ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ರಸ್ತೆಗುಂಡಿಗಳಿಂದ ನಾಗರೀಕರು ಬೇಸೆತ್ತು ತಾವೇ ಖುದ್ದಾಗಿ ರಸ್ತೆಗುಂಡಿ ಮುಚ್ಚಿದ್ದಾಯ್ತು. ಗಿಡ ನೆಟ್ಟಿದ್ದಾಯ್ತು. ನಟ್ಟಿ ಮಾಡಿ ಆಯ್ತು. ಕಲಾವಿದರೊಬ್ಬರು ಗುಂಡಿಯನ್ನೇ ಚಂದ್ರಲೋಕದ ಕುಳಿ ಅಂತ ಜಗತ್ತಿಗೇ ತೋರಿಸಿದ್ದೂ ಆಯ್ತು. ಈ ಗಣಹೋಮದ ಸರದಿ….
ಹೌದು, ಟೆಕ್ ಸಿಟಿ ಬೆಂಗಳೂರಿನ ಗುಂಡಿಯೊಂದಕ್ಕೆ ಹೂವಿನ ಹಾರ ಹಾಕಿ ನಾಗರೀಕರು ಗಣಪತಿ ಹೋಮ ನಡೆಸಿ ಆ ಮೂಲಕ ಬಿಬಿಎಂಪಿ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಭಾರತಿನಗರ ರೆಸಿಡೆಂಟ್ಸ್ ಫೋರಮ್ ಎಂಬ ನಾಗರೀಕ ಸಂಘಟನೆ ನಗರದ ರಸ್ತೆಗುಂಡಿಗಳಿಂದ ಬೇಸೆತ್ತು ಕಾಂಪಬೆಲ್ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗೆ ಹೂ ಹಾರ ಹಾಕಿ, ಪುರೋಹಿತರಿಂದ ಗುಂಡಿ ಮುಚ್ಚಲು ದೇವರ ಮೊರೆ ಹೋಗಿದ್ದಾರೆ. ಪುರೋಹಿತರು ರಸ್ತೆಯಲ್ಲೇ ಕುಳಿತು ಅಚ್ಚುಕಟ್ಟಾಗಿ ವೇದಮಂತ್ರ ಸಹಿತ ಗಣಪತಿ ಹೋಮ ನೆರವೇರಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.