ್ಚಳ.

ಮೋದಿ ಸರ್ಕಾರ ಕಳೆದ 8 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ರೂ. ಸಂಗ್ರಹಿಸಿದೆ.

3. ಅಡುಗೆ ಅನಿಲ ಬೆಲೆ ಏರಿಕೆಯ ಹೊಡೆತ:

ಏಪ್ರಿಲ್ 1ರಂದು ವಾಣಿಜ್ಯ ಹಾಗೂ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗಿದೆ. ಆ ಮೂಲಕ ಕಳೆದ 2 ತಿಂಗಳಲ್ಲಿ 346 ರೂ. ನಷ್ಟು ಏರಿಕೆಯಾಗಿದ್ದು, ಕಳೆದ 8 ವರ್ಷಗಳ ಬಿಜೆಪಿ ಆಡಳಿತ ಅವಧಿಯಲ್ಲಿ ವಾಣಿಜ್ಯ ಅಡುಗೆ ಅನಿಲ ದರದಲ್ಲಿ ಒಟ್ಟು 845 ರೂ. ಹೆಚ್ಚಳವಾಗಿದೆ.

ಇನ್ನು ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಮಾರ್ಚ್ 22, 2022ರಂದು 50 ರೂ. ಏರಿಕೆ ಮಾಡಲಾಗಿತ್ತು. ಕಳೆದ ವರ್ಷ (2021)ದಿಂದ ಈ ಅಡುಗೆ ಅನಿಲ ದರ ಸುಮಾರು 140.50 ರೂ. ನಷ್ಟು ಏರಿಕೆಯಾಗಿದ್ದು, ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 27,384 ಸಾವಿರ ಮೆಟ್ರಿಕ್ ಟನ್ ಗಳಷ್ಟು ಪೆಟ್ರೋಲ್ ಬಳಕೆಯಾಗಿದೆ. ಈಗ 140.50 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 27,095 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

4. CNG ಮೇಲಿನ ದಾಳಿ:

ಈ ಅನಿಲವು ಜನಸಾಮಾನ್ಯರ ಇಂಧನವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕೊಳ್ಳಲು ಅಶಕ್ತವಾಗಿರುವ ಜನರು ಆಟೋ, ಟ್ಯಾಕ್ಸಿ, ಬಸ್, ಟ್ರಕ್ ಮತ್ತು ಕಾರುಗಳಿಗೆ ಈ ಇಂಧನ ಬಳಸುತ್ತಾರೆ. ಏಪ್ರಿಲ್ 1 ರಂದು ಇದರ ದರ 80 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಆ ಮೂಲಕ ಒಂದು ತಿಂಗಳ ಅವಧಿಯಲ್ಲಿ ಆರು ಬಾರಿ ದರ ಹೆಚ್ಚಿಸಿದ್ದು, ಒಟ್ಟು 4 ರೂ.ನಷ್ಟು ಹೆಚ್ಚಳವಾಗಿದೆ.

ಭಾರತ ಸರ್ಕಾರದ ಸಿಎನ್ ಜಿ ಇಂಧನ ಬಳಕೆ 2019-20ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 3,247 ಸಾವಿರ ಮೆಟ್ರಿಕ್ ಟನ್ ಗಳಷ್ಟು ಗ್ಯಾಸ್ ಬಳಸಲಾಗಿದೆ. 2020-2021ರಲ್ಲಿ ಇದರ ಪ್ರಮಾಣ 3,500 ಸಾವಿರ ಮೆಟ್ರಿಕ್ ಟನ್ ಗಳಷ್ಟು ಬಳಸಲಾಗಿದೆ. ಈಗ 4 ರೂ. ದರ ಹೆಚ್ಚಳದಿಂದ ಜನರ ಮೇಲೆ ಸುಮಾಕು 1,400 ಕೋಟಿಯಷ್ಟು ಹೊರೆ ಬೀಳಲಿದೆ.

5. ಕೊಳವೆ ನೈಸರ್ಗಿಕ ಅನಿಲ (PNG) ದರ ರಾಕೆಟ್ ಮಾದರಿ ಏರಿಕೆ :

ಏಪ್ರಿಲ್ 1ರಂದು ದೆಹಲಿಯಲ್ಲಿ 5 ರೂ. ಹಾಗೂ ನೋಯ್ಡಾದಲ್ಲಿ 5.85 ರೂ. ನಷ್ಟು PNG ಅನಿಲ ದರ ಏರಿಕೆಯಾಗಿದೆ. ಮಾರ್ಚ್ 24ರಂದು ದೆಹಲಿಯಲ್ಲಿ 1 ರೂ.ನಷ್ಟು ಏರಿಕೆಯಾಗಿತ್ತು. ಆಮೂಲಕ ಕಳೆದ ತಿಂಗಳು ಒಟ್ಟು 6 ರೂ ದರ ಏರಿಕೆಯಾಗಿದೆ. ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಜನರ ಮೇಲೆ 961.20 ಕೋಟಿ ಹೊರೆ ಬೀಳಲಿದೆ.

6. ಜನರ ಜೇಬು ಸುಡುತ್ತಿದೆ ಟೋಲ್ ತೆರಿಗೆ:

ಏಪ್ರಿಲ್. 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಪ್ರಮಾಣ ಶೇ.10- 18ರಷ್ಟು ಹೆಚ್ಚಳ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಈ ತೆರಿಗೆ ಮೂಲಕ ಭಾರತ ಸರ್ಕಾರಕ್ಕೆ 28,458 ಕೋಟಿ ಸಂಗ್ರಹವಾಗಿತ್ತು.  2021-22ರಲ್ಲಿ ಇದು 34,000 ಕೋಟಿ ಆಗುವ ನಿರೀಕ್ಷೆ ಇದೆ. ಇನ್ನು ಶೇ.18ರಷ್ಟು ತೆರಿಗೆ ಏರಿಕೆಯಿಂದ ಪ್ರಯಾಣ ಮಾಡುವ ಸಾರ್ವಜನಿಕರ ಮೇಲೆ 6,120 ಕೋಟಿ ರೂ. ಹೊರೆ ಬೀಳಲಿದೆ.

7. ಔಷಧಿ ಮೇಲಿನ ತೆರಿಗೆ, ರೋಗಿಗಳಿಗೆ ಬರೆ ಹಾಕಿದಂತೆ:

ಮೋದಿ ಸರ್ಕಾರ ರೋಗಿಗಳನ್ನು ಬಿಡದೆ ಸುಲಿಗೆ ಮಾಡಲು ಮುಂದಾಗಿದ್ದಾರೆ. ರಾಷ್ಟ್ರೀಯ ಔಷಧೀಯ ದರ ಪ್ರಾಧಿಕಾರವು ಏಪ್ರಿಲ್ 1ರಿಂದ 800 ಅಗತ್ಯ ಔಷಧಿಗಳ ಮೇಲೆ ಶೇ.10.76ರಷ್ಟು ದರ ಏರಿಕೆ ಮಾಡಿದೆ. ಜನಸಾಮಾನ್ಯರು ಸಹಜವಾಗಿ ಬಳಸುವ ಪ್ಯಾರಾಸಿಟಮಾಲ್, ಜ್ವರ ಪೀಡಿತರು ಬಳಸುವ ಅಜಿಂತ್ರೋಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹಾಗೂ ಇತರೆ ಕೋವಿಡ್ ಸಮಯದಲ್ಲಿ ಬಳಸುವ ಮದ್ದುಗಳ ಮೇಲೆ ದರ ಏರಿಸಿದೆ. ಜತೆಗೆ ಹೃದಯ ಸಂಬಂಧಿ, ಹೆಚ್ಚು ರಕ್ತದೊತ್ತಡ, ಅನಿಮಿಯಾ, ಚರ್ಮ ರೋಗ, ವಿಟಮಿನ್ ಹಾಗೂ ಮಿನರಲ್ ಮದ್ದುಗಳು ಬೆಲೆ ಏರಿಕೆಯಾಗಿವೆ. ಇದರಿಂದಾಗಿ ಜನಸಾಮಾನ್ಯರ ಮೇಲೆ ಸುಮಾರು 10 ಸಾವಿರ ಕೋಟಿ ರೂ. ಹೊರೆ ಬೀಳಲಿದೆ.

8. ಜನರಿಗೆ ಸ್ವಂತ ಮನೆ ಎಂಬುದು ಮರೀಚಿಕೆಯೇ?:

ಮನೆ ಅಥವಾ ಕಟ್ಟಡ ನಿರ್ಮಾಣ ವೆಚ್ಚ ಏಪ್ರಿಲ್ ತಿಂಗಳಲ್ಲಿ ಸುಮಾರು ಶೇ.15ರಷ್ಟು ಏರಿಕೆಯಾಗಿದ್ದು, ಕಬ್ಬಿಣ, ಸೀಮೆಂಟ್, ಇಟ್ಟಿಗೆ, ನೈರ್ಮಲ್ಯ ವ್ಯವಸ್ಥೆ, ಮರಗೆಲಸಗಳ ಬೆಲೆ ಗಣನೀಯವಾಗಿ ಏರಿಕೆಯಾಗಿವೆ. 2021ರ ಮಾರ್ಚ್ ತಿಂಗಳಿಗಿಂತ, 2022ರ ಮಾರ್ಚ್ ತಿಂಗಳವರೆಗೆ ಕಬ್ಬಿಣದ ಬೆಲೆ ಶೇ.30ರಷ್ಟು ಏರಿಕೆ ಕಂಡಿದೆ. ಸೀಮೆಂಟ್ ಶೇ.2ರಷ್ಟು, ಕಾಪರ್ ಮತ್ತು ಅಲ್ಯೂಮಿನಿಯಂ ಶೇ.40ರಿಂದ ಶೇ.44ರಷ್ಟು ಏರಿಕೆಯಾಗಿವೆ. ಪ್ರತಿ ಕೆ.ಜಿ ಕಬ್ಬಿಣ 35 ರೂ.ನಿಂದ 90 ರೂ,ಗೆ ಏರಿಕೆಯಾಗಿದೆ. ಸೀಮೆಂಟ್ ಚೀಲ ಸುಮಾರು 100 ರೂ.ನಷ್ಟು ಏರಿಕೆಯಾಗಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ ಎಐಸಿಸಿ ಪ್ರ.ಕಾರ್ಯದರ್ಶಿ ಅಜೇಯ್ ಮಕಾನ್ ಅವರನ್ನು ಬರಮಾಡಿಕೊಂಡ ಡಿ.ಕೆ.ಶಿವಕುಮಾರ್

9. ಗೃಹ ನಿರ್ಮಾಣ ಸಾಲದ ಮೇಲಿನ ತೆರಿಗೆ ರದ್ದು:

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇಇಎ ಅಡಿಯಲ್ಲಿ ಮೊದಲ ಬಾರಿ ಮನೆ ಖರೀದಿ ಮಾಡುವವರಿಗೆ ನೀಡಲಾಗುತ್ತಿದ್ದ 1.5 ಲಕ್ಷದಷ್ಟು ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಮೋದಿ ಸರ್ಕಾರವು ರದ್ದುಗೊಳಿಸಿದೆ.

10. ಭವಿಷ್ಯ ನಿಧಿ ಖಾತೆ ಮೇಲೂ ತೆರಿಗೆ:

ನಿಮ್ಮ ನಿವೃತ್ತಿ ಹಣ ಇನ್ನುಮುಂದೆ ಸರ್ಕಾರದ ಜೇಬಿನಲ್ಲಿರುತ್ತದೆ. 2022ರ ಏ.1 ರಿಂದ ಇಪಿಎಫ್ ಖಾತೆಯಲ್ಲಿ 2.5 ಲಕ್ಷಕ್ಕೂ ಹೆಚ್ಚಿರುವವರಿಗೆ ತೆರಿಗೆ ಹಾಕಲಾಗುತ್ತಿದೆ. ಇನ್ನು ಈ ಖಾತೆಯಲ್ಲಿ ನೀಡಲಾಗುತ್ತಿದ್ದ ಬಡ್ಡಿ ದರವನ್ನು ಶೇ.8.5ರಿಂದ ಶೇ.8.1ಕ್ಕೆ ಕಡಿತ ಮಾಡಲಾಗಿದೆ. ಇದರಿಂದ ಸುಮಾರು 6.7 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ.

11. ಆಧಾರ- ಪಾನ್ ಜೋಡಣೆ ಏರಿಕೆ ನ್ಯಾಯವೇ? :

ಆಧಾರ್ ಹಾಗೂ ಪಾನ್ ಜೋಡಣೆಯನ್ನು ಏಪ್ರಿಲ್ ನಿಂದ ಜೂನ್ ಒಳಗಾಗಿ ಮಾಡದಿದ್ದರೆ 500 ರೂ. ಹಾಗೂ 2023ರ ಮಾರ್ಚ್ ವರೆಗೂ ಮಾಡದಿದ್ದರೆ ಸುಮಾರು 1 ಸಾವಿರ ಕೋಟಿ ದಂಡ ಹಾಕಲಾಗುವುದು. ಇನ್ನು ಹೊಸ ಪಾನ್ ಕಾರ್ಡ್ ತೆಗೆದುಕೊಳ್ಳಲು 107 ರೂ. ಹಾಗೂ ಆಧಾರ್ ಕಾರ್ಡ್ ಪಡೆಯಲು 100 ರೂ. ಇದ್ದು, ದಂಡದ ಮೊತ್ತ 500ರಿಂದ 1000ಕ್ಕೆ ಏರಿಕೆ ಮಾಡಿರುವುದು ನ್ಯಾಯವೇ?

12. ಟಿವಿ, ಫ್ರಿಡ್ಜ್, ಎಸಿ, ಎಲ್ ಇಡಿ, ಮೊಬೈಲ್ ದುಬಾರಿ:

ಏಪ್ರಿಲ್ 1ರಿಂದ ಮೋದಿ ಸರ್ಕಾರ ಅಲ್ಯೂಮಿನಿಯಂ ಅದಿರಿನ ಮೇಲೆ ಶೇ.30ರಷ್ಟು ಸುಂಕ ವಿಧಿಸಿದ್ದು, ಇದರಿಂದ ಟಿವಿ, ಎಸಿ, ಫ್ರಿಡ್ಜ್ ಪಕರಣಗಳನ್ನು ಮಾಡಲಾಗುವುದು. ಇನ್ನು ಕಂಪ್ರೆಸರ್ ಬಿಡಿ ಭಾಗಗಳ ಆಮದು ಸುಂಕ ಕೂಡ ಹೆಚ್ಚಿಸಿದ್ದು, ಇದರಿಂದ ರೆಫ್ರಿಜರೇಟರ್ ಬೆಲೆ ಏರಿಕೆಯಾಗಲಿದೆ. ಈ ಎಲ್ಲದರಿಂದಾಗಿ ಎಸಿ, ಟಿವಿ, ಫ್ರಿಡ್ಜ್ ಹಾಗೂ ಎಲ್ಇಡಿ ಬಲ್ಬ್ಗಳ ಬೆಲೆ ಶೇ.15ರಷ್ಟು ಹಾಗೂ ಮೊಬೈಲ್ ಬೆಲೆ ಶೇ.20-30ರಷ್ಟು ಏರಿಕೆಯಾಗಲಿದೆ.

ಮೋದಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ತೊಂದರೆಗೆ ಒಳಗಾಗದ ಒಬ್ಬ ವ್ಯಕ್ತಿ ಇಲ್ಲವಾಗಿದ್ದಾನೆ. ಈ ಹಗಲುದರೋಡೆಗೆ ಮೋದಿ ಸರ್ಕಾರವೇ ಹೊಣೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜೇಯ್ ಮಕಾನ್ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

BW EXCLUSIVE | BBMP PROPERTY KHATA CORRUPTION | ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಕ್ಕೆ ಕ್ಯಾರೇ ಅಂತಿಲ್ಲ ಇಲ್ಲಿ !!

Next Post

BBMP NEWS | ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು 2 ಕೋಟಿ ರೂ. ನಿಗದಿ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್

Next Post

BBMP NEWS | ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು 2 ಕೋಟಿ ರೂ. ನಿಗದಿ - ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್

MUDRA SCHME | ಮುದ್ರಾ ಯೋಜನೆಯಲ್ಲಿ ನೀವು ಹೇಗೆ ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ

March 7, 2026
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d