ಬೆಂಗಳೂರು, (www.bengaluruwire.com) : ಉಕ್ಕು ಮತ್ತು ಇತರ ಕಚ್ಚಾ ವಸ್ತುಗಳ ಬೆಲೆ ಇಳಿಕೆ, ಇಂಧನ ಮೇಲಿನ ಬೆಲೆ ಕಡಿತಗೊಳಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸೇರಿದಂತೆ ನಾನಾ ಕೈಗಾರಿಕಾ ಸಂಘಟನೆಗಳ ಸದಸ್ಯರು ಇಂದು ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆ ಕೈಗೊಂಡರು.
ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿವೆ :
- ಉಕ್ಕು ಮತ್ತು ಇತರ ಕಚ್ಚಾ ವಸ್ತುಗಳ ಬೆಲೆಗಳನ್ನು ಶೀಘ್ರವೇ
ಕಡಿತಗೊಳಿಸಬೇಕು. - ಇಂಧನದ ಮೇಲಿನ ಬೆಲೆಗಳನ್ನು ಇಳಿಕೆ ಮಾಡಬೇಕು
- ಜಿಎಸ್ ಟಿ (GST) ಕಾಯಿದೆಯನ್ನು ಬಳಕೆದಾರ ಸ್ನೇಹಿ, ಜಿಎಸ್ ಟಿ ಯ ಶೀಘ್ರ ಮರುಪಾವತಿ, ಮತ್ತು ತೆರಿಗೆ ದರಗಳ ಕಡಿತದೊಂದಿಗೆ ಪ್ರಕ್ರಿಯೆಯನ್ನು
ಸರಳೀಕರಣಗೊಳಿಸುವುದು. - ಬ್ಯಾಂಕ್ ಸಾಲ – ಸಾಲಗಳನ್ನು ಪಡೆಯುವ ವಿಧಾನಗಳ ಸರಳೀಕರಣ. ಕೃಷಿ ವಲಯಕ್ಕೆ ಸಮಾನವಾಗಿ ಬಡ್ಡಿದರಗಳನ್ನು ನಿಗಧಿಪಡಿಸುವುದು.
- ಇಎಸ್ ಐ (ESI) ಮತ್ತು ಪಿಎಫ್ (PF) ಇಲಾಖೆಗಳನ್ನು ವಿಲೀನಗೊಳಿಸುವುದು.
- ಮರ್ಚಂಡೈಸ್ ರಫ್ತುಗಳ ಮೇಲೆನ ನಿಯಮಗಳನ್ನು ಸರಳೀಕರಣಗೊಳಿಸುವುದು ಮತ್ತು ರಫ್ತುದಾರರ ಕಂಟೈನರ್ ಸಮಸ್ಯೆಗಳನ್ನು ನಿವಾರಿಸುವುದು.
- ಸಾರ್ವಜನಿಕ ಸಂಗ್ರಹಣೆ ಯೋಜನೆ – ರಕ್ಷಣಾ ಮತ್ತು ಇತರ
ಸಾರ್ವಜನಿಕ ವಲಯದ ಕಂಪನಿಗಳು ಸದರಿ ಯೋಜನೆಯನ್ನು
ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. - ಎಸ್ ಎಂಇ (SME) ಗಳನ್ನು ಪ್ರೋತ್ಸಾಹಿಸಲು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್
(CGFT) ಅನ್ನು 10 ಕೋಟಿ ರೂ. ಗಳವರೆಗೆ ವಿಸ್ತರಿಸುವುದು.
ರಾಜಾಜಿನಗರ ಕೈಗಾರಿಕೆಗಳ ಸಂಘ, ಬೆಂಗಳೂರು ಉತ್ತರ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಬೆಂಗಳೂರು ಸೆಂಟ್ರಲ್ ಸಣ್ಣ ಕೈಗಾರಿಕೆಗಳ ಸಂಘದ ಸದಸ್ಯರುಗಳು ಸೋಮವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.