“ಬೆಂಗಳೂರು ವೈರ್” ಆನ್ ಲೈನ್ ಕನ್ನಡ ವೆಬ್ ನ್ಯೂಸ್ ಪೋರ್ಟಲ್ ಗೆ ಈಗ 1ನೇ ವಾರ್ಷಿಕೋತ್ಸವದ ಸಂಭ್ರಮ. ಈ ಒಂದು ವರ್ಷದ ಅವಧಿಯಲ್ಲಿ “ಬೆಂಗಳೂರು ವೈರ್” ನಾಡಿನ ಜನರ ಆಸಕ್ತಿ, ಹಿತಾಸಕ್ತಿ, ನೆಲ, ಜಲ, ಭಾಷೆ, ವಿಜ್ಞಾನ, ತಂತ್ರಜ್ಞಾನ, ಹಣಕಾಸು, ಪರಿಸರ, ಪ್ರಮುಖವಾಗಿ ಬೆಂಗಳೂರನ್ನು ಆದ್ಯತೆಯಾಗಿಟ್ಟುಕೊಂಡು ಮಾಡಿದ ಅನೇಕ ಸುದ್ದಿಗಳನ್ನು ಓದಿ ನೀವು ಪ್ರೋತ್ಸಾಹಿಸಿದ್ದೀರಿ. ಬೆನ್ನು ತಟ್ಟಿದ್ದೀರಿ.
ಈ ಒಂದು ವರ್ಷದ ಅವಧಿಯಲ್ಲಿ “Bengaluru Wire” ಡಿಜಿಟಲ್ ಮೀಡಿಯಾ ಎಂಬ ಹೊಸ ಮನ್ವಂತರಕ್ಕೆ ಒಗ್ಗಿಕೊಂಡು ನಮ್ಮ ದೇಶ, ಕನ್ನಡ ನೆಲದ ಅಭಿವೃದ್ಧಿಗೆ, ನಾಗರೀಕರ ಅಭಿಪ್ರಾಯಗಳ ಧ್ವನಿಯಾಗಿ ಕೆಲಸ ಮಾಡಿದೆ.
ಆಡಳಿತ ನಡೆಸುವ ಸರ್ಕಾರ, ಸ್ಥಳಿಯ ಸಂಸ್ಥೆಗಳಲ್ಲಿನ ಹುಳಕುಗಳನ್ನು ಸಮರ್ಥವಾಗಿ ದಾಖಲೆ ಸಹಿತವಾಗಿ ನಿಮ್ಮ ಮುಂದಿಟ್ಟಿದೆ. ತನಿಖಾ ಪತ್ರಿಕೋದ್ಯಮ, ಎಕ್ಸ್ ಕ್ಲೂಸಿವ್ ಹಾಗೂ ವಿಶೇಷ ವರದಿಗಳ ಮೂಲಕ ಕರ್ತವ್ಯ ಲೋಪ ಎಸಗಿದ ಆಳುವ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸಿದೆ. ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಅಗತ್ಯ ಪರಿಹಾರಗಳನ್ನು ವಿಷಯ ತಜ್ಞರಿಂದ ಸಂಗ್ರಹ ಮಾಡಿ ಸುದ್ದಿ ಪ್ರಕಟಿಸಿದೆ.
ವೃತ್ತಿಪರತೆಯಿಂದ “ಬೆಂಗಳೂರು ವೈರ್” ಡಿಜಿಟಲ್ ಮಾಧ್ಯಮವನ್ನು ನಡೆಸಿಕೊಂಡು ಬಂದ ಕಾರಣಕ್ಕೆ ನೀವು ನಮಗೆ ಬೆಂಬಲ ನೀಡಿ ಹರಿಸಿದ್ದೀರಿ. ಇದು ಹೀಗೆಯೇ ಮುಂದುವರೆಯಲಿ. ನಮ್ಮ ಸಾಮಾಜಿಕ ಜವಾಬ್ದಾರಿಯ ಮೂಲಕ ಆಳುವ ಸರ್ಕಾರವನ್ನು ನಿರಂತರವಾಗಿ ಜನಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸುದ್ದಿಯ ಮೂಲಕ ಎಚ್ಚರಿಸುವ ನಮ್ಮ ಕಾಯಕ ಹೀಗೆ ನಿರಂತರವಾಗಿ ನಡೆಯಲಿದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
-✍🏻 ಸಂಪಾದಕರು
ಸ್ವತಂತ್ರ ಮತ್ತು ವಾಸ್ತವ ಸುದ್ದಿ
ಜನರ ಗಮನ ಸೆಳೆದ ಕೆಲವು ಪ್ರಮುಖ ಸುದ್ದಿಗಳು :
- BW INVESTIGATION -1 | COVID GOALMAL | ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಕರ್ಚು ಮಾಡಿದ 880 ಕೋಟಿ ರೂ. ಹಣದಲ್ಲಿ ಅಕ್ರಮದ ಘಾಟು…..!
- BW INVESTIGATION | MAYOR FUND MISUSE –PART 2 | ಮೇಯರ್ ಫಂಡ್ 5% ರಿಂದ 10% “ಕಿಕ್ ಬ್ಯಾಕ್ ” ಪಡೆದು ಜಾಬ್ ಕೋಡ್ ನೀಡಲಾಗಿತ್ತಾ ?!!
- BW INVESTIGATION | COVID BED BLOCKING | ಬಿಬಿಎಂಪಿಯ ಎಲ್ಲಾ ವಾರ್ ರೂಮ್ ಗಳಲ್ಲೂ ನಡೆದಿತ್ತು ಬೆಡ್ ಬ್ಲಾಕಿಂಗ್ ಅಕ್ರಮ ?
- BW EXCLUSIVE | Covid Death Componsation | ರಾಜ್ಯ ಸರ್ಕಾರದ ಘೋಷಣೆಗಷ್ಟೆ ಸೀಮಿತವಾಯ್ತಾ ಕೋವಿಡ್ ಸಾವಿನ ಪರಿಹಾರ?
- BW EXCLUSIVE | BBMP LEGAL CELL PUNCTURE | ಬಿಬಿಎಂಪಿಯಲ್ಲಿ ಕಾನೂನು ಕೋಶವೇ ಪಂಕ್ಚರ್….!
- BW EXCLUSIVE | RTO SMART CARDS | ಡಿಎಲ್- ವಿಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಣೆ ಹೆಸರಿನಲ್ಲಿ ಗುತ್ತಿಗೆ ಸಂಸ್ಥೆಯ 12 ವರ್ಷದ ಏಕ ಚಕ್ರಾಧಿಪತ್ಯ….!
- BW SUPER EXCLUSIVE REPORT | BDA LAND AUDIT REPORT | ಬಿಡಿಎ 64 ಬಡಾವಣೆಗಳಲ್ಲಿ 18,500 ಎಕರೆ ಒತ್ತುವರಿ….! : ಲ್ಯಾಂಡ್ ಆಡಿಟ್ ರಿಪೋರ್ಟ್ ನಿಂದ ಬಹಿರಂಗ
- Bengaluruwire BIG IMPACT | ಬಿಬಿಎಂಪಿ ಕಾಯ್ದೆ-2020 ಅಧಿಕಾರ ಪ್ರತ್ಯಾಯೋಜನೆಗೆ ತುರ್ತು ಸಭೆ ಕರೆದ ಮುಖ್ಯ ಆಯುಕ್ತ ಗೌರವ್ ಗುಪ್ತಾ
- BW IMPACT | ಉಲ್ಲಾಳ ಕೆರೆ ಅಭಿವೃದ್ಧಿ ಖಚಿತ : ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳ ವಾಗ್ದಾನ
- BW SPECIAL | ಹೊಸ ರೇಷನ್ ಕಾರ್ಡ್ ಗಾಗಿ 3.37 ಲಕ್ಷ ಅರ್ಜಿ ಸಲ್ಲಿಕೆ ; ಎರಡೂವರೆ ವರ್ಷದಿಂದ ಹೊಸ ಕಾರ್ಡ್ ವಿತರಣೆಯನ್ನೇ ನಿಲ್ಲಿಸಿದ ರಾಜ್ಯ ಸರ್ಕಾರ…!
- Bengaluru Wire IMPACT | ಯಲಹಂಕ ವಾಯುನೆಲೆ ಬಳಿ ಅನಧಿಕೃತ ಹಂದಿ ಕಸಾಯಿಖಾನೆ ತೆರವಿಗೆ ಕ್ರಮ ; ತಹಸೀಲ್ದಾರ್ ಸ್ಥಳ ಪರಿಶೀಲನೆ
- BW SPECIAL | Google Trending | “ಯುವರತ್ನ” ಪುನೀತ್ ರಾಜ್ ಕುಮಾರ್ ಗೂಗಲ್ ಟ್ರೆಂಡಿಂಗ್ ಸರ್ಚ್ ನಲ್ಲಿ ಅಂದು ಟಾಪ್-1