ನವದೆಹಲಿ, (www.bengaluruwire.com) : ಭಾರತಕ್ಕೆ 21 ವರ್ಷಗಳ ಬಳಿಕ ಭುವನ ಸುಂದರಿ (Miss Universe 2021 ) ಪಟ್ಟ ಸಿಕ್ಕಿದ್ದು, 70 ನೇ ಭುವನಸುಂದರಿಯಾಗಿ ಹರ್ನಾಜ್ ಕೌರ್ ಸಂಧು (Harnaaz Kaur Sandhu) ಆಯ್ಕೆಯಾಗಿದ್ದಾರೆ.
ಇಸ್ರೇಲ್ ನ ಇಲಾಟ್ ನಲ್ಲಿ ನಡೆದ 2021ರ ಭುವನ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಕೌರ್ ಸಂಧು ಮಿಸ್ ಯುನಿವರ್ಸ್ 2021 ಆಗಿ ಆಯ್ಕೆಯಾಗಿದ್ದಾರೆ. ನಟಿ ಮತ್ತು ರೂಪದರ್ಶಿ ಹರ್ನಾಜ್ ಕೌರ್ ಸಂಧು ಅವರನ್ನು ಸ್ಪರ್ಧೆಯ ವಿಜೇತರೆಂದು ಘೋಷಿಸಲಾಯ್ತು. ಹರ್ನಾಜ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಲಲೆಲಾ ಮ್ಸ್ವಾನೆ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
1994 ಸುಶ್ಮಿತಾ ಸೇನ್ ಹಾಗೂ 2000ನೇ ಇಸವಿಯಲ್ಲಿ ಲಾರಾದತ್ತ ಭಾರತದಿಂದ ಮಿಸ್ ಯೂನಿವರ್ಸ್ ಕಿರೀಟಕ್ಕೆ ಭಾಜನರಾಗಿದ್ದರು. ಆದರೆ 21 ವರ್ಷಗಳ ಕಾಲ ದೇಶದಿಂದ ಯಾರೂ ಮಿಸ್ ಯೂನಿವರ್ಸ್ ಆಗಿರಲಿಲ್ಲ. 70ನೇ ಆವೃತ್ತಿಯಲ್ಲಿ ನಡೆದ ಮಿಸ್ ವರ್ಲ್ಡ್ (Miss World) ನಲ್ಲಿ ವಿವಿಧ ದೇಶಗಳ 80 ಸ್ಪರ್ಧಿಗಳಲ್ಲಿ ಮೊದಲನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
21 ಹರ್ನಾಜ್ ಮೂಲತಃ ಪಂಜಾಬ್ ನವರಾಗಿದ್ದಾರೆ. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಹರ್ನಾಜ್ ಫಳ ಫಳ ಹೊಳೆಯುವ ಗೌನ್ ಧರಿಸಿ ನಡೆಯುತ್ತಾ ಬಂದು ವೇದಿಕೆ ಮೇಲಿಂದ ನೀಡಿದ ಮಿಲಿಯನ್ ಡಾಲರ್ ಸ್ಮೈಲ್ ಆಕೆ ಮಿಸ್ ವರ್ಲ್ಡ್ ಬಾಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಸಿಖ್ ಕುಟುಂಬದಲ್ಲಿ ಜನಿಸಿದ ಹರ್ನಾಜ್ ಮೂಲತಃ ಚಂಡೀಗಡ ದವರು. ಯೋಗಾಪಟುವಾದ ಈಕೆಗೆ ಫಿಟ್ ನೆಸ್ ಕಾಯ್ದುಕೊಳ್ಳುವುದು ಎಂದರೆ ಬಲು ಇಷ್ಟ. ಸಣ್ಣ ವಯಸ್ಸಿನಲ್ಲಿ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ ಹರ್ನೀಜ್ 2017ರಲ್ಲಿಮಿಸ್ ಚಂಡೀಗಡ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು.
ಹರ್ನಾಜ್ ಕೌರ್ ಸಂಧು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು ಈ ಕೆಳಗಿನಂತೆ…..!