ನವದೆಹಲಿ, (www.bengaluruwire.com) :
ದೇಶದಲ್ಲಿ 82,267 ಜನರು ಕರೋನಾ ಸೋಂಕಿತರಾಗಿದ್ದು ಕಳೆದ 572 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈತನಕ ಭಾರತದಲ್ಲಿ 137.67 ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 15 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಸದ್ಯ ಕರೋನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇಕಡ 98.39ರಷ್ಟಾಗಿದ್ದು, ಇದು ಕಳೆದ ವರ್ಷ ಮಾರ್ಚ್ ನಿಂದ ಈವರೆಗಿನ ಅತಿಹೆಚ್ಚು ಗುಣಮುಖದ ಶೇಕಡ ಪ್ರಮಾಣವಾಗಿದೆ.
ಕಳೆದ 24 ಗಂಟೆಗಳಲ್ಲಿ 6,563 ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆಯಲ್ಲಿ ದೇಶಾದ್ಯಂತ 15,82,079 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ ಒಟ್ಟು 8,77,055 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತದಲ್ಲಿ ಈತನಕ 66.51 ಕೋಟಿ ಲಸಿಕೆ ಹಾಕಿಲಾಗಿದೆ.
18 ರಿಂದ 60+ ವಯೋಮಾನದವರ ವಾಕ್ಸಿನ್ ವಿವರ :
ಈತನಕ ದೇಶದಲ್ಲಿ 18-44 ವಯೋಮಾನದ 48,68,79,459 ಮೊದಲ ಡೋಸ್, 29,37,59,017 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45-59 ವಯೋಮಾನದ19,15,95,978 ಜನರು ಮೊದಲ ಡೋಸ್ ಹಾಗೂ 14,00,66,251 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟ
11,97,15,150 ಜನರು ಮೊದಲ ಲಸಿಕೆಪಡೆದುಕೊಂಡಿದ್ದರೆ, 8,95,16,231 ಜನರು ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟಾರೆ 137,67,20,359 ನಾಗರೀಕರು ಕೋವಿಡ್ ಲಸಿಕೆ ಹಾಕಿಸಿಕೊಂಡಂತಾಗಿದೆ.
ರಾಜ್ಯ – ಕೇಂದ್ರಾಡಳಿತ ಪ್ರದೇಶಗಳಿಗೆ 145.61 ಕೋಟಿ ವಾಕ್ಸಿನ್ ಪೂರೈಕೆ :
ಪ್ರಸ್ತುತ ದೇಶದಲ್ಲಿನ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 145.61 ಕೋಟಿ ವಾಕ್ಸಿನ್ ಪೂರೈಕೆ ಮಾಡಲಾಗಿದೆ. ಇನ್ನು 17.99 ಕೋಟಿ ವಾಕ್ಸಿನ್ ಗಳು ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಬಳ ಮಾಡುವುದು ಬಾಕಿಯಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.