ಖ್ಯಾತ ಗಾಯಕಿ ಭಾರತ ರತ್ನ ಲತಾ ಮಂಗೇಶ್ಕರ್ ನಿಧನದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಅವರ ಗೌರವಾರ್ಥ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಶೋಕಾಚರಣೆ ಆಚರಿಸುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯದ್ಯಂತ ಪ್ರತಿನಿತ್ಯ ರಾಷ್ಟ್ರಧ್ವಜ ಹಾರಿಸುವ ಕಡೆ ಈ ಸಂದರ್ಭದಲ್ಲಿ ಅರ್ಧ ಮಟ್ಟಕ್ಕೆ ರಾಷ್ಟ್ರಧ್ವಜ ಹಾರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಶೋಕಾಚರಣೆ ವೇಳೆ ಯಾವುದೇ ರೀತಿಯ ಅಧಿಕೃತ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳಿಗೆ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.