Wednesday, August 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬಿಡಿಎಗೆ ಭರ್ಜರಿ ಲಾಭ 2,097 ಕೋಟಿಗೆ ಕೋನದಾಸಪುರ ಜಾಗ ಮಾರಾಟ ; ಇದೀಗ ಮತ್ತೆ ಬೃಹತ್ ವಾಣಿಜ್ಯ ನಿವೇಶನಗಳ ಹರಾಜಿಗೆ ಅಧಿಸೂಚನೆ ಪ್ರಕಟ

ಹಳೆ ಮದ್ರಾಸ್ ರಸ್ತೆಯಲ್ಲಿ ಎಕರೆಗೆ 40 ಕೋಟಿ ರೂ. ದಾಖಲೆ ಬೆಲೆ - ಬ್ರಿಗೇಡ್, ಗೋದ್ರೇಜ್ ಹಿಂದಿಕ್ಕಿದ ಹೈದರಾಬಾದ್ ಕಂಪನಿ - ಫೆಬ್ರವರಿ 16 ರಂದು ಮತ್ತೆ ಲೈವ್ ಬಿಡ್ಡಿಂಗ್ ಅಬ್ಬರ: ಇಲ್ಲಿದೆ ಸಂಪೂರ್ಣ ವಿವರ.

by Bengaluru Wire Desk
February 4, 2026
in Bengaluru Focus
Reading Time: 1 min read
0
ಬಿಡಿಎ ಕೇಂದ್ರ ಕಚೇರಿ ಚಿತ್ರ

ಬಿಡಿಎ ಕೇಂದ್ರ ಕಚೇರಿ ಚಿತ್ರ

ಬೆಂಗಳೂರು, ಫೆ.4 www.bengaluruwire.com : ಆರ್ಥಿಕ ಸಂಕಷ್ಟದಲ್ಲಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಳೆ ಮದ್ರಾಸ್ ರಸ್ತೆಯ ಕೋನದಾಸಪುರ ಭಾಗ್ಯದ ಬಾಗಿಲು ತೆರೆದಿದೆ. ಇತ್ತೀಚೆಗೆ ನಡೆದ ಇ-ಹರಾಜಿನಲ್ಲಿ ಬರೋಬ್ಬರಿ 2,097 ಕೋಟಿ ರೂಪಾಯಿ ಬಾಚಿಕೊಂಡಿರುವ ಬಿಡಿಎ, ಇದೀಗ ಅದೇ ಹುಮ್ಮಸ್ಸಿನಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿರುವ ಮೂಲೆ ನಿವೇಶನ (Corner Sites) ಮತ್ತು ವಾಣಿಜ್ಯ ನಿವೇಶನಗಳ (Commercial Sites) ಬೃಹತ್ ಹರಾಜಿಗೆ ಹೊಸ ಅಧಿಸೂಚನೆ ಹೊರಡಿಸಿದೆ.

20 ಸುತ್ತಿನ ಕಾದಾಟ, 468 ಕೋಟಿ ಹೆಚ್ಚುವರಿ ಲಾಭ:

ಬಿಡಿಎ ಇತಿಹಾಸದಲ್ಲೇ ಇದೊಂದು ಅಪರೂಪದ ಹರಾಜು ಪ್ರಕ್ರಿಯೆಯಾಗಿದೆ. ಕೋನದಾಸಪುರದಲ್ಲಿನ 52 ಎಕರೆ ವಾಣಿಜ್ಯ ಜಮೀನಿಗಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಬ್ರಿಗೇಡ್ ಗ್ರೂಪ್ ಮತ್ತು ಗೋದ್ರೇಜ್ ಪ್ರಾಪರ್ಟೀಸ್‌ನಂತಹ ದಿಗ್ಗಜ ಕಂಪನಿಗಳನ್ನು ಹಿಂದಿಕ್ಕಿ, ಹೈದರಾಬಾದ್ ಮೂಲದ ‘ಶ್ರೀನಿ ನಿರ್ಮಾಣ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜಯಗಳಿಸಿದೆ.

ಸುಮಾರು 20 ಸುತ್ತುಗಳ ಕಾಲ ನಡೆದ ಈ ಲೈವ್ ಬಿಡ್ಡಿಂಗ್‌ನಲ್ಲಿ, ಬಿಡಿಎ ನಿರೀಕ್ಷೆಗಿಂತ 468 ಕೋಟಿ ರೂ. ಹೆಚ್ಚು ಆದಾಯ ಹರಿದು ಬಂದಿದೆ. ಅಂತಿಮವಾಗಿ ಪ್ರತಿ ಚದರ ಮೀಟರ್‌ಗೆ ಬರೋಬ್ಬರಿ 98,466 ರೂ.ಗಳಂತೆ (ಎಕರೆಗೆ 40.13 ಕೋಟಿ ರೂ.) ಜಮೀನು ಮಾರಾಟವಾಗಿದೆ. ಈ ಹಣವನ್ನು ಬಳಸಿಕೊಂಡು ಹೆಬ್ಬಾಳದಲ್ಲಿ ಸುರಂಗ ಮಾರ್ಗ ಸೇರಿದಂತೆ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಬಿಡಿಎ ಯೋಜನೆ ರೂಪಿಸಿದೆ.

ಫೆಬ್ರವರಿಯಲ್ಲಿ ಮತ್ತೆ ಹರಾಜು ಮೇಳ: ಎಲ್ಲೆಲ್ಲಿ ನಿವೇಶನ ಲಭ್ಯ?:

ಕೋನದಾಸಪುರದ ಯಶಸ್ಸಿನ ಬೆನ್ನಲ್ಲೇ, ಬಿಡಿಎ ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಪೂರ್ವ ವಲಯಗಳಲ್ಲಿ ಖಾಲಿ ಇರುವ ಬೃಹತ್ ವಾಣಿಜ್ಯ ನಿವೇಶನಗಳ ಇ-ಹರಾಜಿಗೆ (Bulk Land Auction) ಅಧಿಸೂಚನೆ (Notification) ಹೊರಡಿಸಿದೆ. ಲಗತ್ತಿಸಲಾದ ಅಧಿಸೂಚನೆಯಂತೆ ವಿವರಗಳು ಹೀಗಿವೆ:

ದಕ್ಷಿಣ ವಲಯ (South Zone): ಬಿಎಸ್‌ಕೆ 3ನೇ ಹಂತ, ಜೆ.ಪಿ ನಗರ 8ನೇ ಮತ್ತು 9ನೇ ಹಂತ, ಬನಶಂಕರಿ 3ನೇ ಹಂತ, ಅಂಜನಾಪುರ ಬಡಾವಣೆಗಳಲ್ಲಿ ನಿವೇಶನಗಳು ಲಭ್ಯವಿದ್ದು, ಇಲ್ಲಿ ಪ್ರತಿ ಚದರ ಮೀಟರ್‌ಗೆ 76,000 ರೂ. ನಿಂದ 1,50,000 ರೂ. ವರೆಗೆ ಮೂಲ ದರ ನಿಗದಿಪಡಿಸಲಾಗಿದೆ.

ಉತ್ತರ ವಲಯ (North Zone): ಆರ್‌ಎಂವಿ (RMV) 2ನೇ ಹಂತ ಮತ್ತು ಎಚ್‌ಬಿಆರ್ (HBR) 1ನೇ ಹಂತದಲ್ಲಿ ನಿವೇಶನಗಳಿದ್ದು, ಇಲ್ಲಿ ಅತಿ ಹೆಚ್ಚು ಅಂದರೆ ಚದರ ಮೀಟರ್‌ಗೆ 1,71,500 ರೂ. ಮೂಲ ದರವಿದೆ.

ಪಶ್ಚಿಮ ವಲಯ (West Zone): ನಾಗರಭಾವಿ 2ನೇ ಹಂತ ಮತ್ತು ಜ್ಞಾನಭಾರತಿ ಬಡಾವಣೆಗಳಲ್ಲಿ ವಾಣಿಜ್ಯ ನಿವೇಶನಗಳು ಲಭ್ಯವಿದೆ.

ಪೂರ್ವ ವಲಯ (East Zone): ಕಾಟಂನಲ್ಲೂರು ಮತ್ತು ಕೋನದಾಸಪುರ (ಸಿಎಸ್-1ಎ, 1ಬಿ) ಭಾಗದಲ್ಲಿಯೂ ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ.

ಹರಾಜಿನ ಪ್ರಮುಖ ದಿನಾಂಕಗಳು (2026):

ಆಸಕ್ತ ಸಾರ್ವಜನಿಕರು ಮತ್ತು ಉದ್ಯಮಿಗಳು ಈ ಕೆಳಗಿನ ದಿನಾಂಕಗಳನ್ನು ಗಮನಿಸಬೇಕಿದೆ:

ಇ-ಹರಾಜು ಪ್ರಾರಂಭದ ದಿನಾಂಕ: 28.01.2026

ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 13.02.2026 (ಸಂಜೆ 5 ಗಂಟೆ)

ಲೈವ್ ಬಿಡ್ಡಿಂಗ್ (Live Bidding) ದಿನಾಂಕ: 16.02.2026 (ಬೆಳಿಗ್ಗೆ 11 ಗಂಟೆಯಿಂದ) ಮತ್ತು 17.02.2026 ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಬಿಡಿಎ ಅಧಿಕೃತ ವೆಬ್‌ಸೈಟ್ https://bdakarnataka.in ಗೆ ಭೇಟಿ ನೀಡಬಹುದು.

WhatsApp Join our WhatsApp Channel
Previous Post

PF Wage Ceiling Hike | ಪಿಎಫ್ ವೇತನ ಮಿತಿ ₹25,000ಕ್ಕೆ ಏರಿಕೆ? ಕೋಟ್ಯಂತರ ನೌಕರರಿಗೆ ಬಂಪರ್ ಸಿಹಿಸುದ್ದಿ

Next Post

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೈಟೆಕ್ ವಂಚನೆ: ರೋಗಿಗಳ ಹಣ ಗುಳುಂ, ಕ್ಯೂಆರ್ ಕೋಡ್ ಬದಲಿಸಿ ₹23 ಲಕ್ಷ ದೋಚಿದ ಸಿಬ್ಬಂದಿ

Namma Metro Purple Line

Namma Metro Rail News | ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶಾಕ್: ಶೇ.5ರಷ್ಟು ಟಿಕೆಟ್ ದರ ಏರಿಕೆ ; ಫೆ.9 ರಿಂದಲೇ ಜಾರಿ

Please login to join discussion

Like Us on Facebook

Follow Us on Twitter

Recent News

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026

Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

August 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group