ನಮ್ಮ ಮೆಟ್ರೊ 2ನೇ ಹಂತದ ಯೋಜನೆಯ ಕಂಟೋನ್ಮೆಂಟ್ ನಿಂದ ಪಾಟರಿ ಟೌನ್ ವರೆಗಿನ 907 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಟಿಬಿಎಮ್ ಊರ್ಜಾ ಯಂತ್ರ ಇಂದಿನಿಂದ ಆರಂಭಿಸಲಿದೆ.
ಸೆ.9 ರಂದು ಟಿಬಿಎಮ್ ಊರ್ಜಾ ಯಂತ್ರ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮೆಟ್ರೊ ಸ್ಟೇಷನ್ ತನಕ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿತ್ತು. ಆನಂತರ ಈ ಟಿಬಿಎಮ್ ಯಂತ್ರವನ್ನು ಬಿಡಿಸಿ, ಕಂಟೋನ್ಮೆಂಟ್ ನಿಂದ ಪಾಟರಿ ಟೌನ್ ಗೆ ಕೊಂಡೊಯ್ದು ಮರು ಜೋಡಣೆ ಮಾಡಲಾಗಿತ್ತು.