ನವದೆಹಲಿ, ಆ.2 (www.bengaluruwire.com) : ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ “ಇ-ರುಪಿ’ ಎಂಬ ನಗದು ರಹಿತ ಮತ್ತು ಸ್ಪರ್ಶ ರಹಿತ ಡಿಜಿಟಲ್ ಪಾವತಿಯಾಗಿದ್ದು, ಸೋಮವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ.
ಸೋಮವಾರ ಸಂಜೆ 4:30ಕ್ಕೆ ಸರಿಯಾಗಿ ಇ-ರುಪಿ ಪಾವತಿ ವ್ಯವಸ್ಥೆಯನ್ನು ಬಿಡುಗಡೆ ಮಾಡಲಿದ್ದಾರೆ. ಆ ಕಾರ್ಯಕ್ರಮದ ನೇರ ಪ್ರಸಾರ ಈ ಕೆಳಗಿನ ಲಿಂಕ್ ನಲ್ಲಿ ಪ್ರಸಾರವಾಗಲಿದೆ.
ಭಾರತೀಯ ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೊರೇಷನ್ (ಎನ್ ಪಿಸಿಐ) ‘ಇ-ರುಪಿ’ ಯನ್ನು ಡೆವಲಪ್ ಮಾಡಿದೆ. ಎನ್ ಪಿಸಿಐ ಯುಪಿಐ ಪಾವತಿ ವಿಧಾನದ ಪ್ಲಾಟ್ ಫಾರಂ ಆಧಾರಿತವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವಿಟ್ ಮಾಡಿದ್ದಾರೆ.
‘ಇ-ರುಪಿ’ ಮುಖ್ಯಾಂಶಗಳು ಹೀಗಿದೆ :
• ಆರ್ಥಿಕ ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲದ ಜಂಟಿ ಸಹಯೋಗದೊಂದಿಗೆ ಈ ತಂತ್ರಙ್ಞನವನ್ನು ಅಭಿವೃದ್ಧಿಪಡಿಸಲಾಗಿದೆ.
• ಇದೊಂದು ಡಿಜಿಟಲ್ ಪಾವತಿ ಸಲಕರಣೆಯಾಗಿದೆ. ಫಲಾನುಭವಿಗಳ ಮೊಬೈಲ್ ಗೆ ಕ್ಯು ಆರ್ ಕೋಡ್ ಅಥವಾ ಎಸ್ ಎಂಎಸ್ ಆಧಾರಿತ ಇ- ವೋಚರ್ ರೂಪದಲ್ಲಿ ಇದನ್ನು ನೀಡಲಾಗುತ್ತದೆ.
• ಸೇವಾದಾರರಿಗೆ ಶುಲ್ಕ ಪಾವತಿ ವೇಳೆ ಯಾವುದೇ ರೀತಿಯ ಡೆಬಿಟ್ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ‘ಇ-ವೋಚರ್’ ಗಳನ್ನು ಬಳಸಬಹುದು.
• ಇದು ಪ್ರೀ-ಪೇಯ್ಡ್ (ಮುಂಚೆಯೇ ಪಾವತಿಸುವ) ಸ್ವರೂಪದ ವೋಚರ್ ಆಗಿರುತ್ತದೆ.
• ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಫಲನುಭವಿಗಳಿಗೆ ತಲುಪಿಸಲು ಇ- ರುಪಿಯನ್ನು ಒಂದು ಸಾಧನವಾಗಿ ಉಪಯೋಗಿಸಬಹುದಾಗಿದೆ.
• ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ, ಕ್ಷಯ ನಿರ್ಮೂಲನೆ ಕಾರ್ಯಕ್ರಮ, ರಸಗೊಬ್ಬರಗಳ ಸಹಾಯಧನಗಳಲ್ಲಿ ಈ ಇ-ವೋಚರ್ ಅನ್ನು ಬಳಸಬಹುದು.
• ಇ-ರುಪಿಯನ್ನು ಈ ಯೋಜನೆಗಳಲ್ಲಿ ಯಾವ ರೀತಿ ಉಪಯೋಗಿಬಹುದು ಎಂದು ಕೇಂದ್ರ ಸರ್ಕಾರ ಇನ್ನಷ್ಟೆ ಈ ಬಗೆಗಿನ ಮಾಹಿತಿ ಹಂಚಿಕೊಳ್ಳಬೇಕಿದೆ.